Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳನ್ನು ಸಕ್ಕರೆಯಿಂದ ದೂರವಿರಿಸುವುದು ಹೇಗೆ?

ಜಾನಿ ಜಾನಿ ಎಸ್ ಪಪ್ಪಾ
ಈಟಿಂಗ್ ಶುಗರ್
ನೋ ಪಪ್ಪಾ
ಟೆಲ್ಲಿಂಗ್ ಲೈಸ್
ನೋ ಪಪ್ಪಾ
ಓಪನ್ ಯುವರ್ ಮೌತ್
ಹ ಹ ಹಾ...
ಬಾಯಿ ತೆರೆದು ನೋಡಿದರೆ ಖಂಡಿತಾ ಹೆಚ್ಚಿನ ಮಕ್ಕಳ ಬಾಯಲ್ಲಿ ಸಕ್ಕರೆ ಅಥವಾ ಸಿಹಿತಿಂಡಿ ಇದ್ದೇ ಇರುತ್ತೆ. ಮಕ್ಕಳಿಗೆ ಸಿಹಿ ತಿಂಡಿಗಳೆಂದರೆ ಅಚ್ಚುಮೆಚ್ಚು. ಆದರೆ ಅತಿಯಾದ ಸಕ್ಕರೆ ಅವರ ಆರೋಗ್ಯದ ಮೇಲೆ ಮುಂದೆ ಕೆಟ್ಟ ಪರಿಣಾಮ ಬೀರಬಹುದು.
ಸ್ಥೂಲ ಕಾಯತೆ ಮತ್ತು ಹಲ್ಲಿನ ಗಂಭೀರ ತೊಂದರೆಯನ್ನೂ ಉಂಟು ಮಾಡಬಹುದು. ಆದ್ದರಿಂದ ಪೋಷಕರು ಒಂದಿಷ್ಟು ಗಮನ ಹರಿಸಿದರೆ ಮಕ್ಕಳು ಈ ತೊಂದರೆಗೆ ಒಳಗಾಗುವುದನ್ನು ತಪ್ಪಿಸಬಹುದು.
ಮಕ್ಕಳನ್ನು ಸಿಹಿ (ಸಕ್ಕರೆ)ಯಿಂದ ದೂರವಿರಿಸುವುದು ಹೇಗೆ?
* ತಿಂಡಿಗಳ ಬಗ್ಗೆ ನಿಗಾ ಇಡಿ: ಮಕ್ಕಳು ಏನು ತಿನ್ನುತ್ತಾರೆ ಎಂಬುದರ ಬಗ್ಗೆ ನಿಗಾವಹಿಸಿ. ಅವರಿಗೆ ಮೊದಲಿನಿಂದಲೇ ಆರೋಗ್ಯಕರ ತಿಂಡಿಗಳನ್ನು ಸೇವಿಸುವುದನ್ನು ರೂಢಿ ಮಾಡಿ. ಕ್ಯಾಲೊರಿ ಇಲ್ಲದ ಅಥವಾ ಕಡಿಮೆ ಕ್ಯಾಲೊರಿ ಇರುವ ತಿಂಡಿಗಳನ್ನು ತಿನ್ನಲು ಕೊಡಿ. ಇದೆಲ್ಲಕ್ಕಿಂತ ಹೆಚ್ಚಾಗಿ ಮೊದಲಿನಿಂದಲೇ ಅವರಿಗೆ ಹಸಿರು ತರಕಾರಿ, ಹಣ್ಣು ಮತ್ತು ಸಕ್ಕರೆ ಇಲ್ಲದ ಮೊಸರನ್ನು ಸೇವನೆ ಮಾಡುವುದನ್ನು ರೂಢಿಮಾಡಿ.
* ಜ್ಯೂಸ್ : ಜ್ಯೂಸ್ ಕಾರ್ನರ್ ಮುಂತಾದೆಡೆ ತಯಾರಿಸುವ ಹಣ್ಣುಗಳ ಜ್ಯೂಸ್ ನಲ್ಲಿ ಕಡಿಮೆ ವಿಟಮಿನ್ ಇದ್ದು, ಸಕ್ಕರೆ ಅಂಶ ತುಂಬಾ ಹೆಚ್ಚಿರುತ್ತದೆ. ಅದರಲ್ಲಿ ಶೇ.10 ರಷ್ಟೂ ಹಣ್ಣಿನ ಅಂಶವಿರುವುದಿಲ್ಲ. ಆದ್ದರಿಂದ ಮಕ್ಕಳಿಗೆ ಮನೆಯಲ್ಲೇ ಜ್ಯೂಸ್ ತಯಾರಿಸಿ ಅಥವಾ ಅದರ ಬದಲಾಗಿ ಬೇರೆ ಏನಾದರೂ ದ್ರವ ಪದಾರ್ಥವನ್ನು ಕುಡಿಯುವುದಕ್ಕೆ ನೀಡಿ.
