Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
World Obesity Day 2023 : ಮಕ್ಕಳಲ್ಲಿ ಒಬೆಸಿಟಿ ತಡೆಗಟ್ಟಬೇಕೆ? ಪೋಷಕರೇ ಈ 4 ವಿಷಯಗಳತ್ತ ಗಮನ ನೀಡಿ
ಮಾರ್ಚ್ 4ರಂದು ವಿಶ್ವ ಒಬೆಸಿಟಿ (ಬೊಜ್ಜಿನ) ದಿನವನ್ನು ಆಚರಿಸಲಾಗುವುದು. ಕಳೆದ ಎರಡು ದಶಕಗಳಿಗೆ ಹೋಲಿಸಿದರೆ ಈವಾಗ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ಈ ಬೊಜ್ಜಿನ ಸಮಸ್ಯೆ ದೊಡ್ಡವರನ್ನು ಮಾತ್ರವಲ್ಲ ಮಕ್ಕಳನ್ನೂ ಕಾಡುತ್ತಿದೆ. ಮಕ್ಕಳಿಗೆ ಒಬೆಸಿಟಿ ಸಮಸ್ಯೆಯಿದ್ದರೆ ಅವರ ಆರೋಗ್ಯ ಹಾಗೂ ಆತ್ಮವಿಶ್ವಾಸದ ಮೇಲೆ ತುಂಬಾನ ಪ್ರಭಾವ ಬೀರುತ್ತದೆ.

ಕೊರೊನಾ ಸಮಯದಲ್ಲಂತೂ ಬಹುತೇಕ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಂಡು ಬಂದಿತ್ತು. ಇನ್ನು ಹೆಚ್ಚಿನ ದೈಹಿಕ ಚಟುವಟಿಕೆಯಿಲ್ಲದೆ ಟಿವಿ, ಮೊಬೈಲ್‌ನಲ್ಲಿ ಅಧಿಕ ಸಮಯ ಕಳೆಯುತ್ತಿರುವ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗುತ್ತಿದೆ, ಅದರ ಜೊತೆ ಮಕ್ಕಳ ಆಹಾರ ಕ್ರಮವೂ ಅವರ ಮೈ ತೂಕಕ್ಕೆ ಪ್ರಮುಖ ಕಾರಣವಾಗಿದೆ, ಪಿಜ್ಜಾ, ಬರ್ಗರ್, ಫಾಸ್ಟ್ ಫುಡ್ಸ್ ಅತಿಯಾಗಿ ಸೇವಿಸುತ್ತಿದ್ದರೆ.
ನಿಮ್ಮ ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆಯಿದ್ದರೆ ಒಬೆಸಿಟಿ ಸಮಸ್ಯೆ ಹೋಗಲಾಡಿಸಲು ಕುಟುಂಬದ ಸಹಕಾರ ಮುಖ್ಯವಾಗಿರುತ್ತದೆ. ಮಕ್ಕಳಲ್ಲಿ ಒಬೆಸಿಟಿ ಹೋಗಲಾಡಿಸಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:
ತಿನ್ನುವ ಅಭ್ಯಾಸ
ಮಕ್ಕಳಲ್ಲಿ ಆರೋಗ್ಯಕರ ತಿನ್ನುವ ಅಭ್ಯಾಸ ರೂಢಿಸಬೇಕು. ಮಕ್ಕಳಿಗೆ ರುಚಿಯಾದ ಹಾಗೂ ನೋಡಲು ಆಕರ್ಷಕವಾದ ಆಹಾರಗಳು ತುಂಬಾನೇ ಸೆಳೆಯುತ್ತದೆ. ಆದರೆ ಅವುಗಳು ಆರೋಗ್ಯಕರವಾಗಿರಲ್ಲ, ಮಕ್ಕಳು ಕೇಳಿದರು ಅಂತ ಅಂಥ ಆಹಾರಗಳನ್ನೇ ತಂದು ಕೊಡಬೇಡಿ. ಅಪರೂಪಕ್ಕೆ ಕೊಡಿಸಿ, ಮಕ್ಕಳಿಗೆ ಮನೆಯೂಟ ಅಭ್ಯಾಸ ಮಾಡಿಸಿ.'
ಇನ್ನು ನೀವು ಕೂಡ ಆನ್‌ಲೈನ್ ಆರ್ಡರ್ ಮಾಡುವುದು ಕಡಿಮೆ ಮಾಡಬೇಕು, ಆಗಾಗ ಹೋಟೆಲ್‌ಗೆ ಹೋಗಿ ಸೇವಿಸುವುದು ಈ ಬಗೆಯ ಅಭ್ಯಾಸಗಳನ್ನು ಕಡಿಮೆ ಮಾಡಬೇಕು. ಅವರ ಆಹಾರಕ್ರಮದ ಕಡೆಗೆ ತುಂಬಾ ಗಮನ ಕೊಡುವುದರಿಂದ ಅವರ ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟಬಹುದು. ಇನ್ನು ಬಿಸ್ಕೆಟ್, ಚಾಕೋಲೆಟ್ ಈ ಬಗೆಯ ಆಹಾರಗಳನ್ನು ತಂದು ಮನೆಯಲ್ಲಿ ಸ್ಟಾಕ್ ಇಡಬೇಡಿ.
