Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಮಕ್ಕಳು ಬೇರೆಯವರಿಗೆ ಮುತ್ತು ಕೊಡುವುದು, ಅಪ್ಪಿಕೊಳ್ಳುವುದು ಸರಿಯಲ್ಲ ಏಕೆ?
ಮಕ್ಕಳು ಚಿಕ್ಕವರಿರಬೇಕಾದರೆ ಎಲ್ಲರನ್ನೂ ಪ್ರೀತಿಸುತ್ತಾರೆ. ಮನೆಯವರು ಮಾತ್ರವಲ್ಲದೇ ಹೊರಗಿನವರ ಹತ್ತಿರ ಕೂಡ ಆತ್ಮೀಯವಾಗಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ಎಲ್ಲರನ್ನೂ ಅಪ್ಪಿಕೊಳ್ಳುತ್ತಾರೆ. ಹಾಗೂ ಪ್ರೀತಿಯಿಂದ ಮುತ್ತನ್ನು ಕೊಡುತ್ತಾರೆ. ಅವರು ಬೆಳೆದು ಕೊಂಚ ದೊಡ್ಡವರಾದ ಮೇಲೆಯೂ ಕೂಡ ಈ ಅಭ್ಯಾಸ ಹಾಗೆಯೇ ಇರುತ್ತದೆ.
ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಯಾರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನು ಕಲಿಸಿಕೊಡುವುದು ಪೋಷಕರ ಕರ್ತವ್ಯ. ಅದ್ರಲ್ಲೂ ಮುಖ್ಯವಾಗಿ ಮಕ್ಕಳಿಗೆ ಗುಡ್ ಟಚ್ ಯಾವುದು? ಬ್ಯಾಡ್ ಟಚ್ ಯಾವುದು ಅನ್ನೋದನ್ನು ಹೇಳಿಕೊಡಿ. ಅಷ್ಟಕ್ಕು ಮಕ್ಕಳಿಗೆ ತಮ್ಮ ಗಡಿಯ ಬಗ್ಗೆ ಹೇಳಿ ಕೊಡೋದು ಹೇಗೆ? ಅವರಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಹೇಳಿ ಕೊಡೋದಕ್ಕೆ ಇಲ್ಲಿದೆ ಟಿಪ್ಸ್.

1. ಗಡಿಯನ್ನು ನಿರ್ಮಿಸುವುದು ಮುಖ್ಯ
ಮಕ್ಕಳು ಚಿಕ್ಕವರಿರುವಾಗ ಮನೆಯವರೆಲ್ಲಾ ಮಕ್ಕಳನ್ನು ಪ್ರೀತಿಯಿಂದ ಮುದ್ದಾಡುತ್ತೇವೆ. ಅದಕ್ಕೆ ಪ್ರತಿಯಾಗಿ ಮಕ್ಕಳು ಕೂಡ ನಮ್ಮ ಮೇಲೆ ಪ್ರೀತಿ ತೋರುತ್ತಾರೆ. ನಮ್ಮ ಆಪ್ತ ಸಂಬಂಧಿಕರು ಅಥವಾ ಸ್ನೇಹಿತರ ಜೊತೆಗೆ ಮಕ್ಕಳು ಈ ರೀತಿ ನಡೆದುಕೊಂಡರೆ ಪರವಾಗಿಲ್ಲ. ಹೊರಗಿನವರ ಜೊತೆಗೆ ಮಕ್ಕಳು ಹೆಚ್ಚು ಕ್ಲೋಸ್ ಆಗದಂತೆ ಜಾಗೃತೆ ವಹಿಸಿ.
ಯಾಕಂದ್ರೆ ಹೊರಗಿನವರು ಇದರ ಅಡ್ವಾಂಟೇಜ್ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮಕ್ಕಳನ್ನು ಬೇರೆ ರೀತಿ ಬಳಸಿಕೊಳ್ಳಬಹುದು. ಹೀಗಾಗಿ ಮಕ್ಕಳಿಗೆ ತಮ್ಮ ಗಡಿಯ ಬಗ್ಗೆ ಅರಿವು ಮೂಡಿಸಿ. ಯಾರ ಜೊತೆಗೆ ಆತ್ಮೀಯವಾಗಿ ಇರಬೇಕು? ಇರಬಾರದು ಅನ್ನೋದನ್ನು ಹೇಳಿಕೊಡಿ.
