Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳು ಕಲಿಯಲೇಬೇಕಾದ ಜೀವನ ಪಾಠಗಳಿವು

ಕೆಲವು ಪೋಷಕರು ತಮಗೇ ಒಂದೇ ಮಗು ಎಂದು ಆ ಮಗುವನ್ನು ವಿಪರೀತ ಮುದ್ದು ಮಾಡಿ ಸಾಕುತ್ತಾರೆ. ಮಗು ಏನೇ ಗಲಾಟೆ ಮಾಡಿದರೂ, ಹಠ ಮಾಡಿದರೂ ಎನೂ ಹೇಳುವುದಿಲ್ಲ. ಆದರೆ ಈ ರೀತಿ ಬೆಳೆಸಿದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.
ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳು ಆದರ್ಶವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಆ ರೀತಿ ಬೆಳೆಯಲು ಮಕ್ಕಳಿಗೆ ಈ ಕೆಳಗಿನ ಜೀವನ ಪಾಠಗಳನ್ನು ಕಡ್ಡಾಯವಾಗಿ ಹೇಳಿಕೊಡಬೇಕು.
1.ಹಿರಿಯರನ್ನು ಗೌರವಿಸುವುದು: ಮಕ್ಕಳಿಗೆ ಗುರು ಹಿರಿಯರಿಗೆ ಗೌರವ ಕೊಟ್ಟು ನಡೆದುಕೊಳ್ಳುವುದನ್ನು ಕಲಿಸಬೇಕು. ಮಕ್ಕಳು ಈ ರೀತಿ ನಡೆದುಕೊಂಡರೆ ಜನರು ಪೋಷಕರನ್ನು ಹೊಗಳುತ್ತಾರೆ. ಇಲ್ಲದಿದ್ದರೆ ಮಕ್ಕಳು ಮಾಡುವ ತಪ್ಪುಗಳಿಗೆ ಈ ಸಮಾಜ ಪೋಷಕರನ್ನೇ ಹೊಣೆ ಮಾಡುತ್ತದೆ.
2. ಪ್ರಾಮಾಣಿಕತೆ: ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದನ್ನು ತಿಳಿಸಿ. ನೀತಿ ತೆಗಳನ್ನು ಹೇಳಿ. ಈ ಪಾಠಗಳು ಮುಂದೆ ಆ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ.
3.ಸೋಲನ್ನು ಎದುರಿಸುವುದನ್ನು ಕಲಿಸಿ: ಇಲ್ಲಿ ತುಂಬಾ ಪೋಷಕರು ತಪ್ಪು ಮಾಡುತ್ತಾರೆ. ಮಕ್ಕಳ ಜಯವನ್ನು ಕಂಡು ಸಂತೋಷ ಪಟ್ಟು ಹುರಿದುಂಬಿಸಿ, ಸೋಲನ್ನು ಅನುಭವಿಸಿದಾಗ ಇತರ ಮಕ್ಕಳ ಜೊತೆ ಹೋಲಿಕೆ ಮಾಡಿ ಬೈಯ್ಯುವುದು, ಹೀಯಾಳಿಸುವುದು ಮಾಡುತ್ತಾರೆ. ಆದರೆ ಒಂದು ಪೋಷಕರು ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಬೈಯ್ಯದ್ದರೆ, ಹೀಯಾಳಿಸದರೆ ಮಕ್ಕಳು ಮತ್ತೆ ಜಯಗಳಿಸಿ ಬರುತ್ತಾರೆ ಅನ್ನುವುದು ತಪ್ಪು ಕಲ್ಪನೆ. ಯಾವುದಾದರೂ ವಿಷಯದಲ್ಲಿ ಸೋತಾಗ ಮಾನಸಿಕ ಧೈರ್ಯ ನೀಡಿ, ಸೋಲೇ ಗೆಲುವಿಗೆ ಮೆಟ್ಟಲು ಎಂದು ಸಮಧಾನಿಸಿ. ಈ ರೀತಿ ಮಾಡಿದರೆ ಮಕ್ಕಳು ಬದುಕಿನಲ್ಲ ಬರುವ ಕಷ್ಟಗಳನ್ನು, ಸೋಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ.
4. ಕರುಣೆ: ಮಕ್ಕಳಿಗೆ ಇತರರು ಕಷ್ಟದಲ್ಲಿರುವಾಗ ಸಹಾಯ ಮಾಡಬೇಕೆಂಬ ಪಾಠ ಕಲಿಸಿ. ಸಹಾಯ ಮಾಡಲು ಆಗದಿದ್ದರೂ ಕಷ್ಟದಲ್ಲಿರುವವರನ್ನು ಮತ್ತಷ್ಟು ನೋಯಿಸುವ ಕೆಲಸ ಮಾಡಬಾರದು ಎಂಬ ಪಾಠ ಕಲಿಸಿಕೊಡಬೇಕು.
5. ಹೊಂದಾಣಿಕೆ: ಮಕ್ಕಳಿಗೆ ಇತರ ಮಕ್ಕಳ ಜೊತೆ ಹೊಂದಾಣಿಕೆಯಿಂದ ಇರುವುದನ್ನು ಕಲಿಸಿದರೆ, ಮಕ್ಕಳು ಬೆಳೆದಾಗ ಎಂತಹ ಪರಿಸ್ಥಿತಿಗೂ ಹೊಂದಿಕೊಂಡು ಹೋಗುವುದನ್ನು ಕಲಿಯುತ್ತಾರೆ.
6. ಶ್ರಮ: ಮಕ್ಕಳ ಎಲ್ಲಾ ಕೆಲಸವನ್ನು ಪೋಷಕರೇ ಮಾಡದೇ ಅವರ ಕೆಲಸವನ್ನು ಅವರೇ ಮಾಡುವುದನ್ನು ಕಲಿಸಬೇಕು. ಕಷ್ಟಪಟ್ಟು ಓದಿ ಅಂತ ಪ್ರೋತ್ಸಾಹಿಸಬೇಕು. ಸೋಮರಿಗಳಾಗಿದ್ದರೆ ನೋಡಿ ಸುಮ್ಮನೆ ಇರದೆ ತಿಳಿ ಹೇಳಬೇಕು.
7. ಸಾವರ್ಜನಿಕ ಸ್ಥಳಗಳಲ್ಲಿ ವರ್ತನೆ: ಇದನ್ನು ಮುಖ್ಯವಾಗಿ ಕಲಿಸಿರಬೇಕು. ಇಲ್ಲದಿದ್ದರೆ ಪೋಷಕರು ಅವಮಾನ ಎದುರಿಸಬೇಕಾಗುತ್ತದೆ. ಏಕೆಂದರೆ ಮಕ್ಕಳು ಸಮಾಜದಲ್ಲಿ ಹೇಗೆ ವರ್ತಿಸುತ್ತಾರೆ ಅನ್ನುವುದರ ಆಧಾರದ ಮೇಲೆ ದೊಡ್ಡವರಾದ ಮೇಲೆ ಸ್ಥಾನಮಾನ ದೊರೆಯುತ್ತದೆ.



Click it and Unblock the Notifications
