Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೋಷಕರೇ, ಮಕ್ಕಳ ವಿಚಾರದಲ್ಲಿ ಈ ತಪ್ಪು ಮಾಡಲೇಬೇಡಿ, ಅದು ಅವರಿಗೆ ಮಾಡುವ ದ್ರೋಹ ಮರೆಯದಿರಿ
ನಾವು ಕಷ್ಟಪಟ್ಟಂತೆ ನಮ್ಮ ಮಕ್ಕಳು ಕಷ್ಟಪಡಬಾರದು, ಅವರಿಗೆ ಜೀವನದಲ್ಲಿ ಒಂದು ಕಷ್ಟವೂ ಬರಬಾರದು ಎಂದು ಪೋಷಕರು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ತಮ್ಮ ಕೈಯಿಂದ ಸಾಧ್ಯವಾದಷ್ಟು ಅವರಿಗೆ ಬೆಸ್ಟ್ ನೀಡಲು ಪ್ರಯತ್ನಿಸುತ್ತಾರೆ, ಅಲ್ಲದೆ ಮಕ್ಕಳಿಗೆ ಸ್ವಲ್ಪವೂ ಕಷ್ಟ ಬಂದರೆ ಸಹಿಸಲ್ಲ, ಅವರಿಗೆ ಒಂದಿಷ್ಟೂ ಕಷ್ಟ ಬರಲೇಬಾರದು ಎಂದು ಬೆಳೆಸುತ್ತೇವೆ, ಮಕ್ಕಳ ವಿಷಯದಲ್ಲಿ ಓವರ್ ಪ್ರೊಟೆಕ್ಟಿವ್ ಆಗಿರುತ್ತಾರೆ.

ನೀವು ನಿಮ್ಮ ಮಕ್ಕಳನ್ನು ಹೀಗೆ ತುಂಬಾನೇ ಕಾಳಜಿ ಮಾಡುತ್ತಿದ್ದೀರಾ? ನಿಮ್ಮ ಕಳವಳ ನಮಗೆ ಅರ್ಥವಾಗುತ್ತೆ, ಆದರೆ ನಿಮ್ಮ ಮಕ್ಕಳ ಒಳಿತಿಗಾಗಿ ಹೇಳುತ್ತಿದ್ದೇವೆ, ಅವರನ್ನು ತುಂಬಾ ಕಾಳಜಿ ಮಾಡಲೇಬೇಡಿ, ಹಾಗೆ ಮಾಡಿದ್ದೇ ಆದರೆ ಪೋಷಕರಾಗಿ ನೀವು ಸೋತಂತೆ!
ತುಂಬಾ ಕಾಳಜಿ ಮಾಡಿದರೆ ಮುಂದೆ ಬದುಕು ತುಂಬಾನೇ ಕಷ್ಟವಾಗುವುದು
ಮಕ್ಕಳನ್ನು ದುಬಾರಿ ಫೀಸ್ ಕಟ್ಟಿ ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಅವರ ಜೀವನವನ್ನು ಸುರಕ್ಷಿತವಾಗಿ ಮಾಡುತ್ತಿದ್ದೇವೆ, ಅವರನ್ನು ಚೆನ್ನಾಗಿ ಬೆಳೆಸುತ್ತಿದ್ದೇವೆ ಎಂದು ನಮಗನಿಸಬಹುದು. ಅವರು ಕೂಡ ಒಳ್ಳೆಯ ಅಂಕ ತಗೊಂಡು ಮುಂದೆ ಒಳ್ಳೆಯ ಹುದ್ದೆ ಪಡೆಯುವಲ್ಲಿಯೂ ಯಶಸ್ವಿಯಾಗಬಹುದು, ಆದರೆ ಅಷ್ಟಕ್ಕೆ ಅವರ ಬದುಕನ್ನು ತುಂಬಾ ಸುರಕ್ಷಿತವಾಗಿಸಿದದ್ದೇವೆ ಎಂದರೆ ಖಂಡಿತ ಇಲ್ಲ...ನಮ್ಮ ಅತಿಯಾದ ಕಾಳಜಿಯಿಂದಾಗಿ ಅವರ ಬದುಕು ಕಷ್ಟವಾಗಬಹುದು.
