Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳು ಮುಟ್ಟಬಾರದ ನಾಲ್ಕು ಆಹಾರ ಯಾವುದು?

ಮಕ್ಕಳಿಗೆ ಕೆಲವು ರೀತಿಯ ಆಹಾರ ನೀಡುವುದರಿಂದ ಹಲ್ಲಿಗೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಹಲವು ತೊಂದರೆಯಾಗಬಹುದು. ಆದ್ದರಿಂದ ಅಂತಹ ಆಹಾರದಿಂದ ಮಕ್ಕಳನ್ನು ದೂರವಿರಿಸುವುದು ಒಳ್ಳೆಯದು. ಮಕ್ಕಳಿಂದ ದೂರವಿರಿಸಬೇಕಾದ ನಾಲ್ಕು ರೀತಿಯ ಆಹಾರ ಯಾವುದೆಂದು ಇಲ್ಲಿ ನೋಡಿ.
ಮಕ್ಕಳಿಗೆ ಕೊಡಬಾರದ 4 ರೀತಿಯ ಆಹಾರ:
1. ತಂಪು ಪಾನೀಯ: ಮಕ್ಕಳಿಗೆ ಹೆಚ್ಚು ಕಾಲ ಎದೆ ಹಾಲು ನೀಡುವುದು ಒಳ್ಳೆಯದು. ಆದರೆ ಮಕ್ಕಳಿಗೆ ಅದರೊಂದಿಗೆ ಹಸುವಿನ ಹಾಲನ್ನೂ ಅಭ್ಯಾಸ ಮಾಡಬೇಕು. ಹಸುವಿನ ಹಾಲನ್ನು 10 ನಿಮಿಷದ ಕುದಿಸಿದ ನಂತರವಷ್ಟೇ ಮಕ್ಕಳಿಗೆ ನೀಡಿ. ಮಕ್ಕಳಿಗೆ ಪ್ಯಾಕ್ ಗಳಲ್ಲಿ ಲಭ್ಯವಿರುವ ತಂಪು ಪಾನೀಯವನ್ನು ನೀಡುವುದನ್ನು ಬಿಟ್ಟು ತಾಜಾ ಹಣ್ಣಿನ ಜ್ಯೂಸನ್ನು ಕುಡಿಯಲು ನೀಡಿದರೆ ಉತ್ತಮ.
2. ಜೆಲ್ಲಿ, ಜ್ಯಾಮ್, ಪೀನಟ್ ಬಟರ್: ಪೀನಟ್ ಬಟರ್ ರುಚಿ ನೀಡಿದರೂ ಕೂಡ ಮಕ್ಕಳಿಗೆ ಅಲರ್ಜಿ ಉಂಟುಮಾಡುವ ಅಂಶ ಇ್ತಲಲಗಿ್ರ. ಅದರಲ್ಲೂ ಅಂಟಿನ ಪದಾರ್ಥ ಇದಾಗಿರುವುದರಿಂದ ಮಕ್ಕಳ ಎಂಜಿಲಿನಲ್ಲಿ ಸೇರಿಕೊಂಡು ಗಂಟಲಿಗೆ ತೊಂದರೆಯಾಗಿ ಉಸಿರಾಟದ ಸಮಸ್ಯೆಯನ್ನು ಉಂಟುಮಾಡುತ್ತದೆ. ಜೆಲ್ಲಿ, ಜ್ಯಾಮ್ ಗಳನ್ನೂ ಕೂಡ ಮಕ್ಕಳಿಗೆ ನೀಡುವುದು ಒಳ್ಳೆಯದಲ್ಲ. ಇದು ಹಲ್ಲಿನೊಂದಿಗೆ ಮಕ್ಕಳ ಾರೋಗ್ಯವನ್ನೂ ಕೆಡಿಸುತ್ತೆ.
3. ದೊಡ್ಡ ದೊಡ್ಡ ತುಂಡಿನ ಆಹಾರ ಪದಾರ್ಥ: ಮಕ್ಕಳಿಗೆ ಏನೇ ಆಹಾರ ಕೊಟ್ಟರೂ ಅದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ನೀಡಿ. ಮಕ್ಕಳಿಗೆ ತಿನ್ನುವ ಕಲೆ ಇನ್ನೂ ರೂಢಿಯಾಗಿರದ ಕಾರಣ ತಿನ್ನಲು ಕಷ್ಟವಾಗಿ ಹಲ್ಲು ಮತ್ತು ಗಂಟಲಿನಲ್ಲಿ ಸಿಕ್ಕಿಕೊಳ್ಳಬಹುದಾದ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಚೆನ್ನಾಗಿ ಬೇಯಿಸಿದ ಆಹಾರವನ್ನು ಕೊಡಿ. ಶೇಖರಿಸಿದ ಆಹಾರ, ಫ್ರಿಡ್ಜ್ ನಲ್ಲಿಟ್ಟ ಆಹಾರ, ಚೀಸ್, ಬೆರಿಗಳನ್ನು ಮಕ್ಕಳಿಗೆ ನೀಡಬೇಡಿ.
4. ಅಂಟಿನ ಪದಾರ್ಥ: ಒಣ ದ್ರಾಕ್ಷಿ, ಮತ್ತು ಯಾವುದೇ ದ್ರಾಕ್ಷಿಯನ್ನೂ ಕೂಡ ಮಕ್ಕಳಿಗೆ ಹಾಗೇ ಕೊಡಬಾರದು. ಪಾಪ್ ಕಾರ್ನ್, ಕ್ಯಾಂಡಿಗಳನ್ನು ಮಕ್ಕಳಿಂದ ದೂರವಿರಿಸಬೇಕು. ಇದರಿಂದ ಮಕ್ಕಳ ಬಾಯಲ್ಲಿ ಅಂಟಿನ ಪದಾರ್ಥ ಹಾಗೆಯೇ ಸೇರಿಕೊಂಡು ಹುಳುಕು ಹಲ್ಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಅನ್ನನಾಳದಲ್ಲಿ ಸಮಸ್ಯೆಯನ್ನೂ ತಂದೊಡ್ಡುತ್ತದೆ. ಆದ್ದರಿಂದ ಅಂತಹ ಪದಾರ್ಥಗಳನ್ನು ಸಲಾಡ್ ಮೂಲಕ ಕೊಡಬಹುದು.



Click it and Unblock the Notifications
