Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಮಗುವಿನ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಗೆ ಕೆಲವು ಆಯುರ್ವೇದ ವಿಧಾನಗಳು
ಮಗುವಿನ ಜೀರ್ಣಕ್ರಿಯೆ ವ್ಯವಸ್ಥೆಯು ತುಂಬಾ ಸೂಕ್ಷ್ಮವಾಗಿರುವುದು. ಈ ಕಾರಣದಿಂದಾಗಿಯೇ ಮಗುವಿಗೆ ಆಗಾಗ ಸೋಂಕು ಮತ್ತು ಕಾಯಿಲೆಗಳು ಬರುವುದು. ಮಗುವಿನ ಆಹಾರ ಕ್ರಮದಲ್ಲಿ ಸಣ್ಣ ಬದಲಾವಣೆ ಅಥವಾ ಬೇರೆ ಯಾವುದೇ ಆಹಾರವನ್ನು ತಪ್ಪಾಗಿ ನೀಡಿದರೂ ಅದರಿಂದ ಮಗುವಿನ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀಳುವುದು. ಹೆಚ್ಚಿನ ತಾಯಂದಿರು ಅದರಲ್ಲೂ ಮೊದಲ ಸಲ ತಾಯಿಯಾಗಿರುವಂತಹವರಿಗೆ ಮಗುವಿನ ಜೀರ್ಣಕ್ರಿಯೆ ಬಗ್ಗೆ ದೊಡ್ಡ ಚಿಂತೆಯಾಗಿರುವುದು. ಯಾಕೆಂದರೆ ಮಗುವಿಗೆ ಈ ಸಮಯದಲ್ಲಿ ಯಾವುದೇ ಔಷಧಿ ಕೂಡ ನೀಡಲು ಸಾಧ್ಯವಿರುವುದಿಲ್ಲ.

ಇದರಿಂದ ಕೆಲವೊಂದು ನೈಸರ್ಗಿಕ ಮನೆಮದ್ದುಗಳು ತುಂಬಾ ಪರಿಣಾಮಕಾರಿ. ಯಾಕೆಂದರೆ ಇದು ಯಾವುದೇ ಅಡ್ಡಪರಿಣಾಮ ಉಂಟು ಮಾಡುವುದಿಲ್ಲ. ಮಗುವಿನಲ್ಲಿ ಜೀರ್ಣಕ್ರಿಯೆ ಸಮಸ್ಯೆಯಿಂದಾಗಿ ಕಂಡುಬರುವಂತಹ ಕೆಲವೊಂದು ಸಾಮಾನ್ಯ ಸಮಸ್ಯೆಗಳನ್ನು ನೀವು ಗುರುತಿಸಬಹುದು. ಇವುಗಳು ಯಾವುದೆಂದರೆ, ಮಲಬದ್ಧತೆ, ಗ್ಯಾಸ್, ಹೊಟ್ಟೆ ಉಬ್ಬರ, ವಾಂತಿ, ಬೇಧಿ, ಸೋಂಕು ಅಥವಾ ಜ್ವರ, ಮೈಕೊಡವುದು ಇತ್ಯಾದಿಗಳು. ಮಗುವಿನ ಜೀರ್ಣಕ್ರಿಯೆ ಸಮಸ್ಯೆಗೆ ಆಯುರ್ವೇದಲ್ಲಿ ಕೆಲವೊಂದು ಔಷಧಿಗಳು ಲಭ್ಯವಿದೆ.

ಹಾಲುಣಿಸುವ ಭಂಗಿ ಸರಿಪಡಿಸಿ
ಹಾಲುಣಿಸುವಂತಹ ಭಂಗಿಯು ಸರಿಯಾಗಿ ಇಲ್ಲವಾದರೆ ಆಗ ಮಗುವಿನಲ್ಲಿ ಜೀರ್ಣಕ್ರಿಯೆ ಸಮಸ್ಯೆಯು ಕಾಡುವುದು. ಇದರಿಂದ ಗ್ಯಾಸ್ ಅಥವಾ ಆಮ್ಲ ಹಿಮ್ಮುಖವಾಗುವುದು. ಹಾಲುಣಿಸುವ ವೇಳೆ ಮಗುವಿನ ತಲೆಯು ಹೊಟ್ಟೆಗಿಂತ ಮೇಲ್ಮಟ್ಟದಲ್ಲಿ ಇರಲಿ. ಈ ಭಂಗಿಯಿಂದ ಹಾಲು ಸರಾಗವಾಗಿ ಹೊಟ್ಟೆಗೆ ಹೋಗುವುದು ಮತ್ತು ಗಾಳಿಯನ್ನು ತೇಗಿನ ಮೂಲಕ ಹೊರಹಾಕುವುದು. ಮಗುವನ್ನು ಕಾಲಿನ ಮೇಲೆ ಮಲಗಿಸುತ್ತಿದ್ದರೆ ಆಗ ಮಗುವಿನ ತಲೆಯು ಸ್ವಲ್ಪ ಮೇಲ್ಮಟ್ಟದಲ್ಲಿ ಇರಬೇಕು ಅಥವಾ ಮಗುವಿನ ಕುತ್ತಿಗೆಯ ಅಡಿಯಲ್ಲಿ ಮೆತ್ತಗಿನ ದಿಂಬು ಇಡಬೇಕು.

