Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಮಕ್ಕಳು ಓದಿನತ್ತ ಗಮನಕೊಡುತ್ತಿಲ್ಲವೇ? ಈ ಟಿಪ್ಸ್ ಫಾಲೋ ಮಾಡಿ!
ಮಕ್ಕಳಿರುವ ಮನೆಯಲ್ಲಿ ಯಾವ ಸಮಸ್ಯೆ ಇರಲ್ಲ ಹೇಳಿ. ಮಕ್ಕಳು ಇದ್ದರೆ ಮನೆಯೆಲ್ಲಾ ಅವರದ್ದೆ ಸದ್ದು, ಹೀಗಾಗಿ ಹಿರಿಯರು ಮಕ್ಕಳಿರಬೇಕು ಮನೆ ತುಂಬಾ ಎಂಬ ನುಡಿ ಹೇಳುತ್ತಿದ್ದರು. ಆದ್ರೆ ಈಗಿನ ಮಕ್ಕಳು ಹತ್ತು ಹಲವು ಸಮಸ್ಯೆಗೆ ಒಳಗಾಗುವುದು ನಾವು ನೋಡಿದ್ಧೇವೆ. ಅದ್ರಲ್ಲೂ ಮಕ್ಕಳು ತಿಂಡಿ, ಊಟ ಮಾಡುವುದಿಲ್ಲ ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಇದು ಎಲ್ಲರ ಮನೆಯ ಸಮಸ್ಯೆ.
ಈ ತಲೆನೋವಿನ ಜೊತೆ ಇತ್ತೀಚಿಗೆ ಕೆಲವೊಂದು ಸಮಸ್ಯೆಗಳು ಎದುರಾಗಿವೆ. ಮೊಬೈಲ್ ಬಳಸುವುದು, ಟಿವಿ ನೋಡುವುದು, ವಿಡಿಯೋ ಗೇಮ್‌ನಲ್ಲಿ ಮುಳುಗಿರುವುದು ಇಂತಹ ಸಮಸ್ಯೆ ಇದು ಹೇಗಾದರು ಕಡಿಮೆ ಮಾಡಬಹುದು ಎಂದುಕೊಳ್ಳಿ, ಆದ್ರೆ ಇದಕ್ಕಿಂತ ದೊಡ್ಡ ಸಮಸ್ಯೆ ಒಂದಿದೆ. ಮಕ್ಕಳು ಓದಿನ ಕಡೆ ಗಮನ ಕೊಡುವುದಿಲ್ಲ ಎಂಬುದು.

ಹೌದು ಮಕ್ಕಳು ಓದಿನ ಕಡೆ ಗಮನ ಹರಿಸುತ್ತಿಲ್ಲ ಎಂಬುದು ಎಲ್ಲಾ ಪೋಷಕರ ಅದ್ರಲ್ಲೂ ತಾಯಂದಿರ ದೂರಾಗಿದೆ. ಮಕ್ಕಳನ್ನ ಈಗ ದುಬಾರು ಶುಲ್ಕ ನೀಡಿ ಐಷಾರಾಮಿ ಶಾಲೆಗೆ ಸೇರಿಸಿರುತ್ತಾರೆ. ಆದ್ರೆ ಮಕ್ಕಳು ಆಂತ್ರ ಓದುವ ಕಡೆ ಸ್ವಲ್ಪವೂ ಗಮನಕೊಡುವುದಿಲ್ಲ. ಪರೀಕ್ಷೆ ಬಂತೆಂದರೆ ಮಕ್ಕಳಿಗಿಂತ ತಾಯಂದಿರು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ.
ಆದ್ರೆ ಮಕ್ಕಳನ್ನು ಓದಿನ ಕಡೆಗೆ ಹೆಚ್ಚು ಗಮನ ಹರಿಸುವಂತೆ ಮಾಡಲು ಏನು ಮಾಡಬೇಕು? ಅವರಲ್ಲಿ ಓದಿನ ಕಡೆ ಹೆಚ್ಚು ಗಮನ ಹರಿಸಲು ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಕ್ಕಳ ಓದಿನಲ್ಲಿ ನೀವು ಭಾಗಿಯಾಗುವುದು
ಮಕ್ಕಳು ಓದಿನಲ್ಲಿ ಹೆಚ್ಚು ಭಾಗಿಯಾಗುತ್ತಿಲ್ಲ. ಆಸಕ್ತಿ ಹೊಂದಿಲ್ಲ ಎಂದರೆ ಅವರ ಓದಿನಲ್ಲಿ ನೀವು ಸಹ ಭಾಗಿಯಾಗಬೇಕು. ಅವರು ಓದಿಕೊಳ್ಳಲು ಕುಳಿತಾಗ ನೀವು ಸಹ ಓದಿಕೊಳ್ಳಬೇಕು. ಅವರ ಪುಸ್ತಕವನ್ನೇ ಓದುವ ಹವ್ಯಾಸ ಇಟ್ಟುಕೊಳ್ಳಿ. ನೀವು ಓದಿ ಅವರಿಗೆ ಅರ್ಥೈಸುವ ಕೆಲಸ ಮಾಡಿ.