2. ಅಪರಿಚಿತರೊಂದಿಗೆ ಬೆರೆಯದಂತೆ ಎಚ್ಚರಿಸಿ
ಸಾಮಾನ್ಯವಾಗಿ ಮಕ್ಕಳು ಮುಗ್ಧ ಮನಸ್ಸಿನವರು. ಅವರಿಗೆ ಸರಿ ಯಾವುದು? ತಪ್ಪು ಯಾವುದು ಅನ್ನೋದು ಗೊತ್ತಾಗೋದಿಲ್ಲ. ಎಲ್ಲರ ಜೊತೆಗೆ ಒಂದೇ ರೀತಿ ಮಾತನಾಡುತ್ತಾರೆ. ಹಾಗೆಯೇ ಎಲ್ಲರನ್ನೂ ನಂಬುತ್ತಾರೆ. ಕಿಡಿಗೇಡಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ ಜೋಕೆ!. ಕಿಡಿಗೇಡಿಗಳು ಮಕ್ಕಳ ಜೊತೆಗೆ ಚೆನ್ನಾಗಿ ಮಾತನಾಡಿಸಿ ಚಾಕಲೇಟ್ ಕೊಟ್ಟು ಅವರನ್ನು ಅಪಹರಿಸುವ, ಕಿಡ್ನಾಪ್ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಬಗ್ಗೆ ಮಕ್ಕಳಿಗೆ ಪೋಷಕರು ಮೊದಲೇ ಮಾರ್ಗದರ್ಶನ ನೀಡಿದರೆ ಒಳ್ಳೆಯದು.
3. ಮಕ್ಕಳೊಂದಿಗೆ ಮಕ್ತವಾಗಿ ಮಾತನಾಡಿ
ನೀವೇನಾದರೂ ನಿಮ್ಮ ಮಗು ಹೊರಗಿನವರ ಜೊತೆಗೆ ಆತ್ಮೀಯವಾಗಿರೋದನ್ನು ಗಮನಿಸಿದರೆ ಮಗುವಿಗೆ ಆಗಲೇ ಬೈಯೋದಕ್ಕೆ ಹೋಗಬೇಡಿ. ಮನೆಗೆ ಬಂದ ಮೇಲೆ ಅವರಿಗೆ ಎಲ್ಲವೂ ಅರ್ಥ ಆಗೋ ಹಾಗೆ ವಿವರಿಸಿ ಹೇಳಿ. ಹೊರಗಿನವರನ್ನು ಯಾಕೆ ಅಪ್ಪಿಕೊಳ್ಳಬಾರದು, ಮುದ್ದಿಸಬಾರದು. ಇದರಿಂದ ಏನೆಲ್ಲಾ ಅಪಾಯಗಳಿದೆ ಅನ್ನೋದನ್ನು ಅರ್ಥ ಆಗುವಂತೆ ಹೇಳಿ. ಇನ್ನೂ ಹೊರಗಿನವರ ಜೊತೆಗೆ ಗೌರವ ಭಾವದಿಂದ ನಡೆದುಕೊಳ್ಳಬೇಕೇ ಹೊರತು ಅವರೊಂದಿಗೆ ಆತ್ಮೀಯವಾಗಿ ಬೆರೆಯದಂತೆ ಎಚ್ಚರಿಕೆ ವಹಿಸಿ.
