Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಚಳಿಗಾಲದಲ್ಲಿ ನಿಮ್ಮ ಮಗುವಿನ ಆಹಾರ ಕ್ರಮ ಹೀಗಿರಲಿ
ಚಳಿಗಾಲ ಬಂದೇ ಬಿಟ್ಟಿತು, ಆಗಲೇ ವಾತಾವರಣದಲ್ಲಿ ವಿಪರೀತ ಬದಲಾವಣೆಗಳು ಆಗುತ್ತಿವೆ. ಬೆಳಗ್ಗೆ ಎದ್ದ ಕೂಡಲೆ ಮಂಜು ಮುಸುಕಿದ ವಾತಾವರಣ ನಮಗೆ ಗುಡ್ ಮಾರ್ನಿಂಗ್ ಹೇಳುತ್ತದೆ. ಈ ಸಮಯ ಎಷ್ಟು ಆಹ್ಲಾದಕರವಾಗಿರುತ್ತದೆಯೋ, ಅಷ್ಟೇ ಅಪಾಯಕಾರಿ ಸಹ. ಅದರಲ್ಲೂ ಮಕ್ಕಳು ಇರುವ ಮನೆಗಳಲ್ಲಿ ಇದು ಒಂದು ರೀತಿಯ ಭೀತಿಯನ್ನು ಹುಟ್ಟಿಸುತ್ತದೆ. ಏಕೆಂದರೆ ಹೇಳಿ-ಕೇಳಿ ಮಕ್ಕಳು ಹೊರಗೆ ಆಟವಾಡಲು ಇಷ್ಟಪಡುತ್ತಾರೆ. ಆದರೆ ಅವರನ್ನು ಈ ಮಂಜು ಅಥವಾ ಇಬ್ಬನಿ ಬೀಳುವ ಸಮಯದಲ್ಲಿ ಹೊರಗೆ ಆಡಲು ಬಿಟ್ಟರೆ ಅವರ ಆರೋಗ್ಯವು ಹದಗೆಡುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ.
ಏಕೆಂದರೆ ಚಳಿಗಾಲವು ಶೀತ ಮತ್ತು ಫ್ಲೂ ಮುಂತಾದ ಕಾಯಿಲೆಗಳನ್ನು ತಂದಿಡುವ ಕಾಲವಾಗಿರುತ್ತದೆ. ಒಂದು ವೇಳೆ ಮಕ್ಕಳು ಈ ಕಾಯಿಲೆಗೆ ತುತ್ತಾದರೆ ಅದರಿಂದ ಸಮಸ್ಯೆ ಎದುರಿಸುವುದು ಪೋಷಕರು ತಾನೇ. ಅದಕ್ಕಾಗಿ ಚಿಕಿತ್ಸೆಗಿಂತ ನಿಯಂತ್ರಣವೇ ಉತ್ತಮ ಎಂಬುದನ್ನು ಮೊದಲು ಪರಿಗಣಿಸಿ. ಈ ಚಳಿಗಾಲದಲ್ಲಿ ಕಾಯಿಲೆಗೆ ತುತ್ತಾಗದಂತೆ ನಿಮ್ಮ ಮಗುವನ್ನು ಕಾಪಾಡಿ.
ಚಳಿಗಾಲದಲ್ಲಿ ಮಕ್ಕಳು ಕಾಯಿಲೆಗೆ ತುತ್ತಾಗದಂತೆ ಕಾಪಾಡಲು ಹಲವಾರು ಮಾರ್ಗಗಳಿವೆ. ಅದರಲ್ಲಿ ಕೆಲವೊಂದು ಮಾರ್ಗಗಳನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ. ಇವು ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹೀಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಮಕ್ಕಳು ಕಾಯಿಲೆಗಳಿಗೆ ತುತ್ತಾಗುವುದಿಲ್ಲ ಎಂಬ ವಿಚಾರ ಸರ್ವೇಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಬನ್ನಿ ಕಾಯಿಲೆಗಳಿಂದ ನಿಮ್ಮ ಮಗುವನ್ನು ಕಾಪಾಡುವ, ಮಗುವಿಗೆ ರಕ್ಷಣಾ ಕವಚದಂತೆ ಕಾಪಾಡುವ ಅಂಶಗಳತ್ತ ಒಂದು ಪಕ್ಷಿ ನೋಟ ಹರಿಸಿ ಬರೋಣ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ನೀಡಿ
ಪ್ರತಿ ದಿನ ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನು ನೀಡಿ. ವಿಶೇಷವಾಗಿ ಈ ಕಾಲದಲ್ಲಿ ವಿಟಮಿನ್ ಡಿ ಮತ್ತು ವಿಟಮಿನ್ ಸಿ ಕೊರತೆ ನಿಮ್ಮ ಮಗುವನ್ನು ಕಾಡಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ನೀಡಿ
ಅದಕ್ಕಾಗಿ ಈ ಎರಡು ವಿಟಮಿನ್ ಇರುವಂತಹ ಆಹಾರವನ್ನು ನಿಮ್ಮ ಮಗುವಿಗೆ ನೀಡಿ. ಇದರ ಜೊತೆಗೆ ಸ್ವಲ್ಪ ಪ್ರೊ-ಬಯೋಟಿಕ್/ಪ್ರಿ-ಬಯೋಟಿಕ್ ಅನ್ನು ಸಹ ನೀಡಿ. ಇವು ನಿಮ್ಮ ಮಗುವಿನ ಆರೋಗ್ಯವನ್ನು ಸ್ಥಿರವಾಗಿ ಕಾಯ್ದುಕೊಳ್ಳಲು ನೆರವಾಗುತ್ತವೆ. ಹೀಗೆ ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.

