For Quick Alerts
ALLOW NOTIFICATIONS  
For Daily Alerts

ಅಂಡೋತ್ಪತ್ತಿ ಸಮಸ್ಯೆ: ಮಹಿಳೆಯರು ಸಂತಾನೋತ್ಪತ್ತಿ ಸಾಮರ್ಥ್ಯ ಕಾಪಾಡಲು ಏನು ಮಾಡಬೇಕು?

|

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಅಂಡೋತ್ಪತ್ತಿಯಲ್ಲಿ (ಓವ್ಯೂಲೇಷನ್)ನಲ್ಲಿ ಸಮಸ್ಯೆ ಕಂಡು ಬರುತ್ತಿದೆ. ನಾಲ್ಕು ಮಹಿಳೆಯರಲ್ಲಿ ಒಬ್ಬರಿಗೆ ಅಂಡೋತ್ಪತ್ತಿ ಸಮಸ್ಯೆ ಕಂಡು ಬರುತ್ತಿದೆ, ಇದರಿಂದಾಗಿ ಮಕ್ಕಳಾಗದಿರುವ ಸಮಸ್ಯೆ ಹೆಚ್ಚಾಗುತ್ತಿದೆ.

ಅಂಡೋತ್ಪತ್ತಿಯ ಸಮಸ್ಯೆಯ ಬಗ್ಗೆ ದೇಹವು ಸೂಚನೆ ನೀಡುತ್ತಿರುತ್ತದೆ. ಆದರೆ ಪ್ರಾರಂಭದಲ್ಲಿ ಈ ಬಗೆ ಹೆಣ್ಮಕ್ಕಳು ಗಮನ ನೀಡುವುದಿಲ್ಲ, ಹೀಗಾಗಿ ಮದುವೆಯ ನಂತರ ಮಕ್ಕಳಾಗಲು ಅಡಚಣೆ ಉಂಟಾಗುವುದು.

ಓವ್ಯೂಲೇಷನ್ ಕಾಯಿಲೆ ಎಂದರೇನು? ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ ಎಂದು ನೋಡೋಣ:

ಅಂಡೋತ್ಪತ್ತಿ ಕಾಯಿಲೆ ಎಂದರೇನು?

ಅಂಡೋತ್ಪತ್ತಿ ಕಾಯಿಲೆ ಎಂದರೇನು?

ಬಹುತೇಕ ಮಹಿಳೆಯರಲ್ಲಿ ಬಂಜೆತನಕ್ಕೆ ಅಂಡೋತ್ಪತ್ತಿಯಲ್ಲಿನ ತೊಂದರೆ ಕಾರಣವಾಗಿರುತ್ತದೆ. ಅಂಡಾಣುಗಳು ಸರಿಯಾದ ರೀತಿಯಲ್ಲಿ ಬಿಡುಗಡೆಯಾಗದಿದ್ದರೆ ಗರ್ಭಧಾರಣೆಯಾಗುವುದಿಲ್ಲ. ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರಲ್ಲಿ ಈ ರೀತಿಯ ಸಮಸ್ಯೆ ಕಾಣುತ್ತದೆ. ಅಲ್ಲದೆ ಕೆಲವೊಂದು ಔಷಧಗಳು ಕೂಡ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟು ಮಾಡುತ್ತದೆ, ಇದರಿಂದ ಅಂಡೋತ್ಪತ್ತಿಯಲ್ಲಿ ತೊಂದರೆ ಉಂಟಾಗುವುದು. ಈ ರೀತಿ ಅಂಡೋತ್ಪತ್ತಿಗೆ ತೊಂದರೆಯಾಗುವುದು ಅಥವಾ ಕಡಿಮೆ ಅಂಡಾಣುಗಳ ಬಿಡುಗಡೆಯಾಗುವುದನ್ನು ಅಂಡೋತ್ಪತ್ತಿ ಕಾಯಿಲೆ ಎಂದು ಕರೆಯಲಾಗುವುದು.

