Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳಿಂದ ಪೋಷಕರು ಅಂತರ ಕಾಯ್ದುಕೊಳ್ಳಲೇಬಾರದು ಏಕೆ?
ಮಕ್ಕಳ ಜೊತೆಗೆ ಪೋಷಕರು ಯಾವಾಗಲೂ ಆತ್ಮೀಯವಾಗಿ ಇರಬೇಕು. ಯಾಕಂದ್ರೆ ಹೆಚ್ಚಿನ ಪೋಷಕರು ಮಕ್ಕಳನ್ನು ಸ್ಟ್ರಿಕ್ಟ್ ಆಗಿ ಸಾಕುತ್ತಾರೆ. ಇದ್ರಿಂದ ಮಕ್ಕಳು ಅಪ್ಪ-ಅಮ್ಮನ ಹತ್ತಿರ ಬರೋದಕ್ಕೂ ಭಯ ಪಡುತ್ತಾರೆ. ಪೋಷಕರ ಬಳಿ ಯಾವುದೇ ವಿಚಾರಗಳನ್ನು ಶೇರ್ ಮಾಡಿಕೊಳ್ಳೋದಿಲ್ಲ.
ಇದ್ರಿಂದ ಮುಂದೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಯಾಗುತ್ತೆ. ಹೀಗಾಗಿ ಪೋಷಕರು ಮಕ್ಕಳೊಂದಿಗೆ ಅಂತರವನ್ನು ಕಾಯ್ದುಕೊಳ್ಳೋದಕ್ಕೆ ಅವಕಾಶ ಕೊಡಬಾರದು. ಅಷ್ಟಕ್ಕೂ ಪೋಷಕರು ಮಕ್ಕಳ ಜೊತೆಗೆ ಉತ್ತಮ ಬಾಂಧವ್ಯವನ್ನು ಸೃಷ್ಟಿಸಿಕೊಳ್ಳೋದು ಹೇಗೆ ಅನ್ನೋದನ್ನು ತಿಳಿಯೋಣ.

1. ಆ ದಿನ ಏನಾಯ್ತು ಅನ್ನೋದ್ರ ಬಗ್ಗೆ ಮಾಹಿತಿ ಪಡೆಯಿರಿ
ಮಕ್ಕಳು ಶಾಲೆಗೆ ಹೋಗಿ ಬಂದ ನಂತರ ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಬಾರದು ಬದಲಾಗಿ ಅವರ ಬಳಿ ಹೋಗಿ ಮಾತನಾಡಿ. ಆ ದಿನ ಏನಾಯ್ತು ಅನ್ನೋದ್ರ ಬಗ್ಗೆ ಮಾಹಿತಿ ಪಡೆಯಿರಿ. ಒಳ್ಳೆಯ ಘಟನೆ ಅಥವಾ ಕೆಟ್ಟ ಘಟನೆಗಳು ನಡೆದಿರಬಹುದು. ಈ ಬಗ್ಗೆ ತಿಳಿದುಕೊಂಡು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ. ಇದ್ರಿಂದ ಅವರು ಭವಿಷ್ಯದಲ್ಲಿ ತಪ್ಪು ದಾರಿ ಹಿಡಿಯೋದನ್ನು ತಡೆ ಹಿಡಿಯಬಹುದು.
2. ಮಕ್ಕಳ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ
ಮಕ್ಕಳು ಬೆಳೆಯುತ್ತಿದ್ದಂತೆ ಅವರ ಮನಸ್ಸಿನಲ್ಲಿ ಸಾವಿರಾರು ಪ್ರಶ್ನೆಗಳು ಹುಟ್ಟುಕೊಳ್ಳುತ್ತದೆ. ಹೆಜ್ಜೆ ಹೆಜ್ಜೆಗೂ ಪೋಷಕರನ್ನು ಅವರು ಪ್ರಶ್ನೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವು ಪೋಷಕರು ಮಕ್ಕಳನ್ನು ಗದರಿಸುತ್ತಾರೆ. ಹೀಗಾಗಿ ಮಕ್ಕಳು ತಮ್ಮ ಪ್ರಶ್ನೆಗೆ ಉತ್ತರವನ್ನು ಬೇರೆಲ್ಲಾದರೂ ಹುಡುಕಬಹುದು. ಹೀಗಾಗಿ ಪೋಷಕರಾಗಿ ಅವರೆಲ್ಲಾ ಪ್ರಶ್ನೆಗೆ ನೀವು ಜಾಣ್ಮೆಯಿಂದ ಉತ್ತರಿಸೋದು ಒಳ್ಳೆಯದು.
