Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಮಕ್ಕಳ ಅತಿಸಾರದ ನಿವಾರಣೆಗೆ 7 ಸರಳ ಮನೆ ಮದ್ದುಗಳು
Kids
oi-Staff
By Madhumati Hiremath
ನಿಮ್ಮ ಮಗು ಆಗಾಗ್ಗೆ ಅತಿಸಾರಕ್ಕೆ ತುತ್ತಾಗುತ್ತಿದೆಯೇ? ಅದು ನಿಜಕ್ಕೂ ಮಕ್ಕಳಿಗೆ ತುಂಬಾ ಕಷ್ಟದ ಪರಿಸ್ಥಿತಿ. ಪಾಲಕರೂ ಕೂಡ ಪದೇಪದೇ ಉಂಟಾಗುವ ಅತಿಸಾರದಿಂದ ರೋಸಿ ಹೋಗಿರುತ್ತಾರೆ. ಇದನ್ನು ಪರಿಹರಿಸಲು ಮನೆಮದ್ದು ಏನಾದರೂ ಇದೆಯೇ ಎಂದು ಆಲೋಚಿಸುತ್ತಿರುತ್ತಾರೆ. ಅಂತವರಿಗಾಗಿಯೇ ಈ ಲೇಖನ. ಅತಿಸಾರದಿಂದ ನಿಮ್ಮ ಮಗುವನ್ನು ಮುಕ್ತಿಗೊಳಿಸುವಂತಹ, ಆಶ್ಚರ್ಯಕರ ರೀತಿಯಲ್ಲಿ ಪರಿಹಾರ ನೀಡುವಂತಹ ಏಳು ಸರಳ ಮನೆಮದ್ದುಗಳನ್ನು ಕೆಳಗೆ ನೀಡಲಾಗಿದೆ. ತಿಳಿದಿಕೊಳ್ಳಿ, ಅನುಸರಿಸಿ ಹಾಗು ನಿಮ್ಮ ಮಗುವನ್ನು ಅತಿಸಾರದ ಹಿಡಿತದಿಂದ ಮುಕ್ತಗೊಳಿಸಿ.
ಮೆಂತ್ಯೆ

ಮೆಂತ್ಯೆ, ಅತಿಸಾರಕ್ಕೆ ಅತ್ಯುತ್ತಮ ಮನೆಮದ್ದುಗಳಲೊಂದು. ಇದರಲ್ಲಿ ಸಮೃದ್ಧವಾಗಿರುವ ಲೋಳೆ ಅಂಶ ಅತಿಸಾರದಿಂದ ಬಳಲುತ್ತಿರುವ ಮಗುವಿಗೆ ನೈಸರ್ಗಿಕ ಚಿಕಿತ್ಸೆ ನೀಡುತ್ತದೆ. ಮೆಂತ್ಯೆ ಬೇಧಿಯನ್ನು ಗಟ್ಟಿಯಾಗಿಸುವ ಮೂಲಕ ತೆಳುವಾದ ಮಲದಿಂದ ಉಂಟಾಗುವ ಕಿರಿಕಿರಿಯನ್ನು ನಿವಾರಿಸಲು ಸಹಕಾರಿಯಾಗಿದೆ. ಉತ್ತಮ ಫಲಿತಾಂಶಕ್ಕಾಗಿ, ಒಂದು ಕಪ್ ಮೊಸರಿಗೆ ಒಂದು ಟೀ ಚಮಚ ಮೆಂತ್ಯೆಯನ್ನು ಸೇರಿಸಿ, ದಿನದಲ್ಲಿ ಎರಡು ಬಾರಿಯಂತೆ ಮೂರು ದಿನ ತಿನಿಸಬೇಕು.
ಶುಂಠಿ
ಶುಂಠಿ ಜೀರ್ಣಕ್ರಿಯೆಗೆ ಮತ್ತು ಜೀರ್ಣಾಂಗಗಳ ಆರೋಗ್ಯ ಪಾಲನೆಗೆ ತುಂಬಾ ಒಳ್ಳೆಯದು. ಇದು ಅತಿಸಾರದ ಚಿಕಿತ್ಸೆಗೆ ಆರೋಗ್ಯಕರ ಮತ್ತು ಪರಿಣಾಮಕಾರಿ ಆಯ್ಕೆಯಾಗಿದೆ. ಆದರೆ, ರಕ್ತದೊತ್ತಡದಿಂದ ನರಳುವ ಜನರು ಶುಂಠಿ ಚಿಕಿತ್ಸೆಯನ್ನು ಪಡೆಯಬಾರದು. ಶಿಶುಗಳಿಗೆ ತಮ್ಮದೇ ಆದ ಪ್ರತ್ಯೇಕ ಹಾಸಿಗೆ ಏಕೆ ಅತ್ಯವಶ್ಯಕ?
