Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮಾದಕ ಮೈಮಾಟದ ಬಾಲಿವುಡ್ ಅಮ್ಮಂದಿರು
ಮಹಿಳೆಯೊಬ್ಬಳು ಒಂದು ಮಗುವಿಗೆ ತಾಯಿಯಾದಳೆಂದರೆ ಆನಂತರದಲ್ಲಿ ಅವಳು ಮೈ ಮಾಟದ ಕಡೆ ಗಮನ ಕೊಡದೆ, ಅಷ್ಟೇನೂ ಸೌಂದರ್ಯವೂ ಇಲ್ಲದ ಸುಕ್ಕುಬಿದ್ದ ದೇಹವನ್ನೊತ್ತು ಮುಂದಿನ ಜೀವನವನ್ನು ಸಾಗಿಸುತ್ತಿದ್ದಳು.
ಮದುವೆಗೆ ಮುಂಚಿನ ಯಾವ ಅಂದವೂ ಉಳಿಯದೆ ಒಬ್ಬ ಸಾಮಾನ್ಯ ತಾಯಿಯಾಗಿ ಬದುಕುವ ದಿನಗಳಿತ್ತು. ಆದರೆ ಇವೆಲ್ಲ ಬಹಳ ಹಿಂದಿನ ಕಥೆಗಳು ಬಿಡಿ. ಇಂದು ಸಾಕಷ್ಟು ಮಹಿಳೆಯರು ತಾಯಿಯಾದರೂ 18ರ ಯುವತಿಯರಂತೆ ಕಂಗೊಳಿಸುತ್ತಾರೆ. ಅದರಲ್ಲೂ ಬಾಲಿವುಡ್ ನಲ್ಲಿ ತಾಯಿಯಾಗಿರುವ ಮಹಿಳೆಯರಂತೂ ಇಂದಿಗೂ ತಾವು ಯೌವ್ವನದಲ್ಲಿದ್ದಾಗಿನ ಸೌಂದರ್ಯಕ್ಕೇನೂ ಕಮ್ಮಿಯಿಲ್ಲ ಎನ್ನುವಂತೆ ದೇಹದ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ತಮ್ಮ ಫಿಗರ್ ಹಾಳಾಗದಂತೆ ನೋಡಿಕೊಂಡಿರುವ ಬಾಲಿವುಡ್ ಅಮ್ಮಂದಿರು ಸಾಮಾನ್ಯ ಗೃಹಿಣಿ ಹಾಗೂ ಉದ್ಯೋಗಸ್ಥ ತಾಯಂದಿರಿಗೆ ಸ್ಪೂರ್ತಿ ಮತ್ತು ಮಾದರಿಗಳಾಗಿದ್ದಾರೆ.
ಅವರ ಪ್ರಕಾರ ಗರ್ಭಧಾರಣೆ ಮತ್ತು ಮಗುವಿನ ಜನನ ನೀಡುವುದು ಅತ್ಯಂತ ಕಷ್ಟದಾಯಕ ಅಥವಾ ದೊಡ್ಡ ವಿಷಯವೇನು ಅಲ್ಲ. ತಾಯಿಯಾದ ಬಳಿಕವೂ ಫಿಟ್ ಆಗಿ ಕಾಣಬಹುದು. ಇಂತಹ ಫಿಟ್ನೆಸ್ ಹೊಂದಿರುವ ಬಾಲಿವುಡ್ ನ ಅಮ್ಮಂದಿರ ಮಾಹಿತಿ ನಿಮ್ಮ ಮುಂದೆ:

1. ಶಿಲ್ಪಾ ಶೆಟ್ಟಿ
ಬಾಲಿವುಡ್ ನ ಯಮ್ಮೀ - ಮಮ್ಮಿ ಶಿಲ್ಪಾ ಇಂದು ಎಲ್ಲರ ಮನೆ ಮಾತು. ಗರ್ಭಧಾರಣೆಗಿಂತಲೂ ಮೊದಲಿರುವ ತೂಕವನ್ನೇ ಇಂದಿಗೂ ಇಟ್ಟುಕೊಂಡು ಬಂದಿರುವುದು ಆಕೆಯ ಫಿಟ್ನೆಸ್ ಯೋಜನೆಯನ್ನು ತೋರಿಸುತ್ತದೆಯಲ್ಲವೇ? ವ್ಯಾಯಾಮವನ್ನೇ ತನ್ನ ಸೌಂದರ್ಯದ ಗುಟ್ಟನ್ನಾಗಿಸಿಕೊಂಡಿರುವ ಈಕೆ ವ್ಯಾಯಾಮ ಮತ್ತು ಯೋಗದ ಹಲವಾರು ಡಿವಿಡಿಗಳನ್ನೂ ಬಿಡುಗಡೆ ಮಾಡಿದ್ದಾಳೆ.

