Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ತಾಯಂದಿರೇ, ಮಗುವಿಗೆ ಎದೆಹಾಲು ಉಣಿಸುವಾಗ ಈ ತಪ್ಪುಗಳು ಆದರೆ ಮಗುವಿಗೆ ಆಪತ್ತು!
ಒಂದು ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಎದೆಹಾಲು ತುಂಬಾನೇ ಮುಖ್ಯವಾದ ಪಾತ್ರ ವಹಿಸುತ್ತದೆ. ತಾಯಿಯ ಎದೆಹಾಲಿನಿಂದಲೇ ಮಗುವಿಗೆ ಅಧಿಕ ಪೋಷಕಾಂಶಗಳು ಲಭ್ಯವಾಗುತ್ತದೆ. ಅದ್ರಲ್ಲೂ ಮಕ್ಕಳಿಗೆ ಆರು ತಿಂಗಳು ತುಂಬುವವರೆಗೂ ತಾಯಿ ಎದೆ ಹಾಲು ಬಿಟ್ಟು ಬೇರೇನನ್ನೂ ಮಗುವಿಗೆ ನೀಡೋದಿಲ್ಲ.

ಹೀಗಾಗಿ ಮಗುವಿಗೆ ಎದೆ ಹಾಲು ಉಣಿಸುವಾಗ ತಾಯಿಯಂದಿರೂ ತುಂಬಾನೇ ಜಾಗರೂಕತೆಯಿಂದ ಇರಬೇಕು. ಅದ್ರಲ್ಲೂ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಇಲ್ಲವಾದರೆ ಅದು ಮಗುವಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಅಷ್ಟಕ್ಕೂ ಮಗುವಿಗೆ ಎದೆಹಾಲು ಉಣಿಸುವಾಗ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ತಾಯಿಯಾದವಳು ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋದನ್ನು ತಿಳಿಯೋಣ.
1. ಎದೆಹಾಲು ಉಣಿಸುವಾಗ ಸ್ವಚ್ಛವಾದ ಬಟ್ಟೆಗಳನ್ನೇ ಧರಿಸಿ!
ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ನೀವು ಧರಿಸಿರುವ ಬಟ್ಟೆಯ ಮೇಲೆ ಎದೆ ಹಾಲು ಸೋರಿಕೆಯಾಗಬಹುದು. ಅಥವಾ ಚೆಲ್ಲಬಹುದು. ಹೀಗಾದಾಗ ಬಟ್ಟೆಯನ್ನು ಬದಲಾಯಿಸಿ, ಸ್ವಚ್ಛವಾದ ಬಟ್ಟೆ ಧರಿಸಿ. ಎದೆಹಾಲು ಉಣಿಸುವ ಸಂದರ್ಭದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಸ್ತನಗಳು ಮತ್ತು ನಿಮ್ಮ ಮಗುವಿನ ಸೂಕ್ಷ್ಮ ಚರ್ಮದ ಮೇಲೆ ಚರ್ಮದ ಕಿರಿಕಿರಿಗಳು ಅಥವಾ ಸೋಂಕುಗಳು ಉಂಟಾಗಬಹುದು.
2. ಬ್ರೆಸ್ಟ್ ವೈಪ್ಸ್ (ಬಟ್ಟೆಗಳು)
ಮಗುವಿಗೆ ಹಾಲುಣಿಸುವ ಮೊದಲು ನಿಮ್ಮ ಸ್ತನಗಳನ್ನು ಸ್ವಚ್ಛ ಮಾಡಿಕೊಳ್ಳುವುದು ಒಳ್ಳೆಯದು. ಏಕೆಂದರೆ ನಿಮ್ಮ ಚರ್ಮದ ಮೇಲೆ ಸೂಕ್ಷ್ಮಜೀವಿಗಳು ಇರಬಹುದು. ಇದು ಮಗುವಿಗೆ ಹಾನಿಯುಂಟು ಮಾಡಬಹುದು. ಹೀಗಾಗಿ ಆಲ್ಕೋಹಾಲ್, ಸುಗಂಧ, ಪ್ಯಾರಾಬೆನ್‌ಗಳು ಮತ್ತು ಫಿನಾಕ್ಸಿಥೆನಾಲ್‌ನಿಂದ ಮುಕ್ತವಾದ ವಿಶೇಷವಾದ ಸ್ತನ ಒರೆಸುವ ಬಟ್ಟೆಗಳನ್ನು ಆರಿಸಿ. ಅಥವಾ ಮನೆಯಲ್ಲೇ ಇರುವ ಶುಭ್ರವಾದ ಬಿಳಿ ಬಣ್ಣದ ಬಟ್ಟೆಯನ್ನು ಕೂಡ ಬಳಸಬಹುದು.
