Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಮಕ್ಕಳ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಹೆಚ್ಚಿಸಲು ಸರಳ ಟಿಪ್ಸ್
ಮಕ್ಕಳು ಬೆಳೆಯುತ್ತಿರುವ ವೇಳೆ ಅವರಿಗೆ ನೈತಿಕ ಮೌಲ್ಯ ಮತ್ತು ಬೆಳವಣಿಗೆಯ ಕೌಶಲ್ಯಗಳನ್ನು ಸರಿಯಾದ ರೀತಿಯಲ್ಲಿ ಕಲಿಸಿಕೊಟ್ಟರೆ ಆಗ ಅವರ ಭವಿಷ್ಯವು ಉಜ್ವಲವಾಗುವುದು. ಮಕ್ಕಳು ಯಾವುದೇ ವಿಚಾರವನ್ನು ಬೇಗನೆ ಕಲಿಯುತ್ತಾರೆ. ಅದೇ ರೀತಿಯ ಅವರು ತಮ್ಮ ಪೋಷಕರಿಂದ ಹೆಚ್ಚಿನ ವಿಚಾರಗಳನ್ನು ಕಲಿಯುವರು ಮತ್ತು ಅವರ ನಡವಳಿಕೆಗಳನ್ನು ಅನುಸರಿಸಿಕೊಂಡು ಹೋಗುವರು. ಹೀಗಾಗಿ ನಿಮ್ಮ ದೈನಂದಿನ ಚಟುವಟಿಕೆಗಳು ಕೂಡ ಅವರ ಮೇಲೆ ಪರಿಣಾಮ ಬೀರುವುದು ಮತ್ತು ಅವರು ಇದನ್ನೇ ಅಳವಡಿಸಿಕೊಂಡು ಹೋಗುವರು. ನೀವು ಸರಿಯಾದ ನಿರ್ಧಾರ ತೆಗೆದುಕೊಂಡರೆ ಆಗ ಮಕ್ಕಳು ಕೂಡ ಅದೇ ರೀತಿ ಮುಂದುವರಿಯುವರು.
ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅವರನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಘುವುದು. ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವಂತಹ ಕೌಶಲ್ಯವನ್ನು ಅವರು ಸುಲಭವಾಗಿ ಕಲಿತುಕೊಳ್ಳುವರು. ಮಕ್ಕಳು ಪ್ರತೀ ಸಲ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಇರಬಹುದು. ಆದರೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಅವರ ಜೀವನ ಪ್ರಯಾಣದ ಒಂದು ಅಂಗವಾಗಿರುವುದು. ತಪ್ಪು ನಿರ್ಧಾರಗಳಿಂದ ಕಲಿತುಕೊಂಡು ಮುಂದೆ ಅವರು ಪ್ರೌಢರಾಗುವರು. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಹಲವಾರು ವರ್ಷಗಳು ಬೇಕಾಗುವುದು. ಆದರೆ ಸರಿಯಾದ ವಯಸ್ಸಿನಲ್ಲಿ ಸೂಕ್ತ ಅನುಭವ ಪಡೆಯಲು ಅವರಿಗೆ ನೆರವಾಗುವುದು.
ಮಕ್ಕಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಸುಧಾರಿಸಲು ಐದು ಸಲಹೆಗಳು

ವಾಸ್ತವ ಜಗತ್ತಿನೊಂದಿಗೆ ಭೇಟಿಯಾಗಲು ಬಿಡಿ
ವಾಸ್ತವ ಎನ್ನುವುದು ಎಲ್ಲಾ ಸಮಯದ ಒಳ್ಳೆಯ ಶಿಕ್ಷಕ. ಒಳ್ಳೆಯದು ಯಾವುದು ಮತ್ತು ಕೆಟ್ಟದು ಯಾವುದು ಎಂದು ನೀವು ಸರಿಯಾಗಿ ಮಕ್ಕಳಿಗೆ ತಿಳಿಸಬೇಕಾದರೆ ಆಗ ಅವರನ್ನು ವಾಸ್ತವ ಜಗತ್ತಿಗೆ ಪರಿಚಯಿಸುವುದು ಅತೀ ಅಗತ್ಯವಾಗಿ ಇರುವುದು. ಇದು ಅಷ್ಟೊಂದು ಸುಲಭವಲ್ಲ, ಆದರೆ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯವನ್ನು ಸುಧಾರಣೆ ಮಾಡಬೇಕಾದರೆ ಇದು ಮೊದಲ ಹೆಜ್ಜೆಯಾಗಿರುವುದು. ಅವರಿಗೆ ಚೆನ್ನಾಗಿ ಕಲಿಯಲು ನೆರವಾಗುವಂತಹ ನೈಜ ಜಗತ್ತಿನ ಪರಿಚಯವನ್ನು ಮಾಡಿಕೊಡಿ.

