Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
6 ತಿಂಗಳು ತುಂಬುವ ಮೊದಲು ಮಗುವಿಗೆ ನೀರು ಕುಡಿಸಿದರೆ ಈ ಅಪಾಯಗಳಿವೆ ಹುಷಾರ್!
ಬೇಸಿಗೆ ಶುರುವಾಗಿದೆ, ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯಬೇಕು. ಮಕ್ಕಳಿಗೆ ನೀರು ಕುಡಿಸಬೇಕು, ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಉಂಟಾಗುವುದು.

6 ತಿಂಗಳಿಗಿಂತ ಚಿಕ್ಕ ಮಕ್ಕಳಿಗೂ ನೀರು ಕೊಡುತ್ತಾರೆ, ಮಕ್ಕಳಿಗೆ ನೀರು ಕೊಡದಿದ್ದರೆ ಅವರ ಬಾಯಿ ಒಣಗುತ್ತೆ ಅಂತ ಸ್ಯೂನ್ ಅಥವಾ ಫೀಡಿಂಗ್ ಬಾಟಲಿನಲ್ಲಿ ನೀರು ಕೊಡುತ್ತಾರೆ. 6 ತಿಂಗಳಿಗಿಂತ ಚಿಕ್ಕ ಮಗುವಿಗೆ ನೀರು ಕೊಡುವುದರಿಂದ ಆ ಮಗುವಿನ ಆರೋಗ್ಯಕ್ಕೆ ನಾವು ತೊಂದರೆ ಮಾಡುತ್ತಿದ್ದೇವೆ ಎಂಬುವುದು ಗೊತ್ತೇ?
ಹೌದು, 6 ತಿಂಗಳಿಗಿಂತ ಚಿಕ್ಕ ಮಗುವಿಗೆ ನೀರು ಕೊಡಬಾರದು ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಬೇಸಿಗೆಯಲ್ಲಿ ಮಗುವಿಗೆ ನೀರು ಕೊಡದಿದ್ದರೆ ಹೇಗೆ?
ಮಗುವಿಗೆ ಅವಶ್ಯಕವಾದ ಸಿಗುವುದಾದರೂ ಹೇಗೆ ಎಂಬ ಚಿಂತೆಯೇ? ಚಿಂತೆ ಬಿಡಿ, ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ:
6 ತಿಂಗಳವರೆಗೆ ಮಗುವಿಗೆ ಎದೆ ಹಾಲು ಬಿಟ್ಟು ಬೇರೆ ಏನೂ ನೀಡಬೇಡಿ
ಇದನ್ನು ನಿಮಗೆ ವೈದ್ಯರು ಕೂಡ ಹೇಳಿರುತ್ತಾರೆ, ಆದರೆ ಹಲವರು ಇದನ್ನು ಪಾಲಿಸುವುದಿಲ್ಲ. ಮಗುವಿಗೆ 4 ತಿಂಗಳು ತುಂಬುವಾಗಲೇ ನೀರು ಕೊಡುವುದು, ರಾಗಿ ಅಂಬಳಿ ಕೊಡುವುದು ಮಾಡುತ್ತಾರೆ. ಆದರೆ ಆ ರೀತಿ ಮಾಡಲೇಬಾರದು. ನೀವು 6 ತಿಂಗಳವರೆಗೆ ತಾಯಿಯ ಎದೆಹಾಲನ್ನು ಹೊರತುಪಡಿಸಿ ಮಗುವಿಗೆ ಏನನ್ನೂ ನೀಡಬಾರದು. ತಾಯಿಯ ಎದೆಹಾಲಿನಲ್ಲಿ ಶೇ. 87ರಷ್ಟು ನೀರು, ಸೇ. 1ರಷ್ಟು ಪ್ರೊಟೀನ್, ಶೆ. 4ರಷ್ಟುಲಿಪಿಡ್, ಶೇ. 7ರಷ್ಟು ಕಾರ್ಬೋಹೈಡ್ರೇಟ್ಸ್ ಇರುತ್ತದೆ, ಮಗುವಿಗೆ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳು ತಾಯಿಯ ಎದೆಹಾಲಿನಲ್ಲಿಯೇ ಇರುವುದರಿಂದ 6 ತಿಂಗಳವರೆಗೆ ನೀರಾಗಲಿ, ಇತರ ಆಹಾರವಾಗಲಿ ನೀಡಬಾರದು.
