Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಧ್ಯಯನ ವರದಿ: ಎದೆಹಾಲು ಮಗುವಿಗೆ ಅಮೃತ ಸಮಾನ
ತಾಯಿಯ ಎದೆಹಾಲು ಕೆಲವೊಂದು ಸೋಂಕುಗಳೊಂದಿಗೆ ಹೋರಾಡುವ ದಿವ್ಯ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಇದು ಸಂರಕ್ಷಕನಂತೆ ಕಾರ್ಯನಿರ್ವಹಿಸುತ್ತದೆ ಇದನ್ನು "ಪ್ಯಾಸೀವ್ ಇಮ್ಯುನಿಟಿ" ಎಂಬುದಾಗಿ ಕರೆಯಲಾಗಿದೆ.
ತಾಯಿಯ ಎದೆಹಾಲು ಅಮೃತ ಸಮಾನ ಎಂಬ ಮಾತಿದೆ. ಜನಿಸಿದ ಮಗುವಿಗೆ ಈ ಎದೆಹಾಲು ಮೊದಲ ಆಹಾರವಾಗಿದ್ದು
ಹಲವಾರು ರೋಗಗಳಿಂದ ಕಂದಮ್ಮನನ್ನು ಕಾಪಾಡುವ ದಿವ್ಯ ಅಮೃತ ಔಷಧ ಎಂದೆನಿಸಿದೆ. ಟಿಬಿಯಂತಹ ಕಾಯಿಲೆಗೆ ಹೇಗೆ ಲಸಿಕೆಗಳು ಅಥವಾ ಚುಚ್ಚುಮದ್ದು ಕೆಲಸ ಮಾಡುತ್ತದೆ ಅಂತೆಯೇ ಎದೆಹಾಲು ಕೂಡ ಎಂಬುದಾಗಿ ಹೊಸ ಸಂಶೋಧನೆಯೊಂದು ತಿಳಿಸಿದೆ.

ಕೆಲವೊಂದು ಲಸಿಕೆಗಳನ್ನು ಕಂದಮ್ಮನಿಗೆ ನೀಡಲಾಗುವುದಿಲ್ಲ ಅಂತೆಯೇ ಇದು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬುದಾಗಿ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಪ್ರೊಫೆಸರ್ ಅಮೇ ವಾಕರ್ ತಿಳಿಸಿದ್ದಾರೆ. ತಾಯಿಗೆ ಲಸಿಕೆಗಳನ್ನು ನೀಡಿ ಅಥವಾ ಆಕೆ ಗರ್ಭಿಣಿಯಾಗುವುದಕ್ಕೆ ಮುನ್ನ ಆಕೆಯ ಲಸಿಕೆಯನ್ನು ವರ್ಧಿಸಿದಲ್ಲಿ ಈ ರೋಗನಿರೋಧಕವು ಕೋಶಗಳಿಗೆ ವರ್ಗಾವಣೆಗೊಂಡು ಮಗುವಿಗೆ ಹಾಲುಣಿಸುವಾಗ ಮಗುವುದು ಪೂರ್ವದಲ್ಲೇ ಸಂರಕ್ಷಿತವಾಗಿದೆ ಎಂಬುದನ್ನು ಖಾತ್ರಿಪಡಿಸುತ್ತದೆ ಎಂದವರು ನುಡಿದಿದ್ದಾರೆ.