ಮಕ್ಕಳಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂದು ತಿಳಿಯಿರಿ
ನೀವು ಇಷ್ಟಪಡುತ್ತಿರುವುದು ಮತ್ತು ಅವರಿಗೆ ಇಷ್ಟವಿಲ್ಲದೆ ಇರುವುದನ್ನು ಮಾಡಲು ಹೇಳೂವುದು ಸರಿಯಾದ ನಿರ್ಧಾರವಲ್ಲ. ಅವರ ಆಸಕ್ತಿಗೆ ಅನುಗುಣವಾಗಿ ಏನು ಮಾಡುತ್ತಾರೋ ಅದಕ್ಕೆ ಪ್ರೋತ್ಸಾಹ ನೀಡಿ. ಯಾಕೆಂದರೆ ಇದರಿಂದ ಅವರ ಕೌಶಲ್ಯಗಳ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದು. ಅವರಿಗೆ ಇಷ್ಟವಿಲ್ಲದೆ ಇರುವುದನ್ನು ಅವರು ಮಾಡುತ್ತಾ ಹೋದರೆ ಆಗ ಅವರು ಸರಾಸರಿ ವಿದ್ಯಾರ್ಥಿಗಳಾಗಿರುವರು ಮತ್ತು ಇದರಿಂದ ಅವರ ಮನಸ್ಸಿಗೆ ಕೂಡ ತುಂಬಾ ನೋವಾಗುವುದು. ಕಠಿಣ ಪರಿಶ್ರಮ ಮತ್ತು ಬದ್ಧತೆಯು ಯಶಸ್ಸಿಗೆ ಮೂಲಮಂತ್ರ ಎಂದು ತಿಳಿಸಿಕೊಡಿ. ಇಂತಹ ನೀತಿಗಳಿಂದಾಗಿ ಅವರಿಗೆ ಸರಿಯಾದ ನಿರ್ಧಾರ ಮಾಡಲು ಸಾಧ್ಯವಾಗುವುದು.

ಮಕ್ಕಳೊಂದಿಗೆ ಬೆರೆಯಿರಿ
ಮಕ್ಕಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಆಗ ನಾವು ಅವರೊಂದಿಗೆ ಬೆರೆಯಬೇಕು. ಸಾಮಾಜಿಕವಾಗಿ ಬೆರೆಯುವ ಮೂಲಕವಾಗಿ ಅವರಿಗೆ ಜೀವನದ ಕೆಲವೊಂದು ಕೌಶಲ್ಯಗಳು ತಿಳಿಯಲು ಪ್ರೋತ್ಸಾಹ ಸಿಗುವುದು. ಅವರು ಈ ವಿಚಾರಗಳನ್ನು ಕಲಿತುಕೊಂಡಾಗ ಅವರಿಗೆ ತಮ್ಮ ಜೀವನದಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗುವುದು.

ಮಕ್ಕಳು ತಪ್ಪುಗಳನ್ನು ಮಾಡಲಿ ಬಿಡಿ
ತಪ್ಪುಗಳನ್ನು ಮಾಡುವುದು ದೊಡ್ಡ ಮಟ್ಟದ ವೈಫಲ್ಯ ಎಂದು ನೀವು ಭಾವಿಸಬೇಡಿ. ಇದು ಹೊಸ ದಾರಿಗೆ ಆರಂಭವಾಗುವುದು ಮತ್ತು ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರೇರಣೆಯ ಅಗತ್ಯವಿರುವುದು. ಮಕ್ಕಳು ಯಾವುದೇ ಪರಿಸ್ಥಿತಿಯಲ್ಲಿ ವಿಫಲರಾದರೆ ಆಗ ಅವರ ಪರವಾಗಿ ನಿಲ್ಲಿ ಮತ್ತು ಹೋರಾಡುವುದನ್ನು ಕಲಿಸಿ. ಪೋಷಕರಾಗಿ ಮಕ್ಕಳಿಗೆ ತಪ್ಪುಗಳನ್ನು ಮಾಡಲು ಬಿಡಬೇಕು. ಯಾಕೆಂದರೆ ಅವರು ತಪ್ಪುಗಳಿಂದ ಕಲಿತುಕೊಳ್ಳುವರು. ತಪ್ಪುಗಳಿಂದ ಕಲಿತುಕೊಂಡರೆ ಆಗ ಅವರು ಜೀವನದಲ್ಲಿ ಯಶಸ್ಸನ್ನು ಪಡೆಯಲು ತುಂಬಾ ಸಹಕಾರಿಯಾಗುವುದು.

ಅವರ ಬಗ್ಗೆ ಅರಿತುಕೊಳ್ಳಲಿ
ತಮ್ಮ ಶಕ್ತಿ ಮತ್ತು ದೌರ್ಬಲ್ಯಗಳು ಏನು ಎಂದು ಅವರಿಗೆ ತಿಳಿಯಲು ಬಿಡಿ. ಇದರಿಂದ ಅವರಿಗೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಕಲೆಯು ತಿಳಿಯುವುದು. ಅವರಿಗೆ ಹೆಚ್ಚಿನ ಅವಕಾಶ ನೀಡಿ ಮತ್ತು ಪ್ರತೀ ಸಲ ಅವರಿಗೆ ಯಶಸ್ಸು ಸಿಗದು ಎನ್ನುವುದನ್ನು ಮನವರಿಕೆ ಮಾಡಿಕೊಡಿ. ಜೀವನದಲ್ಲಿ ಸೋಲುಗಳನ್ನು ಕೂಡ ಸ್ವೀಕರಿಸಲು ಬಿಡಿ. ಜೀವನದಲ್ಲಿ ಮುಂದೆ ಸಾಗಲು ಯಶಸ್ಸು ಹಾಗು ವೈಫಲ್ಯವನ್ನು ಸರಿಯಾದ ರೀತಿಯಲ್ಲಿ ತಿಳಿಯುವುದು ಅತೀ ಅಗತ್ಯವಾಗಿರುವುದು.



Click it and Unblock the Notifications