ಹಣ್ಣುಗಳು, ಡ್ರೈ ಫ್ರೂಟ್ಸ್ ಇವುಗಳನ್ನು ತಂದಿಡಿ, ಅವರು ಬಿಸ್ಕೆಟ್‌ಗೆ ಹುಡುಕಿ ಸಿಗದಿದ್ದಾಗ ಹಣ್ಣು ತಿನ್ನುತ್ತಾರೆ, ಹೀಗೆ ಅನಾರೋಗ್ಯಕರ ಆಹಾರಕ್ರಮಕ್ಕೆ ಕಡಿವಾಣ ಹಾಕಬಹುದು.
ಮಕ್ಕಳ ಜೊತೆ ಹೊರಗಡೆ ಆಟ ಆಡಿ
ಕ್ರಿಕೆಟ್, ಟೆನ್ನಿಸ್, ಥ್ರೋಬಲ್ ಹೀಗೆ ಮಕ್ಕಳ ಜೊತೆ ನೀವೂ ಆಟ ಆಡಿ, ಇದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು, ಮಕ್ಕಳಿಗೂ ದೈಹಿಕ ವ್ಯಾಯಾಮ ದೊರೆಯುವುದು. ಅಲ್ಲದೆ ಅ ಅವರನ್ನು ಹೊರಗಡೆ ಆಟ ಆಡಲು ಪ್ರೋತ್ಸಾಹಿಸಿ. ಕ್ರೀಡಾ ತರಬೇತಿ ಸಿಗುವ ಕಡೆ ಅವರನ್ನು ಸೇರಿಸಿ. ಸ್ವಿಮ್ಮಿಂಗ್ ಕಲಿಸಿ, ಇವೆಲ್ಲಾ ಆರೋಗ್ಯಕರ ಮೈ ತೂಕ ಹೊಂದಲು ತುಂಬಾನೇ ಸಹಕಾರಿಯಾಗಿದೆ.
ನಿದ್ದೆ ತುಂಬಾ ಮುಖ್ಯ
ಮಕ್ಕಳು ಈ ಸಮಯದಲ್ಲಿ ಮಲಗಬೇಕು ಎಂಬ ರೂಲ್ಸ್ ಮಾಡಿ ತಪ್ಪೇನಿಲ್ಲ, ತುಂಬಾ ತಡವಾಗಿ ಮಲಗುವುದು, ಕಡಿಮೆ ನಿದ್ದೆ, ಅತಿಯಾದ ನಿದ್ದೆ ಇವೆಲ್ಲಾ ಮೈ ತೂಕದ ಮೇಲೆ ಪರಿಣಾಮ ಬೀರುತ್ತದೆ.
ಮಕ್ಕಳಿಗೆ ಎಷ್ಟು ನಿದ್ದೆಬೇಕು?
ಚಿಕ್ಕ ಮಕ್ಕಳಿಗೆ 11-13 ಗಂಟೆ ಅವಶ್ಯಕ. 6-12 ವರ್ಷದ ಮಕ್ಕಳಿಗೆ 9-12 ಗಂಟೆ ನಿದ್ದೆ ಬೇಕು. ಆದ್ದರಿಂದ ಮಕ್ಕಳನ್ನು ಮಧ್ಯಾಹ್ನ ಹೊತ್ತು ಸ್ವಲ್ಪ ನಿದ್ದೆ ಮಾಡಿಸಿದರೆ ಒಳ್ಳೆಯದು. 6-17 ವರ್ಷದ ಮಕ್ಕಳಿಗೆ ಕನಿಷ್ಠ ಒಂದು ಗಂಟೆ ದೈಹಿಕ ವ್ಯಾಯಾಮ ಅಂದರೆ ಆಟವಾಡಬೇಕು, 8-9 ತಾಸು ನಿದ್ದೆ ಮಾಡಬೇಕು. ಅವರಿಗೆ ಇಷ್ಟು ಗಂಟೆಗೆ ಮಲಗಬೇಕು, ಇಷ್ಟು ಗಂಟೆಗೆ ಎದ್ದೇಳಬೇಕು ಎಂಬ ಶಿಸ್ತನ್ನು ರೂಢಿಸಿ.
ಮೊಬೈಲ್, ಟಿವಿ ಮುಂದೆ ತುಂಬಾ ಹೊತ್ತು ಕಳೆಯಲು ಬಿಡಬೇಡಿ
ಮಕ್ಕಳು ತುಂಬಾ ಹೊತ್ತು ಟಿವಿ ನೋಡುವುದು, ಮೊಬೈಲ್ ನೋಡುವುದು ಮಾಡಿದರೆ ಅವರ ದೈಹಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಬೈಲ್, ಟಿವಿ ನೋಡಲೇಬೇಡಿ ಎಂದರೆ ಕೇಳಲ್ಲ, ನೋಡ್ಲಿ ಆದರೆ ಯಾವುದೇ ಮಿತಿಯಾಗದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ.



Click it and Unblock the Notifications