ಮಕ್ಕಳಿಗೆ ನೀರು ಕೊಟ್ಟರೆ ಕಿಡ್ನಿಗೆ ಹಾನಿಯಾಗುತ್ತದೆ
ಮಕ್ಕಳಿಗೆ 6 ತಿಂಗಳಾಗುವವರಿಗೆ ಮಕ್ಕಳ ಕಿಡ್ನಿ ಸರಿಯಾಗಿ ಬೆಳವಣಿಗೆಯಾಗಿರುವುದಿಲ್ಲ. ಮಗುವಿನ ಕಿಡ್ನಿ ನೀರಿನಲ್ಲಿರುವ ಬೇಡದ ಅಂಶಗಳನ್ನು ತೆಗೆದು ಮೂತ್ರದ ಮೂಲಕ ಹೊರಹಾಕುವಷ್ಟು ಸಾಮರ್ಥ್ಯ ಹೊಂದಿರುವುದಿಲ್ಲ, ಆದ್ದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಸಾವು ಕೂಡ ಸಂಭವಿಸುವುದು
6 ತಿಂಗಳಿಗಿಂತ ಚಿಕ್ಕ ಮಗುವಿಗೆ ನೀರು ಕೊಡುವುದರಿಂದ hyponatremia ಅಂದರೆ ಮೆದುಳಿನಲ್ಲಿ ಊತ ಉಂಟಾಗಿ ಸಾವು ಕೂಡ ಸಂಭವಿಸಬಹುದು.
ಮಗುವಿಗೆ ಯಾವಾಗ ನೀರು ಕೊಡಲು ಪ್ರಾರಂಭಿಸಬಹುದು?
ಮಗುವಿಗೆ 6 ತಿಂಗಳ ನೀರು ಕೊಡಲು ಪ್ರಾರಂಭಿಸಬಹುದು, ಮಗುವಿಗೆ ಸ್ವಲ್ಪ ನೀರನ್ನು ಸ್ಪೂನ್‌ನಲ್ಲಿ ಕೊಡಿ, ಬಾಟಲಿಯಲ್ಲಿ ಕೊಡುವ ತಪ್ಪು ಮಾಡದಿರಿ. ಮಗುವಿಗೆ ಒಂದು ವರ್ಷ ಆಗುವವರಿಗೆ ಸ್ವಲ್ಪ ನೀರು ಕೊಡಿ, ಜೊತೆಗೆ ಎದೆಹಾಲು ಕೊಡಿ. ಮಗುವಿಗೆ ಒಂದು ವರ್ಷ ಕಳೆದ ಮೇಲೆ ಆ ಮಗು ಎಷ್ಟು ಕುಡಿಯುತ್ತದೋ ಅಷ್ಟು ನೀರು ಕೊಡಬಹದು.
ಮಗುವಿನಲ್ಲಿ ನೀರಿನಂಶ ಕಡಿಮೆಯಾದರೆ ಏನಾಗುತ್ತದೆ
* ತುಂಬಾ ಅಳು
* ವಾಂತಿ
* ಸುಸ್ತಾಗುವುದು
* ಪಿಡ್ಸ್ ಬರುವುದು
ಈ ಬಗೆಯ ಲಕ್ಷಣಗಳು ಕಂಡು ಬಂದರೆ ಮಕ್ಕಳ ತಜ್ಞರಿಗೆ ತೋರಿಸಿ.
ಬೇಸಿಗೆಯಲ್ಲಿ ಆಗಾಗ ಎದೆಹಾಲು ನೀಡಿ
ಮಗುವಿನಲ್ಲಿ ನೀರಿನಂಶ ಕಡಿಮೆಯಾಗದಿರಲು ಬೇಸಿಗೆಯಲ್ಲಿ ಆಗಾಗ ಹಾಲು ಕೊಡಿ. ಸಾಮಾನ್ಯವಾಗಿ ಎರಡು ಗಂಟೆಗೊಮ್ಮೆ ನೀಡಿದರೆ ಸಾಕು.



Click it and Unblock the Notifications


