Latest Updates
-
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು! -
ಡೆಂಗ್ಯೂ ಭೀತಿ: ಮಳೆಗಾಲದ ಮುನ್ನ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 20 ನಿಮಿಷದ ಈ ಕೆಲಸ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಲೀಟರ್ಗೆ ₹8 ಹೆಚ್ಚಳ, ನಿಮ್ಮ ತಿಂಗಳ ಬಜೆಟ್ ಮೇಲೆ ಎಂತಹ ಪರಿಣಾಮ? -
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ!
ಮಗುವಿನ ಬೆಳವಣಿಗೆ ಹಂತ ಹೀಗಿರಲಿ
* 11 ತಿಂಗಳಿನಿಂದ 1 ವರ್ಷ, 5 ತಿಂಗಳುಗಳ ಅವಧಿಯಲ್ಲಿ ಇನ್ನೊಬ್ಬರ ಸಹಾಯದೊಂದಿಗೆ ನಡೆಯುವುದು
* 11 ತಿಂಗಳಿನಿಂದ 1 ವರ್ಷ್, 8 ತಿಂಗಳುಗಳ ಅವಧಿಯಲ್ಲಿ ವಸ್ತುಗಳನ್ನು ಎಸಯಲು ಶಕ್ತವಾಗುವುದು

* 11 ತಿಂಗಳಿನಿಂದ 1 ವರ್ಷ, 8 ತಿಂಗಳುಗಳಲ್ಲಿ ಮಗು ಸ್ವತಂತ್ರವಾಗಿ ನಡೆಯಬಲ್ಲದು
* 1 ವರ್ಷದಿಂದ 1 ವರ್ಷ, 9 ತಿಂಗಳುಗಳಲ್ಲಿ ಕೆಲವು ಅಕ್ಷರ, ಶಬ್ದಗಳನ್ನು ನುಡಿಯುವುದು
* 1 ವರ್ಷದಿಂದ 1 ವರ್ಷ, 9 ತಿಂಗಳುಗಳಲ್ಲಿ ಮಗು ಹಿಮ್ಮುಖವಾಗಿ ನಡೆಯುವುದು
* 1 ವರ್ಷ, 2 ತಿಂಗಳಿನಿಂದ 2 ವರ್ಷ 4 ತಿಂಗಳುಗಳಲ್ಲಿ ಮೆಟ್ಟಿಲುಗಳನ್ನು ಇನ್ನೊಬ್ಬರ ಸಹಾಯದೊಂದಿಗೆ ಹತ್ತುವುದು
* 1 ವರ್ಷ 5 ತಿಂಗಳುಗಳಿಂದ 2 ವರ್ಷ 3 ತಿಂಗಳುಗಳ ಅವಧಿಯಲ್ಲಿ ದೇಹದ ವಿವಿಧ ಭಾಗಗಳನ್ನು ತೋರಿಸಲು ಶಕ್ತವಾಗುವುದು
ಈ ಎಲ್ಲ ಬೆಳವಣಿಗೆಗಳು ನಿಮ್ಮ ಮಗುವಿನಲ್ಲೂ (ಸ್ವಲ್ಪ ಹೆಚ್ಚು-ಕಡಿಮೆ) ಇದ್ದರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮಗು ಯಾವಾಗಲೂ ಮಗುವಾಗಿರಬಾರದು ಎಂಬುದು ನೆನಪಿರಲಿ. ಬೆಳವಣಿಗೆಯ ಎಲ್ಲ ಹಂತಗಳನ್ನು ನೋಡಬೇಕಾಗಿರುವ ಮಗುವಿನ ಪ್ರಾರಂಭಿಕ ಬೆಳವಣಿಗೆ ಸರಿಯಾಗಿ ಇಲ್ಲದಿದ್ದರೆ ಹೇಗೆ?
ಅದು ಪೋಷಕರ ಮೊದಲ ಜವಾಬ್ಧಾರಿ ತಾನೇ! ತಜ್ಞವೈದ್ಯರಲ್ಲಿ ತೋರಿಸಿ ಅಭಿಪ್ರಾಯ, ಚಿಕಿತ್ಸೆ ಕೊಡಿಸಲು ಮರೆಯಬೇಡಿ.
ನಿಮ್ಮ ಜವಾಬ್ಧಾರಿ ನೀವು ಮರೆತರೆ ನಿಮ್ಮ ಮಗು ಮಗುವಾಗಿಯೇ ಉಳಿದೀತು!
ಮಗು ಎಂಬ ಪದ ಕೇಳಿದರೆ ಯಾರಿಗಾದರೂ ಮೂಡುವುದು ಮುಗುಳ್ನಗು.
