Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಾವಸ್ಥೆಯಲ್ಲಿ ಒತ್ತಡ ಹೆಚ್ಚಾದರೆ-ಶಿಶುವಿಗೆ ಆಪತ್ತು....
ಒತ್ತಡವು ಮಗು ಹಾಗೂ ತಾಯಿಯ ಮೇಲೆ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ದೀರ್ಘಕಾಲದ ತನಕ ಇರುವ ಒತ್ತಡವು ದೇಹದಲ್ಲಿ ಕೊರ್ಟಿಸೊಲ್ ಅನ್ನು ಹೆಚ್ಚಿಸುವುದು. ಇದು ಗರ್ಭದಲ್ಲಿರುವ ಶಿಶುವಿನ ಮೇಲೆ ಹಲವಾರು ರೀತಿಯ ಅಡ್ಡಪರಿಣಾಮ ಉಂಟು ಮಾಡುವುದು
ಗರ್ಭಿಣಿಯಾಗುವುದು ಹೆಣ್ಣಿನ ಭಾಗ್ಯವೆಂದು ಪರಿಗಣಿಸಲಾಗುತ್ತದೆ. ಅದೇ ಹೆಣ್ಣು ಗರ್ಭಧಾರಣೆಯ ಸಮಯದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗರ್ಭಧಾರಣೆಯ ಸಮಯದಲ್ಲಿ ದೈಹಿಕವಾಗಿ ಕೆಲವೊಂದು ಸಮಸ್ಯೆಗಳು ಕಾಡುವುದರೊಂದಿಗೆ ಮಾನಸಿಕವಾಗಿಯೂ ಇದರ ಪರಿಣಾಮ ಬೀರುವುದು. ಗರ್ಭಾವಸ್ಥೆಯಲ್ಲಿ ಒತ್ತಡ ನಿಯಂತ್ರಣ ಕೆಲ ಟಿಪ್ಸ್
ದೇಹದಲ್ಲಿ ಆಗುವಂತಹ ಬದಲಾವಣೆ ಮತ್ತು ಹಾರ್ಮೋನು ವೈಫರಿತ್ಯದಿಂದಾಗಿ ಪ್ರಮುಖವಾಗಿ ಗರ್ಭಿಣಿ ಮಹಿಳೆಯರಿಗೆ ಖಿನ್ನತೆ ಹಾಗೂ ಒತ್ತಡ ಕಾಡುವುದು. ಮಕ್ಕಳ ಒತ್ತಡವನ್ನು ನಿವಾರಿಸುವ ಉಸಿರಾಟದ ವ್ಯಾಯಮಗಳು
ಆದರೆ ಅತಿಯಾದ ಒತ್ತಡದಿಂದ ಮಗುವಿನ ಮೇಲೆ ಪರಿಣಾಮ ಬೀರಬಹುದು. ಒತ್ತಡವು ಮಗು ಹಾಗೂ ತಾಯಿಯ ಮೇಲೆ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ದೀರ್ಘಕಾಲದ ತನಕ ಇರುವ ಒತ್ತಡವು ದೇಹದಲ್ಲಿ ಕೊರ್ಟಿಸೊಲ್ ಅನ್ನು ಹೆಚ್ಚಿಸುವುದು. ಇದು ಗರ್ಭದಲ್ಲಿರುವ ಶಿಶುವಿನ ಮೇಲೆ ಹಲವಾರು ರೀತಿಯ ಅಡ್ಡಪರಿಣಾಮ ಉಂಟು ಮಾಡುವುದು. ಇದರ ಬಗ್ಗೆ ಇನ್ನಷ್ಟು ತಿಳಿಯಲು ಲೇಖನವನ್ನು ಓದುತ್ತಾ ಸಾಗಿ...

ಅಕಾಲಿಕ ಹೆರಿಗೆ
ದೀರ್ಘಕಾಲದ ತನಕ ಗರ್ಭಿಣಿ ಮಹಿಳೆಯರಲ್ಲಿ ಒತ್ತಡವಿದ್ದರೆ ಆಗ ಅಕಾಲಿಕ ಹೆರಿಗೆಯಾಗುವ ಸಂಭವ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಿದ್ರೆಯ ಸಮಸ್ಯೆ
ಗರ್ಭಿಣಿ ಮಹಿಳೆಯರು ದೀರ್ಘ ಕಾಲದ ತನಕ ಒತ್ತಡಕ್ಕೆ ಸಿಲುಕುವುದರಿಂದ ಅವರಲ್ಲಿ ಮುಂದೆ ನಿದ್ರಾಹೀನತೆಯಂತಹ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ.

ಕಡಿಮೆ ತೂಕದ ಮಗು
ಗರ್ಭಿಣಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಒತ್ತಡದಿಂದಾಗಿ ಮುಂದೆ ಹುಟ್ಟುವ ಮಗುವಿನ ತೂಕವು ಕಡಿಮೆಯಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಮೆದುಳಿನ ಬೆಳವಣಿಗೆ
ಗರ್ಭಿಣಿ ಮಹಿಳೆಯರು ಅತಿಯಾಗಿ ಒತ್ತಡದಲ್ಲಿದ್ದಾಗ ಅದರಿಂದ ಮಗುವಿನ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.

ವರ್ತನೆ ಸಮಸ್ಯೆ
ಗರ್ಭಿಣಿ ಮಹಿಳೆಯರು ಹೆಚ್ಚಾಗಿ ಒತ್ತಡಕ್ಕೆ ಒಳಗಾದರೆ ಆಗ ಹುಟ್ಟುವ ಮಗುವಿನ ವರ್ತನೆಯಲ್ಲಿ ಬದಲಾವಣೆಗಳು ಕಂಡುಬರುತ್ತದೆ ಎಂದು ವೈದ್ಯಕೀಯ ವಿಜ್ಞಾನವು ಹೇಳುತ್ತದೆ.



Click it and Unblock the Notifications
