Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಮ್ಮ ಕೆಲಸಕ್ಕೆ ಹೋದರು ಕಂದನಿಗೆ ಸಿಗುವುದು ಎದೆಹಾಲು

ಅದಕ್ಕಾಗಿ ಈಗ ಎದೆ ಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿಟ್ಟು ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವರ ಕೈಯಲ್ಲಿ ಕೊಟ್ಟು ಹೋಗುತ್ತಾರೆ ಹಾಗಾದರೂ ಮಗುವಿಗೆ ತಾಯಿ ಎದೆ ಹಾಲು ತಕ್ಕದಲ್ಲ ಎಂಬ ಸಮಧಾನ.
ಆದರೆ ಈ ರೀತಿ ಹಾಲನ್ನು ನೀಡುವಾಗ ಸರಿಯಾದ ರೀತಿಯಲ್ಲಿ ನೀಡದಿದ್ದರೆ ಮಗುವಿನ ಹೊಟ್ಟೆಗೆ ತೊಂದರೆ ಉಂಟಾಗುತ್ತದೆ.
ಆದುದರಿಂದ ಹಾಲನ್ನು ಶೇಖರಿಸುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
1. ಈ ರೀತಿ ಹಾಲನ್ನು ಶೇಖರಿಸಿ ಬಾಟಲಿನಲ್ಲಿ ಕೊಡುವುದಾದರೆ ಮಗು ಬಾಟಲಿಯ ನಿಪ್ಪಲ್ ಅನ್ನು ಬಾಯಿಗೆ ಇಟ್ಟಾಗ ಚೀಪಲು ತಿಳಿದಿರಬೇಕು.
2. ಕೆಲಸಕ್ಕೆ ಹೋಗುವಾಗ ಮಾತ್ರವಲ್ಲ ಪ್ರಯಾಣದ ವೇಳೆಯಲ್ಲಿ ಸಹ ಈ ರೀತಿ ಸಂಗ್ರಹಿಸಿ ಕೊಂಡೊಯ್ಯಬಹುದು.
3. ಈ ರೀತಿ ಸಂಗ್ರಹಿಸಿದ ಹಾಲನ್ನು ಕೊಠಡಿಯ ಉಷ್ಣತೆಯಲ್ಲಿ 3-4 ಗಂಟೆ ಕಾಲ ಇಡಬಹುದು, ನಂತರ ಅದನ್ನು ಕುಡಿಯಲು ನೀಡಬಾರದು.
4. ಅದಕ್ಕಿಂತ ಹೆಚ್ಚಿನ ಸಮಯ ಹಾಲು ಕೆಡದಂತೆ ಫ್ರೀಜರ್ ನಲ್ಲಿ ಇಟ್ಟು ನೀಡಬಹುದಾಗಿದೆ.
5. ಫ್ರೀಜರ್ ನಲ್ಲಿ ಗಟ್ಟಿಯಾದ ಹಾಲನ್ನು ಉಗುರು ಬೆಚ್ಚಗಿನ ಬಿಸಿ ನೀರಿನಲ್ಲಿ ಹಾಕಿ ಕರಗಿಸಿ, ಕುದಿಯುವ ನೀರಿನಲ್ಲಿ ಬಿಸಿ ಬಾಟಲಿಯನ್ನು ಇಡಬಾರದು.
6. ಯಾವುದೆ ಕಾರಣಕ್ಕೂ ಹಾಲನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಾರದು.
7. ಒಂದು ಸಲ ಬಾಟಲಿಯಲ್ಲಿನ ಹಾಲನ್ನು ನೀಡಿದ ನಂತರ ಅದರಲ್ಲಿ ಉಳಿದಂತಹ ಹಾಲನ್ನು ಪುನಃ ಬಳಸಬಾರದು, ಆದ್ದರಿಂದ 2-3 ಬಾಟಲಿಯಲ್ಲಿ 200 ml ನಷ್ಟು ಶೇಖರಿಸಿಡಬಹುದಾಗಿದೆ.
8. ಎದೆ ಹಾಲನ್ನು ಶೇಖರಿಸಿಟ್ಟಾಗ ಅದು ಸ್ವಲ್ಪ ಕಂದು ಬಣ್ಣದಲ್ಲಿರುವುದು, ಹಾಲನ್ನು ಮಗುವಿಗೆ ಕುಡಿಸುವ ಮೊದಲು ಚೆನ್ನಾಗಿ ಒಮ್ಮೆ ಅಲುಗಾಡಿಸಿ ಕುಡಿಯಲು ಕೊಡಬೇಕು.



Click it and Unblock the Notifications
