Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಗುಣಗಳು ನಿಮ್ಮಲ್ಲಿದ್ದರೆ ಈ ಜಗತ್ತಿನಲ್ಲೇ ಶ್ರೇಷ್ಠ ತಾಯಿ ಅನ್ನಿಸಿಕೊಳ್ಳುತ್ತೀರಿ!
ಈ ಜಗತ್ತಿನಲ್ಲಿ ಒಳ್ಳೆಯ ತಾಯಿ ಅಥವಾ ಕೆಟ್ಟ ತಾಯಿ ಎಂದೇನಿಲ್ಲ. ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳ ಸಂತೋಷಕ್ಕಾಗಿ ತನ್ನ ಕೈಲಾದ ಪ್ರಯತ್ನವನ್ನು ಮಾಡುತ್ತಾಳೆ. ಅಮ್ಮನು ಮಕ್ಕಳ ಜೊತೆಗೆ ಹೆಚ್ಚು ಹೊತ್ತು ಸಮಯವನ್ನು ಕಳೆಯೋದಕ್ಕೋ ಏನೋ ಹೆಚ್ಚಿನ ಮಕ್ಕಳು ತಾಯಿಗೆ ತುಂಬಾನೇ ಹತ್ತಿರವಾಗಿ ಇರುತ್ತಾರೆ. ಎಲ್ಲಾ ತಾಯಂದಿರು ಮಕ್ಕಳನ್ನು ಪ್ರೀತಿಸುವ ವಿಧಾನ ಒಂದೇ ರೀತಿ ಇರೋದಿಲ್ಲ.
ಕೆಲ ತಾಯಂದಿರು ತುಂಬಾ ಮುದ್ದು ಮಾಡಿ, ಕಾಳಜಿ ಮಾಡಿ ಮಕ್ಕಳನ್ನು ಸಾಕುತ್ತಾರೆ. ಅವರಿಗೆ ನೋವಾಗುವ ಯಾವುದೇ ಕೆಲಸವನ್ನು ಅವರು ಮಾಡೋದಿಲ್ಲ. ಇನ್ನೂ ಕೆಲ ತಾಯಂದಿರು ತಪ್ಪು ಮಾಡದಾಗ ಹೊಡೆದು ಬುದ್ಧಿ ಹೇಳುತ್ತಾರೆ. ಜೊತೆಗೆ ಮಕ್ಕಳನ್ನು ಅಷ್ಟೇ ಪ್ರೀತಿಯಿಂದ ಸಾಕುತ್ತಾರೆ. ಹೆಚ್ಚಿನ ತಾಯಂದಿರಿಗೆ ಒಂದು ಆಸೆ ಇರುತ್ತೆ ಅದೇನೆಂದರೆ ನಾನು ನನ್ನ ಮಕ್ಕಳಿಗೆ ಉತ್ತಮ ತಾಯಿಯಾಗಬೇಕು ಎಂದು. ಅಷ್ಟಕ್ಕು ಮಕ್ಕಳಿಗೆ ಒರ್ವ ಉತ್ತಮ ತಾಯಿಯಾಗೋದು ಹೇಗೆ? ಇಲ್ಲಿದೆ ಟಿಪ್ಸ್.

1. ತಾಳ್ಮೆ
ಒರ್ವ ತಾಯಿಗೆ ತಾಳ್ಮೆ ತುಂಬಾನೇ ಮುಖ್ಯವಾಗುತ್ತದೆ. ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕೋ ತಾಯಿ. ಅವರ ದೊಡ್ಡವರಾದ ಮೇಲೆ ಅವರ ಕೆಲವೊಂದು ನಡವಳಿಕೆಯಿಂದ ನೋವು ಅನುಭವಿಸುತ್ತಾಳೆ. ಮಕ್ಕಳು ದೊಡ್ಡವರಾದಾಗ ಒಳ್ಳೆಯ ವಿಚಾರಗಳನ್ನು ಮಾತ್ರ ಕಲಿಯೋದಿಲ್ಲ. ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವರ ಮೇಲೆ ಕೂಗಾಡಿದರೆ ಆಗೋದಿಲ್ಲ. ಅದರ ಬದಲಾಗಿ ಅಂತಹ ಸಂದರ್ಭದಲ್ಲಿ ತಾಯಿಗೆ ತಾಳ್ಮೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ತಾಳ್ಮೆಯಿಂದ ಮಾತನಾಡಿ ಇದನ್ನು ಬಗೆಹರಿಸಬೇಕು.
