Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮಕ್ಕಳಿಗೆ ಕಾಡುವ ಮಲಬದ್ಧತೆ, ಇಲ್ಲಿದೆ ಸೂಕ್ತ ಮನೆಮದ್ದು
ಇಂದಿನ ಸಿದ್ಧ ಆಹಾರಗಳಿಗೆ ಮಾರುಹೋದ ಮಕ್ಕಳಲ್ಲಿಯೂ ಇತ್ತೀಚೆಗೆ ಮಲಬದ್ಧತೆ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಅವರ ಚಟುವಟಿಕೆಗೆ ಅಗತ್ಯವಿದ್ದಷ್ಟು ನೀರನ್ನು ಕುಡಿಯದೇ ಇರುವುದು. ಇನ್ನುಳಿದಂತೆ ಪೌಷ್ಟಿಕಾಂಶಗಳ ಕೊರತೆ, ಅಸಂತುಲಿತ ಆಹಾರ, ನೀರನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಕೆಲವು ಔಷಧಿಗಳ ಅಡ್ಡಪರಿಣಾಮಗಳೂ ಕಾರಣವಾಗಬಹುದು. ಇದಕ್ಕೆ ಪ್ರಥಮ ಉತ್ತರವೆಂದರೆ ಮಕ್ಕಳಿಗೆ ಹೆಚ್ಚು ಹೆಚ್ಚು ನೀರು ಕುಡಿಯುವಂತೆ ಪ್ರೇರೇಪಿಸುವುದು.
ಎರಡನೆಯದಾಗಿ ಮಕ್ಕಳು ಹೆಚ್ಚು ನಾರು ಇರುವ ಆಹಾರಗಳನ್ನೇ ತಿನ್ನುವಂತೆ ಮಾಡುವುದು. ಇದಕ್ಕೆ ಮಕ್ಕಳಿಗಿಂತಲೂ ಪಾಲಕರು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಮಕ್ಕಳಿಗೆ ನಾರು ಇರುವ ಆಹಾರ ನೀಡಿ ತಾವು ಸಿದ್ಧ ಆಹಾರಗಳನ್ನು ತಿನ್ನುತ್ತಿದ್ದರೆ ಮಕ್ಕಳು ಹಿರಿಯರು ತಿನ್ನುವ ಆಹಾರವನ್ನೇ ತಿನ್ನಬೇಕು ಎಂದು ಹಠ ಹಿಡಿಯುತ್ತಾರೆ. ಆದ್ದರಿಂದ ಹಿರಿಯರೇ ಮೊದಲು ಹೆಚ್ಚಿನ ನಾರಿನಂಶ ಇರುವ ಆಹಾರಗಳನ್ನು ಸೇವಿಸಲು ಪ್ರಾರಂಭಿಸಬೇಕು. ಇದಕ್ಕೆ ಆಹಾರದಲ್ಲಿ ಹಣ್ಣುಗಳನ್ನು ಮತ್ತು ತರಕಾರಿಗಳ ಪ್ರಮಾಣವನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಇದರಿಂದ ದುಬಾರಿ ಔಷಧಿಗಳಿಗೆ ಹಣ ವ್ಯರ್ಥಗೊಳಿಸುವುದನ್ನು ತಡೆಯಬಹುದು ಹಾಗೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲೂ ನೆರವಾಗುತ್ತದೆ.
ಮಕ್ಕಳಲ್ಲಿ ಮಲಬದ್ಧತೆ ತಡೆಯಲು ಸಮರ್ಥವಾದ ಹಲವಾರು ತರಕಾರಿಗಳಿದ್ದು ಇವುಗಳನ್ನು ಹಸಿಯಾಗಿ ಸೇವಿಸುವ ಮೂಲಕ ಮತ್ತು ಬೇಯಿಸಿ ಸೇವಿಸುವ ಮೂಲಕ ಉತ್ತಮ ಮತ್ತು ಸುಲಭವಾದ ಪರಿಹಾರ ಪಡೆಯಬಹುದು. ಮಕ್ಕಳಿಗೆ ಸೂಕ್ತವಾದ ಇಂತಹ ಹಣ್ಣು ಮತ್ತು ತರಕಾರಿಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಅಮೂಲ್ಯವಾದ ಮಾಹಿತಿಯನ್ನು ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತದೆ, ಮುಂದೆ ಓದಿ...