2. ಲಾರಾ ದತ್ತ/ ದತ್ತಾ
ಗ್ಲಾಮರಸ್ ರಾಣಿ ಹಾಗೂ ಭಾರತದ ಮಾಜಿ ವಿಶ್ವಸುಂದರಿಯಾಗಿರುವ ಈಕೆ ಫಿಟ್/ಸದೃಢ ಆಗಿರಲು ಇಷ್ಟಪಡುತ್ತಾಳೆ. ಆಕೆ ಗರ್ಭಾವಸ್ಥೆಯ ಪೂರ್ವದಲ್ಲಿ, ಯೋಗಕ್ಕೆ ಸಂಬಂಧಪಟ್ಟ ವೀಡಿಯೋಗಳನ್ನು ಬಿಡುಗಡೆಗೊಳಿಸಿದ್ದಳು.

3. ಮಲೈಕಾ ಅರೋರಾ ಖಾನ್
ಈಕೆ ಫಿಟ್ನೆಸ್ ಎಂಬ ಪದದಿಂದ ಸ್ವಲ್ಪ ದೂರ. ಆದರೆ ಬಾಲಿವುಡ್ ನ ಮಾದಕ ಆಕರ್ಷಣೆಯ ರಾಣಿ. ಆಕೆಯ ಮೈಮಾಟ ಆಕೆ ಒಂದು ಮಗುವಿನ ತಾಯಿಯಾಗಿದ್ದಾಳೆ ಎಂಬುದನ್ನೇ ಮರೆಸುತ್ತದೆ.

4. ಕಾಜೋಲ್
ಬಾಲಿವುಡ್ ನ ಹೆಸರಾಂತ ನಟಿ ಕಾಜಲ್, ಮಗ ಯುಗ ಹುಟ್ಟಿದ ಏಳನೇ ವರ್ಷಕ್ಕೆ , ಮಗಳು ನ್ಯಾಸಾಳಿಗೆ ಜನ್ಮ ನೀಡುವುದರ ಮೂಲಕ ಎರಡನೇ ಬಾರಿಗೆ ತಾಯಿಯಾಗಿದ್ದಾಳೆ. ಎರಡು ಮಕ್ಕಳ ನಂತರ, ಕಾಜೋಳ ಇನ್ನೂ ಹಾಳಾಗದ ದೇಹದ ಆಕಾರ ನೋಡಿದರೆ ಶೀಘ್ರದಲ್ಲೇ ಚಿತ್ರರಂಗಕ್ಕೆ ಮರಳಬಹುದು ಎನಿಸುತ್ತದೆ.

5. ಸೆಲಿನಾ ಜೈಟ್ಲಿ
ಮಾಜಿ ಬಾಲಿವುಡ್ ನಟ ಸೆಲಿನಾ ಜೈಟ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದಳು. ಆದರೆ ಕೊಬ್ಬಿನ ಯಾವುದೇ ಹೆಚ್ಚುವರಿ ಅಂಶ ಅವಳ ಹತ್ತಿರವೂ ಸುಳಿಯಲಿಲ್ಲ. ಅವರು ಈಗ ಒಂದಷ್ಟು ಕಾಲ ಹೊರಗೆ ಇದ್ದಿರಬಹುದು, ಆದರೆ ಯಾರಾದರೂ 'ಜಾನಶೀನ್' ನಲ್ಲಿ ಬಿಕಿನಿಯನ್ನು ಧರಿಸಿದ್ದ ಸೆಲಿನಾಳನ್ನು ಮರೆಯಲು ಸಾಧ್ಯವೇ?

6. ಮಾಧುರಿ ದೀಕ್ಷಿತ್
90 ರ ದಶಕದಲ್ಲಿ, ಬೆಳ್ಳಿತೆರೆಯ ಮೇಲೆ ಮಿಂಚಿದ್ದ ಮಾಧುರಿ, 2002 ರಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ರಾಜೀನಾಮೆ ನೀಡಿ ತನ್ನ ಕುಟುಂಬದೊಂದಿಗೆ ನೆಲೆಗೊಳ್ಳಲು ನಿರ್ಧರಿಸಿದಳು. ಆದರೆ ಐದು ವರ್ಷದ ಬಳಿಕ 'ಆಜಾ ನಚಲೆ' ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳಿದರು ಆದರೆ ಆಕೆ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ.

