Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹವಾಮಾನ ಬದಲಾದಾಗ ಮಕ್ಕಳಿಗೆ ಕಾಡುವ ಶೀತ, ಕೆಮ್ಮಿಗೆ ಮನೆಮದ್ದೇನು?
ಮಳೆಗಾಲದಲ್ಲಿ ಮಕ್ಕಳಲ್ಲಿ ಶೀತ, ಜ್ವರ, ಕೆಮ್ಮು ಮಾತ್ರವಲ್ಲ ಉದರ ಸಂಬಂಧಿ ಸಮಸ್ಯೆಗಲೂ ಸಾಮಾನ್ಯ. ಮಳೆಗೆ ಒದ್ದೆಯಾಗಿ, ಕಲುಷಿತ ನೀರು ಕುಡಿದೋ ಅಥವಾ ಥಂಡಿ ವಾತಾವರಣದಿಂದ ಮಕ್ಕಳಿಗೆ ಹುಷಾರು ತಪ್ಪುವುದು ಬೇಗ. ಸಾಮಾನ್ಯವಾಗಿ ಮಕ್ಕಳು ವರ್ಷಕ್ಕೆ ಎಂಟರಿಂದ ಹತ್ತು ಬಾರಿ ಶೀತಕ್ಕೆ ಒಳಗಾಗುತ್ತಾರಂತೆ. ಹೆಚ್ಚಿನ ಶೀತ ಬೇಗನೆ ಕಡಿಮೆಯಾಗಿಬಿಡುತ್ತದೆ. ಆದರೂ ಮಕ್ಕಳಿಗೆ ಶೀತ ಶುರುವಾದರೆ ಕಿರಿಕಿರಿ ಹೆಚ್ಚಾಗುವುದು ಪೋಷಕರಿಗೆ, ಗಂಟಲುನೋವು, ಶೀತ, ಮೂಗು ಸೋರುವಿಕೆ, ಮೂಗು ಕಟ್ಟುವುದರಿಂದ ಮಕ್ಕಳು ಹೈರಾಣಾಗಿಬಿಡುತ್ತವೆ. ಈ ಸಮಸ್ಯೆಯನ್ನು ನಿಭಾಯಿಸಲು ಮನೆಯಲ್ಲೇ ಪೋಷಕರು ಏನು ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ದ್ರವಗಳನ್ನು ಕೊಡಿ
ಶೀತ, ಜ್ವರದ ಸಮಯದಲ್ಲಿ ಮಕ್ಕಳಿಗೆ ಹೆಚ್ಚು ದ್ರವಾಹಾರ ನೀಡಬೇಕು. ಜ್ವರ, ವಾಂತಿ ಅಥವಾ ಬೇಧಿಯಿಂದ ಡಿಹೈಡ್ರೇಟ್ ಆದಾಗ ಹೆಚ್ಚು ದ್ರವಾಹಾರ ಕೊಡುವುದು ಮಕ್ಕಳನ್ನು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಹೆಚ್ಚು ದ್ರವಾಹಾರ ನೀಡುವುದರಿಂದ ಗಟ್ಟಿಯಾಗಿರುವ ಶೀತ ಅಂದರೆ ಲೋಳೆಯು ಹೊರಬರಲೂ ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳನ್ನು ರಿಹೈಡ್ರೇಟ್ ಮಾಡುವ ಪಾನೀಯ, ಸೂಪ್, ಬಿಸಿ ನೀರು ಆಗಾಗ ಕೊಡಿ. ಎದೆಹಾಲು ಕುಡಿಯುವ ಮಕ್ಕಳಾದರೆ ಮಗುವಿಗೆ ಎದೆಹಾಲು ನೀಡಿ. ಇದು ಕಟ್ಟಿರುವ ಮೂಗಿನಿಂದಲೂ ಶಮನ ನೀಡುತ್ತದೆ.

