Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮುದ್ದು ಕಂದನ ಕೂದಲಿಗೆ ಸ್ಪೆಷಲ್ ಕೇರ್ ಹೇಗೆ?

ಮಕ್ಕಳ ಕೂದಲ ಪೋಷಣೆ ಹೇಗಿರಬೇಕು?
1. ಮಕ್ಕಳ ಕೂದಲಿಗೆ ವಾರಕ್ಕೆ 3-4 ಬಾರಿ ಸ್ನಾನ ಮಾಡಿಸಿ. ಅವರಿಗೆ ತುಂಡು ಕೂದಲಿದ್ದರೆ ಆಗಾಗ್ಗೆ ತಲೆಗೆ ಸ್ನಾನ ಮಾಡಿಸಿದರೂ ತೊಂದರೆಯಿಲ್ಲ.
2. ಕಣ್ಣು ಉರಿ ಬರದಂತಹ ಶಾಂಪುಗಳನ್ನು ಸ್ನಾನಕ್ಕೆ ಬಳಸಿ. ಇದರಿಂದ ಮಕ್ಕಳು ಸ್ನಾನವನ್ನು ಸಂತೋಷದಿಂದ ಮಾಡಿಸಿಕೊಳ್ಳುತ್ತವೆ.
3. ಮಕ್ಕಳ ತಲೆಯನ್ನು ಉಜ್ಜುವಾಗ ಬೆರಳುಗಳನ್ನು ಮಾತ್ರ ಉಪಯೋಗಿಸಿ. ಉಗುರುಗಳನ್ನು ಬಳಸಬಾರದು. ಮಕ್ಕಳ ತಲೆಯನ್ನು ಮೃದುವಾಗಿ ಉಜ್ಜಬೇಕು. ಕೂದಲ ಬುಡವನ್ನು ನಯವಾಗಿ ಮಸಾಜ್ ಮಾಡಬೇಕು.
4. ಮಕ್ಕಳ ಕೂದಲು ಉದ್ದವಿದ್ದರೆ ಯಾವುದಾದರೂ ಹೇರ್ ಕಂಡೀಶನರ್ ಹಾಕಿ. ಇದು ನೋವಿಲ್ಲದಂತೆ ಬಾಚಲೂ ಸುಲಭವಾಗುತ್ತದೆ.
5. ಮಕ್ಕಳ ಕೂದಲನ್ನು ಬಾಚಲು ದೊಡ್ಡ ಹಲ್ಲಿರುವ ಬಾಚಣಿಕೆ ಅಥವಾ ಹೇರ್ ಬ್ರಶ್ ಉಪಯೋಗಿಸಿ. ಮಕ್ಕಳ ಬಾಚಣಿಕೆಯನ್ನು ಬೇರೆಯವರು ಬಳಸದಂತೆ ನೋಡಿಕೊಳ್ಳಿ.
6. ಆಗಾಗ್ಗೆ ಕೂದಲನ್ನು ಕತ್ತರಿಸುತ್ತಿರಬೇಕು. ಇದು ಕೂದಲ ಬೆಳವಣಿಗೆಯನ್ನೂ ಹೆಚ್ಚಿಸುತ್ತದೆ. ಒಳ್ಳೆಯ ಸಲೂನ್ ನಲ್ಲಿ ಮಕ್ಕಳಿಗೆ ಹೊಂದಿಕೊಳ್ಳುವ ಸುಂದರ ಹೇರ್ ಕಟ್ ಮಾಡಿಸಿ.
7. ಮಕ್ಕಳು ತುಂಬಾ ಆಟವಾಡುವುದರಿಂದ ಅವುಗಳ ಕೂದಲು ಬೇಗನೆ ಸುಕ್ಕಾಗುತ್ತದೆ. ಇದರಿಂದ ಕೂದಲುದುರಲು ಆರಂಭಿಸುತ್ತದೆ. ಆದ್ದರಿಂದ ಮಕ್ಕಳ ಕೂದಲನ್ನು ಬಾಚಿ ಕಟ್ಟುದರೆ ಉತ್ತಮ.
8. ಮಕ್ಕಳ ಕೂದಲಿಗೆ ಚೆಂದವಾಗಿ ಕಾಣುವ ಕೆಲವು ಅಲಂಕಾರಿಕ ವಸ್ತುಗಳಾದ ಕ್ಲಿಪ್, ಬಣ್ಣ ಬಣ್ಣದ ಹೇರ್ ಬ್ಯಾಂಡ್ ಹಾಕಿ, ಇದರಿಂದ ಮಕ್ಕಳಿಗೂ ಖುಷಿಯಾಗುತ್ತೆ, ಮಕ್ಕಳು ಮುದ್ದಾಗಿಯೂ ಕಾಣುತ್ತಾರೆ.



Click it and Unblock the Notifications