ಅಂಡೋತ್ಪತ್ತಿ ಕಾಯಿಲೆ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಹೇಗೆ ಪರಿಣಾಮ ಬೀರುವುದು?

ಅಂಡೋತ್ಪತ್ತಿ ಕಾಯಿಲೆ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಹೇಗೆ ಪರಿಣಾಮ ಬೀರುವುದು?

* ಅಂಡೋತ್ಪತ್ತಿ ಸಮಸ್ಯೆಯಿದ್ದರೆ ಬಂಜೆತನ ಉಂಟಾಗುವುದು. ಯಾವಾಗ ದೇಹದಲ್ಲಿ ಅಂಡೋತ್ಪತ್ತಿಗಳು ಸರಿಯಾಗಿ ಬಿಡುಗಡೆಯಾಗುವುದೋ ಆಗ ಮಾತ್ರ ದೇಹಕ್ಕೆ ಸಂತಾನೋತ್ಪತ್ತಿ ಸಾಮರ್ಥ್ಯ ವಿರುತ್ತದೆ.

* ಹಾರ್ಮೋನ್‌ಗಳಾದ GnRH ಮತ್ತು FSH ಅಂಡಾಣುಗಳನ್ನು ಫಲವತ್ತತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

* ಮುಟ್ಟಾದ 28ನೇ ದಿನದಲ್ಲಿ ಅಂಡೋತ್ಪತ್ತಿಯಾಗುವುದು, ಕೆಲವರಲ್ಲಿ ಒಂದೆರಡು ದಿನಗಳ ವ್ಯತ್ಯಾಸ ಉಂಟಾಗುವುದು. ಅದೇ ಅನಿಯಮಿತ ಮುಟ್ಟಿನ ಸಮಸ್ಯೆಯಿದ್ದಾಗ ಅಂಡೋತ್ಪತ್ತಿಗೆ ಕೂಡ ಅಡಚಣೆ ಉಂಟಾಗುವುದು, ಇದರಿಂದ ಬಂಜೆತನದ ಸಮಸ್ಯೆ ಹೆಚ್ಚುವುದು.

 ಓವ್ಯೂಲೇಷನ್‌ ಕಾಯಿಲೆಗಳೆಂದರೆ

ಓವ್ಯೂಲೇಷನ್‌ ಕಾಯಿಲೆಗಳೆಂದರೆ

ಪಿಸಿಒಎಸ್ ಸಮಸ್ಯೆ

ಬಹುತೇಕ ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ. ಹಾರ್ಮೋನ್‌ಗಳ ವ್ಯತ್ಯಾಸ ಹಾಗೂ ಅನಾರೋಗ್ಯಕರ ಜೀವನಶೈಲಿ ಈ ಪಿಸಿಒಎಸ್‌ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ಪಿಸಿಒಎಸ್‌ ಇರುವ ಮಹಿಳೆಯರಲ್ಲಿ ಟೆಸ್ಟೋಸ್ಟಿರೋನೆ ಅಂಶ ಅಧಿಕವಾಗುವುದು. ಇದರಿಂದ ಸಿಸ್ಟ್‌ ಸಮಸ್ಯೆ ಉಂಟಾಗುವುದು. ಟೆಸ್ಟೋಸ್ಟಿರೋನೆ ಹೆಚ್ಚಾದರೆ ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು, ಈ ಕಾರಣದಿಂದಾಗಿ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು.