7. ಟ್ವಿಂಕಲ್ ಖನ್ನಾ
ಟ್ವಿಂಕಲ್ ಖನ್ನಾ ಮೊದಲು ತೆರೆಯ ಮೇಲೆ ಬಂದಾಗ, ಅವಳು ಮಹಾನ್ ಸುಂದರಿಯೇನು ಆಗಿರಲಿಲ್ಲ. ಆದರೆ ಈಗ ಇದು ಸಂಪೂರ್ಣ ವಿಭಿನ್ನ ಕಥೆ. ಬೆಳ್ಳಿಪರದೆ ಅವಳ ಬೆರಗು ಗೊಳಿಸುವ ಸೌಂದರ್ಯದತ್ತ ತಿರುಗಿದೆ. ಈ ಬಹುಕಾಂತೀಯ ತಾಯಿಗೆ ಇತ್ತೀಚಿಗೆ ಅವಕಾಶಗಳು ಅಷ್ಟಾಗಿ ಸಿಗದೆ ಮಗ ಆರವ್ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾಳೆ.

8. ಕರಿಷ್ಮಾ ಕಪೂರ್
ಕರಿಷ್ಮಾ ಕಪೂರ್ ಮಾದಕ ನಟಿಯಾಗಿ ಜಗತ್ತನ್ನೇ ಆಕರ್ಷಿಸಿದ್ದವಳು. ಕಾಯ್ದಿಟ್ಟುಕೊಂಡ ಆಕೆಯ ಅಪರೂಪದ ಸ್ವರ ಹಾಗೂ ಉತ್ತಮ ಶುಶ್ರೂಷೆಯ ಕೂದಲು ಇಂದಿಗೂ ಜನರನ್ನು ಆಕರ್ಷಿಸುತ್ತದೆ. ಹೌದು, ಅದೇ ಹಳೆಯ ಸೌಂದರ್ಯವನ್ನು ಆಕೆ ಇಂದಿಗೂ ಕಾಪಾಡಿಕೊಂಡು ಬಂದಿದ್ದಾಳೆ.

9. ರವೀನಾ ಟಂಡನ್
ಈಕೆ ಫ್ಯಾಬ್ ಆಗಿ ಬಟ್ಟೆ ಧರಿಸದೇ ಇರಬಹುದು. ಆದರೆ ಎರಡು ಮಕ್ಕಳಿಗೆ ಜನ್ಮ ನೀಡಿದ ನಂತರವೂ ಆಕೆ ತನ್ನ ದೇಹದ ಆಕಾರವನ್ನು ಯಥಾಸ್ಥಿತಿಯಲ್ಲಿಟ್ಟುಕೊಂಡು ಬಂದಿರುವುದು ಯಾವುದೇ ಮಂತ್ರದಿಂದಲ್ಲ!

10. ಸೋನಾಲಿ ಬೇಂದ್ರೆ
ನೀವು ಸೋನಾಲಿ ಬೇಂದ್ರೆಯನ್ನು ಬೆಳ್ಳಿ ತೆರೆಯ ಮೇಲೆ ನೋಡಿದರೆ ಆಕೆ ಅವಳ ಯೌವ್ವನದ ದಿನಗಳನ್ನು ಕಳೆದಿಲ್ಲ ಎಂದೇ ಭಾವಿಸುತ್ತೀರಿ. ಈ ಮಾಡೆಲ್ ನಟಿ ಇಂದಿಗೂ ತನ್ನ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನವಹಿಸಿದ್ದು ಇನ್ನೂ ತಾರುಣ್ಯದ ಮತ್ತು ರೋಮಾಂಚಕ ಯುವತಿಯಂತೆಯೇ ಕಂಗೊಳಿಸುತ್ತಾಳೆ.

11. ಸುಝೇನ್ ಖಾನ್
ಅವರು ಪತಿ ಹೃತಿಕ್ ರೋಶನ್ ನೆರಳಿನಲ್ಲಿ ಎಂದಿಗೂ ವಾಸಿಸಲಿಲ್ಲ. ಅವರು ಓರ್ವ ಒಳಾಂಗಣ ವಿನ್ಯಾಸಗಾರ್ತಿಯಾಗಿ ಸ್ವತಃ ದೊಡ್ಡ ಸುದ್ಧಿ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ತಮ್ಮ ದೇಹರಚನೆ ಮತ್ತು ಲಾವಣ್ಯವನ್ನು ಉಳಿಸಿಕೊಂಡಿರವ ಆಕೆ ತಾಯಿಯಾದರೂ ಕೂಡ ತನ್ನ ಜೀವನ ಅತ್ಯಗತ್ಯ ಭಾಗದಂತೆಯೇ ಸೌಂದರ್ಯವನ್ನು ಉಳಿಸಿಕೊಂಡಿದ್ದಾಳೆ.

