ಕಂದಮ್ಮನ ಲವಲವಿಕೆಯ ಆರೋಗ್ಯಕ್ಕೆ 'ಸಿಹಿ ಕುಂಬಳಕಾಯಿ'

By Arshad

ಮಕ್ಕಳಲ್ಲಿ ಬೆಳವಣಿಗೆ ಸತತವಾದ ಕಾರಣ ಅವರ ಆಹಾರದಲ್ಲಿ ಸಾಕಷ್ಟು ಪೌಷ್ಟಿಕ ಮತ್ತು ಶಕ್ತಿ ನೀಡುವ ಅಂಶಗಳಿರುವುದು ಅವಶ್ಯ. ಇವು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ದೇಹವನ್ನು ಸ್ಥೂಲವಾಗಿಸದೇ, ಬೇರಾವುದೇ ತೊಂದರೆಗಳಿಗೆ ಒಡ್ಡದಿರುವಂತಹದೂ, ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವಂತಹದ್ದೂ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹದ್ದೂ ಆಗಿರಬೇಕು. ಸಿಹಿಗುಂಬಳ ಇಂತಹ ಒಂದು ಉತ್ತಮ ಆಹಾರವಾಗಿದ್ದು ವಿಶೇಷವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಆರೋಗ್ಯದ ಪಾಲಿನ ಸಂಜೀವಿನಿ-ಸಿಹಿ ಕುಂಬಳಕಾಯಿ

ಇದರಲ್ಲಿರುವ ವಿಟಮಿನ್ ಎ, ಕ್ಯಾರೋಟಿಯಾಯ್ಡುಗಳು ದೇಹಕ್ಕೆ ಪುಷ್ಟಿಯನ್ನು ನೀಡುತ್ತವೆ. ವಿಶೇಷವಾಗಿ ಬೀಟಾ ಕ್ಯಾರೋಟಿನಾಯ್ಡ್ ಎಂಬ ಸಸ್ಯಜನ್ಯ ಪೋಷಕಾಂಶ ಸುಲಭವಾಗಿ ಜೀರ್ಣವಾಗಿ ದೇಹದಲ್ಲಿ ವಿಟಮಿನ್ ಎ ಉತ್ಪತ್ತಿಯಾಗಲು ನೆರವಾಗುತ್ತದೆ. ಇವು ಕ್ಯಾನ್ಸರ್ ಬರುವ, ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ. ಮಕ್ಕಳಲ್ಲಿ ಈ ಬಗೆಯಾದರೆ ಹಿರಿಯರಲ್ಲಿ ಇದು ಬೇರೆಯೇ ರೀತಿಯಲ್ಲಿ ಉಪಕಾರ ಮಾಡುತ್ತದೆ. ಅಂದರೆ ವೃದ್ಧಾಪ್ಯ ಆವರಿಸುತ್ತಿದ್ದಂತೆಯೇ ದೇಹದಿಂದ ಜೀವಕೋಶಗಳು ಸತ್ತು ಹೋಗಿ ಅವುಗಳ ಸ್ಥಾನದಲ್ಲಿ ಹೊಸ ಜೀವಕೋಶಗಳು ಹುಟ್ಟದೇ ಇರುವ ಮೂಲಕ ದೇಹ ನಿಧಾನವಾಗಿ ಕೃಶವಾಗುತ್ತಾ ಹೋಗುತ್ತದೆ. ಕುಂಬಳಕಾಯಿ ಬೀಜದಲ್ಲಿರುವ ಅದ್ಭುತ ಗುಣಗಳು

ಸಿಹಿಗುಂಬಳದ ಸೇವನೆಯಿಂದ ಈ ಕ್ರಿಯೆಯನ್ನು (degenerative effects of ageing) ಸಾಕಷ್ಟು ತಡವಾಗಿಸಬಹುದು. ಇವುಗಳಲ್ಲಿ ಕ್ಯಾಲೋರಿಗಳು ಕಡಿಮೆ ಹಾಗೂ ನಾರು ಹೆಚ್ಚಿರುವ ಕಾರಣ ಶಿಶುಗಳಿಗೆ ಅತ್ಯುತ್ತಮ ಆಹಾರವಾಗಿದೆ. ಎಷ್ಟು ಉತ್ತಮ ಎಂದರೆ ಆರು ತಿಂಗಳ ಮಕ್ಕಳಿಗೂ ಇದನ್ನು ಬೇಯಿಸಿ ತಿನ್ನಿಸಬಹುದು. ಮಗುವಿನ ಬೆಳವಣಿಗೆಗೆ ಸಿಹಿಗುಂಬಳದಲ್ಲಿರುವ ಪೋಷಕಾಂಶಗಳು ಅತ್ಯಂತ ಸೂಕ್ತವಾಗಿವೆ. ಇದರ ಹೊರತಾಗಿ ಮಕ್ಕಳಿಗೆ ಸಿಹಿಗುಂಬಳವನ್ನು ಆಹಾರವಾಗಿ ನೀಡುವ ಹಲವಾರು ಉಪಯೋಗಗಳಿವೆ. ಕೆಳಗಿನ ಸ್ಲೈಡ್ ಶೋ ಮೂಲಕ ಇವುಗಳಲ್ಲಿ ಪ್ರಮುಖವಾದುದನ್ನು ನೀಡಲಾಗಿದೆ...

ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ

ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ

ಸಿಹಿಗುಂಬಳದಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯ ಕಾಪಾಡಲು ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದ್ದು ಉತ್ತಮ ದೃಷ್ಟಿ ಹೊಂದಲು ಸಾಧ್ಯವಾಗುತ್ತದೆ. ನಿಯಮಿತವಾಗಿ ಸಿಹಿಗುಂಬಳದ ಸೇವನೆಯಿಂದ ಮಕ್ಕಳ ಕಣ್ಣು ಬಹಳ ಚುರುಕಾಗಿದ್ದು ರಾತ್ರಿಯ ಹೊತ್ತಿನಲ್ಲಿಯೂ ಇತರರಿಗಿಂತ ಚೆನ್ನಾಗಿ ನೋಡಲು ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಸಿಹಿಗುಂಬಳದಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ಈ ನಾರು ಅತ್ಯಂತ ಸೌಮ್ಯವಾಗಿದ್ದು ಮಕ್ಕಳ ಜೀರ್ಣಾಂಗಗಳಿಗೆ ಹೇಳಿ ಮಾಡಿಸಿದಂತಿದೆ. ಅಲ್ಲದೇ ಇದರಲ್ಲಿ ಅತಿ ಕಡಿಮೆ ಇರುವ ಕ್ಯಾಲೋರಿಗಳು ಮಕ್ಕಳ ಅಗತ್ಯಕ್ಕೆ ಸಾಕಷ್ಟಿದೆ. ವಿಸರ್ಜನಾಕಾರ್ಯ ಸುಲಭವಾಗುವ ಮೂಲಕ ಮಲಬದ್ದತೆ ಮೊದಲಾದ ತೊಂದರೆಗಳಿಂದ ಮಕ್ಕಳನ್ನು ರಕ್ಷಿಸಬಹುದಾಗಿದೆ.

ಮಕ್ಕಳಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ

ಮಕ್ಕಳಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ

ಸಿಹಿಗುಂಬಳದಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇರುವ ಕಾರಣ ಇದು ಮಕ್ಕಳ ಮೂಳೆಗಳು ದೃಢಗೊಳ್ಳಲು ನೆರವಾಗುತ್ತದೆ. ಜೊತೆಗೇ ಇದರಲ್ಲಿರುವ ಪೊಟ್ಯಾಶಿಯಂ ದೇಹದಲ್ಲಿರುವ ಎಲೆಕ್ಟ್ರೋಲೈಟ್ ಗಳೆಂಬ ಕಣಗಳನ್ನು ಸಂತುಲಿತ ಪ್ರಮಾಣದಲ್ಲಿರಿಸಲು ನೆರವಾಗುತ್ತದೆ, ತನ್ಮೂಲಕ ಸ್ನಾಯುಗಳ ಕಾರ್ಯನಿರ್ವಹಣೆ ಸುಲಭವಾಗುತ್ತದೆ. ಮಕ್ಕಳ ಚಟುವಟಿಕೆಗೆ ಇದು ಅತ್ಯಂತ ಅಗತ್ಯವಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸಿಹಿಗುಂಬಳದಲ್ಲಿರುವ ಉತ್ತಮ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಮನೆಯ ಅಕ್ಕ ಪಕ್ಕ ಇರುವ ಯಾವುದೇ ವೈರಸ್ ಮಗುವಿಗೆ ಶೀತ ನೆಗಡಿ ಉಂಟುಮಾಡಬಲ್ಲುದು. ಆದರೆ ಉತ್ತಮವಾಗಿರುವ ರೋಗ ನಿರೋಧಕ ಶಕ್ತಿ ಅತಿ ಕಡಿಮೆ ಸಮಯದಲ್ಲಿ ಈ ವೈರಸ್ಸುಗಳಿಗೆ ಪ್ರತಿರೋಧ ವ್ಯವಸ್ಥೆಯನ್ನು ದೇಹದಲ್ಲಿ ಸ್ಥಾಪಿಸಲು ನೆರವಾಗುವ ಮೂಲಕ ಶೀತ ನೆಗಡಿಗಳನ್ನು ದೂರವಿಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅಲ್ಲದೇ ಕಡಿಮೆ ಸಮಯದಲ್ಲಿ ಹೆಚ್ಚು ತರಹದ ವೈರಸ್ಸುಗಳಿಗೆ ರೋಗ ನಿರೋಧಕ ಶಕ್ತಿಯನ್ನು ಮೂಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಎದುರಾಗಬಹುದಾದ ಇತರ ವೈರಸ್ಸುಗಳನ್ನು ಎದುರಿಸಲು ದೇಹವನ್ನು ಸನ್ನದ್ಧಗೊಳಿಸುತ್ತದೆ.

X
Desktop Bottom Promotion