Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೆರಿಗೆಯಾದ ನಂತರ ತೂಕ ಇಳಿಸುವಿಕೆ ಸರಿಯೆ?

ಅದಕ್ಕಾಗಿ ಹೆರಿಗೆಯಾದ ಕೆಲವೇ ತಿಂಗಳಿನಲ್ಲಿ ಜಿಮ್ ಗೆ ಸೇರಕೊಳ್ಳ ಬಯಸುತ್ತಾರೆ, ಆಹಾರ ಕಡಿಮೆ ತಿನ್ನುತ್ತಾರೆ. ಒಟ್ಟಿನಲ್ಲಿ ಒಂದು ಮಗುವಿನ ತಾಯಿಯಾದರೂ ಎಷ್ಟು ಆಕರ್ಷಕ ಮೈಮಾಟ ಹೊಂದಿದ್ದಾಳೆ ಎಂದು ಇತರರಿಂದ ಹೊಗಳಿಸಿಕೊಳ್ಳಬೇಕೆಂಬ ಹಂಬಲ ಕೂಡ ಇರುತ್ತದೆ. ಮಗುವಾದ ನಂತರ ಕೂಡ ಬಳಕುವ ಮೈಮಾಟ ಪಡೆಯುವುದು ತಪ್ಪಲ್ಲ. ಆದರೆ ಹೆರಿಗೆಯಾದ ಕೆಲವೇ ತಿಂಗಳಿನಲ್ಲಿ ತೂಕ ಇಳಿಸಿಕೊಳ್ಳುವ ಯೋಚನೆ ಎಷ್ಟರ ಮಟ್ಟಿಗೆ ಸರಿ ಎಂದು ತಿಳಿಯಲು ಮುಂದೆ ಓದಿ.
1. ಗರ್ಭವತಿಯಾದಾಗ ಮೈ ತೂಕ ಸ್ವಲ್ಪ ಜಾಸ್ತಿಯಾಗುವುದು ಸಹಜ. ಹೆರಿಗೆ ನಂತರ ದೇಹದ ಆರೈಕೆಗೆ ಉತ್ತಮ ಪೋಷಕಾಂಶಗಳಿರುವ ಆಹಾರ ಸೇವನೆ ಅವಶ್ಯಕ. ಅಲ್ಲದೆ ಮಗುವಿಗೆ ಹಾಲು ಕೊಡುವುದರಿಂದ ಪೌಷ್ಠಿಕ ಆಹಾರದ ಕಡೆ ಗಮನ ಕೊಡಬೇಕೆ ಹೊರತು ಡಯಟ್ ಕಡೆಯಲ್ಲ.
2. ಹೆರಿಗೆ ನಂತರ ಸ್ವಲ್ಪ ಕಾಲದವರೆಗೆ ಹೊಟ್ಟೆಯನ್ನು ಹಸಿದುಕೊಂಡು ಇರಬಾರದು. ಈ ರೀತಿ ಹಸಿವಿನಿಂದ ಇದ್ದರೆ ನಿಶ್ಯಕ್ತಿ ಉಂಟಾಗುತ್ತದೆ. ಆದ್ದರಿಂದ ತೂಕ ಹೆಚ್ಚಾಗುತ್ತದೆ ಎಂದು ತಿನ್ನದೆ ಕೂರದೆ ಸರಿಯಾಗಿ ತಿನ್ನಬೇಕು.
3. ಪ್ರಸವದ ನಂತರ ದಿನಕ್ಕೆ 400-500 ಕ್ಯಾಲೋರಿ ಆಹಾರವನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳಬೇಕು. ಮಗುವಿನ ಆರೋಗ್ಯ ತಾಯಿ ತಿನ್ನುವ ಆಹಾರದ ಮೇಲೆ ಅವಲಂಭಿಸಿರುತ್ತದೆ.
