Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಒತ್ತಡವನ್ನು ನಿವಾರಿಸುವ ಉಸಿರಾಟದ ವ್ಯಾಯಮಗಳು
ಅರೆ ಮಕ್ಕಳಿಗೆ ಅದೆಂತಹ ಒತ್ತಡ ಕಣ್ರಿ? ಎನ್ನುವವರು ಅದೆಷ್ಟು ಜನರಿಲ್ಲ. ಹೌದು ಸ್ವಾಮಿ ಅವರಿಗು ಒತ್ತಡಗಳು ಇರುತ್ತವೆ. ಆರ್ಥಿಕ ಸಮಸ್ಯೆ, ಬಾಸ್ ನೀಡಿರುವ ಕೆಲಸಗಳು, ಮನೆಯ ದೈನಂದಿನ ಅಗತ್ಯಗಳನ್ನು ಪೂರೈಸುವ ತಾಪತ್ರಯ ಇವುಗಳು ಅವರಿಗೆ ಇಲ್ಲವಾದರು, ಅವರಿಗೆ ಅವರದೆ ಆದ ಸಮಸ್ಯೆಗಳು ಇರುತ್ತವೆ. ಹೋಮ್ ವರ್ಕ್ ಮಾಡಬೇಕು, ಕ್ಲಾಸ್ ಟೀಚರ್ ನೀಡಿದ ವರ್ಕ್ ಆದಷ್ಟು ಬೇಗ ಮುಗಿಸಬೇಕು. ನಾಳೆ ಅದ್ಯಾವುದೋ ಸಬ್ಜೆಕ್ಟ್ ಕ್ಲಾಸ್ ಟೆಸ್ಟ್, ನಾಡಿದ್ದು ಇನ್ನೊಂದು, ಆಮೇಲೆ ಮತ್ತೊಂದು, ಮುಗಿಯುವಷ್ಟರಲ್ಲಿ ಪರೀಕ್ಷೆ...!
ನಮ್ಮಮ್ಮ ಇಷ್ಟು ಮಾರ್ಕ್ಸ್ ತಗೋಬೇಕು ಎಂದು ಹೇಳಿದ್ದಾರೆ, ಆಟವಾಡಬೇಕು, ಓಹ್ ನಮಗಿಂತ ಅವರಿಗೆ ಹೆಚ್ಚಿನ ಒತ್ತಡ ಇರುತ್ತೇ ಕಣ್ರಿ. ಅದಕ್ಕಾಗಿ ಅವರಿಗೆ ಕೆಲವೊಂದು ವಿಶ್ರಾಂತಿ ನೀಡುವ ಉಸಿರಾಟದ ವ್ಯಾಯಾಮಗಳನ್ನು ಹೇಳಿಕೊಡಬೇಕಾದುದು ಪೋಷಕರಾಗಿ ನಮ್ಮ ಕರ್ತವ್ಯವಾಗಿರುತ್ತದೆ. ಕಾಲ ಬದಲಾಗಿದೆ ನೋಡಿ, ಮಕ್ಕಳಿಗೂ ಚಿಂತೆ ತಪ್ಪಿದ್ದಲ್ಲ!
ಇದು ಅವರ ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಅವರಿಗೆ ಲವಲವಿಕೆಯನ್ನು ನೀಡುತ್ತದೆ. ಜೊತೆಗೆ ಉದ್ವೇಗ, ಆತಂಕ ಮತ್ತು ಚಿಂತೆಗಳಿಂದ ಅವರನ್ನು ದೂರ ಮಾಡುತ್ತದೆ. ಅಲ್ಲದೆ ಇವರ ಏಕಾಗ್ರತೆ ಮತ್ತು ಸ್ಮರಣೆ ಶಕ್ತಿಯನ್ನು ಹೆಚ್ಚಿಸುತ್ತದೆ. ಬನ್ನಿ ಇದಕ್ಕಾಗಿ ನಿಮ್ಮ ಮಕ್ಕಳಿಗಾಗಿ ಕೆಲವೊಂದು ಉಸಿರಾಟದ ವ್ಯಾಯಾಮ ತಿಳಿಸಿಕೊಡುತ್ತೇವೆ. ಇದು ನಿಮ್ಮ ಮಕ್ಕಳಿಗೆ ಪರೀಕ್ಷೆಗಳಲ್ಲಿ ಸರಿಯಾಗಿ ಬರೆಯಲು ಸಹಾಯ ಮಾಡುತ್ತದೆ.