ಮಗುವಿಗೆ ಮಸಾಜ್ ಮಾಡಿ
ಮಗುವಿನ ಹೊಟ್ಟೆಗೆ ನಿಧಾನವಾಗಿ ಮಸಾಜ್ ಮಾಡುವ ಮೂಲಕ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮಾಡಬಹುದು. ನಿಮ್ಮ ಕೈಗಳನ್ನು ಬಳಸಿಕೊಂಡು ಮಗುವಿನ ಹೊಟ್ಟೆಯ ಸುತ್ತಲು ಮಸಾಜ್ ಮಾಡಿ. ಅತಿಯಾಗಿ ದಬ್ಬಬೇಡಿ. ವೃತ್ತಾಕಾರದಲ್ಲಿ ಮಗುವಿನ ಹೊಟ್ಟೆಗೆ ಮಸಾಜ್ ಮಾಡಿ. ಸ್ವಲ್ಪ ಮಗುವಿನ ಎಣ್ಣೆ ಅಥವಾ ಕ್ರೀಮ್ ಬಳಸಿಕೊಂಡು ಮಸಾಜ್ ಮಾಡಬಹುದು.

ಮಗುವಿಗೆ ತೇಗು ಬರುವಂತೆ ಮಾಡಿ
ಹಾಲುಣಿಸಿದ ಬಲಿಕ ಮಗುವಿಗೆ ಯಾವಾಗಲೂ ತೇಗು ಬರುವಂತೆ ಮಾಡಿ. ಇದು ಮಗುವಿನ ಜೀರ್ಣಕ್ರಿಯೆ ಸಮಸ್ಯೆ ನಿವಾರಿಸುವುದು. ತೇಗು ಬಂದರೆ ಗ್ಯಾಸ್ ಸಮಸ್ಯೆ ನಿವಾರಣೆ ಆಗುವುದು ಮತ್ತು ಮಗು ಹಾಲನ್ನು ಹೊರಗೆ ಹಾಕುವುದು ತಪ್ಪುವುದು. ಹಾಲುಣಿಸಿದ ಬಳಿಕ ಕೆಲವು ನಿಮಿಷ ಹಾಗೆ ಬಿಡಿ ಮತ್ತು ಇದರ ಬಳಿಕ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ತೇಗು ಬರಿಸಿ.

ಎದೆಹಾಲು ಮಾತ್ರ ನೀಡಿ
ಮಗುವಿಗೆ ಬೇರೆ ಯಾವುದೇ ರೀತಿಯ ಆಹಾರ ಅಥವಾ ಪಾನೀಯ ನೀಡಿದರೆ ಅದರಿಂದ ಮಗುವಿಗೆ ಜೀರ್ಣಕ್ರಿಯೆ ಸಮಸ್ಯೆ ಕಾಣಿಸಿ ಕೊಳ್ಳಬಹುದು. ವೈದ್ಯರು ಸೂಚಿಸಿರುವಂತೆ ಎದೆಹಾಲು ಮಾತ್ರ ನೀಡಿ. ಮಗುವಿಗೆ ಬೇರೆ ಯಾವುದೇ ಆಹಾರ ನೀಡುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಬೇರೆ ಆಹಾರ ಸೇವಿಸಿದ ಬಳಿಕ ಮಗುವಿಗೆ ಸಮಸ್ಯೆಯಾಗುತ್ತಲಿದ್ದರೆ ನೀವು ತಕ್ಷಣವೇ ಅದನ್ನು ನಿಲ್ಲಿಸಿಬಿಡಿ. ಹಠಾತ್ ಆಗಿ ಮಗುವಿಗೆ ಎದೆಹಾಲು ನೀಡುವುದನ್ನು ನಿಲ್ಲಿಸಬೇಡಿ. ಮಗು ಬೇರೆ ರೀತಿಯ ಆಹಾರ ಸೇವಿಸಲು ಆರಂಭಿಸಿದ ಬಳಿಕ ನಿಧಾನವಾಗಿ ಎದೆಹಾಲು ನೀಡುವ ಪ್ರಮಾಣ ಕಡಿಮೆ ಮಾಡುತ್ತಾ ಹೋಗಿ.

ಗ್ರೈಪ್ ವಾಟರ್
ಮಗುವಿಗೆ ಹಿಂದಿನ ಕಾಲದಿಂದಲೂ ಜೀರ್ಣಕ್ರಿಯೆ ಸಮಸ್ಯೆಗೆ ಗ್ರೈಪ್ ವಾಟರ್ ನೀಡುತ್ತಾ ಬರಲಾಗುತ್ತಿದೆ. ಗ್ರೈಪ್ ವಾಟರ್ ನಲ್ಲಿ ಸೋಡಿಯಂ ಬೈಕಾರ್ಬೊನೇಟ್ ಮತ್ತು ನೀರು ಹಾಗೂ ಹಲವಾರು ಗಿಡಮೂಲಿಕೆಗಳು ಇವೆ. ಮಗುವಿನ ಗ್ಯಾಸ್ ಸಮಸ್ಯೆ ನಿವಾರಣೆಗೆ ಇದು ತುಂಬಾ ಸುರಕ್ಷಿತ ವಿಧಾನ. ಕೇವಲ ಐದು ನಿಮಿಷದಲ್ಲಿ ಇದು ಕೆಲಸ ಮಾಡುವುದು. ಜೀರ್ಣಕ್ರಿಯೆ ಸಮಸ್ಯೆಯಿಂದ ಮಗುವಿಗೆ ಬೇಗನೆ ಶಮನ ನೀಡುವುದು. ವೈದ್ಯರ ಸಲಹೆ ಪಡೆಯದೆ ಯಾವುದೇ ರೀತಿಯ ಔಷಧಿಗಳನ್ನು ಮಗುವಿಗೆ ನೀಡಬೇಡಿ. ಮನೆಮದ್ದನ್ನು ಪ್ರಯತ್ನಿಸಿ. ಪರಿಸ್ಥಿತಿ ತೀರ ಹದಗೆಟ್ಟರೆ ಆಗ ವೈದ್ಯರನ್ನು ಭೇಟಿಯಾಗಿ.



Click it and Unblock the Notifications