Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಮಗುವಿಗೆ ಆಹಾರವನ್ನು ಒತ್ತಾಯ ಪೂರ್ವಕವಾಗಿ ಮಾತ್ರ ತಿನ್ನಿಸಬೇಡಿ!
ಸಣ್ಣ ಮಕ್ಕಳಿರುವ ಕುಟುಂಬಗಳಲ್ಲಿ ಊಟದ ಸಮಯದಲ್ಲಿ ಸಾಮಾನ್ಯವಾಗಿ ಒತ್ತಡ ಮತ್ತು ಜಗಳ ಸರ್ವೆಸಾಮಾನ್ಯವಾಗಿರುತ್ತದೆ. ಅದರೆ ಆಗಾಗಬಾರದು. ಊಟದ ಸಮಯವೂ ಮಗುವಿಗೂ ಮತ್ತು ಅದರ ಹಾರೈಕೆ ಮಾಡುವ ಪೋಷಕರಿಗೂ ಸಂತೋಷದಾಯಕ ಹಾಗು ವಿನೋದಭರಿತ ಸಮಯವಾಗಿರಬೇಕು. ಪೋಷಕರಾದ ನೀವು ನಿಮ್ಮ ಮಗು ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವ ಅಗತ್ಯತೆಯನ್ನು ತಿಳಿದುಕೊಳ್ಳಬೇಕು ಅಲ್ಲದೆ ಅದನ್ನು ಸಾಧ್ಯವಾದಷ್ಟು ನಿಮ್ಮ ಮಗು ಕಲಿತುಕೊಳ್ಳುವಂತೆ ಮಾಡಬೇಕು. ಇನ್ನೂ ತಡಮಾಡಬೇಡಿ. ನಿಮ್ಮ ಮಗು ಘನ ಆಹಾರ ತಿನ್ನುವುದನ್ನು ಪ್ರಾರಂಭಿಸಿದಾಗ ಅಥವಾ 6 ತಿಂಗಳಿಗೆ ಮೊದಲು ಮಗುವಿಗೆ ಉತ್ತಮ ಆಹಾರ ಪದ್ಧತಿಯನ್ನು ಆರಂಭಿಸಬೇಕು.

ಹೆಚ್ಚಿನ ಪೋಷಕರು ತಮ್ಮ ಮಗು ಆಹಾರವನ್ನು ಸೇವಿಸಲು ನಿರಾಕರಿಸಿದಾಗ ಅಥವಾ ವಿರೋಧಿಸಿದಾಗ ಮಗುವಿಗೆ ತಿನ್ನಲು ಒತ್ತಾಯಿಸುತ್ತಾರೆ. ಇದು ಮಗುವಿನಲ್ಲಿ ಆಹಾರದ ಸೇವನೆಯ ಕೆಟ್ಟ ಅಭ್ಯಾಸವನ್ನು ಹುಟ್ಟುಹಾಕುತ್ತದೆ. ಇದರಿಂದಾಗಿ ನಿಮ್ಮ ಮಗು ಆಹಾರದ ವಿಷಯದಲ್ಲಿ ಹೆಚ್ಚು ವಿರೋಧಿಸುವುದರ ಜೊತೆಗೆ ಹೊಸ ಆಹಾರ ಪದಾರ್ಥಗಳ ಬಗ್ಗೆ ಜಾಗರೂಕರಾಗಿರುವಂತೆ ಮಾಡುತ್ತದೆ.
ಮಗುವಿನ ಆಹಾರ ಮತ್ತು ಕಾಳಜಿಯ ಜವಾಬ್ದಾರಿಯನ್ನು ಹೊತ್ತಿರುವ ಪ್ರತಿಯೊಬ್ಬ ಪೋಷಕರು ಒಟ್ಟಾಗಿ ಕುಳಿತು ಈ ಸಮಸ್ಯೆಯ ಬಗ್ಗೆ ಮಾತನಾಡಬೇಕಾಗುತ್ತದೆ. ನಿಮ್ಮ ಮಗುವಿನ ಆಹಾರದ ವಿಷಯದಲ್ಲಿ ನೀವೆಲ್ಲರು ಒಂದೇ ನಿಯಮವನ್ನು ಪಾಲಿಸಬೇಕಾಗುತ್ತದೆ. ಹೆಚ್ಚಿನ ಪೋಷಕರು ಎದುರಿಸುತ್ತಿರುವ ಕೆಲವು ಸಮಸ್ಯೆಯನ್ನು ಇಲ್ಲಿ ನೀಡಲಾಗಿದ್ದು, ಅದರೊಂದಿಗೆ ಕೆಲವು ಸಂಭವನೀಯ ಪರಿಹಾರಗಳನ್ನು ಸಹ ನಾವು ನಿಮಗಾಗಿ ಇಲ್ಲಿ ನೀಡಿದ್ದೇವೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ.
