Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ತೂಕ ಇಳಿಸಿಕೊಳ್ಳಲು ಕೆಲವೊಂದು ಟಿಪ್ಸ್
ಅತಿಯಾದ ತೂಕ ಜೀವನದ ಕಠಿಣ ಅನುಭವಗಳಲ್ಲಿ ಒಂದು. ಇದು ಕೇವಲ ಆರೋಗ್ಯ ಸಮಸ್ಯೆ ಉಂಟುಮಾಡುವುದು ಮಾತ್ರವಲ್ಲದೆ, ಒತ್ತಡ ಹಾಗೂ ಖಿನ್ನತೆಗೆ ಕಾರಣವಾಗುತ್ತದೆ. ಮಕ್ಕಳಲ್ಲಿ ಅತಿಯಾದ ತೂಕ ಉಂಟಾಗಲು ಹಲವಾರು ರೀತಿಯ ಕಾರಣಗಳಿವೆ. ಇದು ಅನುವಂಶೀಯ, ಅತಿಯಾದ ಆಹಾರ ಸೇವನೆ ಅಥವಾ ಯಾವುದೇ ಸಂಬಂಧಿತ ವೈದ್ಯಕೀಯ ಪರಿಸ್ಥಿತಿಗಳಿಂದ ಇರಬಹುದು. ಇಂದಿನ ದಿನಗಳಲ್ಲಿ ಸಮಯದ ಅಭಾವದಿಂದಾಗಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವುದು ಇದಕ್ಕೆ ಪ್ರಮುಖ ಕಾರಣ. ಪೋಷಕರಾಗಿ ಮಕ್ಕಳು ಆರೋಗ್ಯಕರ ತೂಕ ಹೊಂದುವಂತೆ ಮಾಡುವುದು ನಿಮ್ಮ ಜವಾಬ್ದಾರಿ. ಇಂದಿನಿಂದಲೇ ನಿಮ್ಮ ಮಕ್ಕಳ ತೂಕ ಆರೋಗ್ಯಕರ ರೀತಿಯಲ್ಲಿ ಇಳಿಸಲು ಕೆಲವೊಂದು ಟಿಪ್ಸ್ ಗಳನ್ನು ಪಾಲಿಸಿ.
ಆರೋಗ್ಯಕರ ತೂಕ ಇಳಿಸುವ ಟಿಪ್ಸ್ ಗಳು ನಿಮ್ಮ ಮಗುವಿನ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತದೆ. ಮಗುವಿನ ತೂಕ ಮತ್ತು ಎತ್ತರದಿಂದ ಮಗುವಿನ ಬೆಳವಣಿಗೆ ತಿಳಿಯಬಹುದು. ಇದರಿಂದ ಮಗುವಿನ ತೂಕ ಆರೋಗ್ಯಕರವಾಗಿ ಇಳಿಸುವ ನಿರ್ಧಾರಕ್ಕೆ ಬರಲು ನಿಮಗೆ ನೆರವಾಗಲಿದೆ. ಮಕ್ಕಳು ಯಾವುದಾದರೂ ಹೆಲ್ತ್ ಕ್ಲಬ್ ಗೆ ಹೋಗಿ ತಮ್ಮ ತೂಕ ಇಳಿಸಿಕೊಳ್ಳುವುದು ತುಂಬಾ ಕಠಿಣ ಕೆಲಸ. ನಿಮ್ಮ ಮಕ್ಕಳ ತೂಕ ಇಳಿಸಿಕೊಳ್ಳಲು ಬಯಸಿದ್ದೀರಿ ಎಂದಾದರೆ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ನಿಮಗೆ ನೀಡಲಾಗುವ ಸಲಹೆಯೆಂದರೆ ದೊಡ್ಡವರಿಗೆ ಇರುವಂತಹ ಕೆಲವೊಂದು ವಿಧಾನಗಳಿಗಿಂತ ತುಂಬಾ ಭಿನ್ನವಾಗಿ ಯೋಚಿಸಿ.

ಮಕ್ಕಳ ವಯಸ್ಸಿಗೆ ಅನುಗೂಣವಾಗಿ ಮಕ್ಕಳು ತೂಕ ಇಳಿಸಿಕೊಳ್ಳುವ ವಿಧಾನ ಅಳವಡಿಸಿಕೊಳ್ಳಬೇಕು. ಮಕ್ಕಳಿಗಾಗಿ ತೂಕ ಇಳಿಸಿಕೊಳ್ಳಲು ಇರುವ ಕೆಲವೊಂದು ಟಿಪ್ಸ್ ಗಳು ಹೆಚ್ಚಿನ ಶ್ರಮವಿಲ್ಲದೆ ತೃಪ್ತಿದಾಯಕ ಫಲಿತಾಂಶ ನೀಡಬಹುದು.
ವೃತ್ತಿಪರ ಅಭಿಪ್ರಾಯ
ಮಕ್ಕಳಿಗಾಗಿ ಇರುವ ಆರೋಗ್ಯಕರ ತೂಕ ಇಳಿಸುವ ಅತೀ ಪ್ರಾಮುಖ್ಯ ಸಲಹೆಯೆಂದರೆ ತಜ್ಞ ವೈದ್ಯರ ಸಲಹೆ ಪಡೆಯುವುದು. ತೂಕ ಹೆಚ್ಚಿಸಿಕೊಳ್ಳಲು ಯಾವುದೇ ರೀತಿಯ ವೈದ್ಯಕೀಯ ಪರಿಸ್ಥಿತಿ ಕಾರಣವೇ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ವೈದ್ಯರ ಸಲಹೆ ಪಡೆದರೆ ನಿಮ್ಮ ಮಗುವಿನ ಆರೋಗ್ಯಕರ ತೂಕದ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತದೆ.
