Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ನಿಮ್ಮ ಮಕ್ಕಳೂ ಇಂಗ್ಲೀಷ್ ಮಾತಾಡಬೇಕಾ.? ಹೀಗೆ ಮಾಡಿ ಸಾಕು..!
ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಸಾಕುವುದು ಸ್ಪರ್ಧೆ ಅಂತೆ ಪೋಷಕರು ತೆಗೆದುಕೊಂಡಿದ್ದಾರೆ. ನಮ್ಮ ಮಕ್ಕಳು ಎಲ್ಲಿ ದಡ್ಡರಾಗುತ್ತಾರೋ, ಅಲ್ಲರಂತೆ ಇರುವುದಕ್ಕಿಂತ ವಿಶೇಷವಾದ ಪ್ರತಿಭೆ ಅವರಲ್ಲಿ ಇರಬೇಕು ಎಂದು ಅವರು ಆಸೆ ಪಡುತ್ತಾರೆ. ಹೀಗಾಗಿ 2ನೇ ವರ್ಷದಿಂದಲೇ ಅವರಿಗೆ ಓದು, ಬರಹ, ಬೇಬಿ ಸಿಟ್ಟಿಂಗ್, ಪ್ರಿ ಎಲ್‌ಕೆಜಿ, ಎಲ್‌ಕೆಜಿ ಹೀಗೆ ಅವರನ್ನು ಚುರುಕಾಗಿಸುವ ತಂತ್ರಕ್ಕೆ ಬೀಳುತ್ತಾರೆ.
ಮಕ್ಕಳ ಈ 10 ವರ್ಷದಲ್ಲಿಯೇ ನೀವು ಏನೇ ಕಲಿಸಿದರು ಬಹಳ ಸುಲಭವಾಗಿ ವೇಗವಾಗಿ ಕಲಿತುಬಿಡುತ್ತಾರೆ. ಅವರ ಮೆದುಳು ಸಹ ಅಷ್ಟೇ ವೇಗವಾಗಿ ಬೆಳವಣಿಗೆಯಾಗುವುದರಿಂದ ಬೇಗ ಕಲಿಯಲು ಆರಂಭಿಸುತ್ತಾರೆ. ಅದರಲ್ಲೂ ಭಾಷೆಯನ್ನು ನೀವು ಕಲಿಸಬೇಕಾದರೆ ಈ ವರ್ಷದಲ್ಲಿಯೇ ಹೇಳಿಕೊಡಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳು 6ರಿಂದ 7 ಭಾಷೆಯನ್ನು ಕಲಿಯುವ ಸಾಮರ್ಥ್ಯ ಹೊಂದಿರುತ್ತಾರೆ. ಆದರೆ ದೊಡ್ಡವರಾದ ಮೇಲೆ ಕಲಿಯುವುದು ಬಹಳ ಕಷ್ಟವಾಗುತ್ತದೆ.

ಈಗಂತು ಮಕ್ಕಳು ಇಂಗ್ಲೀಷನಲ್ಲೇ ಮಾತನಾಡಬೇಕು ಎಂಬುದೇ ಹೆಚ್ಚಿನ ಪೋಷಕರ ಆಸೆಯಾಗಿರುತ್ತೆ. ಹೀಗಾಗಿ ಅವರಿಗೆ ಇಂಗ್ಲೀಷ್ ರೈಮ್, ನೋಟ್‌ಬುಕ್ ಸೇರಿ ಪೋಷಕರಿಗೆ ಬರುವ ಅಲ್ಪ ಸ್ವಲ್ಪ ಇಂಗ್ಲೀಷ್ ಅನ್ನೇ ಮಾತನಾಡುತ್ತಿರುತ್ತಾರೆ. ಹಾಗಾದ್ರೆ ಮಕ್ಕಳಿಗೆ ಸುಲಭವಾಗಿ ಇಂಗ್ಲೀಷ್ ಕಲಿಸುವುದು ಹೇಗೆ? ಮಕ್ಕಳು ಸುಲಭವಾಗಿ ಇಂಗ್ಲೀಷ್‌ನಲ್ಲಿ ಮಾತನಾಡುವಂತೆ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಣ್ಣ ಪುಟ್ಟ ಪದಗಳಿಂದ ಆರಂಭಿಸಿ