ತಾಯಿಯ ಎದೆಹಾಲು ಕೆಲವೊಂದು ಸೋಂಕುಗಳೊಂದಿಗೆ ಹೋರಾಡುವ ದಿವ್ಯ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಇದು
ಸಂರಕ್ಷಕನಂತೆ ಕಾರ್ಯನಿರ್ವಹಿಸುತ್ತದೆ ಇದನ್ನು "ಪ್ಯಾಸೀವ್ ಇಮ್ಯುನಿಟಿ" ಎಂಬುದಾಗಿ ಕರೆಯಲಾಗಿದೆ. ಮಗುವಿನಲ್ಲೂ
ರೋಗನಿರೋಧಕ ಸಾಮರ್ಥ್ಯವನ್ನು ತುಂಬುವಲ್ಲಿ ಎದೆಹಾಲಿನಲ್ಲಿರುವ ಅಂಶಗಳು ಸಹಕಾರಿಯಾಗಿದೆ ಎಂಬುದಾಗಿ
ಸಂಶೋಧನೆಯು ತಿಳಿಸಿದೆ. ಎದೆ ಹಾಲೆಂಬ ಅಮೃತದಲ್ಲಿದೆ ಅತ್ಯುನ್ನತ ಪೋಷಕಾಂಶಗಳು
ಎದೆಹಾಲಿನಲ್ಲಿರುವ ನಿರ್ದಿಷ್ಟ ರೋಗನಿರೋಧಕ ಕೋಶಗಳು ಮಗುವಿನ ಕರುಳಿನ ಗೋಡೆಯನ್ನು ಬೇಧಿಸಿ ರೋಗನಿರೋಧಕ ಅಂಗವಾದ ಥೈಮಸ್ ಅನ್ನು ಪ್ರವೇಶಿಸುತ್ತದೆ. ತದನಂತರ ಈ ಕೋಶಗಳು ಬೆಳವಣಿಗೆಯನ್ನು ಕಂಡುಕೊಳ್ಳುತ್ತವೆ.
ವಿಜ್ಞಾನಿಗಳು ಈ ಸಂಶೋಧನೆಯನ್ನು ಕೈಗೊಳ್ಳಲು ಇಲಿಯನ್ನು ಬಳಸಿಕೊಂಡಿದ್ದು ಮಗುವಿನ ದೇಹದಲ್ಲಿ ಹಾಲಿನ ಕೋಶಗಳು ಅವಶ್ಯಕವಾಗಿವೆ ಎಂಬುದನ್ನು ಇದು ತಿಳಿಯಪಡಿಸಿದೆ. ಈ ಸಂಶೋಧನೆಯು ತಾಯಿಯನ್ನು ವ್ಯಾಸಿನೇಟ್ ಮಾಡಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದು ಇದರಿಂದ ಮಗುವಿಗೂ ವ್ಯಾಸಿನೇಶನ್ (ಚುಚ್ಚುಮದ್ದು) ಶಕ್ತಿ ದೊರೆಯುತ್ತದೆ ಎಂಬುದು ತಿಳಿದು ಬಂದಿದೆ. ಎದೆ ಹಾಲು vs ಬಾಟಲಿ ಹಾಲು, ಮಗುವಿಗೆ ಯಾರು ಹಿತವರು?
ನೇರವಾಗಿ ಮಗುವಿಗೆ ಚುಚ್ಚುಮದ್ದು ನೀಡುವುದರಿಂದ ಕೂಡ ಟಿಬಿಗೆ ಸೂಕ್ತ ಉಪಚಾರ ದೊರೆತಿಲ್ಲದೇ ಇರುವುದು ಕಂಡುಬಂದಿದೆ. ಆದರೆ ತಾಯಿಗೆ ವ್ಯಾಸಿನೇಶನ್ ಮಾಡುವುದು ಮಗುವಿಗೆ ಎಲ್ಲಾ ರೀತಿಯಲ್ಲೂ ಸಂರಕ್ಷಣೆಯನ್ನು ನೀಡುತ್ತದೆ. ಎದೆ ಹಾಲನ್ನು ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳು ಎದೆ ಹಾಲನ್ನು ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳು ಚುಚ್ಚು ಮದ್ದು ಮಾಡಿದ ತಾಯಿಯು ಮಗುವಿಗೆ ನಿತ್ಯವೂ ಹಾಲುಣಿಸುವುದರಿಂದ ಮಗುವಿನ ರೋಗನಿರೋಧಕ ಶಕ್ತಿಯನ್ನು ಟಿಬಿಗೆ ವಿರುದ್ಧವಾಗಿ ಬೆಳೆಸಲು ಸಹಾಯಕವಾಗುತ್ತದೆ ಎಂಬುದಾಗಿ ವಾಕರ್ ತಿಳಿಸಿದ್ದಾರೆ.



Click it and Unblock the Notifications



