Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರೀತಿ ಮಾತಿನಿಂದ ಮಗುವಿನ ಮನಸ್ಸು ಗೆಲ್ಲಲು ಪ್ರಯತ್ನಿಸಿ
ಸಾಮಾನ್ಯವಾಗಿ ಮಕ್ಕಳು ಶಾಲೆಯಲ್ಲಿ ಪಾಠಕ್ಕಿಂತಲೂ ಒಡನಾಡಿಗಳ ಮೂಲಕ ಇತರ ವಿಷಯಗಳನ್ನು ಕಲಿಯುವುದೇ ಹೆಚ್ಚು. ಮುಖ್ಯವಾಗಿ ಭಾಷೆಯಲ್ಲಿ ಬೈಗುಳ ಮತ್ತು ಕೆಟ್ಟಪದಗಳ ಪ್ರಯೋಗ. ಯಾವುದೇ ದೇಶದಲ್ಲಿಯೂ ಇದು ಸಾಮಾನ್ಯವಾಗಿದೆ. ಇದರ ಜೊತೆಗೇ ಸಹವಾಸದೋಶದಿಂದ ಕೆಲವು ಕೆಟ್ಟ ಅಭ್ಯಾಸಗಳನ್ನೂ ಕಲಿಯುತ್ತಾರೆ. ಬರಬರುತ್ತಾ ಈ ಚಟಗಳು ಅವರಿಗೆ ಇಷ್ಟವಾಗತೊಡಗುತ್ತವೆ. ಆದರೆ ಮಕ್ಕಳು ತಾವು ಕಲಿತ ವಿದ್ಯೆಗಳನ್ನು ಪಾಲಕರ ಮುಂದೆ ತೋರ್ಪಡಿಸುವುದೇ ಇಲ್ಲ. ಶಾಲೆಗಳಲ್ಲಿ ಆಟ, ಪಾಠದ ಜೊತೆ ಧ್ಯಾನಕ್ಕೂ ಪ್ರಾಮುಖ್ಯತೆ ಇರಲಿ
ಒಮ್ಮೆ ಇದರ ಪ್ರಯೋಗ ಖಯಾಲಿಯಾಯಿತೆಂದರೆ ಸಾಕು, ಎಲ್ಲಾ ದುರ್ಗುಣಗಳು ಹೊರಬರುತ್ತವೆ. ಇದು ಮಕ್ಕಳಲ್ಲಿ ಹಠಮಾರಿತನವನ್ನು ಹುಟ್ಟುಹಾಕುತ್ತದೆ. ಈ ಸ್ಥಿತಿಗೆ ಹಿರಿಯರು ಹಾದಿ ತಪ್ಪುವುದು ಎಂದು ಕರೆದಿದ್ದಾರೆ. ಈ ಹೊತ್ತಿನಲ್ಲಿ ಪಾಲಕರು ಅಪಾರ ತಾಳ್ಮೆ ವಹಿಸಿ ನಿಧಾನವಾಗಿ ತಮ್ಮ ಮಕ್ಕಳ ವಿಶ್ವಾಸವನ್ನು ಗೆದ್ದು ನಿಧಾನವಾಗಿ ಸರಿದಾರಿಗೆ ತರಬೇಕಾಗುತ್ತದೆ. ಮಕ್ಕಳಿಗೆ ಆಟ-ಪಾಠದ ಜೊತೆಗೆ ತಾಳ್ಮೆ ಕೂಡ ಅತ್ಯಗತ್ಯ
ಒಂದು ವೇಳೆ ನಿಮ್ಮ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಅಥವಾ ಹೊರಗಿನಿಂದ ದೂರುಗಳು ಬಂದಿವೆಯೇ? ಹಾಗಾದರೆ ನೀವು ಸತರ್ಕರಾಗಲು ಇದೇ ಸಮಯವಾಗಿದೆ. ಏನು ಮಾಡಬೇಕೆಂದು ತೋಚುತ್ತಿಲ್ಲವೇ? ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ..

