Latest Updates
-
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ?
ನೀವು ದಿನದಲ್ಲಿ ನಿಮ್ಮ ಮಕ್ಕಳಿಗೆ ನೀಡುವ ಈ 9 ನಿಮಿಷವಿದೆಯ್ಲಾ ಅದು ಗೋಲ್ಡನ್ ಮಿನಿಟ್, ಏಕೆ ಗೊತ್ತಾ?
ನೀವು ಮಕ್ಕಳ ಪೋಷಕರೇ? ಹಾಗಾದರೆ ಕಡ್ಡಾಯವಾಗಿ ತಿಳಿದರಲೇಬೇಕಾದ ಸಂಗತಿಗಳು. ಮಕ್ಕಳಿಗೆ ಬೇಕಾಗಿದ್ದನ್ನು ಕೊಡಿಸುತ್ತಿದ್ದೇವೆ, ಒಳ್ಳೆಯ ಸ್ಕೂಲ್‌ಗೆ ಹಾಕಿದ್ದೇವೆ, ನಾವು ಬೆಳೆದಂತೆ ನಮ್ಮ ಮಕ್ಕಳು ಬೆಳೆಯಬಾರದು ಎಂದು ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ತುಂಬಾನೇ ಪ್ಲ್ಯಾನ್ ಮಾಡ್ತಾರೆ, ಆದರೆ ಮಕ್ಕಳಿಗಾಗಿ ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಯೋಚಿಸುವ ನಾವು ಬಹುಮುಖ್ಯವಾಗಿ ನೀಡಬೇಕಾಗಿರುವ ಸಮಯವನ್ನು ನೀಡಿರುವುದೇ ಇಲ್ಲ. ಹೌದು ಪೋಷಕರೇ ನೀವು ಈ ಚಿಕ್ಕ ಕಾರ್ಯ ಮಾಡಿ ಮಕ್ಕಳಲ್ಲಿ ತುಂಬಾನೇ ಬದಲಾವಣೆ ಕಾಣುವಿರಿ:

1, ಮಕ್ಕಳು ಎದ್ದ ಮೊದಲ ಮೂರು ನಿಮಿಷ
ಮಕ್ಕಳು ಎದ್ದಾಗ ಅವರನ್ನು ಅಪ್ಪಿಕೊಳ್ಳಿ, ಪ್ರೀತಿಯ ಮಾತುಗಳನ್ನಾಡಿ, ಅದು ಅವರಲ್ಲಿ ಪಾಸಿಟಿವಿಟಿ ತುಂಬುತ್ತೆ
2. ಮಕ್ಕಳು ಶಾಲೆಯಿಂದ ಮರಳಿದಾಗ 3 ನಿಮಿಷ ನೀಡಿ
ಅವರು ಸ್ಕೂಲ್‌ನಿಂದ ಮರಳಿದಾಗ ಅವರಿಗೆ ಹೇಳಲು ಸಾಕಷ್ಟು ವಿಷಯಗಳಿರುತ್ತದೆ, ಅದನ್ನು ಅವರು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತಾರೆ, ಅದನ್ನು ಕೇಳಿ,ಹೀಗೆ ಮಾಡುವುದರಿಂದ ನಿಮ್ಮ ಹಾಗೂ ಮಕ್ಕಳ ನಡುವಿನ ಬಾಂಧವ್ಯ ಗಟ್ಟಿಯಾಗುತ್ತೆ.
