Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಮಕ್ಕಳಿಗೆ ಲಸಿಕೆ ಯಾಕೆ ಕೊಡಿಸಬೇಕು, ಇದು ಮಕ್ಕಳನ್ನು ಹೇಗೆ ರಕ್ಷಿಸುತ್ತದೆ?
ದಡಾರ ಹೇಗಿರುತ್ತದೆ? ಪೋಲಿಯೋ ಎಂದರೇನು?ಇದರ ರೋಗಲಕ್ಷಣಗಳೇನು? ಇಂತಹ ಕೆಲವು ಕಾಯಿಲೆಗಳ ಹೆಸರು ಹೇಳಿ ಚಿಕ್ಕಮಕ್ಕಳಿಗೆ ನೀಡಲಾಗುವ ಲಸಿಕೆಯ ಬಗ್ಗೆ ಕೆಲವು ಪೋಷಕರಿಗೆ ಅಸಡ್ಡೆ ಇರಬಹುದು ಅಥವಾ ಈ ಲಸಿಕೆಯ ಅಗತ್ಯತೆಯಾದರೂ ಏನು ಎಂಬ ಬಗ್ಗೆ ಪ್ರಶ್ನೆಗಳಿರಬಹುದು! ಮಗು ಹುಟ್ಟಿದ ಮೇಲೆ ಆ ಇಂಜೆಕ್ಷನ್ ಈ ಇಂಜೆಕ್ಷನ್ ಅಂತ ಚುಚ್ಚಿಸುತ್ತಲೇ ಇರಬೇಕಲ್ಲ ಎಂಬ ಅಸಡ್ಡೆತನವೂ ಇರಬಹುದು. ಆದರೆ ನೆನಪಿಡಿ ಪೋಷಕರೇ ಈ ಇಂಜೆಕ್ಷನ್ ಗಳು ನಿಮ್ಮ ಮಗುವಿನ ರಕ್ಷಾಕವಚಗಳು!
ಇಂದಿನ ಮಕ್ಕಳು ಅದೆಷ್ಟೋ ಭಯಾನಕ ಕಾಯಿಲೆಗಳಿಂದ ಸುರಕ್ಷಿತವಾಗಿರುವುದಕ್ಕೆ ಕಾರಣಗಳು ಈ ಲಸಿಕೆಗಳು!ಹಾಗಾಗಿ ಈ ಲಸಿಕೆಗಳಿಗೆ, ವೈದ್ಯಕೀಯ ರಂಗಕ್ಕೆ ದೊಡ್ಡ ಧನ್ಯವಾದವನ್ನು ಸಮರ್ಪಿಸಲೇಬೇಕು.
ಸಿಡುಬು,ಪೊಲಿಯೋ,ಡಿಫ್ತೀರಿಯಾ,ದಡಾರ,ರುಬೆಲ್ಲಾ ಇತ್ಯಾದಿಗಳು ಭಯಾನಕ ಸಾಂಕ್ರಾಮಿಕ ರೋಗಗಳು. ಒಂದು ಕಾಲದಲ್ಲಿ ಈ ದೇಶದಲ್ಲಿ ಮಕ್ಕಳಿಗೆ ವಿನಾಶಕಾರಿಯಾಗಿದ್ದ ಗಂಭೀರ ಕಾಯಿಲೆಗಳು. ಆದರೆ ಇದೀಗ ಚುಚ್ಚುಮದ್ದುಗಳ ಕಾರಣದಿಂದಾಗಿ ಎಲ್ಲಾ ಮಕ್ಕಳೂ ಸೇಫ್!