ವಿಶ್ರಾಂತಿ
ಕೆಲವು ಮಕ್ಕಳು ಹುಷಾರಿಲ್ಲಾದಾಗ ಆಟವಾಡಲು ಬಯಸುವುದು ಹೆಚ್ಚು. ಆದರೆ ಆಟವಾಡಲು ಬಿಡಬೇಡಿ, ನಿಶ್ಯಕ್ತಿ ಹೆಚ್ಚಾಗಬಹುದು. ಆನಾರೋಗ್ಯದಿಂದ ಶಕ್ತಿ ಕಳೆದುಕೊಳ್ಳುವ ದೇಹಕ್ಕೆ ಶಕ್ತಿಯನ್ನು ಮರುಪಡೆಯಲು ವಿಶ್ರಾಂತಿಯ ಅಗತ್ಯವಿರುತ್ತದೆ. ಮಕ್ಕಳನ್ನು ಬೆಚ್ಚಗಿಡಿ, ಆದಷ್ಟು ಕಾಟನ್ ಬಟ್ಟೆ ಹಾಕಿಸಿ. ಶಾಲೆಗೆ ಹೋಗುವ ಮಕ್ಕಳಾದರೆ ಕಳುಹಿಸಬೇಡಿ. ಆದಷ್ಟು ವಿಶ್ರಾಂತಿಯನ್ನು ಪಡೆಯುವಂತೆ ನೋಡಿಕೊಳ್ಳಿ.

ಜೇನುತುಪ್ಪ
ಅಂಬೆಗಾಲಿಡುವ ಮಕ್ಕಳಿಗೆ ದಿನಕ್ಕೆ ಎರಡರಿಂದ ಮೂರು ಬಾರಿ ಒಂದೆರಡು ಹನಿ ಜೇನುತುಪ್ಪವನ್ನು ನೆಕ್ಕಲು ನೀಡಿ. ಇದು ಮಗುವಿನ ಜೀರ್ಣಾಂಗ ಸ್ವಚ್ಛವಾಗಿಡಲು ಮತ್ತು ಅತಿಸಾರವನ್ನು ತಡೆಯಲು ಸಹಾಯ ಮಾಡುತ್ತದೆ.

ಮಸಾಜ್
ನೋವು ನಿವಾರಕ ಮುಲಾಮ್ ತಲೆನೋವು ಶೀತಕ್ಕೆ ಮಕ್ಕಳಿಗೆ ಬಳಸಬಹುದು. ಇದು ಬೇಗನೆ ಶೀತಕ್ಕೆ ಪರಿಹಾರ ನೀಡುತ್ತದೆ. ತಲೆನೋವು ಹಾಗೂ ಶೀತ ಸಂಬಂಧಿತ ಸಮಸ್ಯೆಗಳಿಗೆ ಎಂಟು ಗಂಟೆಗಳವರೆಗೂ ರಿಲೀಫ್ ನೀಡುತ್ತದೆ. ಮಗುವಿನ ಹಣೆ, ಕುತ್ತಿಗೆಗೆ ಮುಲಾಮನ್ನು ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಶೀತವಿದ್ದರೆ ಎದೆ ಮತ್ತು ಗಂಟಲಿಗೂ ಹಚ್ಚಿ ಮಸಾಜ್ ಮಾಡಿ. ಇದು ಕಟ್ಟಿದ ಮೂಗಿಗೂ ಪರಿಹಾರ ನೀಡುತ್ತದೆ. ಸಾಧ್ಯವಾದರೆ ಬೆನ್ನು ಅಂಗಾಲಿಗೂ ಮುಲಾಮು ಹಚ್ಚಿ ಮೃದುವಾಗಿ ಮಸಾಜ್ ಮಾಡಿ.

