Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪೋಷಕರೇ, ನಿಮ್ಮ ಈ ತಪ್ಪುಗಳು ಮಕ್ಕಳು ಆತ್ಮ ವಿಶ್ವಾಸ ಕಳೆದುಕೊಳ್ಳಲು ಕಾರಣವಾಗುತ್ತೆ ಎಚ್ಚರ!
ಆತ್ಮ ವಿಶ್ವಾಸ ಅನ್ನೋದು ಪ್ರತಿಯೊಬ್ಬ ಮನುಷ್ಯನಿಗೂ ತುಂಬಾನೇ ಮುಖ್ಯವಾಗಿ ಬೇಕಾಗಿರುತ್ತದೆ. ಈಗಿನ ಪೋಷಕರು ಕೂಡ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬೋದಿಕ್ಕಾಗಿ ನಾನಾ ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಕೆಲವೊಂದು ಸಲ ಪೋಷಕರು ಮಾಡುವ ಅತಿಯಾದ ಕಾಳಜಿ ಮಕ್ಕಳಲ್ಲಿ ಆತ್ಮ ವಿಶ್ವಾಸವೇ ಬತ್ತಿ ಹೋಗುವಂತೆ ಮಾಡುತ್ತದೆ. ಅಷ್ಟಕ್ಕು ಪೋಷಕರು ಮಾಡುವ ಯಾವ ತಪ್ಪುಗಳು ಮಕ್ಕಳು ಆತ್ಮ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತದೆ ಅನ್ನೋದನ್ನು ತಿಳಿಯೋಣ.
1. ಮಕ್ಕಳಿಗೆ ಜವಬ್ದಾರಿಯನ್ನು ನೀಡದಿರೋದು
ಪೋಷಕರಿಗೆ ಮಕ್ಕಳ ಮೇಲೆ ಪ್ರೀತಿ ಇರೋದು ಸಹಜ. ಹಾಗಂತ ಮಕ್ಕಳನ್ನು ತಲೆಯ ಮೇಲೆ ಕೂರಿಸೋದು ಸರಿಯಲ್ಲ. ಅವರ ವಯಸ್ಸಿಗೆ ತಕ್ಕ ಹಾಗೆ ಅವರಿಗೆ ಕೆಲವೊಂದು ಮನೆಯ ಜವಾಬ್ದಾರಿಗಳನ್ನು ನೀಡಿ. ಮನೆ ಕೆಲಸದಲ್ಲಿ ಸಹಾಯ ಮಾಡೋದಕ್ಕೆ ಮಕ್ಕಳಿಗೆ ತಿಳಿಸಿ. ಇಲ್ಲದಿದ್ದರೆ ನಿಮ್ಮ ಮಗುವಿಗೆ ಮನೆಯ ಕೆಲಸಗಳ ಬಗ್ಗೆ ಒಂದು ಚೂರು ಜ್ಞಾನವೇ ಇರೋದಿಲ್ಲ. ಜವಾಬ್ದಾರಿಗಳನ್ನು ಹೊತ್ತು ಕೊಳ್ಳೋದಿಕ್ಕೆ ಕೂಡ ಆತನಿಂದ ಸಾಧ್ಯವಾಗೋದಿಲ್ಲ. ಇದ್ರಿಂದ ಮುಂದೆ ನಿಮ್ಮ ಮಗುವಿಗೆ ಯಾವುದೇ ಕೆಲಸ ಮಾಡೋದಕ್ಕೂ ಆತ್ಮ ವಿಶ್ವಾಸ ಇಲ್ಲದಂತಾಗಬಹುದು.

2. ಮಕ್ಕಳು ತಪ್ಪು ಮಾಡಿದಾಗ ತಿದ್ದದೇ ಇರುವುದು
ನಿಮ್ಮ ಮಗು ಕಲಿಕೆಯಲ್ಲಿ ಹಿಂದೆ ಬಿದ್ದು ಅನುತೀರ್ಣನಾದಾಗ, ಆಟೋಟ ಅಥವಾ ಬೇರ್ಯಾವುದೇ ಚಟುವಟಿಕೆಗಳಲ್ಲಿ ಸೋತಾಗ, ಅಥವಾ ಶಾಲೆಯಲ್ಲಿ, ಹೊರಗಡೆ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದಾಗ ಅವರಿಗೆ ತಿದ್ದಿ ಬುದ್ಧಿ ಹೇಳಿ. ಅದನ್ನು ಬಿಟ್ಟು ನಿಮ್ಮ ಮಗು ಮಾಡಿದ್ದೇ ಸರಿ ಎದ್ದು ಪೋತ್ಸಾಹ ನೀಡಬೇಡಿ. ಅವರು ತಪ್ಪು ಮಾಡಿದಾಗ ಅವರಿಗೆ ನೀವು ಮತ್ತು ಪೋತ್ಸಾಹ ನೀಡಿದರೆ ಅವರನ್ನು ನೀವು ಪ್ರಚೋದಿಸಿದಂತಾಗುತ್ತದೆ. ಜೊತೆಗೆ ಸೋತಾಗ ನೀವು ದೈರ್ಯ ತುಂಬದೇ ಹೋದರೆ ಅವರಲ್ಲಿನ ಆತ್ಮ ವಿಶ್ವಾಸ ಸತ್ತು ಹೋಗಬಹುದು.
