Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಯಸ್ಸಾದವರಿಗೆ ಮಾತ್ರವಲ್ಲ, ಮಕ್ಕಳಿಗೂ ಕೂಡ ಸಂಧಿವಾತ ಕಾಡುತ್ತದೆಯಂತೆ!
ಸಂಧಿವಾತ ಎನ್ನುವಂತಹ ಪದ ಕೇಳಿದರೆ ಅದು ವಯಸ್ಸಾದವರಲ್ಲಿ ಕಂಡುಬರುವಂತಹ ಸಾಮಾನ್ಯವಾದ ಗಂಟಿನ ಉರಿಯೂತದ ಸಮಸ್ಯೆ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ವಯಸ್ಸಾದವರಿಗೆ ಮಾತ್ರವಲ್ಲದೆ ಇಂತಹ ಸಮಸ್ಯೆಗಳು ಮಕ್ಕಳಲ್ಲೂ ಕಾಣಿಸಿಕೊಳ್ಳುವುದು. ಈ ಸಮಸ್ಯೆಯು ವಿಶ್ವದೆಲ್ಲೆಡೆ ಇಂದಿನ ದಿನಗಳಲ್ಲಿ ಕಂಡುಬರುವಂತಹ ಗಂಭೀರ ಸಮಸ್ಯೆಯಾಗಿದೆ ಮತ್ತು ಇದರ ಬಗ್ಗೆ ಅಧ್ಯಯನಗಳು ಕೂಡ ನಡೆಯುತ್ತಲಿದೆ. ಈ ಸಮಸ್ಯೆಯಿಂದಾಗಿ ಮಕ್ಕಳ ಗಂಟುಗಳು ಮತ್ತು ಮಸ್ಕ್ಯುಲೋಸ್ಕೆಲಿಟಲ್ ವ್ಯವಸ್ಥೆ ಮೇಲೆ ಪರಿಣಾಮಬೀರುವುದು. ಇದರ ಕೆಲವು ಲಕ್ಷಣಗಳು ಊತ, ನೋವು ಮತ್ತು ಗಂಟುಗಳು ಕೆಂಪಾಗುವುದು. ಆದರೆ ಕೆಲವು ಸಮಸ್ಯೆಗಳು ತುಂಬಾ ಭಿನ್ನವಾಗಿರಬಹುದು.
ಇದರ ಬಗ್ಗೆ ಒಂದು ಅಂತಿಮ ತೀರ್ಪಿಗೆ ಬರುವ ಮೊದಲು ಮಕ್ಕಳಲ್ಲಿ ಕಂಡುಬರುವಂತಹ ಸಂಧಿವಾತದ ಬಗ್ಗೆ ತಿಳಿಯಬೇಕು. ಮಕ್ಕಳಲ್ಲಿ ಯಾವ ರೀತಿಯ ಸಂಧಿವಾತ ಇದೆ ಎಂದು ಅರ್ಥ ಮಾಡಿಕೊಂಡ ಬಳಿಕ ಅದಕ್ಕೆ ಚಿಕಿತ್ಸೆ ಮತ್ತು ಪುನರ್ಶ್ಚೇತನದ ಬಗ್ಗೆ ತಿಳಿಯಬೇಕು. ಸಂಧಿವಾತವು ತೀವ್ರ ರೂಪಕ್ಕೆ ತಿರುಗಿದರೆ ಆಗ ಅದು ವ್ಯಕ್ತಿಯ ಚಲನೆಗಳ ಮೇಲೆ ಪರಿಣಾಮ ಬೀರುವುದು. ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಬಂದಾಗ ಇದನ್ನು ಕಡೆಗಣಿಸಬಾರದು ಮತ್ತು ಇಂತಹ ಸಮಸ್ಯೆ ಬರುವುದು ಕೇವಲ ವಯಸ್ಸಾದವರಲ್ಲಿ ಎಂದು ನಾವು ನಿರ್ಲಕ್ಷ್ಯ ಮಾಡಬಾರದು.

