For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಮಧುಮೇಹವಿದ್ದವರು ನಂತರ ಕಾಫಿ ಕುಡಿದರೆ ಟೈಪ್ 2 ಮಧುಮೇಹದ ಅಪಾಯ ತಡೆಗಟ್ಟಬಹುದೇ?

|

ಗರ್ಬಾವಸ್ಥೆಯಲ್ಲಿ ಮಧುಮೇಹದ ಸಮಸ್ಯೆ ಬಂದಿರುವವರೆಗೆ ನಂತರದ ವರ್ಷಗಳಲ್ಲಿ ಟೈಪ್ 2 ಮಧುಮೇಹದ ಅಪಾಯ ಹೆಚ್ಚಿದೆ ಎಂದು ಹೇಳಲಾಗುವುದು. ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ಹೆರಿಗೆ ನಂತರ ಮಧುಮೇಹವಿರಲ್ಲ, ಆದರೆ ವಯಸ್ಸು 40 ದಾಟಿದ ಮೇಲೆ ಟೈಪ್‌ 2 ಮಧುಮೇಹ ಬರಬಹುದು.

Gestational Diabetes

ಈ ಮಧುಮೇಹದ ಅಪಾಯವನ್ನು ತಡೆಗಟ್ಟುವ ಶಕ್ತಿ ಕಾಫಿಯಲ್ಲಿದೆ ಎಂದು ಗ್ಲೋಬಲ್‌ ಸೆಂಟರ್ ಫಾರ್‌ ಏಷ್ಯಾನ್‌ ವುಮೆನ್‌ ಹೆಲ್ತ್‌ (GloW) ಹೇಳಿದೆ.

ಕಾಫಿ ಕುಡಿಯುವುದರಿಂದ ಟೈಪ್‌ 2 ಮಧುಮೇಹ ತಡೆಗಟ್ಟಲು ಹೇಗೆ ಸಹಕಾರಿ ಎಂಬುವುದನ್ನು ವಿವರವಾಗಿ ನೋಡೋಣ ಬನ್ನಿ:

ಕಾಫಿ ಟೈಪ್‌ 2 ಮಧುಮೇಹ ತಡೆಗಟ್ಟುವುದೇ?
ಕಾಫಿಯಲ್ಲಿ ಬಯೋಆ್ಯಕ್ಟಿವ್‌ ಅಂಶವಿರುವುದರಿಂದ(polyphenols) ಟೈಪ್ 2 ಮಧುಮೇಹದ ಅಪಾಯ ಕಡಿಮೆ. ಆದ್ದರಿಂದ ಯಾರಿಗೆ ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದಿತ್ತೋ ಅವರು ಹೆರಿಗೆಯ ಬಳಿಕ ದಿನಾ ಕಾಫಿ ಕುಡಿದರೆ ಟೈಪ್‌ 2 ಮಧುಮೇಹ ತಡೆಗಟ್ಟಬಹುದು ಎಂದು GloW ಹೇಳಿದೆ.

ಅಧ್ಯಯನ ವರದಿ
GloW ನಿರ್ದೇಶಕರಾಗಿರುವ ಪ್ರೊ. ಕ್ಯೂಲಿನ್ ಝಾಂಗ್ ಟೀಂ ಹಾರ್ವಡ್ ಟಿ. ಹೆಚ್‌ ಚಾನ್ ಸ್ಕೂಲ್‌ ಆಫ್ ಪಬ್ಲಿಕ್‌ ಹೆಕ್ತ್‌ ಹಾಗೂ NIH (National Institutes of Health) ಜೊತೆಯಾಗಿ ನಡೆಸಿದ ಸಂಶೋಧನೆಯಿಂದ ಈ ಅಂಶ ಬೆಳಕಿಗೆ ಬಂದಿದೆ.

ಇವರ ಅಧ್ಯಯನದಲ್ಲಿ ಗರ್ಭಾವಸ್ಥೆಯಲ್ಲಿ ಮಧುಮೇಹ ಸಮಸ್ಯೆ ಹೊಂದಿದ್ದ 4, 500 ಮಹಿಳೆಯರು ಭಾಗವಹಿಸಿದ್ದರು, ಇವರನ್ನು 25 ವರ್ಷಗಳ ಕಾಲ ಅಧ್ಯಯನ ಮಾಡಲಾಯಿತು. ಆಗ ದಿನಾ ಕಾಫಿ ಕುಡಿಯುವ ಅಭ್ಯಾಸ ಇರುವವರಲ್ಲಿ ಮಧುಮೇಹದ ಸಮಸ್ಯೆ ಉಂಟಾಗಿರಲಿಲ್ಲ. ಇದರಿಂದಾಗಿ ಕಾಫಿ ಕುಡಿಯುವುದರಿಂದ ಟೈಪ್‌ 2 ಮಧುಮೇಹದ ಸಮಸ್ಯೆ ತಡೆಗಟ್ಟಬಹುದು ಎಂಬ ಅಂಶಕ್ಕೆ ಪುಷ್ಠಿ ಸಿಕ್ಕಿದೆ.

ಕಾಫಿ ಎಷ್ಟು ಕುಡಿಯಬೇಕು?
ದಿನದಲ್ಲಿ ನಾಲ್ಕು ಲೋಟ ಕಾಫಿ ಕುಡಿಯುವವರಲ್ಲಿ ಮಧುಮೇಹದ ಅಪಾಯ ಶೇ. 53ರಷ್ಟು ಕಡಿಮೆ ಇರುವುದು ತಿಳಿದು ಬಂದಿದೆ. ಯಾರು ದಿನಕ್ಕೆ 1 ಕಪ್ ಕಾಫಿ ಕುಡಿಯುತ್ತಾರೋ ಅವರು ಮಧುಮೇಹ ಬರುವ ಅಪಾಯವನ್ನು ಶೇ. 10ರಷ್ಟು ತಡೆಗಟ್ಟಬಹುದು ಎಂದು ಅಧ್ಯಯನ ವರದಿ ಹೇಳಿದೆ.

ನೀವು ಕಾಫಿ ಪ್ರಿಯರಾಗಿದ್ದರೆ ಈ ಸುದ್ದಿ ಖಂಡಿತ ಖುಷಿ ಕೊಟ್ಟಿರುತ್ತೆ ಅಲ್ವಾ?

English summary

Gestational Diabetes? How Drinking Coffee Can Reduce Risk Of Type 2 Diabetes In Kannada

Had Gestational Diabetes? Do you know Drinking coffee can reduce type 2 diabetes, read on...
Story first published: Tuesday, January 3, 2023, 22:29 [IST]
X
Desktop Bottom Promotion