ಸೇಬು ಹಣ್ಣಿನ ಸೈಡರ್ ವಿನೇಗರ್
ಸೇಬು ಹಣ್ಣಿನ ಸೈಡರ್ ವಿನೇಗರ್ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಅನೇಕ ಆಂಟಿ ಬ್ಯಾಕ್ಟೀರಿಯ ಗುಣಗಳನ್ನು ಹೊಂದಿದ್ದು ಅವು ಅತಿಸಾರಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡಲು ಸಹಕಾರಿಯಾಗಿವೆ. ಸೇಬು ಹಣ್ಣಿನ ಸೈಡರ್ ವಿನೇಗರ್ ಪೆಕ್ಟಿನ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಈ ರಾಸಾಯನಿಕವು ರಕ್ಷಣಾತ್ಮಕ ಕವಚವಾಗಿ ವರ್ತಿಸಿ ಕರುಳಿನ ಸೆಳೆತವನ್ನು ನಿವಾರಿಸುವಲ್ಲಿ ಫಲಕಾರಿಯಾಗಿದೆ .
ಬಾಳೆಹಣ್ಣು
ಬಾಳೆಹಣ್ಣುಗಳು ನೀರಿನಂಶದ ಮಲವನ್ನು ಗಟ್ಟಿಯಾಗಿಸಲು ಸಹಾಯಕವಾಗಿವೆ. ಬಾಳೆಹಣ್ಣಿನಲ್ಲಿ ಸಹ ಸೇಬು ಹಣ್ಣಿನ ಸೈಡರ್ ವಿನೇಗರ್‍ನಂತೆ, ಪೆಕ್ಟಿನ್ ಅಂಶವಿದೆ. ಪೆಕ್ಟಿನ್ ರಕ್ಷಣಾತ್ಮಕ ಪದರದಂತೆ ವರ್ತಿಸಿ ಕರುಳಿನ ಸೆಳೆತವನ್ನು ನಿವಾರಿಸುತ್ತದೆ. ಇದರಿಂದಾಗಿ ದ್ರವ ರೂಪದ ಮಲದ ಸಾಂದ್ರತೆ ಕಡಿಮೆಯಾಗುತ್ತದೆ. ಅತಿಯಾದ ದ್ರವವನ್ನು ಕರುಳು ಹೀರಿಕೊಳ್ಳುತ್ತದೆ. ಬಾಳೆಹಣ್ಣುಗಳಲ್ಲಿ ಸಮೃದ್ಧವಾಗಿರುವ ಪೊಟ್ಯಾಸಿಯಮ್, ಎಲೆಕ್ಟ್ರೋಲೈಟ್ಸ್‌ಗಳಿಗೆ ಪರ್ಯಾಯವಾಗಿ ಕಾರ್ಯಮಾಡುತ್ತದೆ.
ಮೊಸರು
ಮೊಸರಿನಲ್ಲಿ ಲಿವ್-ಕಲ್ಚರ್ಸ್ ಎಂಬ ಕರುಳು ಸ್ನೇಹಿ ಬ್ಯಾಕ್ಟೀರಿಯಾಗಳಿರುತ್ತವೆ . ಈ ರೀತಿಯ ಬ್ಯಾಕ್ಟೀರಿಯಾ ಕರುಳಿನ ಮೇಲೆ ರಕ್ಷಣಾತ್ಮಕ ಪದರು ಒದಗಿಸುತ್ತದೆ ಮತ್ತು ಅದು ಉತ್ಪಾದಿಸುವ ಲ್ಯಾಕ್ಟಿಕ್ ಆಮ್ಲವು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ವಿಷವನ್ನು ತೊಡೆದುಹಾಕಲು ಸಹಕಾರಿಯಾಗಿದೆ.