3. ಸುಗಂಧ ದ್ರವ್ಯಗಳನ್ನು ಧರಿಸಬೇಡಿ!
ಹಾಲುಣಿಸುವ ಸಮಯದಲ್ಲಿ ನಿಮ್ಮ ಮಗು ನಿಮ್ಮ ಎದೆಯ ಭಾಗದೊಂದಿಗೆ ನಿಕಟ ಸಂಪರ್ಕದಲ್ಲಿ ಇರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ನೀವು ಯಾವುದೇ ರೀತಿಯ ಸುಗಂಧ ದ್ರವ್ಯ ಅಥವಾ ಮೋಯಿಶ್ಚರೈಸೇಷನ್ ಅನ್ನು ಅನ್ವಯಿಸಬಾರದು. ಏಕೆಂದರೆ ಸುಗಂಧ ದ್ರವ್ಯಗಳಂತಹ ಸುಗಂಧಭರಿತ ಉತ್ಪನ್ನಗಳು ಚರ್ಮದ ಕಿರಿಕಿರಿಯನ್ನು ಉಂಟುಮಾಡುವ ರಾಸಾಯನಿಕಗಳು ಅಥವಾ ಅಲರ್ಜಿನ್‌ಗಳನ್ನು ಒಳಗೊಂಡಿರಬಹುದು. ಇದು ಮಗುವಿಗೆ ಉಸಿರಾಟದ ಸಮಸ್ಯೆಗಳು, ಅಥವಾ ಬಾಯಿಯ ಅಲರ್ಜಿಯನ್ನು ಉಂಟುಮಾಡಬಹುದು.
4. ನರ್ಸಿಂಗ್ ಬ್ರಾಗಳನ್ನು ಬಳಸಿ!
ನರ್ಸಿಂಗ್ ಬ್ರಾಗಳನ್ನು ತಾಯಂದಿರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅವುಗಳನ್ನು ಸುಲಭವಾಗಿ ಬಿಚ್ಚಬಹುದು ಅಥವಾ ಸ್ತನ್ಯಪಾನದ ಸಂದರ್ಭದಲ್ಲಿ ಆರಾಮದಾಯಕವಾಗಿ ತೆರೆಯಬಹುದು. ಅಂದರೆ ಆರೋಗ್ಯಕರ ಸ್ತನ್ಯಪಾನ ಮಾಡೋದಕ್ಕೆ ಇದು ಸಹಾಯ ಮಾಡುತ್ತದೆ. ಈ ನರ್ಸಿಂಗ್ ಬ್ರಾಗಳನ್ನು ಬಳಸೋದ್ರಿಂದ ಕೈಯಿಂದ ಸ್ತನ ಮಟ್ಟುವ ಅಥವಾ ಮಗುವಿನ ಬಾಯಿಗೆ ಸೂಕ್ಷ್ಮಜೀವಿಗಳನ್ನು ವರ್ಗಾಯಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.
5. ಸ್ತನ ಪಾನಕ್ಕೂ ಮೊದಲು ಕೈಗಳನ್ನು ತೊಳೆಯಿರಿ!
ನಿಮ್ಮ ಮಗುವಿಗೆ ಹಾಲುಣಿಸುವ ಮೊದಲು ಯಾವಾಗಲೂ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ. ಈ ಸರಳ ಹಂತವು ಸೂಕ್ಷ್ಮಜೀವಿಗಳ ಪ್ರಸರಣವನ್ನು ತಡೆಯಲು ಸಹಾಯ ಮಾಡುತ್ತದೆ. ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಕೆಂಪು, ಮೃದುತ್ವ ಅಥವಾ ಸ್ರವಿಸುವಿಕೆಯಂತಹ ಸೋಂಕಿನ ಲಕ್ಷಣಗಳು ನಿಮ್ಮ ಸ್ತನದ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಗಮನ ಹರಿಸಿ. ನೀವು ಯಾವುದೇ ಅಸಹಜತೆಗಳನ್ನು ಗಮನಿಸಿದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
ಮಗುವಿಗೆ ಸ್ತನಪಾನ ಮಾಡುವ ತಾಯಂದಿರು ಈ ಬಗ್ಗೆ ಗಮನ ಹರಿಸುವುದು ತುಂಬಾನೇ ಮುಖ್ಯವಾಗುತ್ತದೆ. ನೀವು ನಿಮ್ಮ ಜೊತೆಗೆ ನಿಮ್ಮ ಮಗುವಿನ ಆರೋಗ್ಯದ ಮೇಲೆ ಕಣ್ಣಿಡೋದು ಅಗತ್ಯವಾಗಿದೆ.



Click it and Unblock the Notifications