ಹಬೆ/ ಸ್ಟೀಮ್ ನೀಡಿ
ಶೀತ ಆದರೆ ಕಟ್ಟಿದ ಮೂಗಿನಿಂದ ಉಸಿರಾಡೋದಿಕ್ಕೂ ಆಗೋದಿಲ್ಲ, ನಿದ್ದೆಯೂ ಬಾರದೆ ಕಿರಿಕಿರಿ ಎನಿಸಿಬಿಡುತ್ತದೆ. ಹೀಗಿದ್ದರೆ ಸ್ವಲ್ಪ ಹಬೆಯನ್ನು ತೆಗೆದುಕೊಳ್ಳುವಂತೆ ಮಾಡಿ. ಬಿಸಿ ನೀರನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಹಬೆ ತಾಕುವಂತೆ ಮಗುವನ್ನು ನಿಲ್ಲಿಸಿ. ಇಲ್ಲವಾದರೆ ಬಾತ್‌ರೂಮ್‌ನಲ್ಲೂ ಬಿಸಿ ನೀರನ್ನು ಬಕೆಟ್‌ನಲ್ಲಿ ತುಂಬಿಸಿ ಅದಕ್ಕೆ ಶೀತಕ್ಕೆ ಬಳಸುವ ಮುಲಾಮು ಹಾಕಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬಿಸಿ ಆವಿಯನ್ನು ಮಗು ಉಸಿರಾಡುವಂತೆ ಮಾಡಿ, ಇದು ಕಟ್ಟಿದ ಮೂಗನ್ನು ಸರಾಗವಾಗಿ ತೆರೆಯುವಂತೆ ಮಾಡುತ್ತದೆ. ಅಲ್ಲದೇ ಶೀತ ಗಟ್ಟಿಯಾಗಿ ಮೂಗು ಕಟ್ಟಿದ್ದರೆ ಲೋಳೆಯು ಸರಾಗವಾಗಿ ಇಳಿದುಹೋಗಲೂ ಸಹಾಯ ಮಾಡುತ್ತದೆ. ಹಬೆಯನ್ನು ತೆಗೆದುಕೊಳ್ಳುವುದರಿಂದ ನಿದ್ದೆಗೂ ಶೀತದಿಂದ ಅಡ್ಡಿಯಾಗದು.

ಬೆಚ್ಚಗಿನ ಉಪ್ಪುನೀರಿನಿಂದ ಗಾರ್ಗಲ್ ಮಾಡಿಸಿ
ಉಪ್ಪು ನೀರು ಗಂಟಲು ನೋವಿಗೆ ಪರಿಹಾರ ನೀಡುತ್ತದೆ. ಐದಾರು ವರ್ಷದ ಮಕ್ಕಳಾದರೆ ಸ್ವಲ್ಪ ಬೆಚ್ಚಗೆ ಇರುವ ನೀರಿಗೆ ಕಲ್ಲುಪ್ಪು ಹಾಕಿ ಗಾರ್ಗಲ್ ಮಾಡಿಸಿ. ಇದು ಗಟ್ಟಿಯಾದ ಲೊಳೆಯನ್ನು ಸಡಿಲಗೊಳಿಸಲೂ ಸಹಕಾರಿ.
ಮಕ್ಕಳಿಗೆ ಜ್ವರ ಶೀತವಿದ್ದಾಗ ಆದಷ್ಟು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ. ಮೂಗು ಒರೆಸಿದ ಬಟ್ಟೆಗಳನ್ನು ಆಗಾಗ ಬದಲಿಸಿ, ಸಾಧ್ಯವಾದರೆ ಟಿಶ್ಯು ಪೇಪರ್ ಬಳಸಿ, ಒಂದು ಬಾರಿ ಬಳಸಿ ಬಿಸಾಕಬಹುದು. ಮಗುವಿಗೆ ಶೀತವಾದಾಗ ಒರಟಾದ ಕರ್ಚೀಫ್‌ನಿಂದ ಮೂಗು ಒರೆಸಬೇಡಿ. ಮಗುವಿನ ಮುಖದ ಚರ್ಮ ಸೂಕ್ಷ್ಮವಾಗಿರುತ್ತದೆ. ಒರಟಾಗಿ ಒರೆಸಿದಾಗ ಚರ್ಮ ಎದ್ದು ಉರಿಯಾಗುವ ಸಂಭವ ಹೆಚ್ಚು. ಶೀತವಾದಾಗ ಮೂಗು ಸ್ವಚ್ಛಗೊಳಿಸಲು ಬಟ್ಟೆಯನ್ನು ಒದ್ದೆ ಮಾಡಿ ಸ್ವಚ್ಛಗೊಳಿಸಿ.



Click it and Unblock the Notifications