3. ಮಲಗುವ ಮೊದಲು 3 ನಿಮಿಷ
ಮಕ್ಕಳು ಮಲಗುವ 3 ನಿಮಿಷ ಮುನ್ನ ಅವರನ್ನು ಮುದ್ದಿಸಿ, ದೇವರ ಪ್ರಾರ್ಥನೆ ಮಾಡಿ, ಅವರು ಖುಷಿಯಾಗಿ ಮಲಗುವಂತೆ ನೋಡಿಕೊಳ್ಳಿ, ಹೀಗೆ ಮಾಡುವುದರಿಂದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ನೀವು ದಿನದಲ್ಲಿ ನೀಡುವ ಈ 9 ನಿಮಿಷ ನಿಮ್ಮ ಮಕ್ಕಳ ಪಾಲಿಗೆ ತುಂಬಾನೇ ಅಮೂಲ್ಯವಾಗಿರುತ್ತದೆ, ಇದು ಅವರಲ್ಲಿ ಮಾನಸಿಕ ಧೈರ್ಯ ತುಂಬುತ್ತದೆ, ಮಕ್ಕಳಲ್ಲಿ ಪಾಸಿಟಿವಿಟಿ ಮೂಡಿಸುತ್ತೆ, ಅವರ ವರ್ತನೆ ಉತ್ತಮವಾಗುವುದು, ಅಲ್ಲದೆ ಮಕ್ಕಳು ಓದಿನ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ.
ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಗಟ್ಟಿಯಾಗುವುದು
ನೀವು ಮಕ್ಕಳ ಜೊತೆಗೆ ಎಷ್ಟು ಕಳೆಯುತ್ತೀರೋ ಅವರೊಂದಿಗಿನ ಬಾಂಧವ್ಯ ಗಟ್ಟಿಯಾಗುವುದು, ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ನಿಮ್ಮ ಹಾಗೂ ಮಕ್ಕಳ ನಡುವೆ ಆಪ್ತತೆ ಬೆಳೆದಾಗ ಯಾವುದೇ ವಿಷಯವಾಗಲಿ ನಿಮ್ಮೊಂದಿಗೆ ಹಂಚಿಕೊಳ್ಳಬಹುದು ಎಂಬ ದೈರ್ಯ ಮೂಡಿಸುತ್ತದೆ, ಇದರಿಂದ ಅವರಲ್ಲಿಆತ್ಮವಿಶ್ವಾಸ ಹೆಚ್ಚಾಗುವುದು.
ಮಕ್ಕಳು ಓದಿನ ಕಡೆ ಕೂಡ ಗಮನಹರಿಸುತ್ತಾರೆ
ನಾವು ಮಕ್ಕಳ ಕಡೆಗೆ ಹೆಚ್ಚಿನ ಗಮನಹರಿಸಬಕು, ಅವರ ಜೊತೆ ಖುಷಿಯಾಗಿ ಸ್ವಲ್ಪ ಸಮಯ ಕಳೆಯಬೇಕು, ಹೀಗೆ ಮಾಡುವುದರಿಂದ ನಿಮ್ಮ ಬಾಂಧವ್ಯ ಗಟ್ಟಿಯಾಗುವುದು, ಅಲ್ಲದೆ ಮಕ್ಕಳ ಬುದ್ಧಿಶಕ್ತಿ ಕೂಡ ಹೆಚ್ಚಾಗುವುದು. ನಿಮ್ಮ ಮನಸ್ಸಿಗೆ ನೋವುಂಟು ಮಾಡಬಾರದು ಎಂದು ಚೆನ್ನಾಗಿ ಓದುತ್ತಾರೆ ಕೂಡ.
ನಾವೆಲ್ಲಾ ಪೋಷಕರು ಆ ದಿನದ ಬಗ್ಗೆ ಆಲೋಚಿಸುವುದು ಕಡಿಮೆ ಬದಲಿಗೆ ಅವರ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತೇವೆ, ಮಕ್ಕಳ ಭವಿಷ್ಯ ಅವರೇ ರೂಪಿಸುವ ಸ್ವಾತಂತ್ರ್ಯ ನೀಡಿ, ಮಕ್ಕಳ ಜೊತೆಗೆ ಉತ್ತಮ ಸಮಯ ಕಳೆಯಿರಿ. ಇದರಿಂದ ಅವರು ಜವಾನ್ದಾರಿ ಕಲಿಯುತ್ತಾರೆ, ಒಳ್ಳೆಯ ನಡತೆ ಕೂಡ ಕಲಿಯುತ್ತಾರೆ ಅಲ್ಲದೆ ಮಕ್ಕಳಲ್ಲಿ ಸುರಕ್ಷತೆ ಭಾವನೆ ಮೂಡಿಸುತ್ತದೆ.



Click it and Unblock the Notifications