ಬಿಳಿ ಅನ್ನ
ಪಿಷ್ಟವು ಅತಿಸಾರಕ್ಕೆ ಇರುವ ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ಆಲೂಗಡ್ಡೆಯನ್ನು ಹೊರತು ಪಡಿಸಿದರೆ ಅಕ್ಕಿಯಲ್ಲಿ ಅತಿ ಹೆಚ್ಚಿನ ಅಂಶದಲ್ಲಿ ಪಿಷ್ಟ ಇದೆ. ಅಲ್ಲದೆ ಬಿಳಿ ಅಕ್ಕಿ ಜೀರ್ಣಿಸಿಕೊಳ್ಳಲು ಸುಲಭ. ಆದರೆ ಅತಿಸಾರದಿಂದ ಬಳಲುತ್ತಿರುವವರು ಮಸಾಲೆ ಅನ್ನವನ್ನು ಸೇವಿಸದಿರುವುದು ಒಳ್ಳೆಯದು. ಬಿಳಿ ಅಕ್ಕಿ ಸಾಮಾನ್ಯವಾಗಿ ಅತಿಸಾರವನ್ನು ಶಮನಗೊಳಿಸಲು ಸಹಕಾರಿಯಾಗಿದೆ. ಅನ್ನ ಸೇವಿಸಲು ಮೊದಲು ಕಡಿಮೆ ಪ್ರಮಾಣದಲ್ಲಿ ಆರಂಭಗೊಳಿಸಿ ಕ್ರಮೇಣ ಪ್ರಮಾಣವನ್ನು ಹೆಚ್ಚಿಸಿರಿ. ಮಗುವಿನ ಬೇಧಿ ಹೋಗಲಾಡಿಸಲು ಮನೆ ಮದ್ದು
ಆಲೂಗಡ್ಡೆ
ಪಿಷ್ಟಯುಕ್ತ ಆಹಾರಗಳು ಅತಿಸಾರಕ್ಕೆ ಉತ್ತಮ ಚಿಕಿತ್ಸೆಯಾಗಿವೆ. ಪಿಷ್ಟ ಎಂದೊಡನೆ ತಟ್ಟನೆ ನನಪಿಗೆ ಬರುವುದು ಆಲೂಗೆಡ್ಡೆ. ಆಲೂಗಡ್ಡೆಯಲ್ಲಿ ಅತಿಹೆಚ್ಚು ಪಿಷ್ಟ ಇರುವುದರಿಂದ ,ಇದು ಅತಿಸಾರದ ಅತ್ಯುತ್ತಮ ಪರಿಹಾರಗಳಲ್ಲಿ ಒಂದು. ಸರಳವಾಗಿ ಬೇಯಿಸಿದ ಆಲೂಗಡ್ಡೆಯು ಹೊಟ್ಟೆಗೂ ಹಿತಕರ, ತಿನ್ನಲೂ ರುಚಿ. ನೆನಪಿಡುವ ಮುಖ್ಯ ವಿಷಯವೆಂದರೆ ಫ್ರೆಂಚ್ ಫ್ರೈಸ್ ಅಥವಾ ಮಸಾಲೆ ಭರಿತ ಆಲೂಗಡ್ಡೆ ಖಾದ್ಯಗಳು ನಿಮ್ಮ ಅತಿಸಾರವನ್ನು ಇಮ್ಮಡಿಗೊಳಿಸುತ್ತವೆ. ಅತಿಸಾರದ ನಿವಾರಣೆಗೆ ಪಿಷ್ಟಯುಕ್ತ ಆಹಾರದ ಅಗತ್ಯವಿದೆ. ಆದರೆ ತೈಲ ಅಥವಾ ಮಸಾಲೆಗಳು ಇಲ್ಲದೆ, ಕೇವಲ "ಪಿಷ್ಟ" ಪದಾರ್ಥಗಳ ಸೇವನೆ ಅಗತ್ಯ.
ಉಳಿದಂತೆ ತೆಂಗಿನ ನೀರು, ಅಕ್ಕಿ ಗಂಜಿ ಮತ್ತು ಹಣ್ಣು ಅಥವಾ ತರಕಾರಿಗಳ ರಸ ಹಾಗೂ ಕಾಯಿಸಿ ಆರಿಸಿದ ನೀರಿಗೆ ಸ್ವಲ್ಪ ಉಪ್ಪು ಮತ್ತು ಸಕ್ಕರೆಯನ್ನು ಬೆರೆಸಿ ಆಗಾಗ ಕುಡಿಯುತ್ತಿರಬೇಕು . ಅಧಿಕ ಪಿಷ್ಟವಿರುವ ಯಾವುದೇ ದ್ರವವಾದರೂ ಅತಿಸಾರವನ್ನು ನಿಯಂತ್ರಿಸಬಲ್ಲವು.
Comments
English summary



Click it and Unblock the Notifications





