Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪುಟ್ಟ ಹೃದಯ ಗೆಲ್ಲೋದು ನಿಮ್ಮಿಂದ ಸಾಧ್ಯವಿದೆಯಾ?

1. ಮಕ್ಕಳನ್ನು ಶಿಕ್ಷಿಸಬೇಡಿ: ನಿಮ್ಮ ಮಕ್ಕಳು ತುಂಟಾಟವಾಡಿದಾಗ, ಕೀಟಲೆ ಮಾಡಿದಾಗ ಅದು ಶಿಕ್ಷಾರ್ಹವಲ್ಲದಿದ್ದರೆ ಅವರನ್ನು ನಿಂದಿಸಬೇಡಿ. ಅವರನ್ನು ಪ್ರೀತಿಸಿದಷ್ಟು ನೀವು ಹತ್ತಿರವಾಗುತ್ತೀರ. ತುಂಬ ಕೆಟ್ಟ ಪದಗಳಿಂದ ನಿಂದಿಸಿದರೆ ಅವರ ಮೃದು ಮನಸ್ಸಿನ ಮೇಲೆ ಕೆಟ್ಟ ಛಾಯೆ ಬೀಳಬಹುದು.
2. ಆತ್ಮವಿಶ್ವಾಸ ತುಂಬಿ: ಮಕ್ಕಳೆಂದ ಮೇಲೆ ತಪ್ಪಾಗುವುದು ಸಹಜ. ಏನೇ ತಪ್ಪಾದರೂ ಅವರನ್ನು ಹೀಯಾಳಿಸದರೆ, ಅವರಲ್ಲಿ ಆತ್ಮವಿಶ್ವಾಸ ತುಂಬಿ. ನಿಮ್ಮ ಅನುಭವಗಳನ್ನೂ ಮಕ್ಕಳೊಂದಿಗೆ ಹಂಚಿಕೊಂಡರೆ ಮಕ್ಕಳು ಭಾವನಾತ್ಮಕವಾಗಿ ಹತ್ತಿರವಾಗುತ್ತಾರೆ. ಹೆಚ್ಚು ಸಲಹೆಗಳನ್ನು ನೀಡುತ್ತಾ, ಅವರ ಹಿಂದಿನ ತಪ್ಪುಗಳನ್ನು ಪದೇ ಪದೇ ಹೇಳುತ್ತಿದ್ದರೆ ನಿಮ್ಮಿಂದ ಮಕ್ಕಳು ದೂರಾಗುವುದು ಖಚಿತ.
3. ಭರವಸೆ ನೀಡಿ: ಮಕ್ಕಳಿಗೆ ಕಷ್ಟಕರವೆನಿಸಿದಾಗ, ನಿಮ್ಮ ಅವಶ್ಯಕತೆ ಹೆಚ್ಚಿದ್ದಾಗ ನಿಮ್ಮ ಕೆಲಸವೇನೇ ಇದ್ದರೂ ಅದನ್ನು ಬಿಟ್ಟು ಮಕ್ಕಳೊಂದಿಗಿರಲು ಪ್ರಯತ್ನಿಸಿ. ಇದು ನಿಮ್ಮ ಸಂಬಂಧದಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳುತ್ತದೆ. ಆಗ ಮಕ್ಕಳು ನಿಮ್ಮೊಂದಿಗೆ ಸುಳ್ಳನ್ನೂ ಹೇಳುವುದಿಲ್ಲ, ನಿಮ್ಮಿಂದ ರಹಸ್ಯವನ್ನೂ ಮುಚ್ಚಿಡುವುದಿಲ್ಲ.
4. ಪ್ರೀತಿಯ ಗಿಫ್ಟ್ ನೀಡಿ: ಪುಟ್ಟ ಮಕ್ಕಳ ಮನಸ್ಸನ್ನು ಗೆಲ್ಲಲು ಗಿಫ್ಟ್ ತುಂಬಾ ಸಹಕಾರಿ. ಅವರಿಗೆ ನಿಮ್ಮ ಗಿಫ್ಟ್ ಗಳು ಸರ್ಪೈಸ್ ಕೊಡುವಂತಿರಲಿ. ಸಂಬಂಧ ಗಟ್ಟಿ ಇದ್ದಷ್ಟು, ನಿಮ್ಮ ಬಾಂಧವ್ಯವೂ ಚಿರಕಾಲ ಉಳಿಯುತ್ತದೆ.
5. ಫೇವರೆಟ್ ಫುಡ್ ಮಾಡಿ: ಮಕ್ಕಳಿಗೆ ಖುಷಿ ನೀಡುವ, ಅವರಿಗೆ ತುಂಬಾ ಇಷ್ಟವಾಗುವ ತಿಂಡಿಯನ್ನು ಆಗಾಗ್ಗೆ ಮಾಡಿ ನೀಡಿ. ಇದು ಮಕ್ಕಳನ್ನು ನಿಮ್ಮೆಡೆಗೆ ಒಲಿಸಿಕೊಳ್ಳುವ ಸರಳ ವಿಧಾನ. ವೀಕೆಂಡ್ ಗಳಲ್ಲಿ, ಬರ್ತ್ ಡೇ ಗಳಲ್ಲಿ ಅವರಿಗೆ ಪ್ರಿಯವಾದ ಆಹಾರವನ್ನು ಕೊಡಿಸಿದರೆ ನಿಮ್ಮ ಮಕ್ಕಳು ನಿಮಗೆ ಕಷ್ಟ ಕೊಡಲು ಹಿಂಜರಿಯುತ್ತಾರೆ.



Click it and Unblock the Notifications