ಓದಿನ ನಡುವೆ ವಿರಾಮ ತೆಗೆದುಕೊಳ್ಳಲು ನೀವೇ ಉತ್ತೇಜಿಸಿ
ಮಕ್ಕಳು ಅಧ್ಯಯನ ಮಾಡುವಾಗ ವಿರಾಮಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಿ. ಅವರು ವಿರಾಮ ತೆಗೆದುಕೊಳ್ಳದೆ ತಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನಹರಿಸಿದರೆ, ಅವರು ಆಸಕ್ತಿ ಕಳೆದುಕೊಳ್ಳಬಹುದು. ವಿರಾಮಗಳನ್ನು ತೆಗೆದುಕೊಳ್ಳುವ ಮೂಲಕ, ಅವರು ಮತ್ತೆ ಉತ್ಸಾಹದಿಂದ ಓದಿನ ಕಡೆ ಗಮನ ಕೊಡಬಹುದು.
ಮಕ್ಕಳ ಓದಿನ ಸಮಯ ನೀವೇ ನಿರ್ಧರಿಸಿ
ಮಕ್ಕಳು ದಿನದ ಎಲ್ಲಾ ಸಮಯ ಓದುತ್ತಲೇ ಇರಲು ಆಗುವುದಿಲ್ಲ ಹೀಗಾಗಿ ಅವರ ಓದನ್ನು ನೀವೆ ನಿರ್ಧರಿಸಬೇಕು, ಇದು ಉತ್ತಡದಿಂದ ಮಾಡುವ ಕೆಲಸವಲ್ಲ. ಬದಲಿಗೆ ನಿತ್ಯ ಒಂದು ಸಮಯದಲ್ಲಿ ಓದಬೇಕು. ಆ ಸಮಯ ಯಾವುದು ಎಂಬುದನ್ನು ನಿರ್ಧರಿಸಿಬಿಡಿ. ಈ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಅವರಿಗೆ ಓದುವಂತೆ ಒತ್ತಡ ಹಾಕಬೇಡಿ.
ಓದಿಗಾಗಿ ಅವರಿಗೆ ಏನು ಬೇಕು ಎಂಬುದನ್ನು ತಿಳಿಯಿರಿ
ನಿಮ್ಮ ಮಕ್ಕಳು ಓದಿನಲ್ಲಿ ಹೆಚ್ಚು ಸಮಯ ಕಳೆಯದಿದ್ದರೆ ಅವರಲ್ಲಿ ಏನೋ ಕೊರತೆಯಾದಂತಹ ಮನೋಭಾವ ಹೊಂದಿರುತ್ತಾರೆ. ಅವರ ಓದಿಗೆ ಪೂರಕವಾದ ಅಗತ್ಯ ವಸ್ತುಗಳು ಏನಾದರು ಬೇಕಾದರೆ ಅದನ್ನು ನೀಡಿ. ಅಂದರೆ ಓದಲು ಕುಳಿತುಕೊಳ್ಳು ಒಂದು ಟೇಬಲ್, ಕುರ್ಚಿ ಇಂತಹ ವಸ್ತುಗಳನ್ನ ಅವರಿಗೆ ನೀಡಿ ಓದಲು ಬೇಕಾದ ಒಂದು ಪರಿಸರ ಅವರಿಗಾಗಿ ನಿರ್ಮಾಣ ಮಾಡಿ.
ಮಕ್ಕಳೊಂದಿಗೆ ಸ್ನೇಹಿತರಾಗಿ
ಮಕ್ಕಳೊಂದಿಗೆ ನೀವು ಸ್ನೇಹಿತರಂತೆ ಇದ್ದರೆ ಅವರು ನಿಮ್ಮ ಮೀರುವುದಿಲ್ಲ. ಜೊತೆಗೆ ಹೆದರಿಸಿ, ಬೆದರಿಸಿ ಓದಿಕೊಳ್ಳಲು ಹೇಳುವಂತಹ ಪರಿಸ್ಥಿತಿಯೇ ಬರುವುದಿಲ್ಲ. ಹೀಗಾಗಿ ಅವರಿಗೆ ನೀವು ಸಹ ಶಿಕ್ಷಕರಂತೆ ಅನಿಸಬಾರದು, ಹೊಡೆದು ಬಡಿದು ಕಲಿಸುವುದನ್ನು ಮಾಡಲೇಬೇಡಿ, ಅವರೊಂದಿಗೆ ಸ್ನೇಹಿತರಂತೆ ಇದ್ದು ಕಲಿಕೆಯ ಅಗತ್ಯ ಏನು ಎಂಬುದನ್ನು ಅವರಿಗೆ ಅರ್ಥವಾಗುವಂತೆ ವಿವರಿಸಿ.



Click it and Unblock the Notifications