Latest Updates
-
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು
ಮಗುವಿನ ಬೆಳವಣಿಗೆ ಮೈಲಿಗಲ್ಲುಗಳು ತಿಳಿದಿರಲಿ

ಯಾವುದೇ ಮಗು ಬೆಳೆಯುವ ಹಂತವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಬೇಕು. ಆಗ ಇನ್ನೊಂದು ಮಗುವಿನ ಬೆಳವಣಿಗೆಗೆ ಹೋಲಿಸಿ ನೋಡಿ ಮಗುವಿನ ಬೆಳವಣಿಗೆಯಲ್ಲಿ ತೊಂದರೆ ಇದೆ ಎನಿಸಿದರೆ ವೈದ್ಯರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆಯಬಹುದು. ಅದಕ್ಕೂ ವೇಳೆಯಿಲ್ಲ ಎಂದಾದರೆ ಇಲ್ಲೊಂದು ಟೇಬಲ್ ಇದೆ, ಓದಿ ತಿಳಿದುಕೊಳ್ಳಿ...
ಮಗುವಿನ ಬೆಳವಣಿಗೆಯ ಮೈಲಿಗಲ್ಲನ್ನು ಹೀಗೆ ಹೇಳಬಹುದು
* 15 ದಿನಗಳಿಂದ 3 1/2 ತಿಂಗಳುಗಳ ಅವಧಿಯಲ್ಲಿ ಜೊತೆಯಲ್ಲಿದ್ದವರು ನಕ್ಕರೆ ಮಗುವೂ ನಗುವುದು
* 1 1/2 ಯಿಂದ 4 ತಿಂಗಳುಗಳ ಅವಧಿಯಲ್ಲಿ ಮಗುವಿನ ಕಣ್ಣು ಕೆಲವು ವಸ್ತುಗಳನ್ನು ಹಿಂಬಾಲಿಸುವುದು.
* 1 1/2 ಯಿಂದ 5 ತಿಂಗಳುಗಳಲ್ಲಿ ಗೋಣು/ಕತ್ತು ನಿಲ್ಲುವುದು ಅಥವಾ ತಲೆ ಗಟ್ಟಿಯಾಗಿ ನಿಲ್ಲುವುದು
* 3 1/2 ಯಿಂದ 11 1/2 ತಿಂಗಳುಗಳಲ್ಲಿ ಬೆನ್ನು ಕೆಳಗಾಗಿ ಮಲಗಿರುವ ಮಗು ಹೊರಳಿ ಹೊಟ್ಟೆ ಕೆಳಗೆ ಮಾಡಿ ಮಲಗಬಹುದು
* 4 ರಿಂದ 7 ತಿಂಗಳ ಅವಧಿಯಲ್ಲಿ ಮಗು ಶಬ್ಧ ಬಂದ ಕಡೆ ತಲೆ ತಿರುಗಿಸುವುದು
* 5 ರಿಂದ 8 1/2 ತಿಂಗಳುಗಳಲ್ಲಿ ಒಂದು ಕೈಯಿಂದ ಇನ್ನೊಂದು ಕೈಗೆ ವಸ್ತುಗಳನ್ನು ವರ್ಗಾಯಿಸುವುದು
* 7 ರಿಂದ 1 ವರ್ಷಗಳಲ್ಲಿ ತನ್ನಷ್ಟಕ್ಕೆ ತಾನೇ ಎದ್ದು ಕುಳಿತುಕೊಳ್ಳುವುದು
* 7 1/2 ಯಿಂದ 1 ವರ್ಷ, 1 ತಿಂಗಳುಗಳಲ್ಲಿ ಮಗು ಏನಾದರೂ ಆಧಾರವನ್ನು ಹಿಡಿದು ನಿಲ್ಲುವುದು
* 8 ರಿಂದ 1 ವರ್ಷ್, 1 ತಿಂಗಳುಗಳಲ್ಲಿ ವಸ್ತುಗಳನ್ನು ಪರಿಪೂರ್ಣವಾಗಿ ಕೈಯಲ್ಲಿ ಹಿಡಿಯುವುದು
ಮಗುವಿನ ಬೆಳವಣಿಗೆ ಹಂತಗಳ ವಿವರಣೆ ಇನ್ನೂ ಇದೆ, ಮುಂದಿನ ಪುಟ ನೋಡಿ...



Click it and Unblock the Notifications