ಮಗು ಸಾಕಷ್ಟು ಆಹಾರವನ್ನು ಸೇವಿಸುವುದಿಲ್ಲ
ನೀವು ಮಗುವಿಗೆ ಆಹಾರವನ್ನು ನೀಡುವ ಕುರಿತು ಮೊದಲು ತಿಳಿದುಕೊಳ್ಳಬೇಕು. ನಿಮ್ಮ ಮಗುವಿಗೆ ನೀವು ಏನು ನೀಡುತ್ತಿದ್ದೀರೋ, ಅದು ಹೆಚ್ಚಾಯಿತೇ? ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಎಷ್ಟೋ ಸಂದರ್ಭದಲ್ಲಿ ಪೋಷಕರು ತಮ್ಮ ಮಗು ನಿಜವಾಗಿ ಹೆಚ್ಚು ತಿನ್ನುತ್ತಿಲ್ಲ ಎಂದಾದರೆ ಅದರ ಹಿಂದಿನ ಕಾರಣವೇನು? ಎಂಬುದನ್ನು ನೀವು ಗುರುತಿಸುವ ಅಗತ್ಯವಿದೆ. ನಿಮ್ಮ ಮಗು ಸ್ನ್ಯಾಕ್ಸ್ ಅನ್ನು ಜಾಸ್ತಿ ತಿನ್ನುತ್ತಿದೆಯೇ ಎಂಬುದನ್ನು ಪರೀಕ್ಷಿಸಿ.
ನಿಮ್ಮ ಮಗುವಿಗೆ ತಾನಾಗೆ ಹಸಿವಾಗುವುದಿಲ್ಲ. ಹಾಗಾಗಿ ನಿಮ್ಮ ಆಹಾರದ ಸಮಯ ಹೆಚ್ಚು ಉಪಯೋಗಕಾರಿಯಾಗುತ್ತಿದೆಯೇ ಎಂಬುದನ್ನು ನೋಡಿ. ಅಲ್ಲದೆ ಕುರುಕು ತಿಂಡಿಗಳನ್ನು ನೀಡುವುದನ್ನು ನಿಲ್ಲಿಸಲು ಪ್ರಯತ್ನಿಸಿ. ಮಗುವಿಗೆ ಹಸಿವಾಗದಿರಲು ಮಗುವಿನ ಅನಾರೋಗ್ಯ ಮತ್ತು ಬೆಳವಣಿಗೆ ಸಮಸ್ಯೆಗಳು ಸಹ ಕಾರಣವಿರಬಹುದು.
ಬೇಸಿಗೆಯ ಸಮಯದಲ್ಲಿ ಹೆಚ್ಚಿನ ಉಷ್ಣಾಂಶವಿರುವುದರಿಂದ ಮಧ್ಯಾಹ್ನದ ಸಮಯದಲ್ಲಿ ಮಗು ತಿನ್ನಲು ಇಚ್ಛಿಸುವುದಿಲ್ಲ. ಆಗ ಮಗುವಿಗೆ ತಂಪಾಗಿರುವ ಆಹಾರವನ್ನು ನೀಡಿ ಇದು ಅವರಿಗೆ ಯಾವುದೇ ಹಠಮಾಡದೆ ತಿನ್ನಲು ಸಹಾಯವಾಗುತ್ತದೆ. ಮಗು ಕೆಲವು ತುತ್ತುಗಳನ್ನು ಮನಃಪೂರ್ವಕವಾಗಿ ತಿನ್ನುತ್ತದೆ. ಅನಂತರ ನೀಡುವ ಆಹಾರವನ್ನು ತಿನ್ನಲು ವಿರೋಧಿಸುತ್ತದೆ.. ಇದು ನಿಮ್ಮ ಮಗು ಅದಕ್ಕೆ ಸಾಕಾಗುವಷ್ಟು ಆಹಾರವನ್ನು ಸೇವಿಸಿದೆ ಎಂಬುದರ ಸಂಕೇತವಾಗಿದೆ.
ಮಗು ತನ್ನ ದೇಹಕ್ಕೆ ಅಗತ್ಯವಾದ ಪ್ರಮಾಣದಷ್ಟು ಆಹಾರವನ್ನು ಮಾತ್ರ ಸೇವಿಸುತ್ತದೆ. ಆಗಿದ್ದಾಗ ಅದು ಆಹಾರವನ್ನು ಸೇವಿಸಲು ತಿರಸ್ಕರಿಸಿದಾಗ ನೀವು ಮಗುವನ್ನು ಒತ್ತಾಯಿಸಲು ಪ್ರಯತ್ನಿಸುವುದನ್ನು ನಿಲ್ಲಿಸಬೇಕು. ಯಾವ ಮಗುವನ್ನು ಆಹಾರವನ್ನು ಸೇವಿಸುವಂತೆ ಹೆಚ್ಚು ಒತ್ತಾಯಿಸಿದ್ದೆ ಆದಲ್ಲಿ ಆ ಮಗು ಭವಿಷ್ಯದಲ್ಲಿ ತಿನ್ನುವ ವಿಚಾರದಲ್ಲಿ ಹಠ ಮಾಡಲು ಆರಂಭಿಸಿ, ಅಸ್ವಸ್ಥತೆಯನ್ನು (ಈಟಿಂಗ್ ಡಿಸಾರ್ಡರ್) ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಮಗು ತಟ್ಟೆಯಲ್ಲಿ ಇರುವ ಎಲ್ಲಾವನ್ನು ತಿಂದು ಮುಗಿಸುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ನಿರೀಕ್ಷಿಸಲು ಸಾಧ್ಯವಿಲ್ಲ. ನಿಮ್ಮ ಮಗು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರವನ್ನು ತಿನ್ನುವಂತೆ ನೀವು ಪ್ರಯತ್ನಿಸಬಾರದು. ನಿಮ್ಮ ಮಗುವಿನ ಹೊಟ್ಟೆ ತುಂಬಿದೆ ಎಂದು ತಿಳಿಸುವ ಸೂಚನೆಗಳು ನಿಮಗೆ ಕಾಣುತ್ತವೆಯೇ ಎಂದು ಎಚ್ಚರಿಕೆಯಿಂದ ಗಮನಿಸಿ.