ಮಗುವನ್ನು ಗಮನಿಸಿ ಮತ್ತು ಆತನ/ಆಕೆಯ ಮಾತನ್ನು ಆಲಿಸಿ
ಸಾಮಾನ್ಯವಾಗಿ ಮಕ್ಕಳ ಈ ಅಭ್ಯಾಸಕ್ಕೆ ಗಮನ ಸೆಳೆಯುವುದೇ ಕಾರಣವಾಗಿರುತ್ತದೆ. ಮಗು ಏನಾದರೂ ಹೇಳಬಯಸಿದರೆ ಅವನಿಗೆ/ಅವಳಿಗೆ ತನ್ನ ಮಾತನ್ನು ಪೂರ್ಣವಾಗಿ ಹೇಳಲು ಅವಕಾಶ ಮಾಡಿಕೊಡಿ. ಅವರ ಮಾತನ್ನು ಗಮನವಿಟ್ಟು ಆಲಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಗುವನ್ನು ಗಮನಿಸಿ ಮತ್ತು ಆತನ/ಆಕೆಯ ಮಾತನ್ನು ಆಲಿಸಿ
ಇದು ಅವರಲ್ಲಿ ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ. ತಮ್ಮ ಮಾತನ್ನು ತಂದೆ ತಾಯಿಯರು ಕೇಳುವುದಿಲ್ಲ ಎಂದಾದರೆ ಅವರು ಹೆಚ್ಚು ಹೆಚ್ಚು ಹಠಮಾರಿಗಳಾಗುತ್ತಾರೆ. ನೀವು ಅವರ ಮಾತನ್ನು ಕೇಳಿದಿರಿ ಎಂಬ ಭಾವನೆ ಬಂದರೆ ಸಾಕು, ಹಟಮಾರಿತನ ಮುಕ್ಕಾಲು ಭಾಗ ವಾಸಿಯಾಗುತ್ತದೆ.

ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಬೇಡಿ
ಒಂದು ವೇಳೆ ನಿಮ್ಮ ಮಗುವಿನ ಮಾತುಗಳಲ್ಲಿ ಕೆಟ್ಟಪದ ಅಥವಾ ಬೈಗುಳ ಬಂದರೆ ತಕ್ಷಣವೇ ಬಾರಿಸುವುರು, ಬೈಯುವುದು ಮೊದಲಾದ ಯಾವುದೇ ಪ್ರತಿಕ್ರಿಯೆ ನೀಡಬೇಡಿ. ನಿಮ್ಮ ಪ್ರತಿಕ್ರಿಯೆ ಅವರ ಈ ದುರ್ಗುಣಗಳನ್ನು ಹೆಚ್ಚಿಸುತ್ತಾ ಹೋಗುತ್ತದೆ. ಬದಲಿಗೆ ಅವರ ಮಾತುಗಳನ್ನು ಸಾವಧಾನದಿಂದ ಆಲಿಸಿ ಎಲ್ಲಾ ಮುಗಿದ ಬಳಿಕ ಈ ಮಾತನ್ನು ನಿನಗೆ ಯಾರು ಹೇಳಿ ಕೊಟ್ಟರು, ಇದರ ಅರ್ಥ ನಿನಗೆ ಗೊತ್ತೇ? ನೀನಾಡುವ ಮಾತು ತಪ್ಪು ಅರ್ಥ ಬರುತ್ತದೆ, ಇದರಿಂದ ಯಾರಿಗಾದರೂ ಮನಸ್ಸಿಗೆ ನೋವಾಗಬಹುದು, ನನಗೆ ಯಾರಾದರೂ ಹೀಗೆ ಬೈದರೆ ನೀನು ಸುಮ್ಮನಿರುತ್ತೀಯಾ? ಎಂಬ ಮಾತುಗಳಿಂದ ಓಲೈಸಿ. ಬಹುತೇಕ ಮಕ್ಕಳು ಪಾಲಕರ ಈ ನಲ್ಮೆಯ ಮಾತುಗಳಿಗೆ ಕರಗಿ ಕೂಡಲೇ ಬದಲಾಗಿಬಿಡುತ್ತಾರೆ.