ಮಕ್ಕಳನ್ನು ಬೆಳೆಸುವಾಗ ಅವರ ಬದುಕು ಕಟ್ಟಿಕೊಳ್ಳಲು ಸಿದ್ಧತೆ ಮಾಡಿ
ಕೆಲವರನ್ನು ನೋಡಬಹುದು ತಿಂದ ಪ್ಲೇಟ್ ತೊಳೆಯಲ್ಲ, ಅವರ ವಸ್ತುಗಳನ್ನು ನೀಟಾಗಿ ಇಡಲ್ಲ, ಅವರು ಧರಿಸುವ ಬಟ್ಟೆ ಕೂಡ ಮಡಚಿಡಲ್ಲ, ಎಲ್ಲವನ್ನೂ ಪೋಷಕರೇ ಮಾಡಬೇಕು, ಅಲ್ಲಲ್ಲ ಪೋಷಕರು ಮಾಡಿ ಅಭ್ಯಾಸ ಮಾಡಿರುತ್ತಾರೆ, ಹಾಗಾಗಿ ಅವರಿಗೆ ಅವರ ಕೆಲಸ ಮಾಡಿ ಗೊತ್ತಿರುವುದದಿಲ್ಲ, ಎಲ್ಲದಕ್ಕೂ ಪೋಷಕರನ್ನೇ ಅವಲಂಬಿಸಿರುತ್ತಾರೆ. ಮುಂದೆ ಬದುಕಿನಲ್ಲಿ ಅವರಿಗೆ ಒಂದು ಚಿಕ್ಕ ಸಮಸ್ಯೆ ಬಂದರೆ ಅದನ್ನು ಬೆಟ್ಟದಂತೆ ಭಾವಿಸಿ ತುಂಬಾ ಚಿಂತೆ ಮಾಡುತ್ತಾರೆ.
ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಾಗಲ್ಲ
ಓದು ಬೇರೆ ಕುಟುಂಬದ ಜವಾಬ್ದಾರಿ ಬೇರೆ, ಮಕ್ಕಳು ಬೆಳೆಯುತ್ತಿದ್ದಂತೆ ಮನೆಯ ಕಷ್ಟಗಳ ಅರಿವು ಕೂಡ ಅವರಿಗೆ ಇರಬೇಕು, ಕೆಲವೊಂದು ಕೆಲಸ ಅವರನ್ನು ಮಾಡಲು ಬಿಡಬೇಕು, ಅವರ ವಯಸ್ಸಿಗೆ ತಕ್ಕ ಜವಾಬ್ದಾರಿಯನ್ನು ವಹಿಸಿಕೊಡಬೇಕು. ಅವರಿಗೆ ನಿಮ್ಮ ಶ್ರಮ ಗೊತ್ತಿರಬೇಕು, ದುಡ್ಡಿನ ಬೆಲೆ ಗೊತ್ತಿರಬೇಕು, ಮನೆಯ ಜವಾಬ್ದಾರಿ ಬಗ್ಗೆ ಅರಿವು ಇರಬೇಕು.