ಮಗುವಿನ ಮಹಿಮೆಯೇ ಹಾಗೇ. ಗಂಡ-ಹೆಂಡತಿಯರನ್ನು ಅಪ್ಪ-ಅಮ್ಮ ಎಂಬ ಪಟ್ಟದಲ್ಲಿ ಕೂರಿಸುವ ಮಗು ತಂದೆ-ತಾಯಿಗಳಿಗೆ ಸರ್ವಸ್ವ ಎನಿಸಿಕೊಂಡು ಬಿಡುತ್ತದೆ.
ಯಾವುದೇ ಮಗು ಬೆಳೆಯುವ ಹಂತವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಬೇಕು. ಆಗ ಇನ್ನೊಂದು ಮಗುವಿನ ಬೆಳವಣಿಗೆಗೆ ಹೋಲಿಸಿ ನೋಡಿ ಮಗುವಿನ ಬೆಳವಣಿಗೆಯಲ್ಲಿ ತೊಂದರೆ ಇದೆ ಎನಿಸಿದರೆ ವೈದ್ಯರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆಯಬಹುದು. ಅದಕ್ಕೂ ವೇಳೆಯಿಲ್ಲ ಎಂದಾದರೆ ಇಲ್ಲೊಂದು ಟೇಬಲ್ ಇದೆ, ಓದಿ ತಿಳಿದುಕೊಳ್ಳಿ...
ಮಗುವಿನ ಬೆಳವಣಿಗೆಯ ಮೈಲಿಗಲ್ಲನ್ನು ಹೀಗೆ ಹೇಳಬಹುದು
* 15 ದಿನಗಳಿಂದ 3 1/2 ತಿಂಗಳುಗಳ ಅವಧಿಯಲ್ಲಿ ಜೊತೆಯಲ್ಲಿದ್ದವರು ನಕ್ಕರೆ ಮಗುವೂ ನಗುವುದು
* 1 1/2 ಯಿಂದ 4 ತಿಂಗಳುಗಳ ಅವಧಿಯಲ್ಲಿ ಮಗುವಿನ ಕಣ್ಣು ಕೆಲವು ವಸ್ತುಗಳನ್ನು ಹಿಂಬಾಲಿಸುವುದು.
* 1 1/2 ಯಿಂದ 5 ತಿಂಗಳುಗಳಲ್ಲಿ ಗೋಣು/ಕತ್ತು ನಿಲ್ಲುವುದು ಅಥವಾ ತಲೆ ಗಟ್ಟಿಯಾಗಿ ನಿಲ್ಲುವುದು
* 3 1/2 ಯಿಂದ 11 1/2 ತಿಂಗಳುಗಳಲ್ಲಿ ಬೆನ್ನು ಕೆಳಗಾಗಿ ಮಲಗಿರುವ ಮಗು ಹೊರಳಿ ಹೊಟ್ಟೆ ಕೆಳಗೆ ಮಾಡಿ ಮಲಗಬಹುದು
* 4 ರಿಂದ 7 ತಿಂಗಳ ಅವಧಿಯಲ್ಲಿ ಮಗು ಶಬ್ಧ ಬಂದ ಕಡೆ ತಲೆ ತಿರುಗಿಸುವುದು
* 5 ರಿಂದ 8 1/2 ತಿಂಗಳುಗಳಲ್ಲಿ ಒಂದು ಕೈಯಿಂದ ಇನ್ನೊಂದು ಕೈಗೆ ವಸ್ತುಗಳನ್ನು ವರ್ಗಾಯಿಸುವುದು
* 6 ರಿಂದ 1 ವರ್ಷಗಳಲ್ಲಿ ತನ್ನಷ್ಟಕ್ಕೆ ತಾನೇ ಎದ್ದು ಕುಳಿತುಕೊಳ್ಳುವುದು
* 7 1/2 ಯಿಂದ 1 ವರ್ಷ, 1 ತಿಂಗಳುಗಳಲ್ಲಿ ಮಗು ಏನಾದರೂ ಆಧಾರವನ್ನು ಹಿಡಿದು ನಿಲ್ಲುವುದು
* 8 ರಿಂದ 1 ವರ್ಷ್, 1 ತಿಂಗಳುಗಳಲ್ಲಿ ವಸ್ತುಗಳನ್ನು ಪರಿಪೂರ್ಣವಾಗಿ ಕೈಯಲ್ಲಿ ಹಿಡಿಯುವುದು
ಮಗುವಿನ ಬೆಳವಣಿಗೆ ಹಂತಗಳ ವಿವರಣೆ ಇನ್ನೂ ಇದೆ, ಮುಂದಿನ ಪುಟ ನೋಡಿ...



Click it and Unblock the Notifications