4. ಹೆರಿಗೆಯಾಗಿ ಒಂದು ಆರು ತಿಂಗಳವರೆಗೆ ದೇಹದ ತೂಕದ ಬಗ್ಗೆ ಚಿಂತೆ ಮಾಡಬಾರದು. ಊಟ ಬಿಟ್ಟು ತೆಳ್ಳಗಾಗುವ ಪ್ರಯತ್ನ ಮಾಡಬಾರದು.
ಯಾವಾಗ ವ್ಯಾಯಾಮ ಮಾಡಬೇಕು.
1. ಹೆರಿಗೆಯಾದ 2 ತಿಂಗಳ ಬಳಿಕ ನಿಧಾನಕ್ಕೆ ಒಂದು 30 ನಿಮಿಷ ನಡೆಯುವ ವ್ಯಾಯಾಮ ಮಾಡಬೇಕು. ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರೆ ಸ್ವಲ್ಪ ವ್ಯಾಯಾಮ ದೊರಕುವುದು.
2. ನಾರ್ಮಲ್ ಡೆಲಿವರಿಯಾದವರು 6 ತಿಂಗಳ ಬಳಿಕ ಪುಶ್ ಅಪ್. ಪುಲ್ ಅಪ್ ಮುಂತಾದ ವ್ಯಾಯಾಮ ಮಾಡುವುದು ಒಳ್ಳೆಯದು.
ಸಿಸೇರಿಯನ್ ಆದವರು ತಮ್ಮ ಆರೋಗ್ಯದ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಬೇಕು.
1. ಸಿಸೇರಿಯನ್ ಆದರೆ ಹೊಟ್ಟೆ ಹೆಚ್ಚಾಗಿ ಬಬರಬಹುದು. ಇದನ್ನು ನಿಯಂತ್ರಿಸಲು ಬೆಲ್ಟ್ ಧರಿಸುವುದು ಅವಶ್ಯಕ. ಇಲ್ಲದಿದ್ದರೆ ಅಧಿಕ ಬೊಜ್ಜು ತುಂಬಿ ದೇಹದ ತನ್ನ ಸುಂದರ ಆಕಾರವನ್ನು ಕಳೆದುಕೊಳ್ಳುತ್ತದೆ. ಆದರೆ ಈ ಬೆಲ್ಟ್ ಧರಿಸಿದರೆ ಹೊಟ್ಟೆ ಕರಗುವುದರಿಂದ ತೆಳ್ಳಗೆ ಕಾಣಿಸಬಹುದು ಅಲ್ಲದೆ ಸಿಸೇರಿಯನ್ ಆದವರಿಗೆ ಸ್ವಲ್ಪ ದಿನಗಳವರೆಗೆ ಎದ್ದು ಕೂರಲು ತುಂಬಾ ಕಷ್ಟವಾಗುತ್ತದೆ. ಈ ಬೆಲ್ಟ್ ಧರಿಸಿದರೆ ಎದ್ದು ಕೂರಲು ಸುಲಭವಾಗುವುದು.
2. ಸಿಸೇರಿಯನ್ ಆದವರು 6 ತಿಂಗಳ ನಂತರ ನಿಧಾನಕ್ಕೆ ನಡೆಯುವ ವ್ಯಾಯಾಮ ಮಾಡಬಹುದು, ನಡೆಯುವಾಗ ಬೀಳದಂತೆ ಜಾಗೃತಿವಹಿಸಬೇಕು. ಕಷ್ಟದ ವ್ಯಾಯಾಮವನ್ನು ಒಂದು ವರ್ಷದ ಬಳಿಕ ಮಾಡಬಹುದು.
ಹೆರಿಗೆ ಬಳಿಕ ಕಟ್ಟುನಿಟ್ಟಿನ ಡಯಟ್ ಬದಲು, ಉತ್ತಮ ಸಮತೋಲನ ಆಹಾರ ಮತ್ತು ಸೂಕ್ತ ವ್ಯಾಯಾಮ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಇದರಿಂದ ದೇಹವು ಅಪೌಷ್ಠಿಕತೆಗೆ ಈಡಾಗುವುದಿಲ್ಲ.



Click it and Unblock the Notifications
