Latest Updates
-
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು! -
ಡೆಂಗ್ಯೂ ಭೀತಿ: ಮಳೆಗಾಲದ ಮುನ್ನ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 20 ನಿಮಿಷದ ಈ ಕೆಲಸ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಲೀಟರ್ಗೆ ₹8 ಹೆಚ್ಚಳ, ನಿಮ್ಮ ತಿಂಗಳ ಬಜೆಟ್ ಮೇಲೆ ಎಂತಹ ಪರಿಣಾಮ? -
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ!
ಪುಟ್ಟ ಮಗುವಿನ ನಾಲಿಗೆಯೂ ರುಚಿ ಬಯಸುತ್ತೆ

ಮಗುವಿನ ರುಚಿಕರ ಆಹಾರ ತಯಾರಿಸುವ ರೀತಿಯನ್ನು ತಿಳಿದುಕೊಳ್ಳಿ:
1. ಮೊಟ್ಟೆ: ನಿಮ್ಮ ಪುಟ್ಟ ಮಕ್ಕಳಿಗೆ ಮೊಟ್ಟೆ ಸಲಾಡ್ ಮಾಡಿದರೆ ತುಂಬಾ ಇಷ್ಟವಾಗುತ್ತೆ. ಪ್ರೊಟೀನ್ ಮತ್ತು ಅವಶ್ಯಕವಾದ ಕಾರ್ಬೊಹೈಡ್ರೇಡ್ ಕೂಡ ಒದಗಿಸುತ್ತದೆ. ಎರಡು ಮೊಟ್ಟೆ ಮತ್ತು ಆಲೂಗಡ್ಡೆಯನ್ನು ಒಟ್ಟಿಗೆ ಬೇಯಿಸಿ ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಕಲೆಸಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಮೆಣಸಿನ ಪುಡಿ ಬೆರೆಸಿ ಸ್ವಲ್ಪ ತಾಜಾ ಕ್ರೀಂ ಮಿಶ್ರಣ ಮಾಡಬೇಕು. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ, ನಿಮಗೂ ತುಂಬಾ ಒಳ್ಳೆಯದು. ಈ ಮೊಟ್ಟೆ ಸಲಾಡನ್ನು ಖಂಡಿತ ನಿಮ್ಮ ಮಗು ಇಷ್ಟ ಪಟ್ಟು ತಿನ್ನಲು ಆರಂಭಿಸುತ್ತದೆ. ತುಂಬಾ ಮೆದುವಿರುವುದರಿಂದ ತಿನ್ನಿಸಲೂ ಬಹಳ ಸುಲಭ.
2. ಬೇಳೆ ಕಾಳು: ಭಾರತದಲ್ಲಿ ಮಗುವಿಗೆ ತಿನಿಸಲು ಉಪಯೋಗಿಸುವ ಅತ್ಯಂತ ಪ್ರಸಿದ್ಧ ಆಹಾರ. ಹೆಸರು ಬೇಳೆ, ತೊಗರಿ ಬೇಳೆ ಮುಂತಾದುವನ್ನು ಹೆಚ್ಚು ನೀರು ಹಾಕಿ ಬೇಯಿಸಿ ಮೆತ್ತಗಿರುವ ಅನ್ನವನ್ನು ಮೆತ್ತಗಿನ ಬೇಳೆ ಜೊತೆ ಮಿದ್ದು ಒಂದೆರಡು ಹನಿ ನಿಂಬೆರಸ ಸೇರಿಸಿ ಮಗುವಿಗೆ ತಿನ್ನಿಸಿದರೆ, ಮತ್ತೆ ಮತ್ತೆ ಬೇಕೆನಿಸುವಂತೆ ಮಗು ತಿನ್ನಲು ಆರಂಭಿಸುತ್ತದೆ. ಹೆಚ್ಚು ಪ್ರೊಟೀನ್ ಮತ್ತು ನ್ಯೂಟ್ರೀಶನ್ ಇದರಲ್ಲಿ ಸೇರಿರುವುದರಿಂದ ಇದರ ಸೇವನೆ ಮಗುವಿಗೆ ಅತಿ ಅವಶ್ಯಕ.
3. ತರಕಾರಿ: ದಾಲ್ ಕಿಚ್ರಿ ಎಂಬ ಹೆಸರನ್ನು ನೀವು ಎಂದಾದರೂ ಕೇಳಿದ್ದೀರಾ? ಎಣ್ಣೆ ಮತ್ತು ಸಾಂಬಾರು ಪದಾರ್ಥವಿಲ್ಲದೆ ಮಾಡಬಹುದಾದ ಈ ಆಹಾರ ಮಗುವಿಗೆ ತುಂಬಾ ರುಚಿಕರ. ಅನ್ನ ಮತ್ತು ತೊಗರಿ ಬೇಳೆಯೊಂದಿಗೆ ಟೊಮೊಟೊ, ಬೀನ್ಸ್, ಕ್ಯಾರೆಟ್, ಬೀಟ್ರೂಟ್ ಮುಂತಾದ ತರಕಾರಿಗಳನ್ನು ಗುರುತೇ ಸಿಗದಂತೆ ಚೆನ್ನಾಗಿ ಬೇಯಿಸಿ ನಂತರ ಎಲ್ಲವನ್ನೂ ಚೆನ್ನಾಗಿ ಮಸೆದು ಅದಕ್ಕೆ ಸ್ವಲ್ಪವೇ ತುಪ್ಪ ಹಾಕಿ ಮಗುವಿಗೆ ತಿನ್ನಿಸಬೇಕು. ಅತ್ಯಧಿಕ ಪೋಷಕಾಂಶದೊಂದಿಗೆ ರುಚಿಕರ ಆಹಾರ ಇದಾದರೆ ಮಗು ಏಕೆ ತಿನ್ನಲು ನಿರಾಕರಿಸುತ್ತದೆ?
ಕೇವಲ ಅನ್ನ, ಸರಿ ಮಗುವಿಗೆ ರುಚಿ ಅನ್ನಿಸದೆ ಇರಬಹುದು, ಇದರಿಂದ ಆಹಾರ ಸೇವಿಸಲೂ ನಿರಾಕರಿಸಬಹುದು. ಆಹಾರವಿಲ್ಲದಿದ್ದರೆ ಬೆಳವಣಿಗೆಯಾದರೂ ಹೇಗೆ ಸಾಧ್ಯ? ಆದ್ದರಿಂದ ಮಗುವಿಗೆ ಇಂತಹ ರುಚಿಕಟ್ಟಾದ ಆಹಾರವನ್ನು ತಿನ್ನಿಸಿದರೆ ಅವಶ್ಯಕವಾದ ಪೋಷಕಾಂಶಗಳನ್ನೂ ನೀಡಿದಂತಾಗುತ್ತದೆ.



Click it and Unblock the Notifications