ಹೆಣ್ಣಾಗಲಿ- ಗಂಡಾಗಲಿ ಅವರ ಕೆಲಸವನ್ನು ಅವರೇ ಮಾಡಲು ಕಲಿಸಿ
ಯಾರ ಸಹಾಯವಿಲ್ಲದೆ ಬದುಕುವುದು ಕಲಿಸಬೇಕು, ಅವರ ವಸ್ತುಗಳನ್ನು ನೀಟಾಗಿ ಇಡುವುದು, ಅವರ ಬಟ್ಟೆಗಳನ್ನು ಅವರೇ ಮಡಚಿಡುವುದು, ಮಕ್ಕಳಿಗೆ 15 ವರ್ಷ ಮೇಲ್ಪಟ್ಟರೆ ಹೊಟ್ಟೆ ತುಂಬಲು ಚಿಕ್ಕ ಪುಟ್ಟ ಅಡುಗೆ ವಿಧಾನ ಕಲಿಸುವುದು ಮಾಡಬೇಕು. ಎಷ್ಟೋ ಜನ ಅಂದುಕೊಳ್ಳಬಹುದು ದುಡ್ಡಿದ್ದರೆ ಮನೆ ಕೆಲಸ-ಅಡುಗೆ ಕೆಲಸ ಮಾಡಲು ಜನ ಸಿಗುತ್ತಾರೆ, ಮತ್ಯಾಕೆ? ನಾವು ಅದನ್ನು ಕಲಿಯಬೇಕು. ಕೊರೊನಾ ಎಂಬ ಮಹಾಮಾರಿ ಇಂಥ ಪ್ರಶ್ನೆಗಳಿಗೆ ನೀಡಿದೆ. ಐಸೋಲೇಷನ್‌ನಲ್ಲಿದ್ದಾಗ ಎಷ್ಟೋ ಅಡುಗೆ ಮಾಡುವುದು ಹೇಗೆ ಎಂದು ತಿಳಿಯದೆ ಕಷ್ಟಪಟ್ಟಿದ್ದಾರೆ. ಅದೇ ನಮ್ಮ ಕೆಲಸವನ್ನು ನಾವೇ ಮಾಡಲಾರಂಭಿಸಿದರೆ ಇತರರನ್ನು ಅವಲಂಬಿಸುವುದು ಕಡಿಮೆಯಾಗುತ್ತದೆ, ಯಾರ ಸಹಾಯ ಇಲ್ಲದೆ ಬದುಕುವ ಧೈರ್ಯ ಬರುತ್ತದೆ.
ಸವಾಲುಗಳನ್ನು ಎದುರಿಸಲಿ
ಅವರಿಗೆ ಕಷ್ಟ ಎಂದಾಗ ನೀವೇ ಆ ಕಷ್ಟವನ್ನು ನಿಭಾಯಿಸಬೇಡಿ, ಉದಾಹರಣೆಗೆ ಮಗ ಅಥವಾ ಮಗಳು ಓದಿ ಒಂದು ಕೆಲಸ ಸಿಕ್ಕಿ ದೂರ ಹೋದಾಗ ಅಲ್ಲಿ ಅವನಿಗೆ ಹಲವು ಸವಾಲುಗಳು ಎದುರಿಸಬಹುದು. ಕೆಲವೊಮ್ಮೆ ಕೆಲಸ ಸಿಕ್ಕರೂ ಆ ಕೆಲಸ ಸರಿ ಹೊಂದದೆ ಬಿಡಬಹುದು, ಆವಾಗ ಅಯ್ಯೋ ಬಂದು ಬಿಡು ಏಕೆ ಕಷ್ಟ ಪಡ್ತೀಯಾ ಅಂತ ಹೇಳಬಾರದು, ಬೇರೆ ಕೆಲಸ ಹುಡುಕುವ ಪ್ರಯತ್ನ ಹಾಕಲು ಬಿಡಿ. ಅದೇ ರೀತಿ ನಾವು ನಮ್ಮ ಮಕ್ಕಳಿಗೆ ಆಸ್ತಿ ಮಾಡಿದ್ದೇವೆ ಅವರೇನು ಕೆಲಸಕ್ಕೆ ಹೋಗಬೇಕಾಗಿಲ್ಲ ಎಂದು ಹೇಳಬೇಡಿ. ಅವರು ಬೇರೆ ಕಡೆ ಕೆಲಸಕ್ಕೆ ಹೋಗುವುದು ಬೇಡ ಎಂದು ನೀವು ಅಂದುಕೊಂಡಿದ್ದರೆ ನೀವು ಮಾಡಿದ ಆಸ್ತಿ ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನೀಡಬೇಕು, ಇಲ್ಲಾ ನೀನು ಖರ್ಚು ಮಾಡಿ ಆರಾಮವಾಗಿರು ಎಂದರೆ ಮುಂದೆ ಅವನ ಬದುಕು ದುಃಸ್ಥಿತಿಗೆ ತಲುಪುವುದು.
ಹಾಗಾಗಿ ಪೋಷಕರೇ ಇದೆಲ್ಲಾ ನೀವೂ ನೋಡಿರಬಹುದು, ಹಾಗಾಗಿ ಮಕ್ಕಳೆಂಬ ಪ್ರೀತಿ ಇರಲಿ, ಅದರೆ ಅತಿಯಾದ ಕಾಳಜಿ ಬೇಡ.



Click it and Unblock the Notifications