3. ಮಕ್ಕಳಲ್ಲಿ ಅತಿಯಾಗಿ ನಿರೀಕ್ಷೇ ಇಟ್ಟುಕೊಳ್ಳಬೇಡಿ
ಕೆಲವೊಂದು ಸಲ ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತಾರೆ. ಪ್ರತಿ ಬಾರಿ ತರಗತಿಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕ ತೆಗೆದುಕೊಳ್ಳಬೇಕು. ಒಂದು ವೇಳೆ ಒಂಚೂರು ಕಲಿಯೋದ್ರಲ್ಲಿ ಹಿಂದೆ ಬಿದ್ದರೂ ಅವರ ಮೇಲೆ ಒತ್ತಡ ಹಾಕೋದಕ್ಕೆ ಶುರು ಮಾಡ್ತಾರೆ. ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ.
ಕೆಲ ಪೋಷಕರಂತೂ ಮಕ್ಕಳನ್ನು ನಿಂದಿಸುತ್ತಾರೆ. ನೀನು ಯಾವುದಕ್ಕೂ ಪ್ರಯೋಜನವಿಲ್ಲ. ನಿನ್ನಿಂದ ಏನನ್ನೂ ಸಾಧಿಸೋದಕ್ಕೆ ಆಗೋದಿಲ್ಲ ಎಂದು ಹೇಳುತ್ತಾರೆ. ಈ ಮಾತುಗಳು ಮಕ್ಕಳ ಮನಸ್ಸಿನ ಮೇಲೆ ನೇರ ಪರಿಣಾಮವನ್ನು ಬೀರಬಹುದು. ಹೀಗಾಗಿ ಈ ವಿಚಾರದಲ್ಲಿ ಕೊಂಚ ಜಾಗರೂಕರಾಗಿರಿ. ಮಕ್ಕಳ ಮೇಲೆ ಅತಿಯಾಗಿ ನಿರೀಕ್ಷೇ ಇಡಬೇಡಿ. ಅದರ ಬದಲು ಅವರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದ್ಯೋ ಅದಕ್ಕೆ ಪ್ರೋತ್ಸಾಹ ನೀಡಿ.
4. ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸಿಸಿ
ಮಕ್ಕಳು ದೊಡ್ಡ ಕೆಲಸಗಳನ್ನೇ ಮಾಡಬೇಕೆಂದೇನಿಲ್ಲ. ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಿದಾಗಲೂ ಅವರಿಗೆ ಪ್ರಶಂಸೆ ನೀಡುವುದು ಪೋಷಕರ ಕರ್ತವ್ಯ. ಉದಾಹರಣೆಗೆ ಅವರಾಗಿಯೇ ಶಾಲೆಗೆ ತಯಾರಾದರೆ, ತಮ್ಮ ಸ್ನೇಹಿತರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾಗ ಅವರ ಒಳ್ಳೆಯ ನಡತೆಗೆ ಬೆನ್ನು ತಟ್ಟಿ. ಇದರಿಂದ ನೀವು ಅವರನ್ನು ಮತ್ತಷ್ಟು ಒಳ್ಳೆಯ ಕೆಲಸ ಮಾಡೋದಕ್ಕೆ ಬೆನ್ನು ತಟ್ಟಿದಂತಾಗುತ್ತದೆ.
5. ಮಕ್ಕಳಿಗೆ ಪ್ರೇರಣೆ ನೀಡಿ
ಮಕ್ಕಳು ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಪ್ರತಿಯೊಬ್ಬ ಪೋಷಕರು ಮಕ್ಕಳ ಏಳಿಗೆ ಬಗ್ಗೆ ಚಿಂತೆ ಮಾಡೋದು ಸಹಜ. ಚಿಕ್ಕಂದಿನಿಂದಲೇ ನಿಮ್ಮ ಮಕ್ಕಳಿಗೆ ಮಹಾನ್ ನಾಯಕರ ಕಥೆಯನ್ನು ಹೇಳಿ ಬೆಳೆಸಿ. ಅವರು ಸಾಧನೆಯ ಮೆಟ್ಟಿಲು ಹತ್ತೋದಕ್ಕೆ ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನೋದನ್ನು ಅರ್ಥ ಮಾಡಿಸಿ. ಇದರಿಂದ ಅವರಿಗೆ ಪ್ರೇರೇಪಣೆ ಸಿಕ್ಕಂತಾಗುತ್ತದೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ಮಕ್ಕಳಲ್ಲಿ ನಾವು ಯಾವ ರೀತಿಯ ಜೀವನ ಮೌಲ್ಯಗಳನ್ನು ತುಂಬುತ್ತೇವೆಯೋ ಮಕ್ಕಳು ಅದನ್ನೇ ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಹೀಗಾಗಿ ಆದಷ್ಟು ಮಕ್ಕಳಿಗೆ ಹತ್ತಿರವಾಗಿರಿ ಮತ್ತು ಅವರೊಂದಿಗೆ ಆತ್ಮೀಯವಾಗಿರಿ.



Click it and Unblock the Notifications
