Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಹಠಮಾರಿತನ ಸ್ವಭಾವಕ್ಕೆ ಮೀನು ಸಹಕಾರಿಯೇ?
ಮಕ್ಕಳು ಹಠಮಾರಿಗಳಾಗಿರುವುದು ಪಾಲಕರಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಅತಿಯಾದ ಮೊಂಡುತನ, ಕೇಳಿದ್ದೆಲ್ಲಾ ಬೇಕು ಎಂಬ ಹಠ, ಕೋಪಗೊಳ್ಳುವುದು, ಕೈಗೆ ಸಿಕ್ಕಿದ್ದನ್ನೆಲ್ಲಾ ಬಿಸಾಡುವುದು ಹೀಗೆ ಮಕ್ಕಳು ಬೇಗನೇ ವ್ಯಗ್ರರಾಗಿಬಿಡುತ್ತಾರೆ. ಹೋದಲ್ಲೆಲ್ಲಾ ಮಕ್ಕಳ ಈ ಸ್ವಭಾವದಿಂದ ಪಾಲಕರು ಮುಜುಗರವನ್ನು ಅನುಭವಿಸುತ್ತಾರೆ. ಅವರಿಗೆ ಹೊಡೆದಷ್ಟೂ ಬೈಯ್ದಷ್ಟೂ ಮಕ್ಕಳು ಇನ್ನಷ್ಟು ಮೊಂಡಾಟವನ್ನು ತೋರ್ಪಡಿಸುತ್ತಾರೆ.

ತಮ್ಮ ಓರಗೆಯ ಮಕ್ಕಳು ಈ ರೀತಿಯ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದರೆ ಮಕ್ಕಳು ಇಂತಹ ನಡವಳಿಕೆಗೆ ಬೇಗನೇ ಬಲಿಯಾಗುತ್ತಾರೆ. ಹಾಗಿದ್ದರೆ ಅವರ ಈ ಸ್ವಭಾವವನ್ನು ತಿದ್ದಲು ಓಲೈಸುವಿಕೆ ಉತ್ತಮ ಸಲಹೆಯಾಗಿದ್ದರೆ ವೈದ್ಯ ಲೋಕ ಹೇಳುವಂತೆ ಒಮೇಗಾ - 3 ಆಸಿಡ್ ಉಳ್ಳ ಆಹಾರ ಪದಾರ್ಥ ಪರಿಣಾಮಕಾರಿ ಎಂದು ತಿಳಿಸಿದೆ.
ಒಮೇಗಾ - 3 ಫ್ಯಾಟಿ ಆಸಿಡ್ ಉಳ್ಳ ಆಹಾರಗಳಿಂದ ಮಕ್ಕಳ ಕೋಪೋದ್ರೇಕವನ್ನು ಕಡಿಮೆ ಮಾಡಬಹುದು ಎಂಬುದಾಗಿ ಅಧ್ಯಯನ ತಿಳಿಸಿದ್ದು ಮಕ್ಕಳಲ್ಲಿ ಶಾಂತತೆಯನ್ನು ಉಂಟುಮಾಡಲು ಇದು ಸಹಕಾರಿಯಾಗಿದೆ ಎಂಬುದಾಗಿ ತಿಳಿಸಿದೆ. ಸಮುದ್ರ ಆಹಾರಗಳಾದ ಟ್ಯೂನಾ ಮತ್ತು ಮೀನು ಒಮೇಗಾ-3 ಫ್ಯಾಟಿ ಆಸಿಡ್ ಅನ್ನು ಒಳಗೊಂಡಿರುತ್ತವೆ. ಅಂತೆಯೇ ಕೆಲವೊಂದು ನಟ್ಸ್ಗಳಲ್ಲೂ ಈ ಅಂಶವಿದೆ.
ಒಮೇಗಾ - 3 ಆಸಿಡ್ ಆಹಾರಗಳು ಮಕ್ಕಳ ಕೋಪವನ್ನು ನಿಯಂತ್ರಿಸಿ ಅವರನ್ನು ಶಾಂತಗೊಳಿಸುತ್ತದೆ ಎಂಬುದಾಗಿ ತಿಳಿಸಿದೆ. ಅವರ ವರ್ತನೆಗೆ ಅನುಗುಣವಾದ ಆಹಾರವನ್ನು ಮಕ್ಕಳು ಸೇವಿಸಿದಲ್ಲಿ ಅವರ ಕೋಪದ ತೀವ್ರತೆಯು ಶಾಂತವಾಗುತ್ತದೆ ಎಂಬುದಾಗಿ ಅಧ್ಯಯನ ತಿಳಿಸಿದೆ.
ಆಹಾರಗಳಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ 3 ತಿಂಗಳ ನಂತರ ಮಕ್ಕಳಲ್ಲಿ ಬದಲಾವಣೆಯನ್ನು ಸಂಶೋಧಕರು ಕಂಡುಕೊಂಡಿದ್ದಾರೆ. 11 ವರ್ಷಗಳ 300 ಮಕ್ಕಳನ್ನು ಈ ಪರೀಕ್ಷೆಗೆ ಒಳಪಡಿಸಲಾಗಿದ್ದು ಅಧ್ಯಯನದ ಮುನ್ನ ಅವರಲ್ಲಿ ಕೋಪದ ತೀವ್ರತೆ ಅಧಿಕವಾಗಿತ್ತು.
ಅವರಿಗೆ ಬೇರೆ ಬೇರೆ ವಿಧಗಳಲ್ಲಿ ಈ ಆಸಿಡ್ಗಳುಳ್ಳ ಆಹಾರಗಳನ್ನು ನೀಡಲಾಯಿತು ಮತ್ತು ನಡವಳಿಕೆಯನ್ನು ಪರೀಕ್ಷಿಸಲಾಯಿತು. ಅಧ್ಯಯನದ ನಂತರ, ಮಕ್ಕಳ ಬದಲಾವಣೆಯಲ್ಲಿ ಒಮೇಗಾ 3 ಫ್ಯಾಟಿ ಆಸಿಡ್ ಬದಲಾವಣೆಯನ್ನು ಉಂಟುಮಾಡಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇದಲ್ಲದೆ ಅರಿವಿನ ವರ್ತನೆಯ ಚಿಕಿತ್ಸೆಯೊಂದಿಗೆ ಸೇರಿಸಿದಾಗ, ಪರಿಣಾಮಗಳು ಇನ್ನಷ್ಟು ಉತ್ತಮವಾಯಿತು. ಮಕ್ಕಳಲ್ಲಿರುವ ಆಕ್ರಮಣಶೀಲತೆ ಮಟ್ಟ ನಿಯಂತ್ರಣಕ್ಕೆ ಬಂದಿತ್ತು.



Click it and Unblock the Notifications