2. ಪ್ರೋತ್ಸಾಹ ನೀಡಿ
ಮಕ್ಕಳ ಪ್ರತಿಯೊಂದು ಹಂತದಲ್ಲೂ ಅವರಿಗೆ ಪ್ರೋತ್ಸಾಹ ನೀಡುವುದು ತುಂಬಾನೇ ಮುಖ್ಯವಾಗುತ್ತದೆ. ಅವರು ತೆವಳಿಕೊಂಡು ಹೋಗುವಾಗ, ಅಂಬೆಗಾಲಿಡುವಾಗ, ನಡೆಯಲು ಕಲಿಯುವಾಗ ತಾಯಿಯಾದವಳು ಹಿಂದೆ ನಿಂತು ಪ್ರೋತ್ಸಾಹಿಸಬೇಕು. ಇನ್ನೂ ಮಕ್ಕಳು ದೊಡ್ಡವರಾದ ಮೇಲೆ ಶಿಕ್ಷಣ ಅಥವಾ ಆಟೋಟ ಅಥವಾ ಇತರ ಯಾವುದೇ ಚಟುವಟಿಕೆಯಲ್ಲಿ ಅವರು ಸೋತಾಗ ಅವರಿಗೆ ದೈರ್ಯ ತುಂಬಿ ಮತ್ತೆ ಹೋರಾಡುವ ಛಲ ಹುಟ್ಟುವಂತೆ ಮಾಡೋದು ತಾಯಿಯಾದವಳ ಆದ್ಯ ಕರ್ತವ್ಯವಾಗಿದೆ.
3. ಅರ್ಥಮಾಡಿಕೊಳ್ಳುವುದು
ಒರ್ವ ಉತ್ತಮ ತಾಯಿಯ ಲಕ್ಷಣ ಅಂದ್ರೆ ಆಕೆ ತನ್ನ ಮಕ್ಕಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು. ಕೆಲವೊಂದು ಸಲ ಮಕ್ಕಳ ನಿರ್ಧಾರಗಳಿಗೆ ಪೋಷಕರು ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಹಾಗೆ ಮಾಡೋದು ತಪ್ಪು. ತಾಯಿಯಾದವಳು ಯಾವತ್ತೂ ನಿಮ್ಮ ಮಕ್ಕಳ ಸ್ಥಾನದಲ್ಲಿ ನಿಂತು ಆಲೋಚಿಸಬೇಕು. ಆಗ ನಿಮ್ಮಿಂದ ಸರಿ-ತಪ್ಪುಗಳನ್ನು ಗುರಿತಿಸೋದಕ್ಕೆ ಸಾಧ್ಯವಾಗುತ್ತದೆ. ಹಾಗೂ ಮಗುವಿನ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.
4. ಗೌರವಯುತವಾಗಿ ನಡೆದುಕೊಳ್ಳೋದನ್ನು ಕಲಿಸಿ ಕೊಡಿ
ತಾಯಿಯಾದವಳು ಮಕ್ಕಳಿಗೆ ಮೊದಲು ಆತ್ಮ ಗೌರವದ ಪಾಠವನ್ನು ಹೇಳಿಕೊಡಬೇಕು. ಅವರು ಆತ್ಮ ಗೌರವವನ್ನು ಕಲಿತು ಬಿಟ್ಟರೆ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯೋದಕ್ಕೆ ಸಹಾಯವಾಗುತ್ತದೆ. ಅಷ್ಟೇ ಅಲ್ಲದೇ, ತಂದೆ-ತಾಯಿ, ಗುರು-ಹಿರಿಯರು, ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸೋದನ್ನು ಮಕ್ಕಳಿಗೆ ಹೇಳಿ ಕೊಡಿ. ಆಗ ನೀವು ಉತ್ತಮ ತಾಯಿ ಎನಿಸಿಕೊಳ್ಳುತ್ತೀರಿ.
5. ಮಕ್ಕಳಿಗಾಗಿ ಯಾವಾಗಲೂ ಲಭ್ಯವಿರಬೇಕು
ನೀವು ಗೃಹಿಣಿಯಾಗಿರಲಿ ಅಥವಾ ಕೆಲಸಕ್ಕೆ ಹೋಗುವ ಮಹಿಳೆಯೇ ಆಗಿರಲಿ ಮಕ್ಕಳಿಗಾಗಿ ನೀವು ಯಾವಾಗಲೂ ಲಭ್ಯವಿರಬೇಕು. ಅವರ ಆಸಕ್ತಿ ಏನು ಅನ್ನೋದು ನಿಮಗೆ ಗೊತ್ತಿರಬೇಕು. ಒಂದು ವೇಳೆ ನೀವು ಕೆಲಸಕ್ಕೆ ಹೋಗುವವರಾದರೂ ಕೂಡ ನಿಮ್ಮ ಹಾಗೂ ಮಕ್ಕಳ ಮಧ್ಯೆ ಅದೊಂದು ಉತ್ತಮ ಬಾಂಧವ್ಯ ಮೂಡಿರಬೇಕು. ಮಕ್ಕಳ ಸುಖ-ದುಃಖಗಳನ್ನು ಹಂಚಿಕೊಳ್ಳುವಾಗಲೂ ನೀವು ಲಭ್ಯವಿರಬೇಕು. ಆಗ ನೀವು ಉತ್ತಮ ತಾಯಿಯಾಗುತ್ತೀರಿ.
