ನಿಮ್ಮ ಮಕ್ಕಳ ಮಧ್ಯೆ ಸಂಬಂಧ ಹಾಳಾಗಬಾರದೆಂದರೆ ಏನು ಮಾಡಬೇಕು? ಮಾಡಬಾರದು?

ಪೋಷಕರು ತಮ್ಮ ಮಕ್ಕಳ ಮಧ್ಯೆ ಯಾವತ್ತಿಗೂ ಭೇದ-ಭಾವ ಮಾಡೋದಿಲ್ಲ. ಒಂದು ಪಕ್ಷ ಇಬ್ಬರು ಮಕ್ಕಳಿದ್ರೆ ಇಬ್ಬರಿಗೂ ಸಮಾನ ಪ್ರೀತಿ, ಕಾಳಜಿಯನ್ನು ತೋರಬೇಕು. ಆದರೂ ಕೂಡ ಕೆಲವೊಂದು ಸಲ ಮಕ್ಕಳ ಮಧ್ಯೆ ನಡೆಯುವ ಮಹಾ ಜಗಳಗಳು ಪೋಷಕರಿಗೆ ದೊಡ್ಡ ತಲೆನೋವು ತಂದು ಬಿಡುತ್ತೆ.

ಜಗಳ ನಡೆದಾಗ ದೊಡ್ಡವನಿಗೆ ಸಪೋರ್ಟ್ ಮಾಡಿದ್ರೆ ಚಿಕ್ಕವನಿಗೆ ಆಗೋಲ್ಲ. ಇತ್ತ ಚಿಕ್ಕವನಿಗೆ ಸಪೋರ್ಟ್ ಮಾಡಿದ್ರೆ ದೊಡ್ಡವನಿಗೆ ಆಗಲ್ಲ. ಮಕ್ಕಳಿಬ್ಬರನ್ನೂ ಸಮನಾಗಿ ನೋಡುವುದು ಪೋಷಕರ ಕರ್ತವ್ಯ. ಅಷ್ಟಕ್ಕು ಮಕ್ಕಳ ಮಧ್ಯೆ ಒಂದು ಆರೋಗ್ಯಯುತ ಸಂಬಂಧ ವೃದ್ಧಿಯಾಗುವಂತೆ ಮಾಡೋದು ಹೇಗೆ? ಇದಕ್ಕಾಗಿ ಪೋಷಕರು ಏನು ಮಾಡಬೇಕು ಅನ್ನೋದನ್ನು ತಿಳಿಯೋಣ.

Parenting Tips in Kannada: Dos and Don’ts of Maintaining a Healthy Sibling Relationships

ಮಕ್ಕಳ ಮಧ್ಯೆ ಆರೋಗ್ಯಯುತ ಸಂಬಂಧ ವೃದ್ಧಿಯಾಗಲು ಹೀಗೆ ಮಾಡಿ :

ಒಬ್ಬರನ್ನೊಬ್ಬರು ಕಾಳಜಿ ಮಾಡುವಂತೆ ನೋಡಿಕೊಳ್ಳಿ :

ಒಡ ಹುಟ್ಟಿದವರ ಮಧ್ಯೆ ಪ್ರೀತಿ ಹಾಗೂ ಕಾಳಜಿ ಮುಖ್ಯವಾಗಿ ಇರಬೇಕು. ಅದನ್ನು ಚಿಕ್ಕಂದಿನಿಂದಲೇ ವೃದ್ಧಿಯಾಗುವಂತೆ ಮಾಡುವುದು ಪೋಷಕರ ಕರ್ತವ್ಯ. ಯಾಕಂದ್ರೆ ಮುಂದೆ ಅವರು ಬೆಳೆದು ದೊಡ್ಡವರಾದ ಮೇಲೆಯೂ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಹೆಗಲಾಗುವಂತಿರಬೇಕು.