ಲಸಿಕೆಗಳು ಮಕ್ಕಳನ್ನು ಹೇಗೆ ರಕ್ಷಿಸುತ್ತದೆ?
ಪೋಷಕರು ಯಾವಾಗಲೂ ಕೂಡ ಮಗುವಿನ ಸರ್ವತೋಮುಖ ಸುರಕ್ಷತೆಗಾಗಿ ಯೋಚಿಸುತ್ತಾರೆ. ಒಂದು ಮಾಲ್ ನಲ್ಲಿ ಹೋದರೆ ಧೂಳು, ಕೊಳಕಿನ ಬಗ್ಗೆ ಕಾಳಜಿ ವಹಿಸುತ್ತೀರಿ. ಮಗುವು ಕೊಳಚೆಯನ್ನು ಎಲ್ಲಿ ಮುಟ್ಟಿಬಿಡುತ್ತೇನೋ ಎಂದು ಆಲೋಚಿಸುತ್ತೀರಿ. ಪಾರ್ಕ್ ನಲ್ಲಿ ಮಣ್ಣಿನಲ್ಲಿ ಆಟವಾಡುವಾಗ ಎಲ್ಲಿ ಸೋಂಕು ತಗುಲುತ್ತೇನೋ ಎಂದು ಭಯಭೀತಿಗೊಳ್ಳುತ್ತೀರಿ. ಊಟಕ್ಕಿಂತ ಮುನ್ನ ಮಗು ಕೈತೊಳೆದಿದೆಯೋ ಇಲ್ಲವೋ ಎಂದು ಗಮನ ಹರಿಸುತ್ತೀರಿ. ಹೀಗೆ ಹಲವು ರೀತಿಯಲ್ಲಿ ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯ ವರ್ಧನೆಗೆ ಪಣ ತೊಡುತ್ತೀರಿ. ರೋಗ ನಿರೋಧಕ ಶಕ್ತಿ ಎಂದಾಗ ಲಸಿಕೆಗಳೂ ಕೂಡ ಮಹತ್ವಪೂರ್ಣವೆನಿಸುತ್ತದೆ.
ಹೌದು ಮಕ್ಕಳ ಸುರಕ್ಷತೆಗಾಗಿ ಲಸಿಕೆಗಳನ್ನು ಕೊಡಿಸುವುದು ಬಹಳ ಮುಖ್ಯ. ಈಗಾಗಲೇ ಸರ್ಕಾರವು ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ ಮತ್ತು ಸರ್ಕಾರದಿಂದ ಉಚಿತ ಲಸಿಕಾ ಕಾರ್ಯಕ್ರಮಗಳು ಕೂಡ ಮಕ್ಕಳಿಗಾಗಿ ನಡೆಯುತ್ತಿದೆ. ಲಸಿಕಾ ಕಾರ್ಯಕ್ರಮದಿಂದ ಏನು ಪ್ರಯೋಜನ. ಲಸಿಕೆಗಳು ಮಕ್ಕಳನ್ನು ಹೇಗೆ ಸುರಕ್ಷಿತವಾಗಿಡಬಲ್ಲವು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಮುಂದೆ ಓದಿ.

ಸೋಂಕಿನಿಂದ ರಕ್ಷಣೆ :
ಮಕ್ಕಳ ಆರೋಗ್ಯದ ರಕ್ಷಣೆಗೆ ವ್ಯಾಕ್ಸಿನ್ ಗಳು ಉತ್ತಮ ಮಾರ್ಗವಾಗಿದೆ. ಅನೇಕ ಕಾಯಿಲೆಗಳು ನಿಮ್ಮ ಮಕ್ಕಳಿಗೆ ಬಾರದೇ ಇರುವಂತೆ ನೋಡಿಕೊಳ್ಳುತ್ತವೆ ಈ ಲಸಿಕೆಗಳು. ನಿಮ್ಮ ಮಕ್ಕಳನ್ನು ಜೀವನಪೂರ್ತಿ ಕೊರಗುವಂತೆ ಮಾಡುವ ಅದೆಷ್ಟೋ ಕಾಯಿಲೆಗಳಿಂದ ನಿಮ್ಮ ಮಕ್ಕಳನ್ನು ದೂರವಿಡುತ್ತವೆ ಈ ಲಸಿಕೆಗಳು. ಭಯಾನಕ ಕಾಯಿಲೆಗಳು ನಿಮ್ಮ ಮಕ್ಕಳ ಬಳಿಯೂ ಸುಳಿಯದಂತೆ ನೋಡಿಕೊಳ್ಳುವ ತಾಕತ್ತು ಈ ಲಸಿಕೆಗಳಿಗೆ ಇರುತ್ತದೆ.

ನಿಮ್ಮ ಸಮುದಾಯದಿಂದ ರಕ್ಷಣೆ :
ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಕೇವಲ ನಿಮ್ಮ ಮಕ್ಕಳು ಮಾತ್ರ ಆರೋಗ್ಯವಾಗಿರುವಂತೆ ಮಾಡುತ್ತದೆ ಎಂದುಕೊಳ್ಳಬೇಡಿ ಬದಲಾಗಿ ನಿಮ್ಮ ಇಡೀ ಸಮುದಾಯವೇ ಆರೋಗ್ಯವಾಗಿರುವುದಕ್ಕೆ ಇದು ನೆರವಾಗುತ್ತದೆ. ನಿಮ್ಮ ಮಗುವಿಗೆ ನೀವು ವ್ಯಾಕ್ಸಿನ್ ಮಾಡಿಸಿದಿರಿ ಎಂದಾದರೆ ನಿಮ್ಮ ಮಗುವಿನ ಜೊತೆಗೆ ಇತರ ಮಕ್ಕಳನ್ನೂ ನೀವು ಕಾಪಾಡಿದ್ದೀರಿ ಎಂದರ್ಥ. ಇತರೆ ಪೋಷಕರು ಅವರ ಮಕ್ಕಳಿಗೆ ಲಸಿಕೆ ಕೊಡಿಸಿದ್ದಾರೆ ಎಂದಾದರೆ ನಿಮ್ಮ ಮಗುವನ್ನು ಅವರು ಸುರಕ್ಷಿತವಾಗಿಟ್ಟರು ಎಂದರ್ಥ. ಎಲ್ಲಾ ಮಕ್ಕಳು ಲಸಿಕೆ ಪಡೆದರೆ ಯಾವುದೋ ಒಂದು ದೊಡ್ಡ ರೋಗದ ಅಪಾಯವನ್ನು ತಡೆದಂತಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.

