Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಮಗು ಮಲಗಿರುವಾಗ ಮಗುವಿನ ಆರೈಕೆ ಹೇಗೆ?
ಈಗ ತಾನೇ ಹುಟ್ಟಿದ ಪುಟ್ಟ ಕಂದಮ್ಮನ ತಾಯಿ ನೀವಾಗಿದ್ದರೆ ಖಂಡಿತ ಮಗುವಿನ ನಿದ್ದೆಯ ಸಮಯದ ಮಹತ್ವ ನಿಮಗೆ ಅರಿವಾಗುತ್ತದೆ. ಮಗು ಮಲಗಿರುವ ಸಮಯದಲ್ಲಿ ಮಾತ್ರವೇ ನಿಮಗೆ ಮಗುವಿನ ಆರೈಕೆಯೊಂದಿಗೆ ಮನೆಯ ಕೆಲಸಗಳನ್ನು ನಿರ್ವಹಿಸಲು ಸಮಯ ಸಿಗುತ್ತದೆ.
ನಿಮ್ಮ ಮಗು ಮಲಗಿರುವಾಗ ಅದರ ಕೆಲಸಗಳನ್ನು ನಿಮಗೆ ಸುಲಭವಾಗಿ ಮಾಡಬಹುದು ಅಂದರೆ ಕೂದಲು ಕತ್ತರಿಸುವುದು, ಉಗುರು ತೆಗೆಯುವುದು ಇತ್ಯಾದಿ. ಮಗು ಎಚ್ಚರದಲ್ಲಿರುವಾಗ ಈ ಕೆಲಸಗಳನ್ನು ಮಾಡುವುದು ಅದಕ್ಕೆ ತೊಂದರೆಯನ್ನುಂಟು ಮಾಡಬಹುದು. ಆದ್ದರಿಂದ ಮಗು ನಿದ್ದೆ ಹೋದ ಸಮಯದಲ್ಲಿ ಅದರ ಕೂದಲು ಕತ್ತರಿಸುವುದು, ಉಗುರು ತೆಗೆಯುವ ಕೆಲಸವನ್ನು ಮಾಡಿ.

ನ್ಯಾಪ್‌ಕಿನ್ ಬಳಸಿ ಮಗುವಿನ ಹಿಂಭಾಗದಲ್ಲಿ ಕೆಂಪು ಗುಳ್ಳೆಗಳು ಕೂಡ ಬಿದ್ದರಿಬಹುದು. ಮಗು ನಿದ್ದೆ ಹೋದಾಗ ಮಾತ್ರವೇ ಈ ಭಾಗಕ್ಕೆ ಆರೈಕೆಯನ್ನು ಮಾಡಬಹುದು. ಹೀಗೆ ನಿಮ್ಮ ಪುಟ್ಟ ಏಂಜಲ್ ನಿದ್ದೆ ಹೋಗಿರುವಾಗ ಮಾಡಬೇಕಾಗಿರುವ ಕೆಲಸಗಳನ್ನು ನಾವಿಲ್ಲಿ ನೀಡಿದ್ದೇವೆ.
ಎರಡನೇ ಮಗುವಿನ ಆಗಮನಕ್ಕೆ ತಯಾರಾಗಿ
1.ಅವರ ಉಗುರುಗಳನ್ನು ಕತ್ತರಿಸಿ:
ಬೆಚ್ಚಗಿನ ಸ್ನಾನವನ್ನು ನೀವು ಅವರಿಗೆ ಮಾಡಿಸಿದ ನಂತರ, ಅವರ ಉಗುರುಗಳನ್ನು ಕತ್ತರಿಸಿ. ಬೇಬಿ ಆಯಿಲ್ ಹಚ್ಚಿ ನಂತರ ಕಾಲು ಮತ್ತು ಬೆರಳಿನ ಉಗುರುಗಳನ್ನು ಕತ್ತರಿಸಿ.
2.ಮಗುವಿನ ಕಿವಿಗಳನ್ನು ಸ್ವಚ್ಛ ಮಾಡುವುದು:
ಮಗುವಿನ ಕಿವಿಗಳನ್ನು ಸ್ವಚ್ಛ ಮಾಡುವುದು ಮಗು ನಿದ್ದೆ ಹೋದ ಸಮಯದಲ್ಲಿ ಮಾಡುವ ಸೂಕ್ತ ಕೆಲಸವಾಗಿದೆ. ಇದರಿಂದ ಮಗುವಿಗೆ ಕಚಗುಳಿ ಉಂಡಾಗಬಹುದು. ಆದರೆ ಎಚ್ಚರವಿರುವುದಕ್ಕಿಂತ ನಿದ್ದೆಯ ಸಮಯದಲ್ಲಿ ಈ ಕೆಲಸ ಮಾಡುವುದು ಒಳಿತು.
3.ನ್ಯಾಪಿ ಬದಲಾಯಿಸಿ:
ಪ್ರತಿ 2 ಗಂಟೆಗಳಿಗೊಮ್ಮೆ ಅವರ ನ್ಯಾಪಿಯನ್ನು ಬದಲಾಯಿಸಬೇಕು. ಒದ್ದೆ ನ್ಯಾಪಿಯನ್ನು ಹಾಗೆಯೇ ಬಿಡಬೇಡಿ ಇದರಿಂದ ಅವರ ಸೂಕ್ಷ್ಮ ತ್ವಚೆಗೆ ಹಾನಿಯುಂಟಾಗಬಹುದು.
ಮಗುವಿನ ಹೊಟ್ಟೆ ನೋವಿನ ಶಮನಕ್ಕೆ ಮನೆ ಮದ್ದು
4. ಡೈಪರ್ ಕ್ರೀಮ್ ಹಚ್ಚಿ:
ನಿಮ್ಮ ಮಗುವಿಗೆ ಡೈಪರ್ ಕ್ರೀಮ್ ಹಚ್ಚಲು ಸೂಕ್ತ ಸಮಯ ಅದು ನಿದ್ದೆ ಮಾಡುವ ವೇಳೆಯಾಗಿದೆ.
5. ಮಗುವಿನ ಕೂದಲು ಟ್ರಿಮ್ ಮಾಡಿ:
ಮಗು ನಿದ್ದೆ ಮಾಡಿರುವಾಗ ಅದರ ಕೂದಲನ್ನು ಟ್ರಿಮ್ ಮಾಡುವುದು ಸೂಕ್ತ ಕೆಲಸವಾಗಿದೆ. ಆದರೆ ಮಗುವಿನ ತಲೆ ಈ ಸಮಯದಲ್ಲಿ ತುಂಬಾ ಮೃದುವಾಗಿರುವುದರಿಂದ ಹೆಚ್ಚಿನ ಕಾಳಜಿಯನ್ನು ವಹಿಸಿ ಕೂದಲು ಟ್ರಿಮ್ ಮಾಡಿ.



Click it and Unblock the Notifications