ಜಗಳ ಆಗುವಾಗ ಪೋಷಕರು ಮಧ್ಯ ಪ್ರವೇಶಿಸಬೇಕು :

ಮಕ್ಕಳು ಸಣ್ಣ-ಪುಟ್ಟ ಜಗಳ ಆಡೋದು ಸಹಜ. ಆಗ ಪೋಷಕರು ಸುಮ್ಮನಿರಬೇಕು. ಇನ್ನೇನು ಮಕ್ಕಳ ಜಗಳ ತೀವ್ರ ಸ್ವರೂಪಕ್ಕೆ ತಲುಪಿತು ಅನ್ನೋವಾಗ ಪೋಷಕರು ಮಧ್ಯ ಪ್ರವೇಶ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಅವರ ಜಗಳ ಬಿಡಿಸಿ, ಪರಸ್ಪರ ಕ್ಷಮೆ ಕೇಳಿಸಿ, ಮತ್ತೆ ಒಂದಾಗುವಂತೆ ಮಾಡುವುದು ಪೋಷಕರ ಕರ್ತವ್ಯ.

ಮಕ್ಕಳು ಹೇಗಿದ್ದಾರೆ ಹಾಗೆಯೇ ಅವರನ್ನು ಸ್ವೀಕರಿಸಿ :

ಪ್ರತಿಯೊಂದು ಮಗುವಿನಲ್ಲೂ ಒಂದು ವಿಭಿನ್ನ ಗುಣ ಇದ್ದೇ ಇರುತ್ತದೆ. ಉದಾಹರಣೆಗೆ ನಿಮಗೆ ಇಬ್ಬರು ಮಕ್ಕಳಿದ್ರೆ ಇಬ್ಬರ ಗುಣ ಒಂದೇ ರೀತಿ ಇರಬೇಕು ಅಂತ ನಿಯಮವಿಲ್ಲ. ಒಬ್ಬನ ಹಾಗೆ ಮತ್ತೊಬ್ಬ ಇರಬೇಕೆಂದೇನಿಲ್ಲ. ಹೀಗಾಗಿ ನಿಮ್ಮ ಮಕ್ಕಳಲ್ಲಿ ಒಬ್ಬರನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡಬೇಡಿ. ಅವರು ಹೇಗಿದ್ದರೋ ಅದೇ ರೀತಿ ಅವರನ್ನು ಸ್ವೀಕರಿಸಿ. ಅವರಲ್ಲಿರುವ ಕಲೆಗೆ ಗೌರವ ನೀಡಿ.

ಒಟ್ಟಾಗಿ ಆಟ ಆಡಿಸಿ :

ಸಾಮಾನ್ಯವಾಗಿ ಪೋಷಕರ ಬ್ಯುಸಿ ಸಮಯದಲ್ಲಿ ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಡೋದಕ್ಕೆ ಸಾಧ್ಯ ಆಗೋದಿಲ್ಲ. ಆದರೆ ಸಮಯ ಸಿಕ್ಕಾಗಲೆಲ್ಲಾ ನಿಮ್ಮ ಮಕ್ಕಳಿಗೆ ಒಟ್ಟಾಗಿ ಆಟಗಳನ್ನು ಆಡಿಸಿ. ಆಗ ಅವರ ಮಧ್ಯೆ ಒಂದು ಉತ್ತಮ ಭಾಂದವ್ಯ ವೃದ್ಧಿಯಾಗುತ್ತಾ ಹೋಗುತ್ತದೆ. ಒಬ್ಬರಿಗೆ ಮತ್ತೊಬ್ಬರ ಮೇಲೆ ಪ್ರೀತಿಯೂ ಹೆಚ್ಚಾಗುತ್ತದೆ.

ಮಕ್ಕಳ ಮಧ್ಯೆ ಆರೋಗ್ಯಯುತ ಸಂಬಂಧ ವೃದ್ಧಿಯಾಗಬೇಕೆಂದರೆ ಈ ತಪ್ಪುಗಳನ್ನು ಮಾಡಬೇಡಿ :

ಒಡಹುಟ್ಟಿದವರನ್ನು ಶತ್ರುವಿನಂತೆ ಭಾವಿಸೋದು :

