Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಆಲ್ಮಂಡ್ ಪೇರೆಂಟಿಂಗ್ ಬಗ್ಗೆ ನಿಮಗೆ ಗೊತ್ತಾ? ಮಕ್ಕಳ ಬೆಳವಣಿಗೆಗೆ ಇದೇ ಮಾರಕ!!
ಮಕ್ಕಳ ಸಾಕುವುದು ಅಂದ್ರೆ ಅದೊಂದು ಸವಾಲಾಗಿ ಈಗ ಪರಿಣಮಿಸಿದೆ. ಏಕೆಂದರೆ ಅವರ ಬೆನ್ನ ಹಿಂದೆ ನಿಂತು ಅವರ ದಾರಿಗೆ ನೆರವಾಗಬೇಕಾ ಅಥವಾ ಮುಂದೆ ಅವರಿಗೆ ನಾವೇ ದಾರಿ ತೋರಿಸಬೇಕಾ ಎಂಬ ಗೊಂದಲವಂತು ಇದ್ದೇ ಇದೆ. ಇತ್ತೀಚಿಗೆ ಪೋಷಕರು ತಮ್ಮ ಮಕ್ಕಳ ಮೇಲೆ ಅತೀಯಾದ ಪ್ರೀತಿ, ಮಮತೆ, ಜಾಗೃತೆ ಮಾಡುವುದು ಅವರನ್ನು ಎಲ್ಲರಿಗಿಂತ ವಿಭಿನ್ನವಾಗಿ ಬೆಳೆಸುವುದು ನೋಡಬಹುದು.
ಅದಕ್ಕೆ ಪ್ರತಿಯಾಗಿ ಮಕ್ಕಳು ಹಾಗೂ ಪೋಷಕರ ನಡುವಿನ ಸಂಬಂಧ ಇತ್ತಿಚಿಗೆ ಬಹುಬೇಗನೆ ಹಾಳಾಗುವುದನ್ನು ಕೂಡ ನಾವು ನೋಡಿದ್ದೇವೆ. ಆದ್ರೆ ಕೆಲವೊಮ್ಮೆ ಅತೀಯಾದ ಪೋಷಕರ ಮುದ್ದು ಮಕ್ಕಳ ಪಾಲಿಗೆ ಶಾಪವಾಗಿ ಪರಿಗಣಿಸಲಿದೆ ಎಂಬುದು ನಿಮಗೆ ಗೊತ್ತಾ? ಅದರಲ್ಲೂ ನಾವು ಹೆಲಿಕಾಪ್ಟರ್ ಪೇರೆಂಟಿಂಗ್ ಎಂಬ ವಿಚಾರವನ್ನು ಈ ಮೊದಲು ಕೂಡ ತಿಳಿಸಿದ್ದೆವು.

ಅದರಲ್ಲಿ ಮಕ್ಕಳ ಎಲ್ಲಾ ವಿಚಾರಗಳನ್ನು ಪೋಷಕರು ಮೇಲ್ವಿಚಾರಣೆ ಮಾಡುವುದಾಗಿದೆ. ಮಕ್ಕಳ ತೀರಾ ವೈಯಕ್ತಿಕ ವಿಚಾರಗಳಲ್ಲೂ ಕೂಡ ಪೋಷಕರ ಹಸ್ತಕ್ಷೇಪ ಇರುವ ಸ್ಥಿತಿ ಇದಾಗಿದೆ. ಹೀಗಾಗಿ ಹೆಲಿಕಾಪ್ಟರ್ ಪೇರೆಂಟಿಂಗ್ ಹಲವರ ಪ್ರಕಾರ ದೊಡ್ಡ ತಪ್ಪ. ಆದ್ರೆ ನಾವಿಂದು ಆಲ್ಮಂಡ್ ಪೇರೆಂಟಿಂಗ್ ಕುರಿತಂತೆ ತಿಳಿದುಕೊಳ್ಳೋಣ.
ಆಲ್ಮಂಡ್ ಪೇರೆಂಟಿಂಗ್ ಅಥವಾ ಬಾದಾಮಿ ಪೇರೆಂಟಿಂಗ್ ಎಂದರೇನು?
