Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಮಕ್ಕಳಲ್ಲಿ ಬೊಜ್ಜು ದೇಹ ಮತ್ತು ಮಾನಸಿಕ ಸಮಸ್ಯೆಗಳು
ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಟಿವಿಯಿಂದಾಗಿ ಅವರಲ್ಲಿ ದೈಹಿಕ ಚಟುವಟಿಕೆ ಎನ್ನುವುದು ತುಂಬಾ ಕಡಿಮೆ ಆಗುತ್ತಿದೆ. ಇದೇ ಕಾರಣದಿಂದಾಗಿ ಮಕ್ಕಳು ಬೊಜ್ಜು ದೇಹವನ್ನು ಹೊಂದುವುದು ಸಾಮಾನ್ಯವಾಗುತ್ತಿದೆ. ವಿಶ್ವದಲ್ಲಿ ಇಂದಿನ ದಿನಗಳಲ್ಲಿ ಹೊರಗಡೆ ಮೈದಾನಕ್ಕೆ ಹೋಗಿ ಆಟವಾಡುವಂತಹ ಮಕ್ಕಳ ಸಂಖ್ಯೆಯು ತುಂಬಾ ಕಡಿಮೆ ಆಗುತ್ತಿದೆ ಎಂದು ತಿಳಿದುಬಂದಿದೆ.
ಯಾಕೆಂದರೆ ಇಂದಿನ ದಿನಗಳಲ್ಲಿ ಮನೆಯಲ್ಲೇ ಎಲ್ಲಾ ರೀತಿಯ ಆಟಿಕೆಗಳು, ಮೊಬೈಲ್ ಗೇಮ್ಸ್ ಹಾಗೂ ಕಂಪ್ಯೂಟರ್ ಗೇಮ್ಸ್ ಸಿಗುತ್ತದೆ. ಇದರೊಂದಿಗೆ ಮಕ್ಕಳು ಅಧಿಕ ಕ್ಯಾಲರಿ ಹೊಂದಿರುವಂತಹ ಸಂಸ್ಕರಿತ ಆಹಾರ ಮತ್ತು ಕರಿದ ತಿಂಡಿಗಳಣ್ನು ತಿನ್ನುವುದು ಚಟುವಟಿಕೆ ಇಲ್ಲದೆ ಇರುವಂತಹ ಜೀವನಶೈಲಿಗೆ ಪ್ರಮುಖ ಕಾರಣವಾಗಿದೆ. ಬೆಳೆಯುತ್ತಿರುವ ಮಕ್ಕಳು ತುಂಬಾ ಅನಾರೋಗ್ಯಕರ ಜೀವನಶೈಲಿ ಪಾಲಿಸಿದರೆ ಆಗ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಬಹುದು. ಇದರಲ್ಲಿ ಮುಖ್ಯವಾಗಿ ಬೊಜ್ಜು ಪ್ರಮುಖ ಸಮಸ್ಯೆಯಾಗಿದೆ. ಮಕ್ಕಳಲ್ಲಿ ಬೊಜ್ಜು ಬೆಳದರೆ ಆಗ ಅದು ಬೇರೆ ರೀತಿಯ ಕಾಯಿಲೆಗಳಿಗೂ ಕಾರಣವಾಗಬಹುದು.

ಬೊಜ್ಜು ದೇಹವನ್ನು ಹೊಂದಿರುವಂತಹ ಮಕ್ಕಳು ದೈಹಿಕವಾಗಿ ಬೆಳೆದಿರುವ ಕಾರಣದಿಂದಾಗಿ ಅವರಲ್ಲಿ ಕೆಲವೊಂದು ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಅಧ್ಯಯನಗಳ ಪ್ರಕಾರ ಬೊಜ್ಜು ಮತ್ತು ಖಿನ್ನತೆ ಮಧ್ಯೆ ಯಾವುದೇ ರೀತಿಯ ನೇರ ಪರಿಣಾಮಗಳು ಇಲ್ಲ. ಆದರೆ ಕೆಲವೊಂದು ಮಕ್ಕಳಲ್ಲಿ ಬೊಜ್ಜು ದೇಹ ಇರುವ ಕಾರಣದಿಂದಾಗಿ ಅವರನ್ನು ಕಡೆಗಣಿಸುವ ಕಾರಣ ಮಾನಸಿಕವಾಗಿ ಇದು ಅವರ ಮೇಲೆ ಪರಿಣಾಮ ಬೀರಬಹುದು.