ಜುವೆನೈಲ್ ಸಂಧಿವಾತ ಅರ್ಥ ಮಾಡಿಕೊಳ್ಳಿ
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ದೊಡ್ಡ ಮಟ್ಟದಲ್ಲಿ ಗಂಭೀರ ಸಮಸ್ಯೆ ಉಂಟು ಮಾಡಬಹುದು ಮತ್ತು ಇದು ಜೀವನಪೂರ್ತಿ ಕಾಡುವ ಸಮಸ್ಯೆಯಾಗಬಹುದು. ಕೆಲವೊಂದು ಸಂಧಿವಾತದ ವಿಧಗಳು ಮತ್ತು ಅದರ ಲಕ್ಷಣಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಜುವೆನೈಲ್ ಡರ್ಮಟೊಮಿಯೊಸಿಸ್
ಕಣ್ಣ ರೆಪ್ಪೆಗಳ ಮೇಲೆ ಚರ್ಮದ ತುರಿಕೆ ಉಂಟಾಗುವುದು ಮತ್ತು ಸ್ನಾಯುಗಳು ದುರ್ಬಲವಾಗುವುದು. ಸರಾಸರಿ ಐದರಲ್ಲಿ ಒಬ್ಬರು ಮಕ್ಕಳಲ್ಲಿ ಈ ಸಮಸ್ಯೆಯು ಕಾಣಿಸಿಕೊಳ್ಳುವುದು. ಇದು ಸಂಪೂರ್ಣ ದೇಹ ಮತ್ತು ಅದರ ಚಲನೆ ಮೇಲೆ ಪರಿಣಾಮ ಬೀರುವುದು. ಪ್ರಮುಖವಾಗಿ ಭುಜಗಳು, ತೊಡೆ ಮತ್ತು ಇತರ ಭಾಗಗಳಲ್ಲಿ ನಿಶ್ಯಕ್ತಿ ಕಂಡುಬರುವುದು. ಇದರಿಂದ ಮೆಟ್ಟಿಲು ಹತ್ತಲು ಕಷ್ಟವಾಗುವುದು ಮತ್ತು ಇತರ ದೇಹದ ಚಲನೆಗಳಿಗೆ ಕಷ್ಟವಾಗುವುದು. ಮುಖ್ಯವಾಗಿ ಕುಳಿತುಕೊಳ್ಳು ಮತ್ತು ನಿಲ್ಲಲು.
ಜುವೆನೈಲ್ ಇಡಿಯೋಪಥಿಕ್ ಸಂಧಿವಾತ(ಜಿಐಎ)
*ಈ ರೀತಿಯ ಸಂಧಿವಾತ ಮಕ್ಕಳಲ್ಲಿ 16ರ ಹರೆಯಕ್ಕೆ ಮೊದಲೇ ಕಾಣಿಸಿಕೊಳ್ಳುವುದು. ಪ್ರಮುಖವಾಗಿ ಇದರಿಂದ ಆರು ವಾರಗಳ ಕಾಲ ಗಂಟುಗಳಲ್ಲಿ ಊತ ಉಂಟಾಗುವುದು. ಈ ಲಕ್ಷಣಗಳಿಂದಲೇ ನಾವು ಸಂಧಿವಾತದ ಬಗ್ಗೆ ತಿಳಿದುಕೊಳ್ಳಬಹುದು. ಈ ಸಂಧಿವಾತದ ಕೆಲವೊಂದು ಲಕ್ಷಣಗಳು ಈ ರೀತಿಯಾಗಿ ಇದೆ.
*ಮೂಳೆಯ ಸವೆತ
*ಕೀಳುಗಳ ಜೋಡಣೆ ತಪ್ಪುವುದು
*ಸ್ನಾಯುಗಳು ಮತ್ತು ಅಂಗಾಂಶಗಳು ಬಿಗಿಗೊಳ್ಳುವುದು
*ದೇಹವು ಅಸಾಮಾನ್ಯವಾಗಿ ಬೆಳವಣಿಗೆ ಆಗುವುದು
ಇದನ್ನು ಪತ್ತೆ ಮಾಡಲು ಮತ್ತು ಚಿಕಿತ್ಸೆ ನೀಡಲು ವೈದ್ಯರು ಆರು ವಾರಗಳ ಕಾಲ ಈ ಸಮಸ್ಯೆಯು ಯಾವ ರೀತಿಯಲ್ಲಿ ಮುಂದುವರಿಯುತ್ತಿದೆ ಎಂದು ತಿಳಿಯುವರು. ಲಕ್ಷಣಗಳು ಮತ್ತು ನಿಯಮಿತವಾದ ಪರೀಕ್ಷೆಗಳಾಗಿರುವಂತಹ ರುಮಟಾಯ್ಡ್ ಫ್ಯಾಕ್ಟರ್ ರಕ್ತ ಪರೀಕ್ಷೆ ನಡೆಸಿ ಇದನ್ನು ಪತ್ತೆ ಮಾಡಬಹುದು.