ಒಣ ಪ್ಲಮ್ ಹಣ್ಣುಗಳು
ಪ್ಲಮ್ ಹಣ್ಣುಗಳನ್ನು ಒಣಗಿಸಿದಾಗ ದೊರಕುವ ಒಣದ್ರಾಕ್ಷಿಯಂತಹ ಫಲವನ್ನು Prunes ಎಂದು ಕರೆಯುತ್ತಾರೆ. ಇದರಲ್ಲಿ ಅಧಿಕ ಪ್ರಮಾಣದ ಕರಗದ ನಾರು ಮತ್ತು ಪೊಟ್ಯಾಶಿಯಂ ಇವೆ. ಇದು ವಿಶೇಷವಾಗಿ ಮಕ್ಕಳಲ್ಲಿ ಮಲಬದ್ದತೆಯನ್ನು ನಿವಾರಿಸಲು ಸಮರ್ಥವಾಗಿವೆ. ಇದರಲಿರುವ ಸೋರ್ಬಿಟಾಲ್ ಎಂಬ ಪೋಷಕಾಂಶ ಒಂದು ನೈಸರ್ಗಿಕ ವಿರೇಚಕವಾಗಿದ್ದು ಮಕ್ಕಳ ಕೋಮಲ ಅಂಗಗಳಿಗೆ ಸುರಕ್ಷಿತವಾಗಿದೆ. ಅಲ್ಲದೇ ಇದೊಂದು ರೋಗಗಳ ವಿರುದ್ದ ಹೋರಾಡುವ ಆಂಟಿ ಆಕ್ಸಿಡೆಂಟು ಸಹಾ ಆಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಮಕ್ಕಳಿಗೆ ಈ ಒಣಹಣ್ಣುಗಳನ್ನು ನಿತ್ಯವೂ ಕೆಲವನ್ನು ತಿನ್ನಲು ನೀಡುವ ಮೂಲಕ ಅಥವಾ ಪ್ರೂನ್ಸ್ ಜ್ಯೂಸ್ ಎಂಬ ರೂಪದಲ್ಲಿ ಸಿಗುವ ರಸವನ್ನು ಸೇವಿಸಲು ನೀಡುವ ಮೂಲಕ ಮಲಬದ್ದತೆಯನ್ನು ತಡೆಯಬಹುದು.

ಸೀಬೆ ಹಣ್ಣುಗಳು
ಪೇರ್ಸ್ ಅಥವಾ ಸೀಬೆಹಣ್ಣು ಸಹಾ ಒಂದು ಉತ್ತಮವಾದ ವಿರೇಚಕವಾಗಿದ್ದು ಮಕ್ಕಳಲ್ಲಿ ಮಲಬದ್ದತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದರಲ್ಲಿರುವ ನಾರುಗಳು ಕರುಳುಗಳಲ್ಲಿ ಆಹಾರ ಚಲನೆ ಸುಲಭವಾಗಿಸುವ ಮೂಲಕ ಮಲಬದ್ದತೆ ಕಡಿಮೆಗೊಳಿಸಲು ನೆರವಾಗುತ್ತದೆ.

ಬ್ರೋಕೋಲಿ
ಈ ಹಸಿರು ಹೂಕೋಸಿನಲ್ಲಿ ಉತ್ತಮ ಪ್ರಮಾಣದ ನಾರು ಇದ್ದು ಇದರ ಗರಿಷ್ಟ ಪ್ರಯೋಜನ ಪಡೆಯಬೇಕಾದರೆ ಹಸಿಯಾಗಿ ತಿನ್ನುವುದು ಅಗತ್ಯ. ಮಕ್ಕಳು ಇದನ್ನು ತಿನ್ನಲು ತಕರಾರು ಮಾಡುವ ಮೂಲಕ ಇದನ್ನು ಮಕ್ಕಳ ಆಹಾರದಲ್ಲಿ ಇದನ್ನು ಚಿಕ್ಕಚಿಕ್ಕತುಂಡುಗಳನ್ನಾಗಿಸಿ ಬೆರೆಸಿ ನೀಡುವುದು ಜಾಣತನದ ಕ್ರಮವಾಗಿದೆ. ಬೇಯಿಸಿದ ಬ್ರೋಕೋಲಿಯಿಂದ ನಾರು ನಷ್ಟವಾಗುವ ಕಾರಣ ಹಸಿಯಾಗಿಯೇ ಸೇವಿಸುವುದು ಉತ್ತಮ.

ಕ್ಯಾರೆಟ್
ಹಸಿ ಕ್ಯಾರೆಟ್‌ನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಕರುಳಿನಲ್ಲಿ ಆಹಾರ ಸುಲಭವಾಗಿ ಚಲಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಕ್ಯಾರೆಟ್ಟುಗಳನ್ನು ಹಸಿಯಾಗಿ ತಿನ್ನುವುದೇ ಉತ್ತಮ. ಬೇಯಿಸಿದಾಗ ಇದರ ನಾರುಗಳು ಕರಗುವುದರಿಂದ ನಿತ್ಯವೂ ಕೊಂಚ ಕ್ಯಾರೆಟ್ಟಿನ ತುಂಡುಗಳನ್ನು ಊಟದ ಸಾಲಾಡ್ ನಲ್ಲಿ ಸೇರಿಸಿ ತಿನ್ನಲು ಪ್ರೇರೇಪಿಸಿ.

ಬೀನ್ಸ್
ಒಂದು ಬಾರಿ ಸೇವಿಸುವ ಪ್ರಮಾಣದ ಬೀನ್ಸ್ ನಲ್ಲಿ ಹತ್ತು ಗ್ರಾಂಗಳಷ್ಟು ಕರಗದ ನಾರು ಇರುವ ಕಾರಣ ಜೀರ್ಣಾಂಗಗಳಲ್ಲಿ ಆಹಾರ ಸುಲಭವಾಗಿ ಸಾಗಲು ಮತ್ತು ಮಲಬದ್ದತೆ ತಡೆಯಲು ನೆರವಾಗುತ್ತದೆ. ಮಕ್ಕಳ ಆಹಾರದಲ್ಲಿ ಕೊಂಚ ಬೀನ್ಸ್ ಅನ್ನು ಬೇಯಿಸಿ ಸೇರಿಸುವ ಮೂಲಕ ಮಲಬದ್ದತೆ ತಡೆಯಲು ಸಾಧ್ಯವಾಗುತ್ತದೆ.



Click it and Unblock the Notifications











