Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಬಾಲ್ಯದಲ್ಲಿಯೇ ಮಾನಸಿಕ ಒತ್ತಡ, ತರುವುದು ಅಪಾಯ
ಚಿಕ್ಕ ಪ್ರಾಯದಲ್ಲಿಯೇ ಅಧಿಕ ಮಾನಸಿಕ ಒತ್ತಡಕ್ಕೆ ಒಳಗಾದ ಮಕ್ಕಳು ದೊಡ್ಡವರಾದಾಗ ಗುಣ ಪಡಿಸಲಾಗದ ಮಾನಸಿಕ ಮತ್ತು ದೈಹಿಕ ನೋವನ್ನು ಅನುಭವಿಸುತ್ತಾರೆ ಅನ್ನುವುದು ಕ್ಯಾಲಿಫೋನಿರ್ಯಾ ಯೂನಿವರ್ಸಿಟಿಯಲ್ಲಿ ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.
ಕೌಟುಂಬಿಕ ಕಲಹಗಳು, ವಿಚ್ಛೇದನ ಇವೆಲ್ಲವೂ ಮಕ್ಕಳ ಮೇಲೆ ಅಧಿಕ ಪರಿಣಾಮವನ್ನು ಬೀರುತ್ತದೆ. ಕೌಟುಂಬಿಕ ಕಲಹದಿಂದಾಗಿ ಹೆಚ್ಚಿನ ತಾಯಿಂದಿರು ತಮ್ಮ ಮಕ್ಕಳ ಬೇಕು-ಬೇಡಗಳ ಕಡೆ ಗಮನ ಕೊಡಲು ಮರೆತು ಬಿಡುತ್ತಾರೆ. ಇದರಿಂದ ಮಕ್ಕಳ ಮೇಲೆ ಪ್ರಭಾವ ಮಾತ್ರ ತುಂಬಾ ಕೆಟ್ಟದ್ದು. ಮಕ್ಕಳು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದು ಅವರ ಮುಂದಿನ ಬದುಕಿನ ಮೇಲೆ ಕೆಟ್ಟ ಪ್ರಭಾವ ಬೀರುವುದು.

ಚಿಕ್ಕ ಪ್ರಾಯದಲ್ಲಿ ಮಾನಸಿಕ ಒತ್ತಡ ಅನುಭವಿಸಿದರೆ ಬೆಳೆದಂತೆ ಮಾನಸಿಕ ನೋವಿನ ಜೊತೆ ದೈಹಿಕ ನೋವುಗಳು ಕಂಡು ಬರುವುದು. ಕೆಲವರಿಗೆ ಸ್ಟ್ರೋಕ್ ಬರುವ ಸಾಧ್ಯತೆ ಕೂಡ ಇದೆ. ಸ್ನಾಯು ಸೆಳೆತ ಕಂಡು ಬರುವುದು. ಯಾವುದೇ ಔಷಧಿಗಳು ಈ ನೋವನ್ನು ಕಡಿಮೆ ಮಾಡುವಲ್ಲಿ ವಿಫಲವಾಗುತ್ತವೆ. ಆ ವ್ಯಕ್ತಿ ಬದುಕಿದ್ದಷ್ಟು ಕಾಲ ನೋವನ್ನು ಅನುಭವಿಸಬೇಕಾಗುವುದು ಅನ್ನುವ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಮಾನಸಿಕ ಒತ್ತಡವು ಹಾರ್ಮೋನ್ ಗಳಲ್ಲಿ ಅಸಮತೋಲನವನ್ನು ಉಂಟು ಮಾಡುತ್ತದೆ. ಇದರಿಂಂದಾಗಿ ಉರಿಯೂತದ ಸಮಸ್ಯೆ, ಮೈ ಕೈ ನೋವು ಕಂಡು ಬರುವುದು. ಅಲ್ಲದೆ ಮಕ್ಕಳಲ್ಲಿ ಆತ್ಮವಿಶ್ವಾಸ ಕಮ್ಮಿಯಾಗುವ ಸಾಧ್ಯತೆ ಕೂಡ ಇದೆ.
ಬರೀ ಕೌಟುಂಬಿಕ ಜಗಳದಿಂದ ಮಾತ್ರವಲ್ಲ, ಕೆಲವೊಮ್ಮೆ ಪೋಷಕರು ಮತ್ತಿತರ ಕಾರಣಕ್ಕೆ ತುಂಬಾ ಒತ್ತಡ ಹಾಕುತ್ತಾರೆ. ನಿಮ್ಮ ಮಕ್ಕಳಿಗೆ ಮಾನಸಿಕ ಒತ್ತಡವನ್ನು ಹಾಕಬೇಡಿ. ಕೆಲ ಪೋಷಕರು ತಮ್ಮ ಮಕ್ಕಳಿಗೆ ಓದಿನ ವಿಷಯದಲ್ಲಿ ತುಂಬಾ ಮಾನಸಿಕ ಒತ್ತಡ ಹಾಕುತ್ತಾರೆ. ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಬರದಿದ್ದರೆ ಹೊಡೆಯುವುದು, ಬೈಯ್ಯುವುದು ಮಾಡುತ್ತಾರೆ. ಇವೆಲ್ಲಾ ಮಕ್ಕಳ ಮನಸ್ಸಿನ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.
ಮಕ್ಕಳಿಗೆ ಓದು ಎಂದು ಜೋರು ಮಾಡಿ ಹೇಳುವ ಬದಲು ನಯವಾಗಿ, ಉಪಾಯವಾಗಿ ಹೇಳಿ, ಆಗ ಮಕ್ಕಳು ಓದಿನ ಕಡೆ ಗಮನ ಹರಿಸಲು ಪ್ರಾರಂಭಿಸುತ್ತಾರೆ.
ಮಕ್ಕಳು ಮಾನಸಿಕ ಒತ್ತಡದಿಂದ ಮುಕ್ತರಾಗಲಿ, ಉತ್ತಮ ಬದುಕು ಕಾಣಲಿ.



Click it and Unblock the Notifications