ಬೊಜ್ಜು ಮತ್ತು ಆರೋಗ್ಯ
ಮಕ್ಕಳಲ್ಲಿ ಬೊಜ್ಜು ಕಾಣಿಸಿಕೊಂಡಿದ್ದರೆ ಆಗ ಕೆಲವೊಂದು ಕಾಯಿಲೆ ಹಾಗೂ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮೊದಲನೇಯದಾಗಿ ಅತಿಯಾದ ತೂಕ ಹೊಂದಿರುವ ಕಾರಣದಿಂಧಾಗಿ ಮಕ್ಕಳಲ್ಲಿ ಟೈಪ್ 2 ಮಧುಮೇಹ ಕಾಣಿಸಬಹುದು. ನಿದ್ರೆಯ ಸಮಸ್ಯೆ, ನಿಶ್ಯಕ್ತಿ ಮತ್ತು ಶಕ್ತಿಯ ಮಟ್ಟವು ಕುಂದುವುದು ಕೆಲವೊಂದು ಗಂಭೀರ ಸಮಸ್ಯೆಗಳಾಗಿವೆ.
ಕೇವಲ ವಯಸ್ಕರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲಿ ಕೂಡ ಕೆಲವೊಂದು ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದರಲ್ಲಿ ಮುಖ್ಯವಾಗಿ ಖಿನ್ನತೆ, ದೇಹದ ರಚನೆ ಬಗ್ಗೆ ಚಿಂತೆ ಮಾಡುವುದು ಮತ್ತು ಆತ್ಮವಿಶ್ವಾಸ ಕುಂದುವುದು. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಮಗು ಮತ್ತೆ ಆಹಾರದತ್ತ ಮುಖ ಮಾಡಿದರೆ ಆಗ ನೀವು ಮಗುವಿನ ಬಗ್ಗೆ ತುಂಬಾ ಚಿಂತೆ ಮಾಡಬೇಕು. ನೀವು ನೇರವಾಗಿ ಮಗುವನ್ನು ಮನಶಾಸ್ತ್ರಜ್ಞರು ಮತ್ತು ಮಕ್ಕಳ ತಜ್ಞರ ಬಳಿಗೆ ಪರೀಕ್ಷೆಗೆ ಕೆರೆದುಕೊಂಡು ಹೋಗಬಹುದು.
ಎರಡು ವಿಧದ ಸಂಬಂಧ
ಬೊಜ್ಜು ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವು ತುಂಬಾ ಕ್ಲಿಷ್ಟಕರವಾಗಿದೆ. ಎರಡರ ಮಧ್ಯೆ ನೇರ ಸಂಬಂಧವಿದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಕೆಲವೊಂದು ಅಧ್ಯಯನಗಳು ಹೇಳುವ ಪ್ರಕಾರ ಬೊಜ್ಜು ನೇರವಾಗಿ ಮಕ್ಕಳಲ್ಲಿ ಮಾನಸಿಕ ಸಮಸ್ಯೆ ಉಂಟು ಮಾಡುವುದು. ಇನ್ನು ಕೆಲವೊಂದು ಅಧ್ಯಯನಗಳು ಹೇಳುವಂತೆ ಇನ್ನು ಹೆಚ್ಚಿನ ಬೊಜ್ಜನ್ನು ಮಕ್ಕಳು ಹೊಂದುವರು. ಕೆಲವೊಂದು ಅಧ್ಯಯನಗಳು ಮತ್ತು ವೈಜ್ಞಾನಿಕವಾಗಿ ಬೊಜ್ಜು ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ಹೇಳಿದೆ.
ಬೊಜ್ಜು ಮತ್ತು ಮಾನಸಿಕ ಆರೋಗ್ಯ ಎನ್ನುವುದು ಇಂದಿನ ದಿನಗಳಲ್ಲಿ ವಿಶ್ವದ ಸಮಸ್ಯೆಯ ಒಂದು ಭಾಗವಾಗಿದೆ. ಬಾಲಕರಿಗಿಂತ ಹೆಚ್ಚಾಗಿ ಬಾಲಕಿಯರಲ್ಲಿ ಬೊಜ್ಜು ದೇಹದಿಂದಾಗಿ ಮಾನಸಿಕ ಸಮಸ್ಯೆಯು ಕಾಣಿಸಿಕೊಳ್ಳುವುದು ಹೆಚ್ಚು. ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ತಾವು ಬೊಜ್ಜು ದೇಹವನ್ನು ಹೊಂದಿದ್ದೇವೆ ಎಂದು ಊಹಿಸಿಕೊಳ್ಳುವುದು ದೊಡ್ಡ ಮಟ್ಟದಲ್ಲಿನ ನಿಜವಾದ ಮಾನಸಿಕ ಸಮಸ್ಯೆಯಾಗಿದೆ.