3. ಅವರ ಭಾವನೆಗಳನ್ನು ರಕ್ಷಿಸುವುದು
ಮನುಷ್ಯನಿಗೆ ನೋವುಗಳು ಆದಾಗ ಕುಗ್ಗಿ ಹೋಗೋದು ಸಹಜ. ಅದೇ ರೀತಿ ಮಕ್ಕಳಿಗೂ ಕೂಡ ಅವರದ್ದೇ ಆದ ನೋವುಗಳು ಖಂಡಿತ ಇದ್ದೇ ಇರುತ್ತದೆ. ಅದೇ ರೀತಿ ಮಕ್ಕಳಿಗೂ ನೋವುಗಳು ಇರುತ್ತದೆ. ಈ ಸಂದರ್ಭದಲ್ಲಿ ಅವರು ಅಳೋದು ಸಹಜ. ಆಗ ನೀವು ನಿಮ್ಮ ಮಗುವಿಗೆ ಸಾಂತ್ವಾನ ಹೇಳಿ ಪರವಾಗಿಲ್ಲ. ಆದರೆ ನಿಮ್ಮ ಮಗು ಮಾಡಿದ್ದು ಸರಿ ಎಂದು ಸಮರ್ಥಿಸಿಕೊಳ್ಳುವುದು ತಪ್ಪು. ಪ್ರತಿ ಸಾರಿ ಅವರ ನೋವಿನಲ್ಲಿ ನೀವು ಜೊತೆಯಾಗಿದ್ದರೆ ಮತ್ತೆ ಆ ನೋವಿನ ವಿರುದ್ಧ ಹೋರಾಡಿ ಗೆಲ್ಲಬೇಕೆಂಬ ಹಠ ನಿಮ್ಮ ಮಗುವಿನಲ್ಲಿ ಹುಟ್ಟೋದೇ ಇಲ್ಲ.
4. ಕಷ್ಟಗಳ ಅರಿವು ಮಕ್ಕಳಿಗೆ ಗೊತ್ತು ಮಾಡಿಸದಿರೋದು
ನಿಮ್ಮ ಮಗುವಿಗೆ ಕೇಳಿದ್ದನ್ನೆಲ್ಲಾ ತೆಗೆದು ಕೊಡೋದು ತಪ್ಪು. ಕೆಲವೊಂದು ಪೋಷಕರು ತಮ್ಮ ಬಳಿ ದುಡ್ಡು ಇಲ್ಲದಿದ್ದರೂ ಸಾಲ ಮಾಡಿಯಾದ್ರು ಮಕ್ಕಳು ಕೇಳಿದ್ದನ್ನೆಲ್ಲಾ ತೆಗೆದು ಕೊಡುತ್ತಾರೆ. ಇದರ ಅವಶ್ಯಕತೆ ಖಂಡಿತ ಇಲ್ಲ. ನೀವು ಈ ರೀತಿ ಕೊಡುತ್ತಿದ್ದರೆ ಅವರಿಗೆ ದುಡಿಯುವ ಛಲ ಹುಟ್ಟೋದಿಲ್ಲ. ಕಷ್ಟ ಪಡಬೇಕು ಅಂತ ಅನ್ನಿಸೋದೇ ಇಲ್ಲ. ಅಪ್ಪನ ದುಡ್ಡಿನಲ್ಲಿ ಆರಾಮಾಗಿ ಇದ್ದು ಬಿಡುತ್ತಾರೆ. ನೀವು ಅವರಿಗೆ ದುಡಿದು ತಿನ್ನೋದನ್ನು ಕಲಿಸದಿದ್ದರೆ ಖಂಡಿತ ಆ ಛಲ ಅವರಲ್ಲಿ ಹುಟ್ಟೋದೇ ಇಲ್ಲ. ಅವರ ಕಾಲ ಮೇಲೆ ನಿಲ್ಲುವ ಪ್ರಯತ್ನವನ್ನು ಮಾಡೋದಿಲ್ಲ. ಜೀವನ ಪೂರ್ತಿ ಮನೆಯವರ ಮೇಲೆ ಅವಲಂಬಿತವಾಗೋ ಸಾಧ್ಯತೆ ಇದೆ.
5. ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡೋದು
ಕೆಲ ಪೋಷಕರಂತೂ ಮಕ್ಕಳನ್ನು ಅತಿಯಾದ ಕಾಳಜಿಯಿಂದ ಸಾಕುತ್ತಾರೆ. ಅವರಿಗೆ ಒಂಚೂರು ನೋವಾದರೂ ಪೋಷಕರಿಗೆ ತಡೆದುಕೊಳ್ಳುವ ಶಕ್ತಿಯೇ ಇರೋದಿಲ್ಲ. ಹೆಜ್ಜೆ ಹೆಜ್ಜೆ ಮಕ್ಕಳ ಕಾಳಜಿ ಮಾಡುತ್ತಾರೆ. ಹೀಗಾಗಿ ಮಕ್ಕಳಿಗೆ ಸಮಸ್ಯೆಗಳನ್ನು ಎದುರಿಸೋದು ಹೇಗೆ ಅನ್ನೋದೇ ಗೊತ್ತಿರೋದಿಲ್ಲ. ಪ್ರತಿಯೊಂದು ಸಮಸ್ಯೆಗಳಿಗೂ ಅಪ್ಪ-ಅಮ್ಮನೇ ಪರಿಹಾರ ಹುಡುಕೋದ್ರಿಂದ ಅವರು ಒಬ್ಬರೇ ಇದ್ದಾಗ ಕಂಗಾಲಾಗಿ ಹೋಗುತ್ತಾರೆ. ಸ್ವತಂತ್ರವಾಗಿ ಬದುಕೋದೇ ಮಕ್ಕಳಿಗೆ ಗೊತ್ತಿರೋದಿಲ್ಲ.
6. ಹೆಜ್ಜೆ ಹೆಜ್ಜೆಗೂ ಶಿಸ್ತಿನ ಪಾಠ ಮಾಡುವುದು
ಹದಿ ಹರೆಯದ ವಯಸ್ಸಿನಲ್ಲಿ ಮಕ್ಕಳು ಹಾಳಾಗೋದು ಸಹಜ. ಹೀಗಾಗಿ ಮಕ್ಕಳನ್ನು ನಿಯಂತ್ರಣಲ್ಲಿ ಇಟ್ಟು ಕೊಳ್ಳೋದು ತುಂಬಾನೇ ಮುಖ್ಯವಾಗುತ್ತದೆ. ಆದರೆ ಕೆಲವೊಂದು ಪೋಷಕರು ಮಕ್ಕಳ ಮೇಲೆ ಶಿಸ್ತಿನ ಲಕ್ಷಣ ರೇಖೆಯನ್ನೇ ಎಳೆದು ಬಿಡುತ್ತಾರೆ. ಅವರು ನಿಂತರೂ ತಪ್ಪು, ಕುಂತರೂ ತಪ್ಪು ಎಂದು ಹೇಳುತ್ತಾರೆ. ಹೀಗಾಗಿ ಮಕ್ಕಳು ಹೆದರಿಕೆಯಲ್ಲೇ ಬದುಕಬೇಕಾಗುತ್ತದೆ. ಇದರಿಂದ ಅವರು ಆತಂಕ ಖಿನ್ನತೆಗೆ ಒಳಗಾಗೋದು ಮಾತ್ರವಲ್ಲದೇ ಅವರ ಆತ್ಮ ವಿಶ್ವಾಸ ಕಡಿಮೆಯಾಗುತ್ತದೆ.
ಮಕ್ಕಳನ್ನು ಸಾಕೋದು ಕೂಡ ಒಂದು ರೀತಿಯ ಕಲೆ. ಮಕ್ಕಳನ್ನು ಅತಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ತಪ್ಪು. ಅತಿಯಾದ ಸ್ವತಂತ್ರ ಕೊಡೋದು ತಪ್ಪು. ಪೋಷಕರು ಮಕ್ಕಳನ್ನು ಯಾವ ರೀತಿ ಸಾಕಬೇಕು ಅನ್ನೋದು ತಿಳಿದಿದ್ದರೆ ಅವರ ಭವಿಷ್ಯ ಉತ್ತಮವಾಗುತ್ತದೆ.



Click it and Unblock the Notifications