12. ಮೆಹರ್ ಜೆಸ್ಸಿಯಾ
ನಾವು ಪ್ರತಿ ಬಾರಿ ಮೆಹರ್ ಜೆಸ್ಸಿಯಾಳನ್ನು ನೋಡಿದರೂ ನಮ್ಮ ಮನಸ್ಸು ಹುಮ್ಮಸ್ಸಿನಿಂದ ಕುಣಿಯುತ್ತದೆ! ಈ ಸೂಪರ್ ಮಾಡೆಲ್ ಎರಡು ಹೆಣ್ಣು ಮಕ್ಕಳ ತಾಯಿ! ಬಹುಶಃ ಆಕೆ ತನ್ನ ಆಕಾರದಲ್ಲಿ ಇಂದಿಗೂ ಟಾಪ್ ಸ್ಥಾನದಲ್ಲಿರಲು ಆಕೆಯ ಈಜು ಮತ್ತು ಬ್ಯಾಡ್ಮಿಂಟನ್ ಹವ್ಯಾಸಗಳೇ ಕಾರಣ.

13. ನಂದಿತಾ ದಾಸ್
ಚಿತ್ರ ನಿರ್ಮಾಪಕಿ ಮತ್ತು ನಟಿ ನಂದಿತಾ ದಾಸ್ ಳ ಅಂದ ತಾಯಿಯಾದ ಬಳಿಕ ಮತ್ತಷ್ಟು ಅಂದವಾಗಿ ಕಾಣಿಸುತ್ತಾರೆ.

14. ಶ್ರೀದೇವಿ
ಶ್ರೀದೇವಿ ಕೂಡ ಈ ಪಟ್ಟಿಯಲ್ಲಿ ಸೇರುತ್ತಾರೆ! ನಲವತ್ತು ವರ್ಷದ ಈ ಫ್ಯಾಬ್ ಸುಂದರಿಯ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ. ಈಕೆ ಯಾವಾಗಲೂ ಸಮ್ಮೋಹನಗೊಳಿಸುವ ಸೌಂದರ್ಯವನ್ನು ಹೊಂದಿದ್ದಾಳೆ. ಇತ್ತೀಚಿನ ಪದ್ಮಶ್ರೀ ಪ್ರಶಸ್ತಿ, ಆಕೆಯ ಥಳುಕಿಗೆ ಹಿಡಿದ ಕೈಗನ್ನಡಿ. ಬಹುಶಃ ಅವಳ ವ್ಯಾಯಾಮವೇ ಅವಳ ತಾರುಣ್ಯವನ್ನೂ ಇಂದಿಗೂ ಉಳಿಸಿರಬಹುದು.

15. ಐಶ್ವರ್ಯ ರೈ ಬಚ್ಚನ್
ಈಕೆ ಯಾವಾಗಲೂ ಸಾರ್ವಜನಿಕರ ಗಮನವನ್ನು ಸೆಳೆಯುತ್ತಿರುವ, ಬಾಲಿವುಡ್ ನಲ್ಲಿ ತಾಯಿಯಾದ ಹಾಟೆಸ್ಟ್ ನಟಿ. ಈಕೆ ಬಾಲಿವುಡ್ ನ ನಂ 1 ತಾಯಿ ಎನಿಸಿಕೊಂಡಿದ್ದಾಳೆ.
ತಾಯಿಯಾದ ಇಂತಹ ಎಲ್ಲ ನಟಿಯರೂ ನಮ್ಮ ಯೌವ್ವನವನ್ನು ಇಂದಿಗೂ ಕಾಪಾಡಿಕೊಂಡು ಬಂದಿರಲು ಕಾರಣ ಅವರು ಯಾವುದೇ ಹೆಚ್ಚುವರಿ ಕಾರ್ಯದಿಂದಲ್ಲ. ಅಥವಾ ಅವರು ಅನುಸರಿಸುವ ಯಾವ ಮಾರ್ಗಗಳೂ ಕಷ್ಟಕರವಲ್ಲ. ಸಾಮಾನ್ಯ ಯಾವುದೇ ಮಹಿಳೆ ತಾಯಿಯಾದ ನಂತರವೂ ಕೆಲವು ವ್ಯಾಯಾಮ, ಯೋಗಗಳಿಂದ ಮೊದಲಿನ ಸೌಂದರ್ಯವನ್ನೇ ಉಳಿಸಿಕೊಳ್ಳಬಹುದು.



Click it and Unblock the Notifications