ಮಗು ಊಟದ ಸಮಯದಲ್ಲಿ ಊಟ ಮಾಡಲು ಹಿಂಜರಿಯುವುದಿಲ್ಲ
ಪೋಷಕರು ಮಗುವಿಗೆ ಆಹಾರವನ್ನು ತಿನ್ನಿಸಲು ಪ್ರಯತ್ನಿಸುವಾಗ ಕೆಲವು ಸಂದರ್ಭದಲ್ಲಿ ಮಕ್ಕಳು ಮನಃಪೂರ್ವಕವಾಗಿ ತಿನ್ನುತ್ತಾರೆ. ಆದರೆ ಕೆಲವು ಸಂದರ್ಭದಲ್ಲಿ ಆಹಾರವನ್ನು ಸೇವಿಸಲು ಹಿಂಜರಿಯುವ ಮಗುವಿಗೆ ತಿನ್ನಿಸುವುದು ಕಷ್ಟವಾಗುತ್ತದೆ. ಮಕ್ಕಳು ಊಟ ಮಾಡುವಾಗ ಒಂದು ಕಡೆ ನಿಲ್ಲದೆ ಓಡಾಡಲು ಆರಂಭಿಸುತ್ತಾರೆ. ಅದರಲ್ಲೂ ಇನ್ನೂ ನಡೆಯಲು ಬಾರದ ಮಕ್ಕಳು ಅಂಬೆಗಾಲಿಡುತ್ತಾ ತಮ್ಮ ಸುತ್ತ ಮುತ್ತ ಇರುವ ಜಾಗದಲ್ಲಿ ಓಡಾಡಲು ಪ್ರಯತ್ನಿಸುತ್ತಾರೆ.
ಮಕ್ಕಳು ಹೀಗೆ ಮಾಡುವಾಗ ಪೋಷಕರು ಅಥವಾ ಮಗುವನ್ನು ಹಾರೈಕೆ ಮಾಡುವವರು ಅವರ ಹಿಂದೆಯೇ ಸುತ್ತುತ್ತಾ ಆಹಾರವನ್ನು ತಿನ್ನಿಸುತ್ತಾರೆ. ಅದರೆ ಇದು ಕೆಟ್ಟ ಅಭ್ಯಾಸ. ಮಕ್ಕಳು ಒಂದು ಕಡೆ ಕುಳಿತು ಊಟ ಮಾಡುವ ಅಭ್ಯಾಸವನ್ನು ಕಲಿಯಬೇಕು. ಅವರಿಗೆ ಸ್ವಲ್ಪ ತಿನ್ನಲು ಕೊಡಿ ಆಗ ಅವರೇನಾದರೂ ಅತ್ತಿತ್ತ ಹೋದರೆ ಹೋಗಲಿ ಬಿಡಿ ನೀವು ಅವರ ಹಿಂದೆ ಹೋಗಬೇಡಿ. ಹಾಗಲೇ ಹೇಳಿದ ಹಾಗೆ ಅದೊಂದು ಕೆಟ್ಟ ಅಭ್ಯಾಸ. ಮತ್ತೆ ಅವರಿಗೆ ಹಸಿವಾದಾಗ ಆಹಾರವನ್ನು ತಿನ್ನಲು ನೀಡಿ. ಇದರಿಂದ ಅವರು ಆಹಾರವನ್ನು ಸೇವಿಸಿ ಹೋಗಬೇಕು ಎಂಬುದನ್ನು ಕಲಿಯುತ್ತಾರೆ. ಅಲ್ಲದೆ ಊಟದ ಟೇಬಲ್ ಊಟ ಮಾಡುವ ಸ್ಥಳ ಮತ್ತು ತಾನು ಮನೆಯೊಳಗೆ ಅತ್ತಿತ್ತ ಓಡಾಡುತ್ತಿದ್ದರೆ ಆಹಾರ ದೊರೆಯುವುದಿಲ್ಲ ಎಂಬುದನ್ನು ಅವರು ಕಲಿಯುತ್ತಾರೆ.



Click it and Unblock the Notifications














