Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಮಕ್ಕಳಿಗೆ ಯಾವಾಗ 'ನೋ' ಅಂತ ಹೇಳಬೇಕು?
ನೋ...ಇಲ್ಲ ಆಗಲ್ಲ ಎಂದು ಹೇಳುವ ಕಲೆ ಗೊತ್ತಿಲ್ಲದಿದ್ದರೆ ಜೀವನ ಮಾಡುವುದು ಕಷ್ಟವಾಗಿ ಬಿಡುತ್ತದೆ. ಅದರಲ್ಲೂ ಪೋಷಕರಿಗೆ ತಮ್ಮ ಮಕ್ಕಳ ಬೇಡಿಕೆಗಳಿಗೆ ಯಾವಾಗ ಆಗಲ್ಲ, ಯಾವಾಗ ಓಕೆ ಹೇಳಬೇಕೆಂದು ಗೊತ್ತಿದ್ದರೆ ಮಾತ್ರ ಮಕ್ಕಳನ್ನು ಹದ್ದುಬಸ್ತಿನಲ್ಲಿ ಬೆಳೆಸಲು ಸಾಧ್ಯ. ಹದ್ದುಬಸ್ತಿನಲ್ಲಿ ಅಂದರೆ ಅವರನ್ನು ಹೆದರಿಸಿ ಕೂರಿಸುವುದು ಎಂದು ಅರ್ಥ ಅಲ್ಲ, ಮಕ್ಕಳ ಒಳಿತಿಗಾಗಿ ಅವರನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು.
ಕೆಲವು ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಪ್ರೀತಿಸುತ್ತೇವೆ ಎಂದು ತುಂಬಾ ಮುದ್ದು ಮಾಡಿ ಹಾಳುಮಾಡಿ ಬಿಡುತ್ತಾರೆ.. ಇದರಿಂದ ಮಕ್ಕಳು ಹಠಮಾರಿಗಳಾಗಿ ಬೆಳೆಯಬಹುದು, ಹಿರಿಯರ ಮಾತಿಗೆ ಬೆಲೆಕೊಡದವರು ಆಗಬಹುದು. ಆದ್ದರಿಂದ ಮಕ್ಕಳ ಒಳಿತಿಗಾಗಿ ಪ್ರತಿಯೊಬ್ಬ ಪೋಷಕರು ಈ ಕೆಳಗಿನ ವಿಷಯಗಳಿಗೆ ನೋ ಹೇಳಿದರೆ ಒಳ್ಳೆಯದು.

ಆಹಾರದ ವಿಷಯದಲ್ಲಿ: ಹೆಚ್ಚಿನ ಮಕ್ಕಳಿಗೆ ಪೌಷ್ಠಿಕ ಆಹಾರ ಮಾಡಿಕೊಟ್ಟರೆ ತಿನ್ನುವುದಿಲ್ಲ. ಚಿಪ್ಸ್ ಈ ರೀತಿಯ ಜಂಕ್ಸ್ ಫುಡ್ಸ್ (ಕುರುಕುಲು ತಿಂಡಿ) ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ರೀತಿಯ ಆಹಾರಗಳಿಂದ ಮಕ್ಕಳ ಬೆಳವಣಿಗೆ ಸಾಧ್ಯವಿಲ್ಲ. ಆದ್ದರಿಂದ ಮಕ್ಕಳು ಊಟ ಮಾಡುವುದಿಲ್ಲ ಬರೀ ಅಂತಹ ತಿಂಡಿಗಳನ್ನು ಮಾಡಿ ಕೊಡದೆ ಅವುಗಳಿಗೆ ನೋ ಹೇಳಿ.
ಓದಿನ ವಿಷಯದಲ್ಲಿ: ಆಟ ಮಕ್ಕಳ ಶಾರೀರಿಕ ಬೆಳವಣಿಗೆಗೆ ಸಹಕಾರಿಯಾದರೆ ಪಾಠ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಕೆಲ ಮಕ್ಕಳು ಬರೀ ಆಟಕ್ಕೆ ಮಾತ್ರ ಆಸಕ್ತಿ ತೋರಿಸಿದರೆ ಆಗ ಅವರಿಗೆ ನೋ ಹೇಳಬೇಕು.ಹೇಗಾದರೂ ಮಾಡಿ ಅವರಿಗೆ ಓದಿನಲ್ಲಿ ಆಸಕ್ತಿ ಮೂಡುವಂತೆ ಮಾಡಬೇಕು.
ಚಾಕಲೇಟ್: ಚಾಕಲೇಟ್ ಆರೋಗ್ಯಕ್ಕೆ ಒಳ್ಳೆಯದು. ಆದರೆ ಮಿತಿ ಮೀರಿ ತಿಂದರೆ ಸರಿಯಾಗಿ ಊಟ ಮಾಡುವುದಿಲ್ಲ ಮತ್ತು ಹಲ್ಲುಗಳು ಹಾಳಾಗುತ್ತವೆ. ಆದ್ದರಿಂದ ತುಂಬಾ ಚಾಕಲೇಟ್ ತಿನ್ನಲು ಕೊಡಬಾರದು. ಅದರ ಬದಲು ಅವರಿಗೆ ಇಷ್ಟವಾದ ಹಣ್ಣುಗಳನ್ನು ತಂದು ಕೊಟ್ಟು ಚಾಕಲೇಟ್ ಬದಲು ಅದನ್ನು ತಿನ್ನಲು ಹೇಳಿ.
ಒಡಹುಟ್ಟಿದವರ ಜಗಳ: ಚಿಕ್ಕ ಮಕ್ಕಳಿರುವಾಗ ಒಡಹುಟ್ಟಿದವರು ಪ್ರತಿಯೊಂದು ವಿಷಯಕ್ಕೆ ಜಗಳ ಆಡುವುದು ಸಾಮಾನ್ಯ. ಈ ರೀತಿಯ ಜಗಳ ವಿಪರೀತಕ್ಕೆ ಹೋದಾಗ ಅವರನ್ನು ಕಡಿವಾಣದಲ್ಲಿಡಬೇಕು. ತಪ್ಪು ಯಾರ ಕಡೆ ಇದೆ ಎಂದು ಹೇಳಿ ಅವರನ್ನು ತಿದ್ದಬೇಕು.
ಶಾಲೆ: ಕೆಲ ಮಕ್ಕಳು ಶಾಲೆಗೆ ಹೋಗುವುದಿಲ್ಲವೆಂದು ತುಂಬಾ ಹಠ ಹಿಡಿಯುತ್ತಾರೆ. ಆ ಸಂದರ್ಭದಲ್ಲಿ ಅವರ ಹಠಕ್ಕೆ ನೋ ಹೇಳದಿದ್ದರೆ ಅವರ ಭವಿಷ್ಯಕ್ಕೆ ತೊಂದರೆಯಾಗಬಹುದು.
ಮಕ್ಕಳು ಹಠ ಹಿಡಿಯುತ್ತಾರೆ ಎಂದು ಅವರನ್ನು ಅವರ ಪಾಡಿಗೆ ಬಿಡಬೇಡಿ, ಪ್ರತಿಯೊಂದು ವಿಷಯದಲ್ಲಿ ನಿಮ್ಮ ಮಾರ್ಗದರ್ಶನ ಇರಲಿ.



Click it and Unblock the Notifications