ತಾಳ್ಮೆ ವಹಿಸಿ
ಹಾದಿ ತಪ್ಪಿರುವ ಮಗುವನ್ನು ಸರಿದಾರಿಗೆ ತರಲು ಬಲವಂತ ಖಂಡಿತಾ ಸಲ್ಲದು. ಈ ಹೊತ್ತಿನಲ್ಲಿ ಪಾಲಕರು ಅಪಾರವಾದ ತಾಳ್ಮೆ ವಹಿಸಬೇಕು. ನಿಮ್ಮ ಮಗುವಿನ ಗಮನವನ್ನು ಬೇರೆಡೆಗೆ ಹರಿಸಲು ಯತ್ನಿಸಿ. ಹೊಸ ವಿಷಯವೊಂದನ್ನು ಪ್ರಸ್ತಾಪಿಸಿ (ಉದಾಹರಣೆಗೆ ಆಶುಭಾಷಣ) ನೀವು ಚಿಕ್ಕಂದಿನಲ್ಲಿ ಈ ವಿದ್ಯೆಯಲ್ಲಿ ಪಾರಾಂಗತರಾಗಿದ್ದು ನಿಮ್ಮ ಮಗುವೂ ಇದರಲ್ಲಿ ಖಂಡಿತಾ ಪಾರಾಂಗತವಾಗಿಯೇ ಇರುತ್ತದೆ, ಬೇಕಿದ್ದರೆ ಪ್ರಯತ್ನಿಸಿ ನೋಡೋಣ ಎಂದು ಓಲೈಸಿ. ಇದಕ್ಕೆ ಬಹುಮಾನವಾಗಿ ಚಾಕಲೇಟು ಕ್ಯಾಂಡಿಗಳನ್ನೂ ನೀವು ಘೋಷಿಸಬಹುದು. ಆದರೆ ಇದೇ ಅಭ್ಯಾಸವಾಗದಿರಲಿ. ನೆನಪಿರಲಿ, ನಿಮ್ಮ ಮಗು ಹಾದಿ ತಪ್ಪಲು ಹೇಗೆ ಕೆಟ್ಟ ಕಾರಣಗಳು ಪ್ರೇರಣೆಯೋ ಅಂತೆಯೇ ಸರಿದಾರಿಗೆ ಬರಲು ಒಳ್ಳೆಯ ಕಾರಣಗಳೂ ಪ್ರೇರಣೆಯಾಗಲಿವೆ. ಇದು ನಿಮ್ಮ ಮಗುವಿನಲ್ಲಿದ್ದ ಸುಪ್ತ ಪ್ರತಿಭೆಯನ್ನೂ ಹೊರತರಬಹುದು.

ಆಪ್ತಸಲಹೆ ನೀಡಿ ಪ್ರೇರೇಪಿಸಿ
ಹಾದಿ ತಪ್ಪಿರುವ ಮಗುವಿನ ಆರ್ಭಟ ಕೊಂಚ ಕಡಿಮೆಯಾದ ಬಳಿಕ ನಿಧಾನವಾಗಿ ನಿಮ್ಮ ತೆಕ್ಕೆಯಲ್ಲಿ ತೆಗೆದುಕೊಂಡು ಈ ಕೆಟ್ಟ ಚಾಳಿ ಅಥವಾ ಪದಗಳ ದುರ್ಗುಣಗಳ ಬಗ್ಗೆ ತಿಳಿಸಿ. ನಿಮ್ಮ ಹಿರಿಯರು
ಮಾತನಾಡುವಾಗ ಎಂದಾದರೂ ಇಂತಹ ಪದಗಳನ್ನು ಉಪಯೋಗಿಸಿದ್ದುದು ನೋಡಿದ್ದೀಯಾ? ನೀನೂ ಅವರಂತೆ ಉತ್ತಮ ವ್ಯಕ್ತಿಯಾಗಬೇಕಾದರೆ ಅವರು ಮಾತನಾಡುವಂತಹ ಮಾತು, ಅಚರಿಸುವಂತಹ ಗುಣಗಳನ್ನು ಕಲಿಯಬೇಕಲ್ಲವೇ, ಎಂಬ ಧನಾತ್ಮಕ ಮಾತುಗಳಿಂದ ಪ್ರೇರೇಪಿಸಿ.

ಆಪ್ತಸಲಹೆ ನೀಡಿ ಪ್ರೇರೇಪಿಸಿ
ಯಾವುದಾದರೊಂದು ವಿಷಯವೊಂದನ್ನು ನೀಡಿ ಸ್ಥಳದಲ್ಲಿಯೇ ಚಿಕ್ಕ ಭಾಷಣವನ್ನು ಮಾಡುವಂತೆ ಪ್ರೇರೇಪಿಸಿ. ಮಗುವಿಗೆ ಯಾವ ಕ್ರಿಯೆ ಇಷ್ಟವಾಗುತ್ತದೆ ಎಂದು ಗಮನಿಸಿ, ಅದನ್ನು ಹೆಚ್ಚು ಹೆಚ್ಚಾಗಿ ಪ್ರೇರೇಪಿಸಿ.



Click it and Unblock the Notifications