ಬುಸ್ ಬುಸ್ ಉಸಿರಾಟ..!
ದೀರ್ಘವಾಗಿ ಮೂಗಿನ ಮೂಲಕ ಉಸಿರನ್ನು ಎಳೆದುಕೊಳ್ಳಿ. ಅದನ್ನು ಬಾಯಿಯ ಮೂಲಕ ಬುಸ್ ಬುಸ್ ಅನ್ನುವ ರೀತಿ ಹೊರಗೆ ಬಿಡಿ. ಉಸಿರು ಬಿಡುವ ಸಮಯವು ಉಸಿರೆಳುದುಕೊಳ್ಳುವುದಕ್ಕಿಂತ ದೀರ್ಘವಾಗಿರಬೇಕು. ದೀರ್ಘ ಉಸಿರಾಟವು ನಿಮ್ಮ ಮಗುವಿನ ಮನಸ್ಸನ್ನು ಶಾಂತ ಮಾಡುತ್ತದೆ. ಇದು ಮಗುವಿನ ಆತಂಕ ಮತ್ತು ಒತ್ತಡಗಳನ್ನು ನಿವಾರಿಸುತ್ತದೆ.

ಕರಡಿ ಉಸಿರಾಟ
ದೀರ್ಘವಾಗಿ ಮೂಗಿನ ಮೂಲಕ ಉಸಿರನ್ನು ಎಳೆದುಕೊಳ್ಳಿ. ಅದನ್ನು 1 ರಿಂದ 2 ರವರೆಗೆ ನಿಲ್ಲಿಸಿಕೊಳ್ಳಿ, ನಂತರ ಮತ್ತೆ ಉಸಿರುಬಿಡಿ, ಬಿಡುವಾಗ ಸಹ ಸ್ವಲ್ಪ ಅಂದರೆ 1 ರಿಂದ 2 ಕ್ಷಣ ಹೊತ್ತು ನಿಲ್ಲಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕರಡಿ ಉಸಿರಾಟ
ಇದಕ್ಕಾಗಿ ನಿಮ್ಮ ಬೆರಳುಗಳ ಸಹಾಯ ಪಡೆಯಿರಿ. ಇದನ್ನು 4-5 ಬಾರಿ ಪುನರಾವರ್ತಿಸಿ. ಇದು ನಿಮ್ಮ ಮಗುವಿನ ಮನಸ್ಸನ್ನು ಶಾಂತ ಮಾಡಲು ಸಹಾಯ ಮಾಡುತ್ತದೆ.

ಜೇನು ನೊಣದ ಉಸಿರಾಟ
ನಿಮ್ಮ ಮಗುವನ್ನು ಮೊಣಕಾಲುಗಳಲ್ ಮೇಲೆ ಕುಳಿತುಕೊಳ್ಳಲು ತಿಳಿಸಿ. ಮೂಗಿನ ಮೂಲಕ ದೀರ್ಘವಾಗಿ ಉಸಿರಾಟವನ್ನು ತೆಗೆದುಕೊಳ್ಳಲಿ, ಇದು ಅವರ ಹೊಟ್ಟೆಯನ್ನು ತುಂಬಿಸಲಿ. ಈಗ ಮಗು ತಮ್ಮ ಹಣೆಯನ್ನು ನೆಲಕ್ಕೆ ಬಾಗಿಸಿ ಉಸಿರನ್ನು ಬಿಡಲಿ, ಬಿಡುವಾಗ ಜೇನುನೊಣದ ಸದ್ದಿನಂತೆ ಗುಂಯ್ ಎಂಬ ಸದ್ದನ್ನು ಮಾಡುತ್ತಾ, ಉಸಿರನ್ನು ಬಿಡಲಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೇನು ನೊಣದ ಉಸಿರಾಟ
ಜೇನು ನೊಣದ ಉಸಿರಾಟದ ರೀತಿಯ ಉಸಿರಾಟವು ನಿಮ್ಮ ಮಗುವಿನ ಬೆನ್ನು,ನರವ್ಯೂಹ ಮತ್ತು ಕುತ್ತಿಗೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಉಸಿರಾಟದ ಪ್ರಕ್ರಿಯೆಗಳನ್ನು ನಿಮ್ಮ ಮಗುವಿಗೆ ಅಭ್ಯಾಸ ಮಾಡಿಸಿ, ಇದರಿಂದ ನಿಮ್ಮ ಮಗುವಿಗೆ ಅತಿ ಹೆಚ್ಚು ಪ್ರಯೋಜನಗಳು ಆಗುತ್ತವೆ.



Click it and Unblock the Notifications