ಬೊಜ್ಜು ಮತ್ತು ಮಾನಸಿಕ ಆರೋಗ್ಯವು ತುಂಬಾ ಕಡಿಮೆ ಆಗಿರುವುದು
ಅತಿಯಾದ ವೈದ್ಯಕೀಯ ಸಮಸ್ಯೆ ಮತ್ತು ಚಲನಶೀಲತೆ ಮೇಲೆ ನಿರ್ಬಂಧ ಹೇರಿರುವ ಕಾರಣದಿಂದಾಗಿ ಇದು ಬೊಜ್ಜಿನಿಂದಾಗಿ ನೇರವಾಗಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಬೊಜ್ಜು ದೇಹ ಹೊಂದಿರುವ ಮಕ್ಕಳು ಯಾವಾಗಲೂ ತಂಡದಲ್ಲಿ ಹೆಚ್ಚುವರಿ ಆಟಗಾರರಾಗಿ ಪರಿಗಣಿಸಲಾಗುತ್ತದೆ. ಇವರಲ್ಲಿ ದೈಹಿಕ ಚಟುವಟಿಕೆಗಳ ಕೊರತೆಗಳಾಗಿರುವ ಓಡುವುದು, ಜಿಗಿಯುವುದು, ಬಾಗುವುದು ಇತ್ಯಾದಿಗಳು ಕಾಣಿಸಿಕೊಳಳುವುದು. ಇಂತಹ ಕೆಲವೊಂದು ನಿರ್ಬಂಧಗಳಿಂದಾಗಿ ಮಕ್ಕಳಿಗೆ ತಾವು ಯಾವುದೇ ಉಪಯೋಗಕ್ಕೆ ಇಲ್ಲದವರು ಎನ್ನುವ ಭಾವನೆ ಮೂಡುವುದು. ಇದು ಅವರಿಗೆ ತುಂಬಾ ನಿರಾಶೆ ಉಂಟು ಮಾಡುವುದು ಮತ್ತು ಅವರ ಆತ್ಮವಿಶ್ವಾಸದ ಮಟ್ಟವನ್ನು ಕುಂದುವಂತೆ ಮಾಡುವುದು. ಇದು ಅವರ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದು.
ಇಂದಿನ ದಿನಗಳಲ್ಲಿ ಫಿಟ್ನೆಸ್ ಮತ್ತು ಆರೋಗ್ಯವು ಪರಸ್ಪರ ಜತೆಜತೆಯಾಗಿ ಸಾಗುವುದು. ಇದರಿಂದಾಗಿ ಮಕ್ಕಳಿಗೆ ಕೂಡ ವ್ಯಾಯಾಮದ ಬಗ್ಗೆ ಜಾಗೃತಿ ಮೂಡಿಸಬೇಕು. ಇದರಿಂದ ಬೊಜ್ಜು ಹಾಗೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಮಾನಸಿಕ ಸಮಸ್ಯೆ ನಿವಾರಣೆ ಮಾಡಲು ಪೋಷಕರು ಈ ಕೆಳಗಿನ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬಹುದು.
ಹೊರಗಡೆ ಆಡುವಂತಹ ಆಟಗಳಿಗೆ ಮಕ್ಕಳನ್ನು ಪ್ರೋತ್ಸಾಹ ಮಾಡಿ.
ಮಕ್ಕಳಿಗೆ ಮೊಬೈಲ್ ಫೋನ್ ಕೊಡಬೇಡಿ ಅಥವಾ ಬಳಸಲು ಬಿಡಬೇಡಿ.
ಆರೋಗ್ಯಕಾರಿ ಆಹಾರ ಮತ್ತು ಆಹಾರ ಕ್ರಮ ಪಾಲಿಸಿ.
ಶಾಲೆ ಮತ್ತು ಮನೆಯಲ್ಲಿ ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಅವರೊಂದಿಗೆ ನೀವು ಮಾತನಾಡಿ.



Click it and Unblock the Notifications












