For Quick Alerts
ALLOW NOTIFICATIONS  
For Daily Alerts

ಕೋಪಗೊಂಡ ಮಗುವಿನ ಜೊತೆ ಸಹನೆಯಿಂದ ವರ್ತಿಸಿ...

By Manu
|

ಮಕ್ಕಳು ದೇವರಿಗೆ ಸಮಾನವೆನ್ನುತ್ತಾರೆ. ಅವರ ಮನಸ್ಸಿನಲ್ಲಿ ಯಾವುದೇ ಕಲ್ಮಶವಿರುವುದಿಲ್ಲ. ಹೀಗಿದ್ದರೂ ಕೆಲವು ಪೋಷಕರು ತಮ್ಮ ಮಕ್ಕಳನ್ನು ದಂಡನೆಗೆ ಒಳಪಡಿಸಿ ಅವರ ವರ್ತನೆಯನ್ನು ತಿದ್ದಲು ಬಯಸುತ್ತಾರೆ. ಮಕ್ಕಳನ್ನು ಸರಿ ದಾರಿಗೆ ತರಲು ಇದು ಸೂಕ್ತ ವಿಧಾನವೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.

Essential Steps to Help Your Angry Child Stay in Control

ಮಕ್ಕಳು ಮನೆಯಲ್ಲಿ ಇರುವಾಗ ಕೆಲವೊಮ್ಮೆ ಕೋಪಗೊಂಡು ಏನಾದರೂ ಕೈಗೆ ಸಿಕ್ಕಿದರೆ ಅದನ್ನು ಎಸೆದು ಬಿಡಬಹುದು. ಇದು ನಿಮ್ಮ ಕೋಪವನ್ನು ಕೂಡ ಹೆಚ್ಚಿಸುತ್ತದೆ. ಆದರೆ ಇಂತಹ ವರ್ತನೆಯನ್ನು ಕಡಿಮೆ ಮಾಡಲು ನಾವು ಮೊದಲು ಮಗುವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅವರೊಂದಿಗೆ ಸಹನೆಯಿಂದ ವರ್ತಿಸುವುದು ತುಂಬಾ ಮುಖ್ಯ. ಮಕ್ಕಳು ವ್ಯಗ್ರಗೊಳ್ಳುವುದಕ್ಕೆ ಕಾರಣಗಳೇನು?

ಮಗು ಕೋಪಗೊಂಡಿರುವಾಗ ನೀವು ಅದಕ್ಕೆ ಉಪದೇಶ ಮಾಡಲು ಹೋದರೆ ಕೋಣದ ಮುಂದೆ ಕಿನ್ನಾರಿ ಬಾರಿಸಿದಂತಾಗುತ್ತದೆ. ಯಾಕೆಂದರೆ ಮಗು ಈ ಸಮಯದಲ್ಲಿ ನಿಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಇದರ ಬದಲು ನೀವು ಸಮಯ ನೋಡಿ ಮಗು ಸಾಮಾನ್ಯವಾಗಿದ್ದಾಗ ಅದರೊಂದಿಗೆ ಮಾತನಾಡಿ ಸಮಸ್ಯೆ ಏನೆಂದು ತಿಳಿದುಕೊಳ್ಳಿ. ಕೋಪವನ್ನು ಹೇಗೆ ನಿಯಂತ್ರಿಸಬೇಕು ಮತ್ತು ಕೋಪ ಬಂದಾಗ ಏನು ಮಾಡಬೇಕು ಎನ್ನುವುದನ್ನು ಹೇಳಿಕೊಡಿ. ಮಕ್ಕಳ ಕೋಪದೊಂದಿಗೆ ವ್ಯವಹರಿಸಲು 5 ಮಾರ್ಗದರ್ಶಿ ಸೂತ್ರಗಳು

ಮಗು ದೊಡ್ಡವನಾದಾಗ ಯಾವ ರೀತಿಯಿಂದ ವರ್ತಿಸಬೇಕು. ಜನರು ಅದರ ವರ್ತನೆಯನ್ನು ನೋಡಿ ಏನು ಹೇಳುತ್ತಾರೆ. ಕೋಪದಿಂದ ಏನೆಲ್ಲಾ ಅಪಾಯವಾಗುತ್ತದೆ ಎನ್ನುವ ಬಗ್ಗೆ ನೀವು ಮಗುವಿಗೆ ತಿಳಿಹೇಳಬೇಕು. ಇದನ್ನು ತಿಳಿದುಕೊಂಡರೆ ಮುಂದೆ ಕೋಪ ಬಂದಾಗ ಅದು ನಿಯಂತ್ರಿಸಲು ಪ್ರಯತ್ನಿಸುತ್ತದೆ.

ಮಗು ಯಾಕಾಗಿ ಇಷ್ಟು ಕೋಪಗೊಳ್ಳುತ್ತಿದೆ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಗಮನ ಸೆಳೆಯಲು ಮಗು ಈ ರೀತಿ ಮಾಡುತ್ತಿದೆಯಾ? ಕಡೆಗಣಿಸಲಾಗಿದೆ ಎನ್ನುವ ಭಾವನೆ ಮಗುವಿನಲ್ಲಿ ಮೂಡಿದೆಯಾ? ಇಷ್ಟು ಕೋಪಗೊಳ್ಳಲು ಕಾರಣವೇನು?

ಆರೋಗ್ಯ ಸಮಸ್ಯೆ ಇದೆಯಾ ಅಥವಾ ಶಾಲೆಯಲ್ಲಿ ಮಗುವನ್ನು ಯಾರಾದರೂ ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆಯಾ ಎಂದು ನೋಡಿಕೊಳ್ಳಬೇಕು. ಕೋಪ ನಿಯಂತ್ರಿಸುವ ಪಾಠ ಹೇಳುವ ಮೊದಲು ಕಾರಣಗಳನ್ನು ಹುಡುಕಿ. ಇದರ ಬಳಿಕ ಮಗುವಿಗೆ ತಿಳಿಹೇಳಿದರೆ ಸಮಸ್ಯೆ ಬಗೆಹರಿಯುವುದು.

English summary

Essential Steps to Help Your Angry Child Stay in Control

Most of the parents try to change their kids' behaviour when they are displaying turbulent behaviour. For example, when a kid is angry and is throwing things around, trying to change him that very moment may fail. In fact, when a kid is overwhelmed with certain emotions, your preaching might not work.Instead of that, sit with your child when things are normal and train him to deal with anger or other emotions.
X
Desktop Bottom Promotion