ತೂಕ ನಿರ್ವಹಣೆ
ಹಠಾತ್ ಆಗಿ ನಿಮ್ಮ ಮಗುವಿನ ತೂಕವನ್ನು ಇಳಿಸುವ ಮೊದಲು ಮಗುವಿನ ಈಗ ಇರುವ ತೂಕವನ್ನು ಸ್ವಲ್ಪ ಸಮಯ ಹಾಗೆ ಉಳಿಸಿಕೊಳ್ಳಲು ಪ್ರಯತ್ನಿಸಿ. ಮುಂದೆ ಈ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಇದರ ಬಳಿಕ ನೀವು ಹಲವಾರು ವಿಧಾನಗಳನ್ನು ಬಳಸಿಕೊಂಡು ಮಗುವಿನ ತೂಕ ಕಡಿಮೆ ಮಾಡಬಹುದು.
ಮಗುವಿನ ಆಹಾರದ ಮೇಲೆ ಗಮನವಿರಲಿ
ಮಕ್ಕಳ ತೂಕವನ್ನು ಆರೋಗ್ಯಕರ ರೀತಿಯಲ್ಲಿ ಇಳಿಸಲು ಪ್ರಮುಖ ಆಯ್ಕೆಯೆಂದರೆ ಆಹಾರದ ಮೇಲೆ ನಿಯಂತ್ರಣ. ನೀವು ಮಕ್ಕಳಿಗೆ ನೀಡುವಂತಹ ಆಹಾರಗಳಾದ ಸಕ್ಕರೆಯುಕ್ತ ಪಾನೀಯಗಳು, ಜಂಕ್ ಫುಡ್, ಸಂಸ್ಕರಿತ ಹಾಗೂ ಪ್ಯಾಕೇಜ್ಡ್ ಆಹಾರ, ಅಧಿಕ ಕ್ಯಾಲರಿಗಳ ಆಹಾರವನ್ನು ನೀಡಬಾರದು ಅಥವಾ ಕಡಿಮೆ ಮಾಡಬೇಕು. ಇದು ಮಕ್ಕಳಲ್ಲಿ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಲು ನೆರವಾಗುತ್ತದೆ.
ದೈಹಿಕ ಚಟುವಟಿಕೆ ಹೆಚ್ಚಿಸಿ
ನಿಮ್ಮ ಮಗುವನ್ನು ಜಿಮ್ ಅಥವಾ ಹೆಲ್ತ್ ಕ್ಲಬ್ ಗೆ ಸೇರಿಸಿ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಇದರ ಬದಲಿಗೆ ಅವರ ದೈಹಿಕ ಚಟುವಟಿಕೆಗಳನ್ನು ಸ್ವಲ್ಪ ಹೆಚ್ಚಿಸಿ. ರೂಮ್ ನಿಂದ ಹೊರಗೆ ಹೋಗಿ ಹೊರಗಿನ ಆಟಗಳಾದ ಫುಟ್ಬಾಲ್, ಕ್ರಿಕೆಟ್ ಮತ್ತು ಇತರ ಆಟಗಳಲ್ಲಿ ತೊಡಗಿಸಿಕೊಳ್ಳಲು ಹೇಳಿ. ಇದರಿಂದ ಅವರ ದೇಹದಲ್ಲಿರುವ ಕ್ಯಾಲರಿ ದಹಿಸುತ್ತದೆ.
ಭಾವನಾತ್ಮಕ ಬೆಂಬಲ
ತೂಕ ಇಳಿಸಿಕೊಳ್ಳಲು ನೀಡುವಂತಹ ಕೆಲವೊಂದು ಟಿಪ್ಸ್ ಗಳು ಅವರ ಆರೋಗ್ಯದ ದೃಷ್ಟಿಯಿಂದಲೇ ಹೊರತು ಸೌಂದರ್ಯದ ದೃಷ್ಟಿಯಿಂದ ಅಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ತುಂಬಾ ಮುಖ್ಯ. ಆರೋಗ್ಯಕರ ನಿಯಮಗಳನ್ನು ಪಾಲಿಸಿದರೆ ತುಂಬಾ ಕಡಿಮೆ ಸಮಯದಲ್ಲಿ ತೂಕ ಇಳಿಸಿಕೊಳ್ಳುವುದು ಸುಲಭ ಎನ್ನುವುದು ಅವರಿಗೆ ಅರ್ಥ ಮಾಡಿಕೊಡಿ.
ಜತೆಯಾಗಿ ಮಾಡಿ
ನೀವು ಅತಿಯಾದ ತೂಕ ಹೊಂದಿದ್ದೀರಾ ಇಲ್ಲವಾ ಎನ್ನುವುದು ಬೇರೆ ಪ್ರಶ್ನೆ. ಆದರೆ ವ್ಯಾಯಾಮ ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳಿಗೆ ತೂಕ ಇಳಿಸಿಕೊಳ್ಳಲು ಯಾವುದಾದರೂ ಟಿಪ್ಸ್ ನೀಡಿದ್ದರೆ ನೀವು ಅದನ್ನು ಪಾಲಿಸಿ. ನೀವು ಜತೆಯಾಗಿ ಆಡಬಹುದು, ವ್ಯಾಯಾಮ ಮಾಡಬಹುದು ಅಥವಾ ಕುಟುಂಬದ ಎಲ್ಲರು ಜತೆಯಾಗಿ ವಾಕಿಂಗ್ ಗೆ ಹೋಗಬಹುದು. ಇದು ಮಕ್ಕಳಿಗೆ ಅತ್ಯಂತ ಪ್ರಭಾವಿ ತೂಕ ಇಳಿಸುವ ಟಿಪ್ಸ್.



Click it and Unblock the Notifications