* ಹಲ್ಲುಗಳ ಬಗ್ಗೆ ತಿಳಿಹೇಳಿ: ಸಿಹಿ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಆದರೆ ಸಿಹಿ ಸೀಮಿತವಾಗಿರಬೇಕು. ಇದರಿಂದ ಹಲ್ಲುಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುವ ಕುರಿತು ಮಕ್ಕಳಿಗೆ ತಿಳಿ ಹೇಳಬೇಕು. ಚೆನ್ನಾಗಿ ಹಲ್ಲುಜ್ಜುವುದು ಮತ್ತು ಬಾಯಿ ಮುಕ್ಕುಳಿಸುವುದನ್ನು ಕಲಿಸುವುದರೊಂದಿಗೆ ಆಗಾಗ್ಗೆ ವೈದ್ಯರ ಬಳಿ ಕರೆದುಕೊಂಡು ಉತ್ತಮ ಸಲಹೆಯನ್ನು ಪಡೆಯಬೇಕು.
*ಅಡುಗೆಗೆ ಮಕ್ಕಳ ಸಹಾಯ ಪಡೆಯಿರಿ: ಅಡುಗೆ ತಯಾರಿಸುವಾಗ ಮಕ್ಕಳ ಸಹಾಯವನ್ನೂ ಪಡೆಯಿರಿ. ಆ ಸಮಯದಲ್ಲಿ ಅವರಿಗೆ ಆಹಾರ, ಅದರಲ್ಲಿನ ಉಪಯೋಗ, ಯಾವ ಆಹಾರ ಆರೋಗ್ಯಕ್ಕೆ ಅತ್ಯುತ್ತಮ ಎಂಬುದರ ಬಗ್ಗೆ ಸೂಕ್ಷ್ಮವಾಗಿ ತಿಳಿಹೇಳಿ.
* ಪ್ರಶಂಸೆ ಮಾಡಿ: ನಿಮ್ಮ ಮಕ್ಕಳು ಆಹಾರದ ಬಗ್ಗೆ ಹೆಚ್ಚು ನಿಗಾ ವಹಿಸುತ್ತಿದ್ದರೆ ಅದನ್ನು ಪ್ರಶಂಸೆ ಮಾಡಿ. ಇದರಿಂದ ಅವರು ಇನ್ನೂ ಉತ್ತೇಜಿತರಾಗಿ ತಮ್ಮ ಆಹಾರ ಕ್ರಮವನ್ನು ಒಳ್ಳೆಯ ರೀತಿ ಬದಲಾಯಿಸಿಕೊಳ್ಳುತ್ತಾರೆ. ನಿಮ್ಮ ಮಕ್ಕಳು ಒಳ್ಳೆಯ ಆಹಾರವನ್ನು ಆಯ್ಕೆ ಮಾಡಿದಾಗ ಅದನ್ನು ಪ್ರಶಂಸಿಸಿ. ಇದು ಅವರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
* ರೋಲ್ ಮಾಡಲ್ ಆಗಿ: ನೀವು ನುಡಿದಂತೆ ನಡೆಯಿರಿ. ಆಗ ಮಕ್ಕಳೂ ಕೂಡ ಅದನ್ನು ತಾನಾಗಿಯೇ ಅನುಸರಿಸಲು ಕಲಿಯುತ್ತವೆ. ತಮ್ಮ ಪೋಷಕರು ಏನು ಮಾಡುತ್ತಾರೋ ಅದನ್ನು ಅನೇಕ ಮಕ್ಕಳು ಅನುಸರಿಸುತ್ತವೆ. ಆದ್ದರಿಂದ ನೀವೇ ನಿಮ್ಮ ಮಕ್ಕಳಿಗೆ ರೋಲ್ ಮಾಡಲ್ ಆಗಿ. ನೀವೇ ಬುದ್ಧಿ ಹೇಳಿ ನೀವೇ ಅದನ್ನು ಅನುಸರಿಸದಿದ್ದರೆ ನಿಮ್ಮ ಮಕ್ಕಳು ನಿಮ್ಮ ಮಾತನ್ನು ಯಾಕೆ ಕೇಳಬೇಕು?



Click it and Unblock the Notifications