ಹೈಪೋಥಾಲಾಮಿಕ್ ಅಮೆನೋರಿಯಾ:

ಈ ಕಾಯಿಲೆ ಇರುವ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಕಂಡು ಬರುವುದು ಇನ್ನು ಕೆಲವರಿಗೆ ಋತುಚಕ್ರ ಪ್ರಾರಂಭವಾಗುವುದೇ ಇಲ್ಲ. ಇದರಿಂದಾಗಿ ಅತಿಯಾದ ಮೈ ತೂಕ ಅಥವಾ ಅತಿ ಕಡಿಮೆ ಮೈ ತೂಕ ಹೊಂದಿರುತ್ತಾರೆ. ಅತ್ಯಧಿಕ ಅಥವಾ ಅತೀ ಕಡಿಮೆ ಮೈ ತೂಕ, ತುಂಬಾ ತೂಕ ಕಡಿಮೆಯಾಗುವುದು ಅಥವಾ ತುಂಬಾನೇ ಹೆಚ್ಚಾಗುವುದು ಇವುಗಳಿಂದ ಹೈಪೋಥಾಲಾಮಿಕ್ ಅಮೆನೋರಿಯಾ ಸಮಸ್ಯೆ ಕಂಡು ಬರುವುದು.

ಪ್ರೀ ಮೆಚ್ಯೂರ್ ಮೆನೋಪಾಸ್‌:

ಸಾಮಾನ್ಯವಾಗಿ ಮೆನೋಪಾಸ್‌ 54 ವರ್ಷದ ನಂತರ ಕಂಡು ಬರುತ್ತದೆ, ಆದರೆ ಕೆಲ ಮಹಿಳೆರಲ್ಲಿ ವಯಸ್ಸು 35 ದಾಟುತ್ತಿದ್ದಂತೆ ಈ ಬಗೆಯ ಸಮಸ್ಯೆ ಕಂಡು ಬರುವುದು. ಅಟೋಇಮ್ಯೂನೆ ಸಮಸ್ಯೆ ಇರುವವರಿಗೆ, ಕೀಮೋಥೆರಪಿ ಚಿಕಿತ್ಸೆ ಪಡೆದುಕೊಂಡವರಿಗೆ ಅಥವಾ ಏನಾದರೂ ಜೆನೆಟಿಕ್ ಸಮಸ್ಯೆ ಇದ್ದರೆ ಪ್ರೀ ಮೆಚ್ಯೂರ್ ಮೆನೋಪಾಸ್‌ ಸಮಸ್ಯೆ ಉಂಟಾಗುವುದು.

ಹಾರ್ಮೋನ್‌ಗಳ ಅಸಮತೋಲನ

ಕೆಲವೊಂದು ಹಾರ್ಮೋನ್‌ಗಳ ಅಸಮತೋಲನದಿಂದಾಗಿ ಅಂಡೋತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾಗಿ ಹಾರ್ಮೋನ್‌ಗಳ ಕಾಯಿಲೆ ಉಂಟಾಗುವುದು. ಮೇಧೋಜೀರಕ ಗ್ರಂಥಿಯಲ್ಲಿ ಪ್ರೊಲಾಕ್ಟಿನ್‌ ಹಾರ್ಮೋನ್‌ಗಳ ವ್ಯತ್ಯಾಸ ಉಂಟಾದಾಗ ಶರೀರಿದಲ್ಲಿ ಈಸ್ಟ್ರೋಜಿನ್ ಹೆಚ್ಚಾಗಿ ಬಂಜೆತನ ಉಂಟಾಗುವುದು.

ಅಂಡೋತ್ಪತ್ತಿ ಕಾಯಿಲೆಗೆ ಚಿಕಿತ್ಸೆಯೇನು?

ಅಂಡೋತ್ಪತ್ತಿ ಕಾಯಿಲೆಗೆ ಚಿಕಿತ್ಸೆಯೇನು?

ಆರೋಗ್ಯಕರ ಅಂಡೋತ್ಪತ್ತಿಯಾಗುವಂತೆ ಮಾಡುವುದೇ ಈ ಚಿಕಿತ್ಸೆಗಳ ಪ್ರಮುಖ ಉದ್ದೇಶವಾಗಿದೆ

1 ಫರ್ಟಿಲಿಟಿ ಡ್ರಗ್:

ಕೆಲವರಿಗೆ ಮಾತ್ರೆ ನೀಡಲಾಗುವುದು, ಇನ್ನು ಕೆಲವರಿಗೆ ಲಸಿಕೆ ಚಿಕಿತ್ಸೆ ನೀಡಲಾಗುವುದು. ಮೊದಲಿಗೆ ಮಾತ್ರೆ ಚಿಕಿತ್ಸೆ ನೀಡಲಾಗುವುದು, ಅದು ಫಲಕಾರಿಯಾಗದೇ ಇದ್ದರೆ ಲಸಿಕೆ ನೀಡಿ ಅಂಡಾಣುಗಳನ್ನು ಉತ್ಪತ್ತಿ ಮಾಡಲಾಗುವುದು.

