Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಳೆಗಾಲದಲ್ಲಿ ಮಕ್ಕಳಿಗೆ ಯಾವ ಬಟ್ಟೆ ಸೂಕ್ತ?

ಆದ್ದರಿಂದ ಈ ಸಂದರ್ಭದಲ್ಲಿ ಮಕ್ಕಳ ಬಟ್ಟೆ ಮತ್ತು ಆರೈಕೆ ಹೇಗಿರಬೇಕು ಎಂಬುದರ ಬಗ್ಗೆ ಪೋಷಕರಿಗೆ ಇಲ್ಲಿ ಕೆಲವು ಸಲಹೆಗಳಿವೆ.
1. ಮಕ್ಕಳ ಮೈಮೇಲೆ ಒಂದರ ಮೇಲೊಂದರಂತೆ ಹೆಚ್ಚು ಬಟ್ಟೆಗಳನ್ನು ತೊಡಿಸಬೇಡಿ. ಇದು ಮಕ್ಕಳಿಗೆ ಚಳಿಯಲ್ಲಿ ಉಸಿರಾಡಲು ಕಷ್ಟವಾಗಬಹುದು. ಹಾಕಲು ಮತ್ತು ತೆಗೆಯಲು ಸುಲಭವಾಗುವಂತಹ ಬಟ್ಟೆಗಳನ್ನೇ ತೊಡಿಸಿ.
2. ಮೈತುಂಬುವ ಬಟ್ಟೆಗಳನ್ನು ಮಕ್ಕಳಿಗೆ ತೊಡಿಸಿ, ಇದರಿಂದ ಈ ಥಂಡಿಯಲ್ಲಿ ಮಕ್ಕಳ ದೇಹ ಬೆಚ್ಚಗಿರುವಂತೆ ನೋಡಿಕೊಳ್ಳುತ್ತದೆ.
3. ತುಂಬಾ ಮಳೆ ಮತ್ತು ಚಳಿ ಇದ್ದ ಕಾಲದಲ್ಲಿ ಕಿವಿಗೆ ಹತ್ತಿ ತುಂಡು ಹಾಕುವುದನ್ನು ಮರೆಯಬೇಡಿ. ಉಣ್ಣೆ ಬಟ್ಟೆಯ ಸ್ಕಾರ್ಫ್ ಅಥವಾ ಕಿವಿಯನ್ನು ಮುಚ್ಚುವ ಟೋಪಿಯನ್ನು ಮಕ್ಕಳಿಗೆ ಧರಿಸಿರಿ.
4. ಉಣ್ಣೆ ಬಟ್ಟೆಯನ್ನು ಹಾಕುವ ಮುನ್ನ ಮಕ್ಕಳ ಮೈಗೆ ಚಳಿಗಾಲಕ್ಕೆಂದು ಇರುವ ಕ್ರೀಂ ಹಚ್ಚಬೇಕು. ಇಲ್ಲವೆಂದರೆ ಉಣ್ಣೆ ಬಟ್ಟೆ ಮಕ್ಕಳ ಮೇಮೇಲೆ ಅಲರ್ಜಿಯನ್ನು ಉಂಟುಮಾಡಬಹುದು. ಕಾಟನ್ ಬಟ್ಟೆಗಳನ್ನು ತೊಡಿಸಿದರೆ ಚಳಿಗೆ ಉತ್ತಮ.
5. ಮಕ್ಕಳನ್ನು ಆರಾಮವಾಗಿ ಮಲಗಲು ಬಿಡಿ. ಒಂದಕ್ಕಿಂತ ಹೆಚ್ಚು ಮೇಲೊದಿಕೆಯನ್ನು ಹೊದಿಸಬೇಡಿ. ಬೆಚ್ಚಗಿರುವ ಒಂದು ಹೊದಿಕೆ ಸಾಕು.
6. ಮಕ್ಕಳು ಮನೆಯಲ್ಲಿರುವಾಗ ಅವುಗಳ ಕೈಗಳಿಗೆ ಗ್ಲೌಸ್ ತೊಡಿಸಿ, ಕಾಲು ಚೀಲಗಳು ಸಹ ಇರುವಂತೆ ನೋಡಿಕೊಳ್ಳಿ. ಮಕ್ಕಳ ಕಾಲು ಬೆಚ್ಚಗಿದ್ದಷ್ಟು ದೇಹವೂ ಬೆಚ್ಚಗಿರುತ್ತದೆ. ಇದರಿಂದ ಬೇಗನೆ ನೆಗಡಿ, ಕೆಮ್ಮು, ಶೀತವಾಗುವುದನ್ನು ತಡೆಯಬಹುದು.
7. ಈ ಥಂಡಿ ವಾತಾವರಣದಲ್ಲಿ ಮಕ್ಕಳಿಗೆ ಕುಡಿಯಲು ಬಿಸಿ ನೀರನ್ನು ಕೊಡಬೇಕು. ಇದು ಮೈಯ್ಯನ್ನು ಬೆಚ್ಚಗಿರಿಸಿ ರೋಗಗಳು ತಗುಲುವುದನ್ನು ತಡೆಯುತ್ತದೆ.



Click it and Unblock the Notifications