ಮಕ್ಕಳಿಗೆ ಒಂದೇ ಬಾರಿಗೆ ಇಂಗ್ಲೀಷ್ ಕಲಿಸಲು ಸಾಧ್ಯವಿಲ್ಲ. ಆದ್ರೆ ಮನೆಯಲ್ಲಿ ಸಣ್ಣ ಪುಟ್ಟ ಪದಗಳನ್ನು ಮಕ್ಕಳ ಕಿವಿಗೆ ಬೀಳುವಂತೆ ಮಾಡಿ. ನೀವು ನಿತ್ಯ ಬಳಸುವ ವಸ್ತುಗಳನ್ನು ಇಂಗ್ಲೀಷ್‌ನಲ್ಲಿ ಬಳಸಿ ಹೇಳುವುದರಿಂದ ಮಕ್ಕಳಿಗೂ ಇಂಗ್ಲೀಷ್ ಪದ ತಿಳಿಯುತ್ತದೆ. ಉದಾಹರಣೆಗೆ ನೀರಿಗೆ ವಾಟರ್, ತರಕಾರಿಗೆ ವೆಗಿಟೇಬಲ್ಸ್, ಆಹಾರಕ್ಕೆ ಫುಡ್, ಟೈಮ್, ಇಂಗ್ಲೀಷ್‌ನಲ್ಲಿ ಹೆಸರು ಏನು ಎಂಬುದನ್ನು ಕೇಳುವುದು. ಹೀಗೆ ನಿತ್ಯವೂ ಈ ರೀತಿ ಇಂಗ್ಲೀಷ್ ಪದಗಳು ಮಕ್ಕಳ ಕಿವಿಗೆ ಬೀಳುತ್ತಿದ್ದರೆ ಮುಂದೆ ಸುಲಭವಾಗಿ ಇಂಗ್ಲೀಷ್ ಕಲಿಕೆಗೆ ಸಹಾಯವಾಗಲಿದೆ. ಹಾಗೆ ಈ ಪದಗಳಿಗೆ ಕನ್ನಡ ಪದಗಳನ್ನು ಸಹ ತಿಳಿಸಿ. ಇಲ್ಲದಿದ್ದರೆ ಈ ವಸ್ತುಗಳನ್ನು ಗುರುತಿಸುವುದು ಕಷ್ಟವಾಗಬಹುದು.
ಸಂಬಂಧಗಳನ್ನು ಇಂಗ್ಲೀಷ್‌ನಲ್ಲಿ ತಿಳಿಸುವುದು
ಮಕ್ಕಳು ಹತ್ತಾರು ಜನರ ಸುತ್ತ ಬೆಳೆಯುತ್ತವೆ. ಹೀಗಾಗಿ ಈ ಸಂಬಂಧಗಳನ್ನು ಇಂಗ್ಲೀಷ್‌ನಲ್ಲಿ ಮಕ್ಕಳಿಗೆ ತಿಳಿಸಿಕೊಡಿ, ಮದರ್, ಫಾದರ್, ಬ್ರದರ್, ಸಿಸ್ಟರ್, ಗ್ರ್ಯಾಂಡ್ ಮದರ್, ಗ್ರ್ಯಾಂಡ್ ಫಾದರ್, ಹೀಗೆ ಎಲ್ಲಾ ಸಂಬಂಧಗಳನ್ನು ಇಂಗ್ಲೀಷ್‌ನಲ್ಲಿ ತಿಳಿಸುತ್ತಿರಿ.
ಪ್ರಾಣಿ ಪಕ್ಷಿಗಳ ಹೆಸರು
ಮಕ್ಕಳು ಪದಗಳಿಗಿಂತಲೂ ಚಿತ್ರಗಳಿಗೆ ಬಹುಬೇಗ ಆಕರ್ಷಿತರಾಗುತ್ತಾರೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿ ಅವರಿಗೆ ಪ್ರಾಣಿ ಮತ್ತು ಪಕ್ಷಿಗಳ ಹೆಸರನ್ನು ಇಂಗ್ಲೀಷ್‌ನಲ್ಲಿ ತಿಳಿಸಬೇಕು. ಅದರಲ್ಲೂ ಚಿತ್ರದ ಜೊತೆಗೆ ಅವರಿಗೆ ವಿವರಿಸಬೇಕು. ಈ ರೀತಿ ವಿವರಿಸುವುದು ಮಕ್ಕಳ ಮನಸ್ಸಿನಲ್ಲಿ ಗಾಢವಾಗಿ ಉಳಿದು ಬಿಡುತ್ತವೆ. ಇದು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ.
ಆಂಗ್ಲ ಪದಗಳನ್ನು ಪರಿಚಯಿಸಿ
ಮಕ್ಕಳಿಗೆ ನಿಧಾನವಾಗಿ ಒಂದೊಂದೆ ಆಂಗ್ಲ ಪದಗಳನ್ನು ಪರಿಚಯಿಸಬೇಕು. ಮೊದಲು ಸಣ್ಣ ಸಣ್ಣ ಪದಗಳಿಂದ ಆರಂಭಿಸಿ ನಂತರ ಒಂದೊಂದೆ ಪದಗಳ ಹೇಳಿ ಅವರಿಗೂ ಮನದಟ್ಟು ಮಾಡಬೇಕು. ಹಾಗೆ ವಸ್ತುಗಳನ್ನು ಅವರ ಮುಂದಿಟ್ಟು ಇಂಗ್ಲೀಷ್‌ನಲ್ಲಿ ಅದರ ಹೆಸರು ಹೇಳುವಂತೆ ಕೇಳುವುದು. ಸರಿಯಾಗಿ ಹೇಳಿದರೆ ರಿವಾರ್ಡ್ ನೀಡಬೇಕು.



Click it and Unblock the Notifications