Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗುವಿಗೆ ಡಯಾಪರ್ ಕಿರಿಕಿರಿಯಾಗದಿರಲಿ

ಆದ್ದರಿಂದ ಮಕ್ಕಳಿಗೆ ಡಯಾಪರ್ ಹಾಕಿದಾಗ ಗುಳ್ಳೆ, ತುರಿಕೆ ಉಂಟಾಗದಿರಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
* ಮಕ್ಕಳಿಗೆ ಸ್ನಾನ ಮಾಡಿಸಿದ ಬಳಿಕ ಮಗುವಿನ ದೇಹವನ್ನು ಮೃದುವಾದ ಟವಲ್ ನಿಂದ ಮೃದುವಾಗಿ, ಚೆನ್ನಾಗಿ ಒರೆಸಬೇಕು. ತೊಡೆಯ ಸಂದುಗಳಲ್ಲಿ, ಹಿಂಭಾಗದಲ್ಲಿ ನೀರಿನ ಅಂಶ ಉಳಿಯದಂತೆ ಒರೆಸಬೇಕು. ನೀರಿನ ಅಂಶ ಉಳಿದರೆ ಬ್ಯಾಕ್ಟೀರಿಯಾದಿಂದಾಗಿ ಗುಳ್ಳೆಗಳು ಉಂಟಾಗುವುದು.
* ಮಕ್ಕಳಿಗೆ ನೆಗಡಿ, ಕೆಮ್ಮು, ಭೇದಿ ಮೂದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಕಾಯಿಲೆಗಳಿ ಮದ್ದು ಕೊಟ್ಟಾಗ ಕೆಲವೊಮ್ಮೆ ಶಿಲೀಂಧ್ರದ ಸೋಂಕು ಉಂಟಾಗಿ ಡಯಾಪರ್ ಗುಳ್ಳೆಗಳು ಬರುತ್ತದೆ.
* ಚರ್ಮ ಒದ್ದೆಯಾದರೆ ಈ ರೀತಿಯ ಗುಳ್ಳೆಗಳು ಕಂಡು ಬರುತ್ತದೆ. ಆದ್ದರಿಂದ ಮಕ್ಕಳ ಡಯಾಪರ್‌ಗಳನ್ನು ಆಗಾಗ ಬದಲಾಯಿಸುತ್ತಿರಬೇಕು. ಮನೆಯಲ್ಲಿರುವಾಗ ಡಯಾಪರ್ ಬದಲು ಹತ್ತಿ ಬಟ್ಟೆ ಬಳಸಿ.
* ಮಕ್ಕಳು ಒದ್ದೆ ಅಥವಾ ಕೊಳೆ ಮಾಡಿಕೊಂಡರೆ ಬಟ್ಟೆಗಳನ್ನು ತಕ್ಷಣವೇ ಬದಲಿಸಿ. ಇದರಿಂದ ಮಗುವಿನ ಮೃದು ಚರ್ಮದಲ್ಲಿ ಕೆರೆತ, ಗಾಯ, ಗುಳ್ಳೆ ಉಂಟಾಗುವುದು ತಪ್ಪುತ್ತದೆ.
* ಡಯಾಪರ್ ಧರಿಸುವ ಪ್ರದೇಶವನ್ನು ಬೆಚ್ಚಗಿನ ನೀರಿನಲ್ಲಿ ದಿನಕ್ಕೆ 3-4 ಬಾರಿ ತೊಳೆಯಬೇಕು. ಆ ಜಾಗದಲ್ಲಿ ಹೆಚ್ಚು ಪೌಡರ್ ಬಳಸದಿರಿ.
* ಬಟ್ಟೆ ಕಟ್ಟುವುದಾದರೆ ತುಂಬಾ ಬಿಗಿಯಾಗಿ ಕಟ್ಟಬಾರದು. ಸ್ವಲ್ಪ ಸಡಿಲವಾಗಿ ಕಟ್ಟಿ, ಅದರಲ್ಲೂ ಹತ್ತಿ ಬಟ್ಟೆ ಮಾತ್ರ ಬಳಸಿ.
* ಒಂದು ವೇಲೆ ಗುಳ್ಳೆಗಳು ಉಂಟಾದರೆ ಚಂದನ, ಸ್ವಲ್ಪ ಅರಿಶಿಣ ಮತ್ತು ತುಪ್ಪವನ್ನು ಬೆರೆಸಿ ಹಚ್ಚಿದರೆ ಗಾಯ, ಗುಳ್ಳೆಗಳು ಒಣಗುತ್ತವೆ.
* ತುಪ್ಪದಲ್ಲಿ ಅರಿಶಿಣ ಮತ್ತು ಜಾಜಿಯ ಎಲೆ, ತುಳಸೀ ಎಲೆ, ಬೇವಿನ ಎಲೆಗಳನ್ನು ಹಾಕಿ ಕುದಿಸಿ, ಸೋಸಿ ಇಟ್ಟುಕೊಳ್ಳಬೇಕು. ಗುಳ್ಳೆಗಳು ಉಂಟಾದರೆ ಈ ತೈಲ ಹಚ್ಚಿದರೆ ಕಮ್ಮಿಯಾಗುವುದು. ಆದರೆ ಗಾಯವಾಗಿದ್ದರೆ ವೈದ್ಯರನ್ನು ಕಂಡು ಮಲಾಮು ಹಚ್ಚುವುದು ಒಳ್ಳೆಯದು.



Click it and Unblock the Notifications