ಮೊದಲು ಈ ಬಾದಾಮಿ ಪೇರೆಂಟಿಂಗ್ ಎಂದರೆ ಏನು ಎಂಬುದನ್ನು ತಿಳಿಯಬೇಕಾದರೆ ಈ ಪದ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ತಿಳಿಯಬೇಕು. ಈ ಪದ ಹುಟ್ಟಿದ್ದ ತಾಯಿ ಹಾಗೂ ಮಗಳ ಒಂದು ವೈರಲ್ ವಿಡಿಯೋದಿಂದಾಗಿ. ಕ್ಯಾಲಿಫೋರ್ನಿಯಾದ ತಾಯಿ ಹಾಗೂ ಮಗಳು ವಿಡಿಯೋವೊಂದರಲ್ಲಿ ಮಗಳು ನಾನು ನಿಜವಾಗಿಯೂ ತುಂಬಾ ಸಣ್ಣಗಿದ್ದೇನೆ, ನನ್ನ ಬಳಿ ಕೇವಲ ಅರ್ಧ ಬಾದಾಮಿ ಮಾತ್ರವೇ ಇದೆ ಎಂದು ಹೇಳುವುದು ನೋಡಬಹುದು. ಇದಕ್ಕೆ ಪ್ರತಿಯಾಗಿ ತಾಯಿ ಒಂದೆರಡು ಬಾದಾಮಿ ಸೇವಿಸಿ, ಚೆನ್ನಾಗಿ ಅಗಿದು ತಿನ್ನಬೇಕು ಎಂದು ಉತ್ತರ ನೀಡುತ್ತಾಳೆ. ಇಲ್ಲಿ ತಾಯಿ ತನ್ನ ಮಗಳನ್ನು ಮಾಡಲಿಂಗ್ ಕ್ಷೇತ್ರಕ್ಕೆ ಪರಿಚಯಿಸುತ್ತಿದ್ದಳು, ಹೀಗಾಗಿ ಆಕೆ ತನ್ನ ಮಗಳ ತೂಕ ಎಲ್ಲಿ ಹೆಚ್ಚಾಗುತ್ತದೆಯೋ ಎಂಬ ಕಾರಣಕ್ಕೆ ಆಕೆಗೆ ತಿನ್ನಲು ಸರಿಯಾಗಿ ಏನನ್ನೂ ನೀಡದಿರುವುದು ಇಲ್ಲಿ ನೋಡಬಹುದು.
ಈ ವಿಡಿಯೋ ವೈರಲ್ ಆದ ಬಳಿಕ ಈ ರೀತಿಯ ಪೋಷಕರ ವರ್ತನೆಗೆ ಬಾದಾಮಿ ಪೇರೆಂಟಿಂಗ್ ಎಂಬ ಹೆಸರು ಹುಟ್ಟಿಕೊಂಡಿತು. ಅಂದರೆ ಮಕ್ಕಳಿಗೆ ಕಡಿಮೆ ಆಹಾರ ಸೇವಿಸುವಂತೆ ಪೋಷಕರು ಉತ್ತೇಜಿಸುವ ಒಂದು ವಿಚಿತ್ರ ಪಾಲನೆಯ ವಿಧಾನವಾಗಿದೆ. ಅನಾರೊಗ್ಯಕರ ರೀತಿಯಲ್ಲಿ ಅವರ ತೂಕ ಇಳಿಕೆಗೆ ಕಾರಣವಾಗುವುದು ಎಂದು ಸರಳವಾಗಿ ಹೇಳಬಹುದು.
ಇತ್ತೀಚಿಗೆ ಹೆಚ್ಚಾಗಿದೆ ಈ ಪ್ರವೃತ್ತಿ
ಇತ್ತೀಚಿಗೆ ಹಲವು ಪೋಷಕರು ಈ ರೀತಿಯ ಪಾಲನೆಯಲ್ಲಿ ತೊಡಗಿದ್ದಾರೆ. ಮಕ್ಕಳಿಗೆ ಹೆಚ್ಚು ಆಹಾರ ನೀಡದೆ ಅವರ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಅವರ ಕಾರ್ಯ. ಇಲ್ಲಿ ತೂಕ ಹೆಚ್ಚಳ ಆಗದಂತೆ ನೋಡಿಕೊಳ್ಳುವುದು ಉತ್ತಮ ಅಭ್ಯಾಸವೇ ಆಗಿದ್ದರೂ ಕೂಡ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೋಷಕಾಂಶಗಳನ್ನು ತಡೆಯುವುದು ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಆದ್ರೆ ಮಕ್ಕಳ ಅನಾರೋಗ್ಯ ಸಮಸ್ಯೆಗೆ ಕಾರಣವಾಗುವ ಅವರ ಕಠಿಣ ನಿಲುವನ್ನು ಖಂಡಿಸಲಾಗುತ್ತಿದೆ.
ಆದ್ರೆ ಆರೋಗ್ಯಕರ ವಿಧಾನದ ಮೂಲಕವೂ ಮಕ್ಕಳ ತೂಕ ಹೆಚ್ಚಳವನ್ನು ನಿಯಂತ್ರಣದಲ್ಲಿ ಇಡಬಹುದು. ಆದ್ರೆ ಪೋಷಕರು ಇಲ್ಲಿ ತೀವ್ರ ಸ್ವರೂಪದ ಡಯೆಟ್, ಕಡಿಮೆ ಆಹಾರ ನೀಡುವುದು, ಹಣ್ಣು, ಡ್ರೈ ಫ್ರೂಟ್ಸ್ ನೀಡದಿರುವುದು ಕಂಡುಬರುತ್ತದೆ. ಇದು ಮಕ್ಕಳ ಬೆಳವಣಿಗೆ ಕುಂಠಿತಕ್ಕೂ ಕಾರಣವಾಗಬಹುದಾಗಿದೆ. ಇದನ್ನೇ ಈಗ ಬಾದಾಮಿ ಪೇರೆಂಟಿಂಗ್ ಎಂದು ಕರೆಯಲಾಗುತ್ತಿದೆ.



Click it and Unblock the Notifications