ಜಿಐಎ ಸಂಧಿವಾತದ ಕೆಲವು ವಿಧಗಳು
*ಆಲಿಗರ್ಥ್ರಿಟಿಸ್
*ವ್ಯವಸ್ಥಿತ
*ಪಾಲಿಅರ್ಥ್ರಿಟಿಸ್
*ಎಂಥೆಟಿಟಿಸ್-ಸಂಬಂಧಿತ
ಜುವೆನೈಲ್ ಸ್ಕ್ಲೆಲೋಡರ್ಮಾ
ಸ್ಕ್ಲೆಲೋಡರ್ಮಾ ಸಾಮಾನ್ಯ ಪದಗಳಲ್ಲಿ ಹೇಳಬೇಕಾದರೆ ದಪ್ಪಗಿನ ಚರ್ಮ ಎನ್ನಬಹುದು. ಈ ರೀತಿಯ ಜುವೆನೈಲ್ ಸಂಧಿವಾತದಲ್ಲಿ ಚರ್ಮವು ಬಿಗಿ ಮತ್ತು ಗಡುಸಾಗುವುದು. ಇದು ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವುದು. ಮೊದಲಾಗಿ ಮುಖ, ಮೊಣಕೈ, ಕೈಗಳು ಮತ್ತು ಬೆರಳುಗಳ ಮೇಲೆ ಇದರ ಪರಿಣಾಮ ಕಂಡುಬರುವುದು.
ಜುವೆನೈಲ್ ಲೂಪಸ್
*ಈ ಕಾಯಿಲೆಯು ಪ್ರತಿರೋಧಕ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು. ಈ ರೀತಿಯ ಸಂಧಿವಾತವು ಹೆಚ್ಚಾಗಿ ಹುಡುಗಿಯರಲ್ಲಿ ಕಂಡುಬರುವುದು. ಈ ಸಮಸ್ಯೆಯಿಂದಾಗಿ ಕಿಡ್ನಿ, ಚರ್ಮ, ಗಂಟುಗಳು, ರಕ್ತ ಮತ್ತು ಇತರ ಕೆಲವೊಂದು ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುವುದು. ಇದರ ಲಕ್ಷಣಗಳು ಈ ರೀತಿಯಾಗಿ ಇರಬಹುದು.
*ದೇಹದ ಯವುದೇ ಭಾಗದಲ್ಲಿ ಚಿಟ್ಟೆ ಗಾತ್ರದಷ್ಟು ದೊಡ್ಡ ದದ್ದು ಕಾಣಿಸಿಕೊಳ್ಳಬಹುದು.
*ಕುತ್ತಿಗೆ ಮತ್ತು ಮುಖದ ಭಾಗದಲ್ಲಿ ಕೂಡ ಉದ್ದಗಿನ ದದ್ದು ಕಾಣಿಸಿಕೊಳ್ಳುವುದು.
*ಬಿಸಿಲಿಗೆ ಸೂಕ್ಷ್ಮವಾಗಿರುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡಲು ಆಗದೆ ಇರುವುದು.
*ಎದೆ ಮತ್ತು ಗಂಟು ನೋವು ಕಾಣಿಸಿಕೊಂಡು ಚಲನೆಗೆ ಕಷ್ಟವಾಗುವುದು.
ಫೈಬ್ರೊಮ್ಯಾಲ್ಗಿಯ
ಮಕ್ಕಳಲ್ಲಿ ಪ್ರೌಢಾವಸ್ಥೆಗೆ ಮೊದಲು ಇದು ಕಂಡುಬರುವುದು. ಫೈಬ್ರೊಮ್ಯಾಲ್ಗಿಯ ಎನ್ನುವುದು ಒಂದು ಸಂಧಿವಾತ ಸಂಬಂಧಿ ಪರಿಸ್ಥಿತಿಯಾಗಿದೆ. ಇದರಿಂದ ಸೆಳೆತ ಮತ್ತು ದೇಹದಲ್ಲಿ ಬಿಗಿತ ಕಂಡುಬರಬಹುದು. ಈ ರೀತಿಯ ಸಂಧಿವಾತದ ಪರಿಸ್ಥಿತಿಯಿಂದಾಗಿ ನಿಶ್ಯಕ್ತಿ, ನಿದ್ರಾಹೀನತೆ ಮತ್ತು ನಿದ್ರೆಯಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ದೀರ್ಘಕಾಲಿಕ ದೇಹದ ನೋವು ಕಾಣಿಸಬಹುದು.



Click it and Unblock the Notifications