4. ಮಕ್ಕಳ ಮನಸ್ಸಿನಲ್ಲಿ ತಪ್ಪು ಭಾವನೆ ಬಾರದಂತೆ ನೋಡಿಕೊಳ್ಳಿ
ಮಕ್ಕಳು ದೊಡ್ಡವರಂತೆ ಎಲ್ಲಾ ವಿಚಾರಗಳನ್ನು ಒಂದೇ ಸಾರಿಗೆ ಅರ್ಥ ಮಾಡಿಕೊಳ್ಳೋದಿಲ್ಲ. ಯಾವುದೇ ವಿಚಾರವಾದರೂ ಅವರಿಗೆ ಅದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳೋದಕ್ಕೆ ಪ್ರಯತ್ನಿಸಿ. ಮಕ್ಕಳಲ್ಲಿ ನೀವು ಅಪರಿಚಿತರನ್ನು ಅಪ್ಪಿಕೊಳ್ಳಬೇಡಿ, ಮುತ್ತುಕೊಡಬೇಡಿ ಅಂತ ಹೇಳಿದಾಗ ಅವರು ವಿಚಲಿತರಾಗಬಹುದು. ಪೋಷಕರು ಕೂಡ ಮಕ್ಕಳನ್ನು ಅಪ್ಪಿಕೊಂಡಾಗಲೂ ಅವರಿಗೆ ಕಿರಿ ಕಿರಿ ಅನ್ನಿಸಬಹುದು. ಹೀಗಾಗಿ ಮಕ್ಕಳಿಗೆ ಯಾರು ಅಪ್ಪಿಕೊಂಡರೆ ತಪ್ಪು, ಯಾರು ಅಪ್ಪಿಕೊಂಡರೆ ತಪ್ಪಿಲ್ಲ ಅನ್ನೋದನ್ನು ಬಿಡಿಸಿ ಹೇಳಿ.
5. ಅಕ್ಕ-ಪಕ್ಕ ಇರುವವರ ಜೊತೆಗೆ ಬೌಂಡರಿ ನಿರ್ಮಿಸಿಕೊಳ್ಳಲಿ
ಮನೆಯಲ್ಲಿ ಇದ್ದಾಗ ಮಕ್ಕಳು ಸೇಪ್ ಆಗಿ ಇರ್ತಾರೆ. ಯಾಕಂದ್ರೆ ಮಕ್ಕಳಿಗೆ ಪೋಷಕರ ಕಣ್ಗಾವಲು ಇರುತ್ತದೆ. ಇನ್ನೂ ನಿಮ್ಮ ಪುಟ್ಟ ಮಗುವನ್ನು ಶಾಲೆಗೆ ಕಳುಹಿಸಿದಾಗ ಶಾಲೆಯಲ್ಲಿ ನೀವು ಅವರ ಜೊತೆಗೆ ಇರೋದಕ್ಕೆ ಆಗೋದಿಲ್ಲ. ಶಾಲೆಯಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ನಿಮ್ಮ ಗಮನಕ್ಕೆ ಬರೋದಿಲ್ಲ. ಹೀಗಾಗಿ ನಾಲ್ಕು ವರ್ಷದ ಮಕ್ಕಳಿಗೆ ಗುಡ್ ಅಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಹೇಳಿಕೊಡಿ. ಬ್ಯಾಡ್ ಟಚ್ ಅನುಭವವಾದರೆ ಕೂಡಲೇ ಶಿಕ್ಷಕರಿಗೆ ತಿಳಿಸಲು ಹೇಳಿ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಈ ಬಗ್ಗೆ ಸಾಕಷ್ಟು ಪ್ರಕರಣಗಳು ಕೂಡ ದಾಖಲಾಗಿದೆ. ಪಾಪ ಸಣ್ಣ ಮಕ್ಕಳಿಗೆ ಈ ದೌರ್ಜನ್ಯದ ಬಗ್ಗೆ ಅರಿವು ಕೂಡ ಇರೋದಿಲ್ಲ. ಅಂತಹ ಮಕ್ಕಳ ಮೇಲೆ ಕ್ರೂರಿಗಳು ಅಟ್ಟಹಾಸ ಮೆರೆಯುತ್ತಾರೆ. ಹೀಗಾಗಿ ಚಿಕ್ಕವಯಸ್ಸಿನಲ್ಲಿಯೇ ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸೋದು ಪೋಷಕರ ಕರ್ತವ್ಯ.



Click it and Unblock the Notifications