ಭವಿಷ್ಯದ ಸುರಕ್ಷತೆ:
ನೀವು ನಂಬಿದರೆ ನಂಬಿ. ನಿಮ್ಮ ಮಗುವನ್ನು ನೀವು ರೋಗ ನಿರೋಧಕವಾಗಿಸಿದರೆ ನಿಮ್ಮ ಮೊಮ್ಮಕ್ಕಳನ್ನೂ ಕೂಡ ನೀವು ಕಾಪಾಡಿದ್ದೀರಿ ಎಂದರ್ಥ. ಯಾಕೆ ಎಂದು ಕೇಳುತ್ತಿದ್ದೀರಾ? ಯಾಕೆಂದರೆ ಯಾವುದೋ ಒಂದು ಲಸಿಕೆಯ ರಕ್ಷಣೆಯಿಂದಾಗಿ ಭಯಾನಕ ಕಾಯಿಲೆಯೊಂದರ ನಾಶ ಸಾಧ್ಯವಾಗುತ್ತದೆ.ಅಧಿಕೃತವಾಗಿ ಒಂದು ಕಾಯಿಲೆಯು ಇತಿಹಾಸ ಸೇರಿದರೆ ಮುಂದೊಂದು ದಿನ ಆ ಕಾಯಿಲೆಗೆ ಲಸಿಕೆ ಕೊಡಿಸುವ ಅಗತ್ಯತೆ ಇರುವುದಿಲ್ಲ. ಸದ್ಯ ಸ್ಮಾಲ್ ಪಾಕ್ಸ್ ಕಾಯಿಲೆ ಅದೇ ರೀತಿಯಾಗಿದೆ ಮತ್ತು ಸದ್ಯ ಸ್ಮಾಲ್ ಪಾಕ್ಸ್ ಗೆ ವ್ಯಾಕ್ಸಿನ್ ನ್ನು ಯಾರೂ ನೀಡುತ್ತಿಲ್ಲ. ಹಾಗಾಗಿ ನೀವು ಭವಿಷ್ಯದ ಸುರಕ್ಷತೆಯನ್ನ ಆಲೋಚಿಸುವುದು ಬಹಳ ಒಳ್ಳೆಯದು.

ಮಗುವಿಕೆ ಲಸಿಕೆ ನೀಡುವುದನ್ನು ನೀವ್ಯಾಕೆ ಮುಂದುವರಿಸಬೇಕು?
ಲಸಿಕೆಗಳು ಮಕ್ಕಳನ್ನು ಕಾಯಿಲೆಯಿಂದ ದೂರವಿಡುವಂತೆ ಮಾಡುವುದಕ್ಕಾಗಿ ಖಂಡಿತ ಪ್ರತಿಯೊಬ್ಬ ಪೋಷಕರೂ ಕೂಡ ತಮ್ಮ ಮಕ್ಕಳಿಗೆ ಲಸಿಕೆ ನೀಡುವುದನ್ನು ಮುಂದುವರಿಸಲೇಬೇಕು. ನಿಜ. ಯಾವುದೇ ತಾಯಿಯು ತನ್ನ ಮಗುವಿನೆಡೆಗೆ ಚುಚ್ಚುಮದ್ದಿನ ಸೂಜಿ ಬರುವುದನ್ನು ಬಯಸುವುದಿಲ್ಲ. ಸೂಜಿಯ ಚುಚ್ಚುವಿಕೆಯಿಂದ ಮಗು ಅಳುವುದನ್ನು ಕೇಳಲು ಬಯಸುವುದಿಲ್ಲ. ಆದರೆ ಇಂದಿನ ಕ್ಷಣಮಾತ್ರದ ನೋವು ಮಗುವಿನ ಭವಿಷ್ಯದಲ್ಲಿ ಶಾಶ್ವತ ನೋವು ಬರುವುದನ್ನು ತಡೆಯುತ್ತದೆ ಎಂಬುದು ಪ್ರತಿ ಪೋಷಕರ ಮನದಲ್ಲೂ ಇರಲೇಬೇಕು. ನಿಮ್ಮ ಮಗು ಸುರಕ್ಷಿತವಾಗಿ, ಕಾಯಿಲೆಗಳಿಂದ ಮುಕ್ತವಾಗಿ ಆರೋಗ್ಯಯುತವಾಗಿ ಇರಲು ವ್ಯಾಕ್ಸಿನ್ ಗಳು ಬಹಳ ಮುಖ್ಯ.



Click it and Unblock the Notifications