2. ಜೀವನಶೈಲಿಯಲ್ಲಿ ಬದಲಾವಣೆ

ಅಂಡೋತ್ಪತ್ತಿ ಸಮಸ್ಯೆ ಇರುವವರು ಆರೋಗ್ಯಕರ ಜೀವನಶೈಲಿ ಕಡೆ ತುಂಬಾನೇ ಗಮನ ನೀಡಬೇಕಾಗಿದೆ. ಪ್ರತಿದಿನ ವ್ಯಾಯಾಮ ಮಾಡಿ, ಧ್ಯಾನ, ಯೋಗ ಮಾಡಿ ಇದರಿಂದ ಮಾನಸಿಕ ಒತ್ತಡ ನಿಯಂತ್ರಿಸಬಹುದು. ಆರೋಗ್ಯಕರ ಆಹಾರಶೈಲಿ ಪಾಲಿಸಿ. ಆಹಾರಶೈಲಿ ಹಾಗೂ ವ್ಯಾಯಾಮದ ಮುಖಾಂತರ ಸಮತೂಕ ಹೊಂದಲು ಪ್ರಯತ್ನಿಸಬೇಕು.

3. ಥೈರಾಯ್ಡ್ ಹಾರ್ಮೋನ್‌ ಬದಲಾವಣೆಯ ಥೆರಪಿ

ಥೈರಾಯ್ಡ್‌ ಹಾರ್ಮೋನ್‌ಗಳ ನಿಯಂತ್ರಣಕ್ಕೆ ಮಾತ್ರೆಯನ್ನು ನೀಡಲಾಗುವುದು. ಈ ಮೂಲಕ ಥೈರಾಯ್ಡ್ ಹಾರ್ಮೋನ್‌ಗಳನ್ನು ನಿಯಂತ್ರಣಕ್ಕೆ ತಂದು ಮುಟ್ಟು ಸರಿಯಾಗಿ ಆಗುವಂತೆ ಮಾಡಿ ಅಂಡಾಣುಗಳು ಆರೋಗ್ಯಕರವಾಗಿ ಉತ್ಪತ್ತಿ ಮಾಡುವಂತೆ ಮಾಡಲಾಗುವುದು.

ಕೊನೆಯದಾಗಿ:

ಗರ್ಭಧಾರಣೆಯಾಗಬೇಕೆಂದರೆ ವೀರ್ಯಾಣುಗಳು ಅಂಡಾಣುಗಳ ಜೊತೆ ಸೇರಿ ಭ್ರೂಣ ರೂಪುಗೊಳ್ಳುವುದು. ಅಂಡಾಣಗಳು ಆರೋಗ್ಯಕರವಾಗಿದ್ದರೆ ಮಾತ್ರ ಭ್ರೂಣ ರೂಪುಗೊಳ್ಳಲು ಸಾಧ್ಯ. ಆದ್ದರಿಂದ ಅಂಡೋತ್ಪತ್ತಿ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಜೀವನಶೈಲಿ ಮೂಲಕ ಈ ಕಾಯಿಲೆ ಬಾರದಂತೆ ತಡೆಗಟ್ಟಿ.

English summary

Ovulation Disorders: How Women Can Protect Their Fertility in Kannada

Ovulation Disorders: what are the Ovulation Disorders, how you can avoid this problem read on...
Story first published: Tuesday, December 27, 2022, 16:22 [IST]
X
Desktop Bottom Promotion