ಸ್ವಲ್ಪ ಸತುವನ್ನು ನೀಡಿ
ಸತುವನ್ನು ಸತತ 5 ತಿಂಗಳ ಕಾಲ ತೆಗೆದುಕೊಂಡರೆ ನಿಮ್ಮ ಮಗುವಿನ ದೇಹದಲ್ಲಿ ವೈರಸ್ ಇನ್‌ಫೆಕ್ಷನ್‌ಗಳಿಂದ ಸಂಭವಿಸುವ ಕಾಯಿಲೆಗಳನ್ನು ತಡೆಗಟ್ಟುವ ಒಂದು ನಿರೋಧಕ ಶಕ್ತಿ ತಾನೇ ತಾನಾಗಿ ಬರುತ್ತದೆ. ಎಷ್ಟು ಪ್ರಮಾಣದ ಸತುವನ್ನು ನಿಮ್ಮ ಮಗುವಿಗೆ ನೀಡಬೇಕು ಎಂಬುದಕ್ಕಾಗಿ ನಿಮ್ಮ ಮಕ್ಕಳ ತಜ್ಞರ ಬಳಿ ಸಲಹೆಯನ್ನು ಪಡೆಯಿರಿ. ಸತುವನ್ನು ಸ್ವಾಭಾವಿಕವಾಗಿ ಓಯಿಸ್ಟರ್, ಕಿತ್ತಳೆ ಹಣ್ಣು, ಗೋಡಂಬಿ, ಕುಂಬಳಕಾಯಿ ಬೀಜ, ಕುರಿ ಮಾಂಸ ಇತ್ಯಾದಿಗಳಲ್ಲಿ ಪಡೆಯಬಹುದು.

ಸಕ್ಕರೆ ಸೇವನೆಯಲ್ಲಿ ನಿಯಂತ್ರಣವನ್ನು ಇರಿಸಿಕೊಳ್ಳಿ
ಸಕ್ಕರೆಯು ರೋಗ ನಿರೋಧಕ ಶಕ್ತಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅಧಿಕ ಪ್ರಮಾಣದ ಸಕ್ಕರೆಯ ಸೇವನೆಯು ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ, ಆ ಮೂಲಕ ಮಗುವಿಗೆ ವೈರಸ್‌ನಿಂದ ಹರಡುವ ಕಾಯಿಲೆಗಳಾದ ಶೀತ ಮತ್ತು ಫ್ಲೂ ಅನ್ನು ತರುತ್ತದೆ.

ಬೋನ್ ಬ್ರೋತ್ ಅಥವಾ ಮೂಳೆಗಳ ಸೂಪ್
ಚಳಿಗಾಲದಲ್ಲಿ ನಿಮ್ಮ ಮಗುವಿಗೆ ಬರುವ ವೈರಸ್ ಸಂಬಂಧಿತ ಕಾಯಿಲೆಗಳನ್ನು ನಿವಾರಿಸಲು ಇರುವ ಉತ್ತಮ ಮಾರ್ಗಗಳಲ್ಲಿ ಇದು ಸಹ ಒಂದು. ನಿಮ್ಮ ಮಗುವಿಗೆ ಕೋಳಿ ಅಥವಾ ಕುರಿ ಮಾಂಸದ ಮೂಳೆಗಳಿಂದ ತಯಾರಿಸಿದ ಸೂಪ್ ಅನ್ನು ನೀಡುವ ಮೂಲಕ, ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದು ನಿಮ್ಮ ಮಗುವಿಗೆ ಅಗತ್ಯವಾದ ರಕ್ಷಣೆಯನ್ನು ನೀಡುತ್ತದೆ.



Click it and Unblock the Notifications