6. ಮಕ್ಕಳನ್ನು ದೈರ್ಯವಂತರನ್ನಾಗಿ, ಸಮರ್ಥರನ್ನಾಗಿ ಬೆಳೆಸಿ
ನಮ್ಮಲ್ಲಿ ಒಂದು ಹಿಂಜರಿಕೆ ಇರುತ್ತದೆ. ಏನಾದರೂ ಹೊಸತನ್ನು ಮಾಡಬೇಕಾದರೆ ಮುಂದೆ ಹೋಗೋದಕ್ಕೆ ನೂರು ಬಾರಿ ಯೋಚಿಸುತ್ತೇವೆ. ಈ ಹಿಂಜರಿಗೆ ಉಂಟಾಗೋದಕ್ಕೆ ಕಾರಣ ನಮ್ಮ ಬಾಲ್ಯ. ಹೌದು, ಬಾಲದಲ್ಲಿ ನಮ್ಮ ಯಾವುದೇ ವಿಶೇಷ ಗುಣಗಳು ಇರೋದಿಲ್ಲ. ಆಗ ನಮ್ಮಲ್ಲಿ ಹಿಂಜರಿಗೆ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ಹಿಂಜರಿಯನ್ನು ಮೆಟ್ಟಿ ನಿಲ್ಲುವಂತೆ ಮಾಡಿ ಅವರಲ್ಲಿ ದೈರ್ಯ ತುಂಬಬೇಕು. ಹಾಗೂ ಅವರನ್ನು ಸಮರ್ಥರನ್ನಾಗಿ ಬೆಳೆಸುವಂತೆ ಮಾಡುವುದು ಉತ್ತಮ ತಾಯಿಯಾದವಳ ಕರ್ತವ್ಯ.
7. ಪ್ರೀತಿ
ಮಕ್ಕಳಿಗೆ ತಾಯಿಯೂ ಪ್ರೀತಿ ನೀಡಿ ಸಾಕಿ ಸಲಹುತ್ತಾಳೆ. ಒರ್ವ ತಾಯಿಯೂ ತನ್ನ ಮಕ್ಕಳಿಗೆ ನೀಡುವ ಪ್ರೀತಿ, ವಾತ್ಸಾಲ್ಯವನ್ನು ಮತ್ಯಾರು ನೀಡೋದಕ್ಕೆ ಸಾಧ್ಯವೇ ಇಲ್ಲ. ಆದರೆ ಕೆಲವೊಂದು ಬಾರಿ ತಾಯಿಗೆ ಮಕ್ಕಳಲ್ಲಿ ತಾತ್ಸಾರ ಮನೋಭಾವ ಇರುತ್ತದೆ. ಮಕ್ಕಳ ವಿಚಾರದಲ್ಲಿ ಭೇದ-ಬಾವ ಮಾಡಲಾಗುತ್ತದೆ. ಖಂಡಿತ ಈ ತಪ್ಪನ್ನು ಮಾಡೋದಕ್ಕೆ ಹೋಗಲೇಬೇಡಿ. ನಿಮಗೆ ಎಷ್ಟೇ ಮಕ್ಕಳಿದ್ದರೂ ಕೂಡ ಅವರಿಗೆ ಸಮಾನ ಪ್ರೀತಿ ನೀಡಿ ಅವರನ್ನು ಸಾಕಿ, ಸಲಹಿ. ಆಗ ನೀವು ಉತ್ತಮ ತಾಯಿ ಅನ್ನಿಸಿಕೊಳ್ಳುತ್ತೀರಿ.
ಈ ಗುಣಗಳು ನಿಮ್ಮಲ್ಲಿದ್ದರೆ ಖಂಡಿತ ನೀವು ಕೂಡ ಉತ್ತಮ ತಾಯಿ ಅನ್ನಿಸಿಕೊಳ್ಳುತ್ತೀರಿ. ಆದರೆ ಯಾವುದೇ ಕಾರಣಕ್ಕೂ ತಾಯಿಯ ಕರ್ತವ್ಯಗಳನ್ನು ಮರೆಯೋದಕ್ಕೆ ಹೋಗಬೇಡಿ.



Click it and Unblock the Notifications
