Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Kids health: ಇಂಥಾ ಆಹಾರಗಳನ್ನು ಎಂದಿಗೂ ಮಕ್ಕಳ ಲಂಚ್‌ಬಾಕ್ಸ್‌ಗೆ ಕೊಡಲೇಬೇಡಿ
ಮಕ್ಕಳ ಆಹಾರದ ವಿಚಾರಕ್ಕೆ ಬಂದರೆ ಹಿಂದಿನ ಕಾಲದ ಪೋಷಕರಂತೆ ಈಗಿನ ಪೋಷಕರು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಅವರಿಗೆ ಬೆಳಗ್ಗೆಯೇ ಬ್ರೇಕ್‌ಫಾಸ್ಟ್, ಲಂಚ್ ಬಾಕ್ಸ್ ಎಲ್ಲವನ್ನು ರೆಡಿ ಮಾಡಲು ಅಲಸ್ಯ ಪಡುವ ಬಹುತೇಕ ಅಮ್ಮಂದಿರು ಅವಸರದಲ್ಲಿ ರೆಡಿಮೇಡ್ ಫುಡ್‌ಗಳ ಮೊರೆ ಹೋಗುತ್ತಾರೆ.
ಹಿಂದೆ ಆರೋಗ್ಯಕರ ಬ್ರೇಕ್‌ಫಾಸ್ಟ್, ಸೊಪ್ಪು, ತರಕಾರಿ ಪಲ್ಯಗಳು, ಪೌಷ್ಟಿಕ ಖಾದ್ಯಗಳನ್ನು ಸಿದ್ಧಪಡಿಸುತ್ತಿದ್ದರು, ಅದಕ್ಕೆಲ್ಲಾ ಈಗ ಸಮಯವೇ ಇಲ್ಲವಾಗಿದೆ ವರ್ಕಿಂಗ್ ಅಮ್ಮಂದಿರಿಗೆ. ಅನೇಕ ಬಾರಿ ಅವಸರದಲ್ಲಿ ಚಿಪ್ಸ್, ಮ್ಯಾಗಿ, ರೆಡಿಮೇಡ್ ಕೇಕ್‌ಗಳು ಮತ್ತು ಸಲಭವಾಗಿ ತಯಾರಿಸಬಹುದಾದ ಇತರ ಖಾದ್ಯಗಳನ್ನು ಪ್ಯಾಕ್ ಮಾಡುತ್ತಾರೆ. ಆದರೆ ಈ ಸಿದ್ಧ ಆಹಾರಗಳು ಎಷ್ಟು ಅನಾರೋಗ್ಯಕರ, ಮಕ್ಕಳ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಮಕ್ಕಳ ಆಹಾರದಲ್ಲಿ ಇಂಥಾ ಅಲಸ್ಯ ಎಷ್ಟು ತಪ್ಪು ಮುಂದೆ ನೋಡೋಣ:

ಆಲೂಗಡ್ಡೆ ಚಿಪ್ಸ್
ಅಂಗಡಿಗಳಲ್ಲಿ ಸಿಗುವ ಆಲೂಗಡ್ಡೆ ಚಿಪ್ಸ್‌ನಲ್ಲಿ ಹೆಚ್ಚಿನ ಉಪ್ಪು ಮತ್ತು ಕಡಿಮೆ ಗುಣಮಟ್ಟದ ಎಣ್ಣೆಯನ್ನು ಬಳಸಲಾಗುತ್ತದೆ. ಈ ಚಿಪ್ಸ್ ಟ್ರಾನ್ಸ್ ಕೊಬ್ಬು ಮತ್ತು ಕ್ಯಾಲೋರಿಗಳಲ್ಲಿ ಅಧಿಕವಾಗಿರುತ್ತದೆ. ಅದೇ ಸಮಯದಲ್ಲಿ, ಅದರ ಅತಿಯಾದ ಸೇವನೆಯಿಂದ ಮಧುಮೇಹದ ಅಪಾಯವೂ ಇದೆ. ಆದ್ದರಿಂದ ಮಕ್ಕಳು ಊಟದ ಬಾಕ್ಸ್ ಸಿದ್ಧಪಡಿಸುವಾಗ ಬಹಳ ಚಿಂತನಾಶೀಲವಾಗಿ ಪ್ಯಾಕ್ ಮಾಡಬೇಕು.