ಮಕ್ಕಳು ಮೊದ ಮೊದಲು ಸಣ್ಣ-ಪುಟ್ಟ ತಪ್ಪುಗಳನ್ನು ಮಾಡಿದಾಗ ಪೋಷಕರು ಸುಮ್ಮನಿರುತ್ತಾರೆ. ದಿನ ಕಳೆದಂತೆ ಈ ಜಗಳ ದೊಡ್ಡದಾಗಿ ತೀವ್ರ ಸ್ವರೂಪಕ್ಕೆ ತಿರುಗುತ್ತದೆ. ಒಬ್ಬರನ್ನು ಮತ್ತೊಬ್ಬರು ಶತ್ರುವಿನಂತೆ ನೋಡೋದಕ್ಕೆ ಶುರು ಮಾಡುತ್ತಾರೆ. ಇಂತಹ ಸಂದರ್ಭದಲ್ಲೂ ಪೋಷಕರು ಸುಮ್ಮನಿದ್ದರೆ ಇದು ಅವರು ಮಾಡುವ ದೊಡ್ಡ ತಪ್ಪು.

ಮಕ್ಕಳು ಮಧ್ಯೆ ಭೇದ-ಬಾವ ಮಾಡುವುದು :

ಪೋಷಕರಿಗೆ ಮಕ್ಕಳು ಎಂದರೆ ತಮ್ಮ ಎರಡು ಕಣ್ಣುಗಳು ಇದ್ದ ಹಾಗೆ ಎಂದು ಭಾವಿಸಬೇಕು. ಅದನ್ನು ಬಿಟ್ಟು ಒಬ್ಬನ ಮೇಲೆ ಹೆಚ್ಚು ಪ್ರೀತಿ ತೋರಿಸಿ ಮತ್ತೊಬ್ಬರನ್ನು ಕಡೆಗಣಿಸಿದರೆ ಆಗ ಮತ್ತೊಬ್ಬನಿಗೆ ತನ್ನ ಒಡಹುಟ್ಟಿದವನ ಮೇಲೆ ಧ್ವೇಷ ಹುಟ್ಟುತ್ತದೆ. ಸ್ವಂತ ಸಹೋದರನನ್ನೇ ಆತ ಶತ್ರುವಿನಂತೆ ಕಾಣೋದಕ್ಕೆ ಶುರು ಮಾಡುತ್ತಾನೆ.

ಮಕ್ಕಳ ಮಧ್ಯೆ ಸ್ಪರ್ಧೆಗೆ ಆಸ್ಪದ ಕೊಡುವುದು :

ನಿಮ್ಮ ಮಕ್ಕಳು ಹೊರಗಿನವರ ಜೊತೆಗೆ ಸ್ಪರ್ಧೆ ಮಾಡಬೇಕೇ ಹೊರತು ಒಡಹುಟ್ಟಿದವರ ಜೊತೆಗಲ್ಲ. ಪೋಷಕರೇ ಅಣ್ಣನ ಮೇಲೆ ಹೋರಾಡಿ ಗೆಲ್ಲು ಎಂಬ ಪಾಠವನ್ನು ಹೇಳಿ ಕೊಟ್ಟರೆ ಇಬ್ಬರ ಮಧ್ಯೆ ಇರುವ ಧ್ವೇಷ ಹೆಚ್ಚಾಗುತ್ತಾ ಹೋಗುತ್ತದೆ. ಒಡಹುಟ್ಟಿದವರು ಹುಟ್ಟು ಧ್ವೇಷಿಗಳಾಗಿ ಬದಲಾಗುವ ಸಾಧ್ಯತೆ ಇದೆ.

ಮಕ್ಕಳನ್ನು ಸಾಕುವುದು ತುಂಬಾನೇ ಸೂಕ್ಷ್ಮ ವಿಚಾರ. ಈ ಸಂದರ್ಭದಲ್ಲಿ ಪೋಷಕರು ಕೊಂಚ ಎಡವಿದರೂ ಇದರಿಂದ ಅವರ ಭವಿಷ್ಯಕ್ಕೆ ಆಪತ್ತು ತಂದೊಡ್ಡಬಹುದು.

English summary

Parenting Tips in Kannada: Dos and Don’ts of Maintaining a Healthy Sibling Relationships

Parenting Tips in Kannada: Dos and Don’ts of Maintaining a Healthy Sibling Relationships.
X
Desktop Bottom Promotion