ರೆಡಿಮೇಡ್ ಸ್ಯಾಂಡ್‌ವಿಚ್
ನೀವು ತುಂಬಾ ಪ್ರೀತಿಯಿಂದ ಪ್ಯಾಕ್ ಮಾಡುವ ಮಕ್ಕಳ ಊಟದ ಡಬ್ಬಿಗಳಲ್ಲಿ ಅನೇಕ ರೀತಿಯ ಅನಾರೋಗ್ಯಕರ ಆಹಾರಗಳು ಸೇರಿಬಿಡುತ್ತದೆ. ಅಂಥಾ ಆಹಾರಗಳಲ್ಲಿ ಒಂದು ಈ ಸ್ಯಾಂಡ್‌ವಿಚ್. ಅದರಲ್ಲೂ ರೆಡಿಮೇಡ್ ಸ್ಯಾಂಡ್‌ವಿಚ್‌ಗಳು, ಕಾರಣ ಇದರಲ್ಲಿ ಸಬ್-ಸ್ಟಾಂಡರ್ಡ್ ಮೇಯನೇಸ್ ಮತ್ತು ಫಿಲ್ಲಿಂಗ್ ಅನ್ನು ಬಳಸಲಾಗುತ್ತದೆ, ಇದರಲ್ಲಿ ನೈಟ್ರಸ್ ಮತ್ತು ಹೆಚ್ಚುವರಿ ಸೋಡಿಯಂನಂತಹ ಅನೇಕ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ಸ್ಯಾಂಡ್‌ವಿಚ್‌ಗಳನ್ನು ಸಂರಕ್ಷಿಸಲು ಅನೇಕ ರಾಸಾಯನಿಕಗಳನ್ನು ಸಹ ಬಳಸಲಾಗುತ್ತದೆ, ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇತ್ತೀಚೆಗೆ ಮನೆಗಳಲ್ಲಿ ತಯಾರಿಸುವ ಸ್ಯಾಂಡವಿಚ್‌ಗಳಲ್ಲೂ ಸಹ ಅದರ ರುಚಿ ಹೆಚ್ಚಿಸಲು ಮೇಯನೀಸ್ ಸೇರಿದಂತೆ ಕೆಲವು ರಾಸಾಯನಿಕಗಳನ್ನು ಬಳಸುತ್ತಿದ್ದೇವೆ ಅಲ್ಲವೇ, ಇದು ಆರೋಗ್ಯಕ್ಕೆ ಹಾನಿಕರ.

ಶಕ್ತಿವರ್ಧಕ ಪಾನೀಯ
ನೀವು ಮಕ್ಕಳಿಗೆ ಆರೋಗ್ಯಕರ ಆಹಾರ ನೀಡುತ್ತಿದ್ದೀರಿ ಎಂದು ಭಾವಿಸಿದರೂ ಸಿದ್ಧ ಜ್ಯೂಸ್‌ಗಳು ಖಂಡಿತ ಆರೋಗ್ಯಕರವಲ್ಲ. ಇದು ಅವರ ಆರೋಗ್ಯವನ್ನು ಹಲವಾರು ರೀತಿಯಲ್ಲಿ ಹಾಳುಮಾಡುತ್ತದೆ. ಈ ಎನರ್ಜಿ ಡ್ರಿಂಕ್ಸ್ ಕೆಫೀನ್ ಮತ್ತು ಸಕ್ಕರೆಯನ್ನು ಮಾತ್ರ ಒಳಗೊಂಡಿದೆ, ಅಲ್ಲದೆ ಇದಕ್ಕೆ ದೀರ್ಘಕಾಲ ಫ್ರೆಶ್ ಇರಲು ಕೆಲವು ರಾಸಾಯನಿಕಗಳನ್ನು ಸಹ ಬಳಸುತ್ತಾರೆ, ಇದು ಮಕ್ಕಳ ಸ್ಥೂಲಕಾಯತೆಯನ್ನು ಮಾತ್ರ ಹೆಚ್ಚಿಸುತ್ತದೆ ಮತ್ತು ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ.

ಕೇಕ್
ಕೇಕ್‌ನಲ್ಲಿ ಟ್ರಾನ್ಸ್ ಕೊಬ್ಬಿನ ಪ್ರಮಾಣವು ತುಂಬಾ ಹೆಚ್ಚಾಗಿದೆ. ಟ್ರಾನ್ಸ್ ಕೊಬ್ಬು ಹೃದಯದ ಕಾಯಿಲೆಗಳಿಗೆ ಕಾರಣವಾಗಬಹುದು. ಆದುದರಿಂದ ಮಕ್ಕಳಿಗೆ ಊಟಕ್ಕೆ ಅಥವಾ ಸ್ನಾಕ್ಸ್ ಬಾಕ್ಸ್‌ಗೆ ಕೇಕ್ ಕೊಡುವ ಮುನ್ನ ಖಂಡಿತ ಒಮ್ಮೆ ಯೋಚಿಸಿ.



Click it and Unblock the Notifications


